AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sushmita Sen: ನಟಿ ಸುಶ್ಮಿತಾ ಸೇನ್​ಗೆ ಹೃದಯಾಘಾತ; ಅಭಿಮಾನಿಗಳಲ್ಲಿ ಹೆಚ್ಚಿತು ಆತಂಕ

Sushmita Sen | Heart Attack: ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್​ ಅವರಿಗೆ ಹೃದಯಾಘಾತ ಆಗಿದೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.

Sushmita Sen: ನಟಿ ಸುಶ್ಮಿತಾ ಸೇನ್​ಗೆ ಹೃದಯಾಘಾತ; ಅಭಿಮಾನಿಗಳಲ್ಲಿ ಹೆಚ್ಚಿತು ಆತಂಕ
ಸುಶ್ಮಿತಾ ಸೇನ್
ಮದನ್​ ಕುಮಾರ್​
|

Updated on:Mar 02, 2023 | 4:47 PM

Share

ಖ್ಯಾತ ನಟಿ ಸುಶ್ಮಿತಾ ಸೇನ್​ ಅವರಿಗೆ ಹೃದಯಾಘಾತ (Heart Attack) ಆಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕೆಲವೇ ದಿನಗಳ ಹಿಂದೆ ನಡೆದ ಈ ಘಟನೆ ಈಗ ಬೆಳಕಿಗೆ ಬಂದಿದೆ. ಸ್ವತಃ ಸುಶ್ಮಿತಾ ಸೇನ್​ (Sushmita Sen) ಅವರು ಈ ಬಗ್ಗೆ ತಡವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಆತಂಕಪಡುವ ಅಗತ್ಯವಿಲ್ಲ ಎಂದು ಸುಶ್ಮಿತಾ ಸೇನ್​ ಹೇಳಿದ್ದಾರೆ. ಹೃದಯಾಘಾತ ಆದ ಕೂಡಲೇ ಅವರಿಗೆ ವೈದ್ಯಕೀಯ ನೆರವು ಸಿಕ್ಕಿತು. ವೈದ್ಯರ ಸಲಹೆ ಮೇರೆಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ ಮತ್ತು ಸ್ಟೆಂಟ್ಸ್​ ಅಳವಡಿಸಲಾಗಿದೆ. ಈಗ ತಮ್ಮ ಆರೋಗ್ಯ ಸ್ಥಿರವಾಗಿದೆ ಎಂದು ಸುಶ್ಮಿತಾ ಸೇನ್​ ಅವರು ಹೆಲ್ತ್​ ಅಪ್​ಡೇಟ್​ (Sushmita Sen Health Update) ನೀಡಿದ್ದಾರೆ.

ಸುಶ್ಮಿತಾ ಸೇನ್​ ಅವರಿಗೆ ಈಗ 47 ವರ್ಷ ವಯಸ್ಸು. ಫಿಟ್ನೆಸ್​ ಬಗ್ಗೆ ಅವರು ಸಾಕಷ್ಟು ಕಾಳಜಿ ವಹಿಸುತ್ತಾರೆ. ಹಾಗಿದ್ದರೂ ಕೂಡ ಅವರಿಗೆ ಹೃದಯಾಘಾತ ಆಗಿದೆ. ‘ಈ ಕಷ್ಟದ ಸಂದರ್ಭದಲ್ಲಿ ನನಗೆ ಹಲವರು ನೆರವಿಗೆ ಬಂದರು. ಅವರಿಗೆಲ್ಲ ಪ್ರತ್ಯೇಕ ಪೋಸ್ಟ್​ನಲ್ಲಿ ಧನ್ಯವಾದ ತಿಳಿಸುವೆ’ ಎಂದು ಸುಶ್ಮಿತಾ ಸೇನ್​ ಹೇಳಿದ್ದಾರೆ.

ಇದನ್ನೂ ಓದಿ
Image
ಜಿಮ್ ಮಾಡುತ್ತಿದ್ದ ವೇಳೆ ಹಾಸ್ಯ ನಟ ರಾಜು ಶ್ರೀವಾತ್ಸವಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು
Image
Pradeep Patwardhan: ಹೃದಯಾಘಾತದಿಂದ ನಟ ಪ್ರದೀಪ್​ ಪಟವರ್ಧನ್​ ನಿಧನ; ಸಂತಾಪ ಸೂಚಿಸಿದ ಮಹಾರಾಷ್ಟ್ರ ಸಿಎಂ
Image
Hemalatha Death: ಗುಬ್ಬಿ ವೀರಣ್ಣ ಪುತ್ರಿ, ಕನ್ನಡ ಚಿತ್ರರಂಗದ ಹಿರಿಯ ನಟಿ ಹೇಮಲತಾ ಹೃದಯಾಘಾತದಿಂದ ನಿಧನ
Image
Surekha Death: ಕನ್ನಡ ಚಿತ್ರರಂಗದ ಹಿರಿಯ ನಟಿ ಸುರೇಖಾ ಹೃದಯಾಘಾತದಿಂದ ನಿಧನ

ತಮ್ಮ ನೆಚ್ಚಿನ ನಟಿಗೆ ಹಾರ್ಟ್ ಅಟ್ಯಾಕ್​ ಆಗಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಸುಶ್ಮಿತಾ ಸೇನ್​ ಅವರ ಸೋಶಿಯಲ್​ ಮೀಡಿಯಾ ಪೋಸ್ಟ್​ಗೆ ನೆಟ್ಟಿಗರು ಕಮೆಂಟ್​ ಮಾಡುವ ಮೂಲಕ ಕಾಳಜಿ ವ್ಯಕ್ತಪಡಿಸಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಫ್ಯಾನ್ಸ್​ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Sushmita Sen: ಒಂದೂವರೆ ತಿಂಗಳಿಗೆ ಸುಶ್ಮಿತಾ ಸೇನ್​, ಲಲಿತ್​ ಮೋದಿ ಬ್ರೇಕಪ್​? ಸಾಕ್ಷಿ ಸಮೇತ ಕಮೆಂಟ್​ ಮಾಡಿದ ನೆಟ್ಟಿಗರು

ರೋಹ್ಮನ್​ ಶಾಲ್​ ಮತ್ತು ಲಲಿತ್​ ಮೋದಿ ಮುಂತಾದವರ ಜೊತೆ ಸುಶ್ಮಿತಾ ಸೇನ್​ ಡೇಟಿಂಗ್​ ಮಾಡುತ್ತಿದ್ದರು. ಆದರೆ ಅವರು ಮದುವೆ ಆಗಿಲ್ಲ. ಇಬ್ಬರು ಮಕ್ಕಳನ್ನು ಅವರು ದತ್ತು ಪಡೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅವರು ಆಗಾಗ ತಮ್ಮ ದಿನಚರಿ ಬಗ್ಗೆ ಅಪ್​ಡೇಟ್​ ನೀಡುತ್ತಾ ಇರುತ್ತಾರೆ. ಜಿಮ್​ನಲ್ಲಿ ವರ್ಕೌಟ್​ ಮಾಡುವ ಮತ್ತು ಯೋಗ ಮಾಡುತ್ತಿರುವ ವಿಡಿಯೋಗಳನ್ನು ಅವರು ಹಂಚಿಕೊಳ್ಳುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:24 pm, Thu, 2 March 23

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ