Akshay Kumar: ಲಂಗ ತೊಟ್ಟು ನಟಿಯೊಟ್ಟಿಗೆ ಡ್ಯಾನ್ಸ್, ಟ್ರೋಲ್ ಆದ ಅಕ್ಷಯ್ ಕುಮಾರ್
ಖಾಸಗಿ ಕಾರ್ಯಕ್ರಮವೊಂದರಲ್ಲಿ ನಟ ಅಕ್ಷಯ್ ಕುಮಾರ್ ಲಂಗ ತೊಟ್ಟು ವೇದಿಕೆ ಮೇಲೆ ಡ್ಯಾನ್ಸ್ ಮಾಡಿರುವುದು ತೀವ್ರ ಟ್ರೋಲ್ಗೆ ಗುರಿಯಾಗಿದೆ.

ಬಾಲಿವುಡ್ನ (Bollywood) ಫ್ಯಾಷನ್ (Fashion) ತುಸು ಹೆಚ್ಚೇ ದೂರ ಸಾಗಿಬಿಟ್ಟಿದೆ. ಉರ್ಫಿ ಜಾವೇದ್ (Urfi Javed) ಹಾಗೂ ಇನ್ನಿತರೆ ಕೆಲವು ನಟಿಯರು ಚಿತ್ರ ವಿಚಿತ್ರ ಬಟ್ಟೆಗಳನ್ನು ಧರಿಸುತ್ತಾ ಬಾಲಿವುಡ್ ಫ್ಯಾಷನ್ ಅನ್ನು ಹಳ್ಳ ಹಿಡಿಸುತ್ತಿದ್ದರೆ ಬಾಲಿವುಡ್ ನಟರು ತಾವೇನೂ ಕಡಿಮೆಯಿಲ್ಲವೆಂದು ಭಿನ್ನ ಫ್ಯಾಷನ್ ಜೊತೆ ಬಂದಿದ್ದಾರೆ. ಸಹ್ಯ ಫ್ಯಾಷನ್ ಅನ್ನೇ ಫಾಲೋ ಮಾಡುತ್ತಿದ್ದ ನಟ ಅಕ್ಷಯ್ ಕುಮಾರ್, ಖಾಸಗಿ ಕಾರ್ಯಕ್ರಮವೊಂದರಲ್ಲಿ ಲಂಗ ಧರಿಸಿ ನಟಿಯೊಟ್ಟಿಗೆ ಡ್ಯಾನ್ಸ್ ಮಾಡಿದ್ದು, ಇದೀಗ ಟ್ರೋಲ್ಗೆ ಗುರಿಯಾಗಿದ್ದಾರೆ.
ಅಕ್ಷಯ್ ಕುಮಾರ್, ಅಮೆರಿಕದಲ್ಲಿ (America) ಎಂಟರ್ಟೈನರ್ಸ್ ಟೂರ್ ಲೈವ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಅಮೆರಿಕದ ವಿವಿಧ ನಗರಗಳಲ್ಲಿ ಸ್ಟೇಜ್ ಕಾರ್ಯಕ್ರಮ ನೀಡುತ್ತಿದ್ದಾರೆ. ಈ ವೇಳೆ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಕೆಂಪು ಬಣ್ಣದ ಲೆಹಂಗ ಧರಿಸಿ ವೇದಿಕೆ ಮೇಲೆ ನಟಿ ನೋರಾ ಫತೇಹಿ ಜೊತೆ ಕುಣಿದಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ಟ್ರೋಲ್ ಗುರಿಯಾಗಿದ್ದಾರೆ ಅಕ್ಷಯ್.
ಅಕ್ಷಯ್ ಕುಮಾರ್ ಕಪ್ಪು ಬಣ್ಣದ ಜಾಕೆಟ್ ಧರಿಸಿ ಕೆಳಗೆ ಲೆಹಂಗ ಧರಿಸಿದ್ದರು. ಬಳಿಕ ವೇದಿಕೆ ಮೇಲೆಯೆ ಲೆಹಂಗಾವನ್ನು ಕಿತ್ತೆಸೆದು ಡ್ಯಾನ್ಸ್ ಮಾಡಿದ್ದಾರೆ. ಅಕ್ಷಯ್, ಕಪ್ಪು ಬಣ್ಣದ ಪ್ಯಾಂಟ್ ಮೇಲೆ ಲೆಹಂಗ ಧರಿಸಿದ್ದರು.
ಅಕ್ಷಯ್ ಕುಮಾರ್ ಅವರ ಸಿನಿಮಾಗಳು ಸತತವಾಗಿ ಸೋಲುತ್ತಿವೆ. 2021 ರಲ್ಲಿ ಬಿಡುಗಡೆ ಆಗಿದ್ದ ಸೂರ್ಯವಂಶಿ ಸಿನಿಮಾದ ಬಳಿಕ ಅಕ್ಷಯ್ ನಟಿಸಿದ ಎಂಟು ಸಿನಿಮಾಗಳು ಸೋತಿವೆ. ಅಕ್ಷಯ್ ಕುಮಾರ್ ಅಭಿಮಾನಿಗಳು ಈ ಬಗ್ಗೆ ಆತಂಕಿತರಾಗಿದ್ದಾರೆ. ಆದರೆ ಅಕ್ಷಯ್ ಇದಾವುದರ ಪರಿವೇ ಇಲ್ಲದೆ ನಟಿಯೊಟ್ಟಿಗೆ ತಾವು ಲಂಗ ಧರಿಸಿ ಖಾಸಗಿ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿರುವುದು ಅವರ ಅಭಿಮಾನಿಗಳೇ ಕೆಲವರಿಗೆ ಬೇಸರ ಮೂಡಿಸಿದೆ.
ಇದನ್ನು ನೋಡುವುದು ಬಾಕಿ ಇತ್ತು ಎಂದು ಕೆಲವರು ಅಕ್ಷಯ್ ಹೆಣ್ಣು ಮಕ್ಕಳ ಉಡುಗೆಯಲ್ಲಿ ನರ್ತಿಸಿದ್ದಕ್ಕೆ ಬೇಸರ ಮಾಡಿಕೊಂಡಿದ್ದರೆ, ಇನ್ನು ಕೆಲವರು ಹಣಕ್ಕಾಗಿ ಈತ ಏನು ಬೇಕಾದರೂ ಮಾಡಬಲ್ಲ ಎಂದು ಟೀಕಿಸಿದ್ದಾರೆ.
ಮಹಿಳೆಯರ ಉಡುಪು ಧರಿಸಿದ ಬಾಲಿವುಡ್ ನಟರಲ್ಲಿ ಅಕ್ಷಯ್ ಕುಮಾರ್ ಮೊದಲಿಗರೇನಲ್ಲ. ನಟ ರಣ್ವೀರ್ ಸಿಂಗ್ ಆಗಾಗ್ಗೆ ಮಹಿಳೆಯರ ಉಡುಪಿನಲ್ಲಿ ಬಹಿರಂಗವಾಗಿ ಕಾಣಿಸಿಕೊಂಡು ಪ್ಯಾಪರಾಟ್ಜಿಗಳಿಗೆ ಫೋಸು ನೀಡುತ್ತಿರುತ್ತಾರೆ. ಬ್ಲೇಜರ್ ತೊಟ್ಟು ಕೆಳಗೆ ಪ್ಯಾಂಟ್ ಬದಲು ಲೆಹಂಗ ಧರಿಸಿ ಕಾಣಿಸಿಕೊಂಡಿದ್ದರು ರಣ್ವೀರ್. ಇನ್ನೂ ಚಿತ್ರ ವಿಚಿತ್ರ ರೀತಿಯ ಫ್ಯಾಷನ್ ಅನ್ನು ರಣ್ವೀರ್ ಮಾಡುತ್ತಲೇ ಇರುತ್ತಾರೆ.
ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ಸಾಲು-ಸಾಲು ಫ್ಲಾಪ್ ಸಿನಿಮಾಗಳನ್ನು ನೀಡಿದ್ದಾಗಿಯೂ ಹಲವು ಆಫರ್ಗಳು ಅಕ್ಷಯ್ ಕುಮಾರ್ ಬಳಿ ಇವೆ. ಓಹ್ ಮೈ ಗಾಡ್ 2, ಹೇರಾ ಪೇರಿ 3, ಸೂರರೈ ಪೊಟ್ರು ಹಿಂದಿ ರೀಮೇಕ್, ಕ್ಯಾಪ್ಸೂಲ್ ಗಿಲ್, ಬಡೇ ಮಿಯಾ ಚೋಟೆ ಮಿಯಾ, ಇವುಗಳ ಜೊತೆಗೆ ಒಂದು ಮರಾಠಿ ಸಿನಿಮಾದಲ್ಲಿಯೂ ಅಕ್ಷಯ್ ನಟಿಸಲಿದ್ದಾರೆ.




