‘ಅರ್ಬನ್ ನಕ್ಸಲ್ಸ್ಗೆ ನಿದ್ದೆ ಬರುತ್ತಿಲ್ಲ’; ‘ಬೊಗಳುತ್ತಾರೆ, ಕಚ್ಚಲ್ಲ’ ಎಂಬ ಪ್ರಕಾಶ್ ರಾಜ್ ಹೇಳಿಕೆಗೆ ತಿರುಗೇಟು ಕೊಟ್ಟ ವಿವೇಕ್ ಅಗ್ನಿಹೋತ್ರಿ
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಪ್ರಕಾಶ್ ರಾಜ್ ಅವರು ಟೀಕೆ ಮಾಡಿದ್ದರು. ಇದಕ್ಕೆ ವಿವೇಕ್ ಅಗ್ನಿಹೋತ್ರಿ ತಿರುಗೇಟು ನೀಡಿದ್ದಾರೆ.
ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ರಿಲೀಸ್ ಆಗಿ ವರ್ಷ ಕಳೆಯುತ್ತಾ ಬಂದರೂ ಈ ಚಿತ್ರದ ಬಗೆಗಿನ ಚರ್ಚೆ ನಿಂತಿಲ್ಲ. ಈಗಲೂ ಅನೇಕರು ಈ ಸಿನಿಮಾ ಬಗ್ಗೆ ಚರ್ಚೆ ಮಾಡುತ್ತಲೇ ಇದ್ದಾರೆ. ಒಂದು ವರ್ಗದ ಜನರು ಚಿತ್ರವನ್ನು ತೆಗಳಿದರೆ, ಇನ್ನೂ ಕೆಲವರು ಸಿನಿಮಾದ ಬಗ್ಗೆ ಪಾಸಿಟಿವ್ ಮಾತುಗಳನ್ನು ಆಡುತ್ತಿದ್ದಾರೆ. ಇತ್ತೀಚೆಗೆ ಮಾತನಾಡಿದ್ದ ಪ್ರಕಾಶ್ ರಾಜ್ (Prakash Raj) ಅವರು ಚಿತ್ರದ ಬಗ್ಗೆ ಟೀಕೆ ಮಾಡಿದ್ದರು. ಇದಕ್ಕೆ ವಿವೇಕ್ ಅಗ್ನಿಹೋತ್ರಿ ತಿರುಗೇಟು ನೀಡಿದ್ದಾರೆ.
ಪ್ರಕಾಶ್ ರಾಜ್ ಹೇಳಿದ್ದೇನು?
‘ಪಠಾಣ್’ ಸಿನಿಮಾ ಯಶಸ್ಸಿನ ಬಗ್ಗೆ ಮಾತನಾಡಿದ್ದ ಪ್ರಕಾಶ್ ರಾಜ್, ‘ದಿ ಕಾಶ್ಮೀರ್’ ಚಿತ್ರವನ್ನು ಟೀಕಿಸಿದ್ದರು. ‘ಅವರು ಪಠಾಣ್ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಅಂದುಕೊಂಡಿದ್ದರು. ಆದರೆ, ಈ ಚಿತ್ರ 700 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೂರ್ಖರು, ಮತಾಂಧರು ಪಠಾಣ್ನ ಬ್ಯಾನ್ ಮಾಡಲು ಬಯಸಿದ್ದರು. ಮೋದಿ ಸಿನಿಮಾಗೆ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿಸಲು ಅವರಿಂದ ಸಾಧ್ಯವಾಗಿಲ್ಲ. ಅವರು ಬೊಗಳುತ್ತಾರೆ, ಕಚ್ಚುವುದಿಲ್ಲ’ ಎಂದಿದ್ದರು.
‘ಕಾಶ್ಮೀರ್ ಫೈಲ್ಸ್ ನಾನ್ಸೆನ್ಸ್ ಸಿನಿಮಾ. ಅದನ್ನು ನಿರ್ಮಾಣ ಮಾಡಿದ್ದು ಯಾರು ಅನ್ನೋದು ನಿಮಗೆ ಗೊತ್ತಿದೆ. ಅಂತಾರಾಷ್ಟ್ರಿಯ ಜ್ಯೂರಿಗಳು ಚಿತ್ರವನ್ನು ತೆಗಳಿದರು. ಭಾಸ್ಕರ್ ಪ್ರಶಸ್ತಿಯನ್ನೂ ಪಡೆಯದ ಈ ಚಿತ್ರದ ನಿರ್ದೇಶಕ ನಮ್ಮ ಚಿತ್ರಕ್ಕೆ ಏಕೆ ಆಸ್ಕರ್ ಸಿಗುತ್ತಿಲ್ಲ ಎಂದು ಕೇಳುತ್ತಿದ್ದಾರೆ. ಇಲ್ಲಿ ನೀವು ಪ್ರೊಪೊಗಾಂಡ ಚಿತ್ರಗಳನ್ನು ಮಾಡಬಹುದು. ಈ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಲು ಅವರು 2000 ಸಾವಿರ ಕೋಟಿ ಹೂಡಿಕೆ ಮಾಡಿದ್ದಾರೆ. ಆದರೆ, ಎಲ್ಲಾ ಬಾರಿಯೂ ಜನ್ನರು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ’ ಎಂದಿದ್ದರು ಅವರು.
A small, people’s film #TheKashmirFiles has given sleepless nights to #UrbanNaxals so much that one of their Pidi is troubled even after one year, calling its viewer’s barking dogs. And Mr. Andhkaar Raj, how can I get Bhaskar, she/he is all yours. Forever. pic.twitter.com/BbUMadCN8F
— Vivek Ranjan Agnihotri (@vivekagnihotri) February 9, 2023
ತಿರುಗೇಟು ನೀಡಿದ ವಿವೇಕ್ ಆಗ್ನಿಹೋತ್ರಿ
ಈ ವಿಡಿಯೋ ಹಂಚಿಕೊಂಡಿರುವ ವಿವೇಕ್ ಅಗ್ನಿಹೋತ್ರಿ ಅವರು ಪ್ರಕಾಶ್ ರಾಜ್ ವಿರುದ್ಧ ಕಿಡಿಕಾರಿದ್ದಾರೆ. ‘ಸಾಮಾನ್ಯ ಜನರ ಸಿನಿಮಾ ದಿ ಕಾಶ್ಮೀರ್ ಫೈಲ್ಸ್ ಅರ್ಬನ್ ನಕ್ಸಲ್ಗಳ ನಿದ್ದೆ ಕದ್ದಿದೆ. ಅವರ ಪೈಕಿ ಓರ್ವ ವ್ಯಕ್ತಿ ಒಂದು ವರ್ಷದ ಬಳಿಕವೂ ತೊಂದರೆಗೆ ಒಳಗಾಗುತ್ತಿದ್ದಾರೆ. ವೀಕ್ಷಕರನ್ನು ಅವರು ಬೊಗಳುವ ನಾಯಿ ಎಂದು ಕರೆಯುತ್ತಾರೆ. ಮಿಸ್ಟರ್ ಅಂಧಕಾರ್ ರಾಜ್, ಭಾಸ್ಕರ್ ಯಾವಾಗಲೂ ನಿಮ್ಮದೇ ಆಗಿರುವಾಗ ಅದನ್ನು ನಾನು ಹೇಗೆ ಪಡೆಯಲಿ’ ಎಂದು ವಿವೇಕ್ ಅಗ್ನಿಹೋತ್ರಿ ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:22 pm, Thu, 9 February 23