ಈ ವಾರ ಕನ್ನಡದಲ್ಲಿ 9 ಸಿನಿಮಾಗಳು ರಿಲೀಸ್; ಇಲ್ಲಿದೆ ವಿವರ

ಒಂದು ರೀ-ರಿಲೀಸ್ ಸೇರಿ ಕನ್ನಡದಲ್ಲೇ 9 ಚಿತ್ರಗಳು ಬಿಡುಗಡೆ ಆಗುತ್ತಿವೆ. ಆ ಸಿನಿಮಾಗಳ ವಿವರ ಇಲ್ಲಿದೆ. ಇನ್ನೂ ಕೆಲವು ಸಿನಿಮಾಗಳು ಸ್ಪರ್ಧೆಗೆ ಇಳಿಯಬೇಕಿತ್ತು. ಆದರೆ, ಅವುಗಳು ರಿಲೀಸ್ ದಿನಾಂಕವನ್ನು ಮುಂದೂಡಿಕೊಂಡಿವೆ.

ಈ ವಾರ ಕನ್ನಡದಲ್ಲಿ 9 ಸಿನಿಮಾಗಳು ರಿಲೀಸ್; ಇಲ್ಲಿದೆ ವಿವರ
ಚಿತ್ರಮಂದಿರದ ಸಾಂದರ್ಭಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
|

Updated on:Feb 09, 2023 | 11:41 AM

ಚಿತ್ರರಂಗದಲ್ಲಿ (Cinema Industry) ಸ್ಪರ್ಧೆ ಜೋರಾಗಿದೆ. ಒಂದೇ ವಾರ ಎರಡು ಮೂರು ಸಿನಿಮಾಗಳು ಒಟ್ಟೊಟ್ಟಿಗೆ ಬರೋದು ಕಾಮನ್ ಎಂಬಂತಾಗಿದೆ. ಈ ಪೈಕಿ ಒಳ್ಳೆಯ ಸಿನಿಮಾಗಳು ಗೆದ್ದರೆ, ಜನರಿಗೆ ರುಚಿಸದ ಚಿತ್ರಗಳು ಚಿತ್ರಮಂದಿರದಿಂದ ಕಾಲ್ಕೀಳುತ್ತವೆ. ವಿಶೇಷ ಎಂದರೆ ಈ ವಾರ (ಫೆಬ್ರವರಿ 10) ಕನ್ನಡದಲ್ಲಿ 9 ಸಿನಿಮಾಗಳು ರಿಲೀಸ್ ಆಗುತ್ತಿವೆ! ಹೌದು, ಒಂದು ರೀ-ರಿಲೀಸ್ ಸೇರಿ ಕನ್ನಡದಲ್ಲೇ 9 ಚಿತ್ರಗಳು ಬಿಡುಗಡೆ ಆಗುತ್ತಿವೆ. ಆ ಸಿನಿಮಾಗಳ ವಿವರ ಇಲ್ಲಿದೆ. ಇನ್ನೂ ಕೆಲವು ಸಿನಿಮಾಗಳು ಸ್ಪರ್ಧೆಗೆ ಇಳಿಯಬೇಕಿತ್ತು. ಆದರೆ, ಅವುಗಳು ರಿಲೀಸ್ ದಿನಾಂಕವನ್ನು ಮುಂದೂಡಿಕೊಂಡಿವೆ.

ಹೊಂದಿಸಿ ಬರೆಯಿರಿ

ಪ್ರವೀಣ್ ತೇಜ್, ಸಂಯುಕ್ತಾ ಹೊರನಾಡು, ಭಾವನಾ ರಾವ್​, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್ ಮೊದಲಾದವರು ನಟಿಸಿರುವ ‘ಹೊಂದಿಸಿ ಬರೆಯಿರಿ’ ಸಿನಿಮಾ ಶುಕ್ರವಾರ ತೆರೆಗೆ ಬರುತ್ತಿದೆ. ರಾಮೇನಹಳ್ಳಿ ಜಗನ್ನಾಥ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜೋ ಕೋಸ್ಟಾ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ರೂಪಾಯಿ

ವಿಜಯ್ ಜಗದಲ್, ಕೃಷಿ ತಾಪಂಡ, ಚಂದನಾ ರಾಘವೇಂದ್ರ ಮೊದಲಾದವರ ನಟನೆಯ ‘ರೂಪಾಯಿ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ವಿಜಯ್ ಜಗದಲ್ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಡಿಸೆಂಬರ್ 24

ಅಪ್ಪು ಬಡಿಗೇರ್, ರವಿ ಕೆಆರ್​ ಪೇಟೆ, ರಘು ಶೆಟ್ಟಿ ಮೊದಲಾದವರು ನಟಿಸಿರುವ, ನಾಗರಾಜ್ ಗೌಡ ನಿರ್ದೇಶನದ ‘ಡಿಸೆಂಬರ್ 24’ ಈ ವಾರ ರಿಲೀಸ್ ಆಗುತ್ತಿದೆ. ರಘು ಶೆಟ್ಟಿ ಅವರೇ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ರಂಗಿನ ರಾಟೆ

ರಾಜೀವ್ ರಾಥೋಡ್​, ಭವ್ಯಾ ಆರ್​ಆರ್​, ದುನಿಯಾ ರಶ್ಮಿ ಅಭಿನಯದ ‘ರಂಗಿನ ರಾಟೆ’ ಈ ವಾರ ಸ್ಪರ್ಧೆಗೆ ಇಳಿದಿದೆ. ಆರುಮುಗಂ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

‘ಲಾಂಗ್ ಡ್ರೈವ್’

‘ಲಾಂಗ್ ಡ್ರೈವ್​’ ಸಿನಿಮಾ ಶುಕ್ರವಾರ ರಿಲೀಸ್ ಆಗುತ್ತಿದೆ. ಸುಪ್ರಿತಾ ಸತ್ಯನಾರಾಯಣ್, ಅರ್ಜುನ್ ಯೋಗಿಶ್ ರಾಜ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ರಾಜು ಜಿ. ಅವರು ನಿರ್ದೇಶನ ಮಾಡಿದ್ದಾರೆ.

ಬೆಂಗಳೂರು 69

‘ಬೆಂಗಳೂರು 69’ ಸಿನಿಮಾದಲ್ಲಿ ಅನಿತಾ ಭಟ್, ಶಫಿ ಮೊದಲಾದವರು ನಟಿಸಿದ್ದಾರೆ. ಕ್ರಾಂತಿ ಚೈತನ್ಯ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಉತ್ತಮರು

ಪ್ರತಾಪ್ ನಾರಾಯಣ್, ರಂಗಾಯಣ ರಘು, ಬಾಲಾ ರಾಜ್ವಾಡಿ, ಕಡ್ಡಿಪುಡಿ ಚಂದ್ರು ಮೊದಲಾದವರು ‘ಉತ್ತಮರು’ ಸಿನಿಮಾದಲ್ಲಿ ನಟಿಸಿದ್ದಾರೆ. ರೋಹಿತ್ ಶ್ರೀನಿವಾಸ್ ನಿರ್ದೇಶನ ಚಿತ್ರಕ್ಕಿದೆ.

ಒಂದಾನೊಂದು ಕಾಲದಲ್ಲಿ

ಶೋಭ್​ರಾಜ್, ಸಂಗೀತಾ ಅನಿಲ್ ಹಾಗೂ ಮೊದಲಾದವರು ‘ಒಂದಾನೊಂದು ಕಾಲದಲ್ಲಿ’ ಚಿತ್ರದಲ್ಲಿ ನಟಿಸಿದ್ದಾರೆ.

‘ಲೈಫು ಇಷ್ಟೇನೆ’

ಪವನ್ ಕುಮಾರ್ ನಿರ್ದೇಶನದ ದಿಗಂತ್ ನಟನೆಯ ಹಿಟ್ ಚಿತ್ರ ‘ಲೈಫು ಇಷ್ಟೇನೆ’ ರೀ ರಿಲೀಸ್ ಆಗುತ್ತಿದೆ.

ಪರಭಾಷೆಗಳಲ್ಲೂ ಹಲವು ಸಿನಿಮಾಗಳು ತೆರೆಗೆ ಬರುತ್ತಿವೆ. ತೆಲುಗಿನಲ್ಲಿ ‘ಅಮಿಗೋಸ್​’, ಮಲಯಾಂನಲ್ಲಿ ‘ಕ್ರಿಸ್ಟೋಫರ್​’ ಮುಂತಾದ ಚಿತ್ರಗಳು ತೆರೆಗೆ ಬರುತ್ತಿವೆ. ಹಿಂದಿಯ ‘ಪಠಾಣ್​’ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿರುವುದರಿಂದ ಈ ಚಿತ್ರದ ಜತೆಯೂ ಸ್ಪರ್ಧೆ ಎದುರಿಸಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:41 am, Thu, 9 February 23

ಚಂದ್ರಶೇಖರನಾಥ ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದ ಡಿಸಿಎಂ ಡಿಕೆ ಶಿವಕುಮಾರ್
ಚಂದ್ರಶೇಖರನಾಥ ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದ ಡಿಸಿಎಂ ಡಿಕೆ ಶಿವಕುಮಾರ್
ಪಾದಯಾತ್ರೆ ವೇಳೆ ಅರವಿಂದ್ ಕೇಜ್ರಿವಾಲ್ ಮೇಲೆ ದ್ರವ ಪದಾರ್ಥ ಎರಚಿದ ವ್ಯಕ್ತಿ
ಪಾದಯಾತ್ರೆ ವೇಳೆ ಅರವಿಂದ್ ಕೇಜ್ರಿವಾಲ್ ಮೇಲೆ ದ್ರವ ಪದಾರ್ಥ ಎರಚಿದ ವ್ಯಕ್ತಿ
ಕುಮಾರಸ್ವಾಮಿ ಚನ್ನಪಟ್ಟಣದ ಹಾಗೆ ಮಂಡ್ಯ ಬಿಟ್ಟುಕೊಟ್ಟಾರೆಯೇ? ಯೋಗೇಶ್ವರ್
ಕುಮಾರಸ್ವಾಮಿ ಚನ್ನಪಟ್ಟಣದ ಹಾಗೆ ಮಂಡ್ಯ ಬಿಟ್ಟುಕೊಟ್ಟಾರೆಯೇ? ಯೋಗೇಶ್ವರ್
ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರು, ಬಣಗಳ ಪ್ರಶ್ನೆ ಉದ್ಭವಿಸಲ್ಲ: ಪ್ರತಾಪ್
ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರು, ಬಣಗಳ ಪ್ರಶ್ನೆ ಉದ್ಭವಿಸಲ್ಲ: ಪ್ರತಾಪ್
ಕುಡಿದು ಕಾರು ಚಲಾಯಿಸಿ ಮಹಿಳೆಯನ್ನು ಎಳೆದೊಯ್ದ ಚಾಲಕ
ಕುಡಿದು ಕಾರು ಚಲಾಯಿಸಿ ಮಹಿಳೆಯನ್ನು ಎಳೆದೊಯ್ದ ಚಾಲಕ
ಉಚ್ಛಾಟನೆಯ ಕೂಗಿನಿಂದ ಬಸನಗೌಡ ಪಾಟೀಲ್ ಯತ್ನಾಳ್ ಮೆತ್ತಗಾದರೇ?
ಉಚ್ಛಾಟನೆಯ ಕೂಗಿನಿಂದ ಬಸನಗೌಡ ಪಾಟೀಲ್ ಯತ್ನಾಳ್ ಮೆತ್ತಗಾದರೇ?
ಪಕ್ಷದಲ್ಲಿ ಶಿಸ್ತು ವಾಪಸ್ಸಾಗಲು ಕೇಂದ್ರ ನಾಯಕರು ಮಧ್ಯಪ್ರವೇಶಿಸಬೇಕು: ಸಂಸದ
ಪಕ್ಷದಲ್ಲಿ ಶಿಸ್ತು ವಾಪಸ್ಸಾಗಲು ಕೇಂದ್ರ ನಾಯಕರು ಮಧ್ಯಪ್ರವೇಶಿಸಬೇಕು: ಸಂಸದ
ಯೊಗೇಶ್ವರ್ ಹೆಸಎಉ ಹೇಳಿದ ಕೂಡಲೇ ಕೋಪದಿಂದ ಕೆಂಡವಾದ ಕುಮಾರಸ್ವಾಮಿ
ಯೊಗೇಶ್ವರ್ ಹೆಸಎಉ ಹೇಳಿದ ಕೂಡಲೇ ಕೋಪದಿಂದ ಕೆಂಡವಾದ ಕುಮಾರಸ್ವಾಮಿ
ಸಚಿವರ ಎದುರಲ್ಲೇ ಚಾಮರಾಜನಗರದ ಇಬ್ಬರು ಶಾಸಕರ ಜಗಳ
ಸಚಿವರ ಎದುರಲ್ಲೇ ಚಾಮರಾಜನಗರದ ಇಬ್ಬರು ಶಾಸಕರ ಜಗಳ
ನಿಖಿಲ್ ಉಪ ಚುನಾವಣೆ ಸೋಲನ್ನು ಕ್ರೀಡಾಸ್ಪೂರ್ತಿಯಿಂದ ಸ್ವೀಕರಿಸಿದ್ದಾರೆ
ನಿಖಿಲ್ ಉಪ ಚುನಾವಣೆ ಸೋಲನ್ನು ಕ್ರೀಡಾಸ್ಪೂರ್ತಿಯಿಂದ ಸ್ವೀಕರಿಸಿದ್ದಾರೆ