Roopesh Shetty: ಏಕಾಏಕಿ ದುಬೈಗೆ ಹೊರಟ ರೂಪೇಶ್ ಶೆಟ್ಟಿ; ಫ್ಯಾನ್ಸ್​ಗೆ ‘ಬಿಗ್ ಬಾಸ್’ ವಿನ್ನರ್​ನ​ ಭೇಟಿ ಮಾಡೋ ಅವಕಾಶ

‘ಗಿರಿಗಿಟ್’ ಸಿನಿಮಾ ತುಳುದಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿದೆ. ಈ ಚಿತ್ರವನ್ನು ರೂಪೇಶ್ ಶೆಟ್ಟಿ ನಿರ್ದೇಶನ ಮಾಡಿದ್ದರು. ಈಗ ಈ ತಂಡ ‘ಸರ್ಕ್ಸಸ್’ ಚಿತ್ರಕ್ಕಾಗಿ ಒಂದಾಗಿದೆ.

Roopesh Shetty: ಏಕಾಏಕಿ ದುಬೈಗೆ ಹೊರಟ ರೂಪೇಶ್ ಶೆಟ್ಟಿ; ಫ್ಯಾನ್ಸ್​ಗೆ ‘ಬಿಗ್ ಬಾಸ್’ ವಿನ್ನರ್​ನ​ ಭೇಟಿ ಮಾಡೋ ಅವಕಾಶ
ರೂಪೇಶ್ ಶೆಟ್ಟಿ
Follow us
ರಾಜೇಶ್ ದುಗ್ಗುಮನೆ
|

Updated on:May 26, 2023 | 9:18 AM

ನಟ ರೂಪೇಶ್ ಶೆಟ್ಟಿ (Roopesh Shetty) ಅವರು ‘ಬಿಗ್ ಬಾಸ್ ಕನ್ನಡ ಒಟಿಟಿ’ ಹಾಗೂ ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಭಾಗಿ ಆಗಿ ಜನಪ್ರಿಯತೆ ಪಡೆದರು. ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿದೆ. ಈಗ ಅವರು ನೇರವಾಗಿ ದುಬೈಗೆ ಹೊರಟಿದ್ದಾರೆ. ಅಲ್ಲಿ ರೂಪೇಶ್ ಶೆಟ್ಟಿಯನ್ನು ಭೇಟಿ ಮಾಡೋ ಅವಕಾಶ ಫ್ಯಾನ್ಸ್​ಗೆ ದೊರೆಯುತ್ತಿದೆ. ಇದಕ್ಕೆಲ್ಲ ಕಾರಣ ‘ಸರ್ಕಸ್’ ಸಿನಿಮಾದ (Circus Movie) ಪ್ರೀಮಿಯರ್ ಶೋ.

‘ಗಿರಿಗಿಟ್’ ಸಿನಿಮಾ ತುಳುದಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿದೆ. ಈ ಚಿತ್ರವನ್ನು ರೂಪೇಶ್ ಶೆಟ್ಟಿ ನಿರ್ದೇಶನ ಮಾಡಿದ್ದರು. ಜೊತೆಗೆ ಮುಖ್ಯಭೂಮಿಕೆ ನಿರ್ವಹಿಸಿದ್ದರು. ಅರವಿಂದ್ ಬೋಲಾರ್, ನವೀನ್ ಡಿ. ಪಡಿಲ್, ಭೋಜರಾಜ್ ವಮಂಜೂರ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದರು. ಈಗ ಈ ತಂಡ ‘ಸರ್ಕಸ್’ ಚಿತ್ರಕ್ಕಾಗಿ ಒಂದಾಗಿದೆ. ಈ ಸಿನಿಮಾದ ಪ್ರೀಮಿಯರ್ ಶೋ ಮೇ 28ರಂದು ದುಬೈನಲ್ಲಿ ನಡೆಯುತ್ತಿದೆ. ರೂಪೇಶ್ ಶೆಟ್ಟಿ ಜೊತೆ ಕುಳಿತು ಸಿನಿಮಾ ನೋಡುವ ಅವಕಾಶ ಫ್ಯಾನ್ಸ್​ಗೆ ಇದೆ.

ಈ ಸಂಬಂಧ ಪ್ರೋಮೋ ಒಂದನ್ನು ಬಿಡಲಾಗಿದೆ. ರೂಪೇಶ್ ಶೆಟ್ಟಿ ಪಾಸ್​ಪೋರ್ಟ್​ಗಾಗಿ ಹುಡುಕಾಡುತ್ತಿರುತ್ತಾರೆ. ಆ ಸಮಯಕ್ಕೆ ಅವರಿಗೆ ಬ್ಯಾಂಕ್ ಪಾಸ್​ಬುಕ್ ಸಿಗುತ್ತದೆ! ಏನೇ ಮಾಡಿದರೂ ಪಾಸ್​ಪೋರ್ಟ್ ಸಿಗೋದಿಲ್ಲ. ಕೊನೆಗೂ ಪಾಸ್​ಪೋರ್ಟ್ ದೊರೆಯುತ್ತದೆ. ಈ ಮೂಲಕ ಅವರು ದುಬೈಗೆ ಹೊರಡೋಕೆ ರೆಡಿ ಆಗುತ್ತಾರೆ.

‘ಹೆಲ್ಲೋ ಹಬಿಬಿ, ನಾನು ದುಬೈಗೆ ಬರುತ್ತಿದ್ದೇನೆ. ‘ಗಿರಿಗಿಟ್’ ಸಿನಿಮಾ ತಂಡದ ಎರಡನೇ ಸಿನಿಮಾ ‘ಸರ್ಕಸ್’. ದುಬೈನಲ್ಲಿ ಮೆಗಾ ಪ್ರೀಮಿಯರ್ ಶೋ. ಗಿರಿಗಿಟ್ ಚಿತ್ರಕ್ಕಿಂತ ಡಬಲ್ ಎಂಟರ್​ಟೇನ್​ಮೆಂಟ್ ಸರ್ಕಸ್ ಚಿತ್ರದಲ್ಲಿದೆ. ಈಗಲೇ ಟಿಕೆಟ್ ಬುಕ್ ಮಾಡಿ’ ಎಂದು ಅವರು ಕೋರಿದ್ದಾರೆ. ಅನೇಕರು ಇದಕ್ಕೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ‘ನಾನು ಕೊರಗಜ್ಜನ ಆರಾಧನೆ ಮಾಡ್ತೀನಿ, ಬಿಗ್​ ಬಾಸ್​ನಲ್ಲಿ ಅವರೇ ನನ್ನ ಗೆಲ್ಲಿಸಿದ್ದಾರೆ’: ರೂಪೇಶ್​ ಶೆಟ್ಟಿ

ಟಿಕೆಟ್​ನ ಎಲ್ಲಿ ಬುಕ್ ಮಾಡಬೇಕು? ಯಾವ ಲೊಕೇಷನ್​ನಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿ ದೂರವಾಣಿ ಸಂಖ್ಯೆ ಒಂದನ್ನು ನೀಡಲಾಗಿದೆ. ಈ ಮೂಲಕ ನೀವು ಟಿಕೆಟ್ ಕಾಯ್ದಿರಿಸಬಹುದು. ದುಬೈ ಪ್ರೀಮೀಯರ್ ಶೋನಲ್ಲಿ ಭಾಗಿ ಆದರೆ ರೂಪೇಶ್ ಶೆಟ್ಟಿನ ಭೇಟಿ ಮಾಡುವ ಅವಕಾಶ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:58 am, Fri, 26 May 23

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್