Kabir Bedi: ‘ಕೊರಗಜ್ಜ’ ಚಿತ್ರಕ್ಕೆ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ ಬಾಲಿವುಡ್ ನಟ ಕಬೀರ್ ಬೇಡಿ

Koragajja Movie: ಕಬೀರ್ ಬೇಡಿ ಅವರು ದೊಡ್ಡ ಸವಾಲನ್ನು ಅತ್ಯಂತ ಸಮರ್ಪಕವಾಗಿ ಎದುರಿಸಿದ್ದಾರೆ. ಮುಂಬೈನ ಸ್ಟುಡಿಯೋವೊಂದರಲ್ಲಿ ದಿನಕ್ಕೆ ಎರಡು-ಮೂರು ಸಂಭಾಷಣೆಯನ್ನು ಒಪ್ಪಿಸುತ್ತಾ ಡಬ್ಬಿಂಗ್ ನಡೆಸುತ್ತಿದ್ದಾರೆ.

Kabir Bedi: ‘ಕೊರಗಜ್ಜ’ ಚಿತ್ರಕ್ಕೆ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ ಬಾಲಿವುಡ್ ನಟ ಕಬೀರ್ ಬೇಡಿ
ಕಬೀರ್ ಬೇಡಿ
Follow us
ಮದನ್​ ಕುಮಾರ್​
|

Updated on: May 25, 2023 | 4:14 PM

ಸುಧೀರ್ ಅತ್ತಾವರ್ ನಿರ್ದೇಶನದ ‘ಕೊರಗಜ್ಜ’ (Koragajja) ಚಿತ್ರದಲ್ಲಿ ಬರುವ ಉದ್ಯಾವರ ಅರಸರ ಪಾತ್ರವನ್ನು ಕಬೀರ್ ಬೇಡಿ ನಿಭಾಯಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಅವರು ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂಬುದು ವಿಶೇಷ. ನಿರ್ದೇಶಕರ ಕೆಲಸವನ್ನು ಅವರು ಮೆಚ್ಚಿಕೊಂಡಿದ್ದಾರೆ. ಅಲ್ಲದೇ ತಮ್ಮ ಪಾತ್ರಕ್ಕೆ ತಾವೇ ಧ್ವನಿ ನೀಡಿದ್ದಾರೆ. ಕಬೀರ್ ಬೇಡಿ (Kabir Bedi) ಅವರು ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ (Dubbing) ಮಾಡುತ್ತೇನೆ ಎಂದು ಶೂಟಿಂಗ್ ವೇಳೆ ಹೇಳಿದ್ದರು. ಆದರೆ ಅವರ ಮಾತನ್ನು ಒಪ್ಪುವುದು ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ಅಷ್ಟು ಸುಲಭದಲ್ಲಿ ಸಾಧ್ಯವಿರಲಿಲ್ಲ. ಯಾಕೆಂದರೆ, ಬಾಲಿವುಡ್, ಹಾಲಿವುಡ್, ಯುರೋಪಿಯನ್ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದ ನಟ ಏಕಾಏಕಿ ದಕ್ಷಿಣ ಭಾರತದ ಅದರಲ್ಲೂ ಕನ್ನಡ, ತುಳು, ಮಲಯಾಳಂ ಭಾಷೆಗಳ ಸೊಗಡನ್ನು ಅರಿತು, ಸ್ವಾಭಾವಿಕ ಶೈಲಿಯಲ್ಲಿ ಧ್ವನಿಯನ್ನು ಏರಿಳಿತಗೊಳಿಸುವುದು ಅಷ್ಟು ಸುಲಭದ ವಿಚಾರ ಆಗಿರಲಿಲ್ಲ.

ಕಬೀರ್ ಬೇಡಿ ಅವರು ಈ ಸವಾಲನ್ನು ಅತ್ಯಂತ ಸಮರ್ಪಕವಾಗಿ ಎದುರಿಸಿ, ತಮ್ಮ ಪಾತ್ರಕ್ಕೆ ಮುಂಬೈನ ಪ್ರತಿಷ್ಟಿತ ಸ್ಟುಡಿಯೋ ಒಂದರಲ್ಲಿ ದಿನಕ್ಕೆ ಎರಡು-ಮೂರು ಸಂಭಾಷಣೆಯನ್ನು ಒಪ್ಪಿಸುತ್ತಾ ಡಬ್ಬಿಂಗ್ ನಡೆಸುತ್ತಿದ್ದಾರೆ. ‘ಕಾಂತಾರ’ ನಂತರ ದೈವದ ಕಥೆಯಾಧಾರಿತ ‘ಕೊರಗಜ್ಜ’ ಚಿತ್ರದ ಬಗ್ಗೆ ಹೆಚ್ಚು ಕುತೂಹಲಗೊಂಡಿರುವ ಮುಂಬೈನ ಪ್ರೇಕ್ಷಕರು ಕೂಡ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: Kabir Bedi: ಕೊರಗಜ್ಜ ದೈವದ ಚಿತ್ರದಲ್ಲಿ ನಟಿಸಲು ಕಬೀರ್​ ಬೇಡಿ ಒಪ್ಪಿಕೊಂಡಿದ್ದು ಯಾಕೆ? ಇಲ್ಲಿದೆ ಪೂರ್ತಿ ವಿವರ

ತ್ರಿವಿಕ್ರಮ ಸಾಪಲ್ಯ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ಉದ್ಯಾವರದಲ್ಲಿನ ರಾಷ್ಟ್ರೀಯ ಹೆದ್ದಾರಿಯ ಬಲಬದಿಯಲ್ಲಿ ಉದ್ಯಾವರ ಅರಸರ ಸಾನಿಧ್ಯವಿರುವ ಬಹಳ ದೊಡ್ಡ ದೈವಸ್ಥಾನವಿದೆ. ‘ಕೊರಗಜ್ಜ’ ಸಿನಿಮಾದಲ್ಲಿ ಹಿರಿಯ ನಟಿ ಭವ್ಯರವರು ಉದ್ಯಾವರ ಅರಸರನ್ನು ಎದುರುಹಾಕಿಕೊಳ್ಳುವ ಪಂಜಂದಾಯಿ ಎನ್ನುವ (ಈಗ ದೈವವೆಂದು ಪೂಜೆಗೊಳಪಟ್ಟಿರುವ) ರಾಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಎರಡು ಪಾತ್ರಗಳು ರಣರಂಗದಲ್ಲಿ ಸಂಧಿಸುವ ರೋಚಕ ಘಟನೆಯನ್ನು ಐದು ಕ್ಯಾಮರಾಗಳಲ್ಲಿ ಚಿತ್ರೀಕರಿಸಿದ್ದು, ಇದು ಚಿತ್ರದ ಹೈಲೈಟ್​ಗಳಲ್ಲಿ ಒಂದು.

ಇದನ್ನೂ ಓದಿ: ಬಾಲಿವುಡ್​ ಕಲಾವಿದ ಕಬೀರ್​ ಬೇಡಿ ಇಟಲಿಯಲ್ಲಿ ‘ಮಾದಕ ನಟ’ ಎನಿಸಿಕೊಳ್ಳಲು ಕಾರಣ ಆಗಿದ್ದು ಆ ಒಂದು ಧಾರಾವಾಹಿ

ನಾಲ್ಕೈದು ಕ್ಯಾಮರಾಗಳನ್ನು ಬಳಸಿಕೊಂಡು ಚಿತ್ರೀಕರಿಸಿದ್ದ ಈ ಚಿತ್ರದ ಎಡಿಟಿಂಗ್ ಕೂಡಾ ಅತ್ಯಂತ ಸವಾಲಿನ ಕೆಲಸವಾಗಿತ್ತು. ಖ್ಯಾತ ಸಂಕಲನಕಾರ ಸುರೇಶ್ ಅರಸ್ ಜೊತೆ ವಿದ್ಯಾಧರ್ ಶೆಟ್ಟಿ ಕೂಡ ಸಂಕಲನಕಾರರಾಗಿ ಚಿತ್ರಕ್ಕೆ ದುಡಿದಿದ್ದಾರೆ. ಚಿತ್ರದ ಸೌಂಡ್ ಡಿಸೈನ್ ಕಾರ್ಯಕ್ಕಾಗಿ ದೇಶದ ಪ್ರತಿಭಾನ್ವಿತ ತಂತ್ರಜ್ಞರು ಕೈ ಜೋಡಿಸುತ್ತಿದ್ದಾರೆ. ಮುಂಬೈ ಹಾಗೂ ವಿದೇಶಗಳಲ್ಲಿ ಈ ಕೆಲಸವನ್ನು ಮಾಡಲು ಈಗಾಗಲೇ ಕಾರ್ಯತಂತ್ರ ರೂಪಿಸಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: ಕೊರಗಜ್ಜ ಸಿನಿಮಾಕ್ಕೆ ಸತತ ಅಡ್ಡಿ: ಕ್ಷೇತ್ರ ನಿರ್ಮಾಣ, ಅದ್ಧೂರಿ ಕೋಲಸೇವೆ ಮಾಡಿಸಿದ ಚಿತ್ರತಂಡ

ಕ್ಲೈಮ್ಯಾಕ್ಸ್​ ಅನ್ನು ಮರು ಚಿತ್ರೀಕರಿಸಿದ್ದ ಚಿತ್ರತಂಡವು ಮೈನವಿರೇಳಿಸುವ ಗ್ರಾಫಿಕ್ಸ್​ ಅನ್ನು ಕ್ಲೈಮ್ಯಾಕ್ಸ್​ನಲ್ಲಿ ಅಳವಡಿಸಿಕೊಳ್ಳುತ್ತಿದೆ. ಒಟ್ಟಾರೆ ಮಹತ್ವಾಕಾಂಕ್ಷೆಯ ಬಿಗ್ ಬಜೆಟ್​ನ ‘ಕೊರಗಜ್ಜ’ ಚಿತ್ರವು ಮೇಕಿಂಗ್ ವಿಚಾರದಲ್ಲಿ ಎಲ್ಲೂ ಕಾಂಪ್ರಮೈಸ್ ಮಾಡಿಕೊಳ್ಳದೆ, ಚಿತ್ರದ ಬಗ್ಗೆ ಎಲ್ಲರ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ