Kabir Bedi: ಕೊರಗಜ್ಜ ದೈವದ ಚಿತ್ರದಲ್ಲಿ ನಟಿಸಲು ಕಬೀರ್​ ಬೇಡಿ ಒಪ್ಪಿಕೊಂಡಿದ್ದು ಯಾಕೆ? ಇಲ್ಲಿದೆ ಪೂರ್ತಿ ವಿವರ

Kari Haida Kari Ajja: ‘ಕರಿ ಹೈದ ಕರಿ ಅಜ್ಜ’ ಚಿತ್ರದಲ್ಲಿ ಭರತ್​ ಸೂರ್ಯ ಅವರು ಕೊರಗಜ್ಜನ ಪಾತ್ರ ಮಾಡುತ್ತಿದ್ದಾರೆ. ಕಬೀರ್​ ಬೇಡಿ ಕೂಡ ಒಂದು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

Kabir Bedi: ಕೊರಗಜ್ಜ ದೈವದ ಚಿತ್ರದಲ್ಲಿ ನಟಿಸಲು ಕಬೀರ್​ ಬೇಡಿ ಒಪ್ಪಿಕೊಂಡಿದ್ದು ಯಾಕೆ? ಇಲ್ಲಿದೆ ಪೂರ್ತಿ ವಿವರ
‘ಕರಿ ಹೈದ ಕರಿ ಅಜ್ಜ’ ಸಿನಿಮಾ ತಂಡ
Follow us
TV9 Web
| Updated By: ಮದನ್​ ಕುಮಾರ್​

Updated on:Dec 07, 2022 | 12:25 PM

ತುಳುನಾಡಿನ ದೈವಗಳ ಕುರಿತು ಬೇರೆ ಪ್ರದೇಶದ ಜನರಿಗೆ ಆಸಕ್ತಿ ಹೆಚ್ಚಿದೆ. ಈ ಸಂದರ್ಭದಲ್ಲಿ ಕೊರಗಜ್ಜ (Koragajja) ದೈವದ ಕುರಿತು ‘ಕರಿ ಹೈದ ಕರಿ ಅಜ್ಜ’ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾಗೆ ಸುಧೀರ್​ ಅತ್ತಾವರ್​ ನಿರ್ದೇಶನ ಮಾಡುತ್ತಿದ್ದಾರೆ. ಧೃತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲ್ಮ್ಸ್​ ಬ್ಯಾನರ್ ಮೂಲಕ ತ್ರಿವಿಕ್ರಮ್ ಸಪಲ್ಯ ಅವರು ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಖ್ಯಾತ ನಟ ಕಬೀರ್​ ಬೇಡಿ (Kabir Bedi) ಅವರು ಬಣ್ಣ ಹಚ್ಚುತ್ತಿರುವುದು ವಿಶೇಷ. ಒಂದು ಪ್ರಮುಖ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ‘ಕರಿ ಹೈದ ಕರಿ ಅಜ್ಜ’ (Kari Haida Kari Ajja) ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಕಬೀರ್​ ಬೇಡಿ ಅವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ತಾವು ಈ ಚಿತ್ರವನ್ನು ಒಪ್ಪಿಕೊಂಡಿದ್ದು ಯಾಕೆ ಎಂದು ಅವರು ವಿವರಿಸಿದರು.

‘ಕರಿ ಹೈದ ಕರಿ ಅಜ್ಜ’ ಸಿನಿಮಾದ ಕಥೆ ಕೇಳಿ ಕಬೀರ್​ ಬೇಡಿ ಅವರು ಬಹಳ ಮೆಚ್ಚಿಕೊಂಡಿದ್ದಾರೆ. ‘ಈ ಕಥೆ ನನಗೆ ತುಂಬ ಇಷ್ಟ ಆಯ್ತು. ಇದು ಓರ್ವ ಆದಿವಾಸಿ ಯುವಕನ ಕಥೆ. ಆದಿವಾಸಿ ಮಹಿಳೆ ಭಾರತದ ರಾಷ್ಟ್ರಪತಿ ಆಗಿರುವಾಗ ಈ ಸಂದರ್ಭದಲ್ಲಿ ಆದಿವಾಸಿ ದೈವದ ಕುರಿತು ಸಿನಿಮಾ ಬರುತ್ತಿರುವುದು ವಿಶೇಷ. ನಾವು ಪುರಾಣಗಳನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತೇವೆ. ಹಾಗೆಯೇ ಆದಿವಾಸಿ ದೈವಗಳ ಕುರಿತಾಗಿ ಹಾಗೂ ಅವರ ಸಂಸ್ಕೃತಿಯ ಬಗ್ಗೆ ಸಿನಿಮಾ ಮೂಡಿಬರುವುದು ಖುಷಿಯ ವಿಚಾರ’ ಎಂದು ಕಬೀರ್ ಬೇಡಿ ಹೇಳಿದ್ದಾರೆ.

ಇದನ್ನೂ ಓದಿ: Koragajja: ‘ಕೊರಗಜ್ಜ’ ದೈವದ ಕುರಿತ ‘ಕರಿ ಹೈದ ಕರಿ ಅಜ್ಜ’ ಚಿತ್ರದಲ್ಲಿ ನಟಿ ಭವ್ಯ ಪಾತ್ರ ಏನು?

ಇದನ್ನೂ ಓದಿ
Image
‘ಕಾಂತಾರ’ ನೋಡಿ ಬೆಂಗಳೂರಲ್ಲಿ ‘ಕೊರಗಜ್ಜ ನೇಮ’ ಆಚರಣೆಗೆ ನಡೆದಿತ್ತು ಸಿದ್ಧತೆ; ವಿರೋಧ ಹಿನ್ನೆಲೆಯಲ್ಲಿ ಕ್ಯಾನ್ಸಲ್
Image
Koragajja: ಕೊರಗಜ್ಜ ದೈವದ ಕುರಿತು ಸೆಟ್ಟೇರಿತು ಹೊಸ ಸಿನಿಮಾ; ‘ಕರಿ ಹೈದ ಕರಿ ಅಜ್ಜ’ ಬಗ್ಗೆ ಇಲ್ಲಿದೆ ಮಾಹಿತಿ..
Image
Kantara: ‘ಇದು ರಿಷಬ್​ ಮಾಡಿದ ಚಿತ್ರ ಅಲ್ಲ, ದೇವರೇ ಮಾಡ್ಸಿದ್ದು’; ವಿದೇಶದಲ್ಲಿ ‘ಕಾಂತಾರ’ ನೋಡಿ ಜಗ್ಗೇಶ್​ ಪ್ರತಿಕ್ರಿಯೆ
Image
ಮದುವೆ ಸಂಭ್ರಮದಲ್ಲಿ ಕೊರಗಜ್ಜನಿಗೆ ಅವಮಾನ: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ

‘ಈ ಚಿತ್ರ ಮಾಡುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ. ಇಂಥ ತಂಡದ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ತುಂಬ ಖುಷಿ ಆಗುತ್ತಿದೆ. ನನ್ನದು ಇಲ್ಲಿ ವಿಲನ್​ ಪಾತ್ರ. ಆದರೂ ಅದು ತುಂಬ ಪವರ್​ಫುಲ್​ ಆಗಿದೆ. ನಾನು ಕನ್ನಡದಲ್ಲಿಯೇ ಡೈಲಾಗ್​ ಹೇಳಿದ್ದೇನೆ. ಯಾಕೆಂದರೆ, ಅದಕ್ಕೆ ನನ್ನ ಧ್ವನಿಯ ಅಗತ್ಯವಿದೆ’ ಎಂದು ಕಬೀರ್ ಬೇಡಿ ಹೇಳಿದ್ದಾರೆ.

ಇದನ್ನೂ ಓದಿ: Koragajja: ಕೊರಗಜ್ಜ ದೈವದ ಕುರಿತು ಸೆಟ್ಟೇರಿತು ಹೊಸ ಸಿನಿಮಾ; ‘ಕರಿ ಹೈದ ಕರಿ ಅಜ್ಜ’ ಬಗ್ಗೆ ಇಲ್ಲಿದೆ ಮಾಹಿತಿ..

‘ಈ ಸಿನಿಮಾದಲ್ಲಿ ಒಂದು ಮೆಸೇಜ್​​ ಇದೆ. ಒಳ್ಳೊಳ್ಳೆಯ ದೃಶ್ಯಗಳನ್ನು ಚಿತ್ರೀಕರಿಸಿದ್ದೇವೆ. ನನ್ನ ಜೊತೆಗೆ ಭವ್ಯ, ಭರತ್​ ಸೂರ್ಯ ಅವರಂತಹ ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಗಿರೀಶ್​ ಕಾರ್ನಾಡ್​ ಅವರ ತುಘಲಕ್​ ಇಂಗ್ಲಿಷ್​ ನಾಟಕದಿಂದ ನಾನು ಚಿತ್ರರಂಗಕ್ಕೆ ಎಂಟ್ರಿ ಪಡೆದವನು. ಹಾಗಾಗಿ ಕನ್ನಡಿಗರಿಗೆ ನನ್ನ ಧನ್ಯವಾದಗಳು’ ಎಂದಿದ್ದಾರೆ ಕಬೀರ್​ ಬೇಡಿ.

ಕೊರಗಜ್ಜನ ಪಾತ್ರದಲ್ಲಿ ಭರತ್​ ಸೂರ್ಯ ನಟಿಸುತ್ತಿದ್ದಾರೆ. ಬಹುತೇಕ ಚಿತ್ರೀಕಣ ಮುಕ್ತಾಯವಾಗಿದೆ. ವಿದ್ಯಾಧರ್ ಶೆಟ್ಟಿ ಸಂಕಲನ, ಪವನ್ ವಿ. ಕುಮಾರ್ ಮತ್ತು ಗಣೇಶ್ ಕೆಳಮನೆ ಛಾಯಾಗ್ರಹಣ, ಸುಧೀರ್-ಕೃಷ್ಣ ರವಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:25 pm, Wed, 7 December 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ