ವಿಷ್ಣುವರ್ಧನ್​ ಹೊಸ ಮನೆಗೆ ಭೇಟಿ ನೀಡಿದ ಯಶ್​, ರಾಧಿಕಾ ಪಂಡಿತ್​, ಸುದೀಪ್​; ಫೋಟೋ ವೈರಲ್​

Vishnuvardhan New House: ಕಿಚ್ಚ ಸುದೀಪ್​, ಯಶ್​, ರಾಧಿಕಾ ಪಂಡಿತ್​ ಅವರು ‘ವಲ್ಮೀಕ’ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಅವರೆಲ್ಲರನ್ನು ಅನಿರುದ್ಧ್​ ಅವರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

ವಿಷ್ಣುವರ್ಧನ್​ ಹೊಸ ಮನೆಗೆ ಭೇಟಿ ನೀಡಿದ ಯಶ್​, ರಾಧಿಕಾ ಪಂಡಿತ್​, ಸುದೀಪ್​; ಫೋಟೋ ವೈರಲ್​
| Updated By: ಮದನ್​ ಕುಮಾರ್​

Updated on:Dec 06, 2022 | 3:21 PM

ಬೆಂಗಳೂರಿನ ಜಯನಗರದಲ್ಲಿ ಡಾ. ವಿಷ್ಣುವರ್ಧನ್​ ಅವರ ಹೊಸ ಮನೆ (Vishnuvardhan New House) ನಿರ್ಮಾಣ ಆಗಿದೆ. ಇದಕ್ಕೆ ‘ವಲ್ಮೀಕ’ ಎಂದು ಹೆಸರು ಇಡಲಾಗಿದ್ದು, ಇತ್ತೀಚೆಗಷ್ಟೇ ಗೃಹಪ್ರವೇಶ ನೆರವೇರಿತು. ಆದರೆ ಅಂದು ಭಾಗಿಯಾಗಲು ಕಿಚ್ಚ ಸುದೀಪ್​ (Kichcha Sudeep), ಯಶ್​, ರಾಧಿಕಾ ಪಂಡಿತ್​ ಮುಂತಾದ ಸೆಲೆಬ್ರಿಟಿಗಳಿಗೆ ಸಾಧ್ಯವಾಗಿರಲಿಲ್ಲ. ಈಗ ಅವರೆಲ್ಲರೂ ‘ಸಾಹಸ ಸಿಂಹ’ನ ಹೊಸ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಅವರನ್ನು ವಿಷ್ಣುವರ್ಧನ್​ ಅಳಿಯ ಅನಿರುದ್ಧ್ ಜಟ್ಕರ್​ (Anirudh Jatkar) ಹಾಗೂ ಕುಟುಂಬದ ಇತರ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಈ ಸಂದರ್ಭದ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:21 pm, Tue, 6 December 22

Follow us