Sign In

By signing in or creating an account, you agree with Associated Broadcasting Company's Terms & Conditions and Privacy Policy.

Bird hit incident in Mangaluru: ದುಬೈಗೆ ಹೊರಟಿದ್ದ ವಿಮಾನಕ್ಕೆ ಟೇಕಾಫ್ ಹಂತದಲ್ಲಿ ಹಕ್ಕಿ ಅಪ್ಪಳಿಸಿ ಆತಂಕ, ವಾಪಸ್ಸು ರನ್ ವೇಗೆ ವಿಮಾನ, ಅಪಾಯವಿಲ್ಲ!

Bird hit incident in Mangaluru: ದುಬೈಗೆ ಹೊರಟಿದ್ದ ವಿಮಾನಕ್ಕೆ ಟೇಕಾಫ್ ಹಂತದಲ್ಲಿ ಹಕ್ಕಿ ಅಪ್ಪಳಿಸಿ ಆತಂಕ, ವಾಪಸ್ಸು ರನ್ ವೇಗೆ ವಿಮಾನ, ಅಪಾಯವಿಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 25, 2023 | 12:27 PM

ಮೂಲಗಳ ಪ್ರಕಾರ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಮತ್ತೊಂದು ವಿಮಾನದಲ್ಲಿ ದುಬೈಗೆ ಕಳಿಸಲಾಗಿದೆ.

ಮಂಗಳೂರು: ಚುನಾವಣೆ ಸಮಯದಲ್ಲಿ ರಣಹದ್ದೊಂದು ಡಿಕೆ ಶಿವಕುಮಾರ್ ಮತ್ತು ಟಿವಿ9 ಕನ್ನಡ ವಾಹಿನಿ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗೆ ಢಿಕ್ಕಿ ಹೊಡೆದ ಪ್ರಕರಣ ಇನ್ನೂ ತಾಜಾವಾಗಿರುವಾಗಲೇ ಮಂಗಳೂರು ವಿಮಾನ ನಿಲ್ದಾಣದಲ್ಲಿ (Mangaluru airport) ಅಂಥದ್ದೇ ಒಂದು ಪ್ರಕರಣ ಜರುಗಿದೆ. ಇಲ್ಲಿನ ಏರ್ಪೋರ್ಟ್ ನಿಂದ ಬೆಳಗ್ಗೆ 8:30 ಕ್ಕೆ ದುಬೈಗೆ ಹೊರಟಿದ್ದ ಇಂಡಿಗೋ ಸಂಸ್ಥೆಯ (Indigo Airlines) ವಿಮಾನವೊಂದು ಟ್ಯಾಕ್ಸಿ ವೇ ನಿಂದ ರನ್ ವೇಗೆ ತಿರುಗಿ ಟೇಕಾಫ್ (take off) ಮಾಡುವ ಹಂತದಲ್ಲಿರುವಾಗ ಹಕ್ಕಿಯೊಂದು ಅದರ ರೆಕ್ಕೆಗೆ ಅಪ್ಪಳಿಸಿದೆ. ಕೂಡಲೇ ವಿಮಾನದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಪೈಲಟ್ ಟೇಕಾಫ್ ಆಗುವುದನ್ನು ತಡೆಹಿಡಿದು ವಿಮಾನವನ್ನು ರನ್ ವೇಗೆ ವಾಪಸ್ಸು ತಂದಿದ್ದಾರೆ. ಯಾವುದೇ ಅಪಾಯ ಉಂಟಾಗಿಲ್ಲ. ಮೂಲಗಳ ಪ್ರಕಾರ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಮತ್ತೊಂದು ವಿಮಾನದಲ್ಲಿ ದುಬೈಗೆ ಕಳಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ