MP holds presser; ಕಾಂಗ್ರೆಸ್ ನೀಡಿದ ಗ್ಯಾರಂಟಿಗಳಿಗೆ ಷರತ್ತು ಅನ್ವಯ ಅಂತ ಎಲ್ಲೂ ಉಲ್ಲೇಖವಾಗಿಲ್ಲ: ಪ್ರತಾಪ್ ಸಿಂಹ, ಸಂಸದ
200 ಯೂನಿಟ್ ಗಿಂತ ಜಾಸ್ತಿ ಬಳಸಿದವರು ಕೇವಲ ಹೆಚ್ಚುವರಿ ಯೂನಿಟ್ ಗಳಿಗೆ ಮಾತ್ರ ಲೆಕ್ಕ ಹಾಕಿ ಹಣ ಪಾವತಿಸಬೇಕು ಎಂದು ಪ್ರತಾಪ್ ಸಿಂಹ ಹೇಳಿದರು.
ಮೈಸೂರು: ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಚುನಾವಣಾ ಸಮಯದಲ್ಲಿ ಜನರಿಗೆ ನೀಡಿದ್ದ 5 ಗ್ಯಾರಂಟಿಗಳನ್ನು ಜೂನ್ 1 ರಿಂದ ಜಾರಿಗೆ ತರದಿದ್ದರೆ ಹೋರಾಟ ಆರಂಭಿಸುವುದಾಗಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದರು. ಮೈಸೂರಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಸಂಸದರು, ಗ್ಯಾರಂಟಿಗಳನ್ನು ಮೊದಲ ಸಂಪುಟ ಸಭೆಯಲ್ಲೇ ಆದೇಶ ಹೊರಡಿಸಿ ಅನುಷ್ಠಾನಕ್ಕೆ ತರಲಾಗುವದೆಂದು ಸಿದ್ದರಾಮಯ್ಯ ಹೇಳಿದ್ದರು, ಸಭೆ ನಡೆದು ಒಂದು ವಾರ ಕಳೆದರೂ ಸರ್ಕಾರ ಅವುಗಳ ಬಗ್ಗೆ ಮಾತಾಡುತ್ತಿಲ್ಲ, ಎಂದರು. ಕಾಂಗ್ರೆಸ್ 5-ಗ್ಯಾರಂಟಿಗಳ ಭಿತ್ತಿಪತ್ರವನ್ನು ಫೋನಲ್ಲಿ ಪ್ರದರ್ಶಿಸಿದ ಅವರು, ಅವುಗಳ ಜಾರಿಗೆ ಷರತ್ತುಗಳು ಅನ್ವಯವಾಗುವ ಬಗ್ಗೆ ಎಲ್ಲೂ ಉಲ್ಲೇಖವಾಗಿಲ್ಲ ಎಂದು ಹೇಳಿದರು. ರಾಜ್ಯದ ಎಲ್ಲ ಕುಟುಂಬಗಳಿಗೆ 200 ಯೂನಿಟ್ ವಿದ್ಯುತ್ ಉಚಿತ ಎಂದು ಸಿದ್ದರಾಮಯ್ಯ ಹೇಳಿದ್ದಾರೆ, ಹಾಗಾಗಿ, ಜೂನ್ ನಿಂದ ಯಾರರೂ ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ, 200 ಯೂನಿಟ್ ಗಿಂತ ಜಾಸ್ತಿ ಬಳಸಿದವರು ಕೇವಲ ಹೆಚ್ಚುವರಿ ಯೂನಿಟ್ ಗಳಿಗೆ ಮಾತ್ರ ಲೆಕ್ಕ ಹಾಕಿ ಹಣ ಪಾವತಿಸಬೇಕು ಎಂದು ಪ್ರತಾಪ್ ಸಿಂಹ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ