Roopesh Shetty: ‘ನಾನು ಕೊರಗಜ್ಜನ ಆರಾಧನೆ ಮಾಡ್ತೀನಿ, ಬಿಗ್​ ಬಾಸ್​ನಲ್ಲಿ ಅವರೇ ನನ್ನ ಗೆಲ್ಲಿಸಿದ್ದಾರೆ’: ರೂಪೇಶ್​ ಶೆಟ್ಟಿ

Kuttar Koragajja temple: ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರ ಟ್ರೋಫಿ ಗೆದ್ದ ಬಳಿಕ ರೂಪೇಶ್​ ಶೆಟ್ಟಿ ಅವರಿಗೆ ಅನೇಕ ಆಫರ್​ಗಳು ಬರುತ್ತಿವೆ. ಆ ಬಗ್ಗೆಯೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

Roopesh Shetty: ‘ನಾನು ಕೊರಗಜ್ಜನ ಆರಾಧನೆ ಮಾಡ್ತೀನಿ, ಬಿಗ್​ ಬಾಸ್​ನಲ್ಲಿ ಅವರೇ ನನ್ನ ಗೆಲ್ಲಿಸಿದ್ದಾರೆ’: ರೂಪೇಶ್​ ಶೆಟ್ಟಿ
ರೂಪೇಶ್ ಶೆಟ್ಟಿ
Follow us
TV9 Web
| Updated By: ಮದನ್​ ಕುಮಾರ್​

Updated on: Jan 08, 2023 | 5:43 PM

ನಟ ರೂಪೇಶ್ ಶೆಟ್ಟಿ (Roopesh Shetty) ಅವರಿಗೆ ಬಿಗ್​ ಬಾಸ್​ ಶೋನಿಂದ ಸಖತ್​ ಜನಪ್ರಿಯತೆ ಸಿಕ್ಕಿದೆ. ಮೊದಲ ತಳುನಾಡಿನಲ್ಲಿ ಮಾತ್ರ ಫೇಮಸ್​ ಆಗಿದ್ದ ಅವರು ಈಗ ಇಡೀ ಕರುನಾಡಿಗೆ ಪರಿಚಿತರಾಗಿದ್ದಾರೆ. ‘ಬಿಗ್​ ಬಾಸ್ ಕನ್ನಡ ಸೀಸನ್​ 9’ರ ವಿನ್ನರ್​ (BBK 9 Winner) ಆದ ಅವರಿಗೆ ಎಲ್ಲ ಕಡೆಗಳಲ್ಲಿ ಸನ್ಮಾನ ಮಾಡಲಾಗುತ್ತಿದೆ. ರೂಪೇಶ್​ ಶೆಟ್ಟಿ ಮೂಲತಃ ಮಂಗಳೂರಿನವರು. ಬಿಗ್​ ಬಾಸ್​ ಟ್ರೋಫಿ ಗೆದ್ದ ಬಳಿಕ ಅವರು ಇದೇ ಮೊದಲ ಬಾರಿಗೆ ಮಂಗಳೂರಿಗೆ ತೆರಳಿದ್ದಾರೆ. ಅಲ್ಲಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ತವರೂರಿನ ಜನರ ಪ್ರೀತಿ ಕಂಡು ರೂಪೇಶ್​ ಶೆಟ್ಟಿ ಖುಷಿಪಟ್ಟಿದ್ದಾರೆ. ಈ ವೇಳೆ ಅವರು ಕೊರಗಜ್ಜ (Koragajja) ದೇವರ ಆಶೀರ್ವಾದ ಪಡೆದಿದ್ದಾರೆ.

‘ನಾನು ಕೊರಗಜ್ಜ ದೇವರನ್ನು ತುಂಬ ಆರಾಧನೆ ಮಾಡುತ್ತೇನೆ. ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಆಡುವಾಗ ಕೊರಗಜ್ಜನ ಹೆಸರು ಹೇಳುತ್ತಿದ್ದೆ. ನಾನು ಗೆಲ್ಲುವುದು ಬೇಡ, ಕನಿಷ್ಠ ಪಕ್ಷ ಟಾಪ್​ 5ರಲ್ಲಿ ಬಂದರೂ ಕೂಡ ಮೊದಲು ಹೋಗುವುದು ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಅಂದುಕೊಂಡಿದ್ದೆ. ನನ್ನನ್ನು ಅವರೇ ಗೆಲ್ಲಿಸಿದ್ದಾರೆ’ ಎಂದು ರೂಪೇಶ್​ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ನಿಂದ ಹೊರಬಂದ ನಂತರ ಸಾನ್ಯಾ ಬದಲಾಗಿದ್ದಾರಾ? ರೂಪೇಶ್ ಶೆಟ್ಟಿ ಪ್ರತಿಕ್ರಿಯಿಸಿದ್ದು ಹೀಗೆ

ಇದನ್ನೂ ಓದಿ
Image
‘ಕಾಂತಾರ’ ನೋಡಿ ಬೆಂಗಳೂರಲ್ಲಿ ‘ಕೊರಗಜ್ಜ ನೇಮ’ ಆಚರಣೆಗೆ ನಡೆದಿತ್ತು ಸಿದ್ಧತೆ; ವಿರೋಧ ಹಿನ್ನೆಲೆಯಲ್ಲಿ ಕ್ಯಾನ್ಸಲ್
Image
Koragajja: ಕೊರಗಜ್ಜ ದೈವದ ಕುರಿತು ಸೆಟ್ಟೇರಿತು ಹೊಸ ಸಿನಿಮಾ; ‘ಕರಿ ಹೈದ ಕರಿ ಅಜ್ಜ’ ಬಗ್ಗೆ ಇಲ್ಲಿದೆ ಮಾಹಿತಿ..
Image
Kantara: ‘ಇದು ರಿಷಬ್​ ಮಾಡಿದ ಚಿತ್ರ ಅಲ್ಲ, ದೇವರೇ ಮಾಡ್ಸಿದ್ದು’; ವಿದೇಶದಲ್ಲಿ ‘ಕಾಂತಾರ’ ನೋಡಿ ಜಗ್ಗೇಶ್​ ಪ್ರತಿಕ್ರಿಯೆ
Image
ಮದುವೆ ಸಂಭ್ರಮದಲ್ಲಿ ಕೊರಗಜ್ಜನಿಗೆ ಅವಮಾನ: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ

ಮಂಗಳೂರಿಗೆ ಬಂದ ರೂಪೇಶ್​ ಶೆಟ್ಟಿಗೆ ಹುಲಿ ವೇಷದ ಕಲಾವಿದರು ಸ್ವಾಗತ ಕೋರಿದ್ದಾರೆ. ಅದು ಅವರಿಗೆ ಹೆಚ್ಚು ಸಂತಸ ತಂದಿದೆ. ಆ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ಚಿಕ್ಕ ವಯಸ್ಸಿನಿಂದಲೂ ನನಗೆ ಹುಲಿ ವೇಷ ಎಂದರೆ ಇಷ್ಟ. ತುಳು ನಾಡಿನ ಈ ಸಂಸ್ಕೃತಿಕ ಕಲೆಯನ್ನು ಬಿಗ್​ ಬಾಸ್​ ಮನೆಯಲ್ಲಿ ಪ್ರದರ್ಶನ ಮಾಡಲು ಅವಕಾಶ ಸಿಕ್ಕಿತು. ಇಲ್ಲಿಯೂ ಹುಲಿವೇಷವನ್ನು ನನ್ನ ಸ್ನೇಹಿತರು ಪ್ಲ್ಯಾನ್​ ಮಾಡಿದ್ದಾರೆ. ನಾನು ಇದನ್ನು ನಿರೀಕ್ಷಿಸಿರಲಿಲ್ಲ’ ಎಂದಿದ್ದಾರೆ ರೂಪೇಶ್​ ಶೆಟ್ಟಿ.

ಇದನ್ನೂ ಓದಿ: Roopesh Shetty: ರೂಪೇಶ್ ಶೆಟ್ಟಿ ಸಿನಿಮಾ ‘ಮಂಕು ಭಾಯ್ ಫಾಕ್ಸಿ ರಾಣಿ’ ಜ.13ಕ್ಕೆ ರಿಲೀಸ್​; ಗಮನ ಸೆಳೆದ ಟ್ರೇಲರ್​

ಬಿಗ್​ ಬಾಸ್​ ಗೆದ್ದ ಬಳಿಕ ರೂಪೇಶ್​ ಶೆಟ್ಟಿ ಅವರಿಗೆ ಅನೇಕ ಆಫರ್​ಗಳು ಬರುತ್ತಿವೆ. ಆ ಬಗ್ಗೆಯೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ನನ್ನ ತುಳು ಸಿನಿಮಾ ‘ಸರ್ಕಸ್​’ ರಿಲೀಸ್​ಗೆ ಸಿದ್ಧವಾಗಿದೆ. ನಾಲ್ಕರಿಂದ ಐದು ಕನ್ನಡ ಸಿನಿಮಾಗಳ ಆಫರ್​ ಬಂದಿದೆ. ಮುಂದಿನ ವಾರ ಅವುಗಳನ್ನು ಪಕ್ಕಾ ಮಾಡಿಕೊಳ್ಳುತ್ತೇನೆ’ ಎಂದು ರೂಪೇಶ್​ ಶೆಟ್ಟಿ ಹೇಳಿದ್ದಾರೆ.

ಬಿಗ್​ ಬಾಸ್​ ಗೆದ್ದ ರೂಪೇಶ್​ ಶೆಟ್ಟಿ ಅವರಿಗೆ 60 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿತು. ಅದರಲ್ಲಿ ಶೇಕಡ 50ರಷ್ಟು ಹಣವನ್ನು ಸಮಾಜಮುಖಿ ಕೆಲಸಕ್ಕೆ ಬಳಸುವುದಾಗಿ ಅವರು ಹೇಳಿದ್ದಾರೆ. ‘ಆ ಬಗ್ಗೆ ಸರಿಯಾಗಿ ಪ್ಲ್ಯಾನ್​ ಮಾಡಿ ಹೇಳುತ್ತೇನೆ. 2-3 ಕುಟುಂಬದವರಿಗೆ ಮನೆ ಕಟ್ಟಿಕೊಡುವ ವ್ಯವಸ್ಥೆ ಮಾಡುತ್ತೇನೆ’ ಎಂದು ರೂಪೇಶ್​ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ