AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ನಿಂದ ಹೊರಬಂದ ನಂತರ ಸಾನ್ಯಾ ಬದಲಾಗಿದ್ದಾರಾ? ರೂಪೇಶ್ ಶೆಟ್ಟಿ ಪ್ರತಿಕ್ರಿಯಿಸಿದ್ದು ಹೀಗೆ

Sanya Iyer: ‘ಬಿಗ್ ಬಾಸ್ ಕನ್ನಡ ಒಟಿಟಿ’ ಸೀಸನ್​ನಲ್ಲಿ ರೂಪೇಶ್ ಹಾಗೂ ಸಾನ್ಯಾ ಐಯ್ಯರ್ ಭೇಟಿ ಆದರು. ಹಲವು ವಿಚಾರಗಳಲ್ಲಿ ಇಬ್ಬರ ಮಧ್ಯೆ ಸಾಮ್ಯತೆ ಇದ್ದಿದ್ದರಿಂದ ಕ್ಲೋಸ್ ಆದರು. ಇವರ ಮಧ್ಯೆ ಆಪ್ತತೆ ಬೆಳೆಯಿತು.

ಬಿಗ್​ ಬಾಸ್​ನಿಂದ ಹೊರಬಂದ ನಂತರ ಸಾನ್ಯಾ ಬದಲಾಗಿದ್ದಾರಾ? ರೂಪೇಶ್ ಶೆಟ್ಟಿ ಪ್ರತಿಕ್ರಿಯಿಸಿದ್ದು ಹೀಗೆ
ಸಾನ್ಯಾ-ರೂಪೇಶ್
TV9 Web
| Edited By: |

Updated on: Jan 03, 2023 | 8:59 AM

Share

‘ಬಿಗ್ ಬಾಸ್​ ಕನ್ನಡ ಸೀಸನ್ 9’ರ (BBK 9) ಫಿನಾಲೆ ಮುಗಿದು ಕೆಲವು ದಿನ ಕಳೆದಿದೆ. ದೊಡ್ಮನೆಯಿಂದ ಹೊರಬಂದ ವಿನ್ನರ್ ರೂಪೇಶ್ ಶೆಟ್ಟಿ ಅವರನ್ನು ಫ್ಯಾನ್ಸ್ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಅವರ ಜನಪ್ರಿಯತೆ ಸಾಕಷ್ಟು ಹೆಚ್ಚಿದೆ. ಹಲವು ಆಫರ್​ಗಳು ರೂಪೇಶ್ ಅವರನ್ನು ಹುಡುಕಿಕೊಂಡು ಬಂದಿವೆ. ಈಗ ರೂಪೇಶ್ ಶೆಟ್ಟಿ (Roopesh Shetty) ಅವರು ಹಲವು ವಿಚಾರಗಳ ಬಗ್ಗೆ ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ವಿಶೇಷವಾಗಿ ಸಾನ್ಯಾ ಐಯ್ಯರ್ ಜತೆಗಿನ ಫ್ರೆಂಡ್​ಶಿಪ್ ಕುರಿತು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಒಟಿಟಿ’ ಸೀಸನ್​ನಲ್ಲಿ ರೂಪೇಶ್ ಹಾಗೂ ಸಾನ್ಯಾ ಐಯ್ಯರ್ ಭೇಟಿ ಆದರು. ಹಲವು ವಿಚಾರಗಳಲ್ಲಿ ಇಬ್ಬರ ಮಧ್ಯೆ ಸಾಮ್ಯತೆ ಇದ್ದಿದ್ದರಿಂದ ಕ್ಲೋಸ್ ಆದರು. ಇವರ ಮಧ್ಯೆ ಆಪ್ತತೆ ಬೆಳೆಯಿತು. ಟಿವಿ ಸೀಸನ್​​ಗೆ ಇಬ್ಬರೂ ಕಾಲಿಟ್ಟರು. ಇವರು ಹಲವು ವಾರ ದೊಡ್ಮನೆಯಲ್ಲಿ ಒಟ್ಟಾಗಿ ಕಾಲ ಕಳೆದಿದ್ದಾರೆ. ಟಿವಿ ಸೀಸನ್​ನ ಮಧ್ಯದಲ್ಲಿ ಸಾನ್ಯಾ ಐಯ್ಯರ್ ಔಟ್ ಆದರು. ಇದು ರೂಪೇಶ್​ಗೆ ಸಾಕಷ್ಟು ಬೇಸರ ಮೂಡಿಸಿತ್ತು.

ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರದಲ್ಲಿ ಮನಸ್ಥಿತಿ ಬದಲಾಗಬಹುದು. ಈ ವಿಚಾರದಲ್ಲಿ ರೂಪೇಶ್​ ಶೆಟ್ಟಿಗೆ ಆತಂಕ ಕಾಡಿತ್ತು. ಸಾನ್ಯಾ ಐಯ್ಯರ್ ಅವರು ಬದಲಾಗಬಹುದು ಎಂದು ರೂಪೇಶ್ ಶೆಟ್ಟಿ ಆತಂಕ ಹೊರಹಾಕಿದ್ದರು. ಸಾನ್ಯಾ ದೊಡ್ಮನೆಯಿಂದ ಹೊರ ಬಂದ ನಂತರ ಬದಲಾದರಾ? ಈ ಬಗ್ಗೆ ರೂಪೇಶ್ ಅವರು ಟಿವಿ9 ಕನ್ನಡದ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Image
Bigg Boss Kannada Finale: ಬಿಗ್ ಬಾಸ್ ವಿನ್ನರ್ ಹೆಸರು ಲೀಕ್ ಆಗದಿರಲು ಕಲರ್ಸ್ ಕನ್ನಡದಿಂದ ಹೊಸ ಪ್ಲ್ಯಾನ್
Image
Divya Uruduga: ‘ಉತ್ತಮ, ಕಿಚ್ಚನ ಚಪ್ಪಾಳೆ, ಕ್ಯಾಪ್ಟನ್​ ಪಟ್ಟ ದಿವ್ಯಾಗೆ ಸಿಕ್ಕಿಲ್ಲ; ಆದ್ರೂ ಫಿನಾಲೆಗೆ ಹೇಗೆ ಬಂದ್ರು?’: ಗುರೂಜಿ ಪ್ರಶ್ನೆ
Image
Divya Uruduga: ಬಿಗ್ ಬಾಸ್​ ಫಿನಾಲೆಯಿಂದ ಹೊರಬಿದ್ದ ದಿವ್ಯಾ ಉರುಡುಗಗೆ ಸಿಕ್ಕ ಹಣವೆಷ್ಟು?
Image
Divya Uruduga: ‘ಮನೆಯೊಳಗೆ ಇದ್ದಾಗ ನನ್ನ ಮಗಳು ಅಂತಾರೆ, ಆದರೆ ಹೊರಗೆ..’: ಗುರೂಜಿ ಮೇಲೆ ದಿವ್ಯಾ ಗರಂ

ಇದನ್ನೂ ಓದಿ: BBK 9: ರೂಪೇಶ್ ಶೆಟ್ಟಿ-ರಾಕೇಶ್ ಅಡಿಗಗೆ ಒಟಿಟಿ ಸೀಸನ್ ಸಹಕಾರಿ ಆಗಿದ್ದು ಹೇಗೆ? ಇಲ್ಲಿದೆ ಲೆಕ್ಕಾಚಾರ

‘ಸಾನ್ಯಾ ಐಯ್ಯರ್ ಬದಲಾಗಿಲ್ಲ. ನಮ್ಮ ಮಧ್ಯೆ ಶುದ್ಧ ಸ್ನೇಹವಿದೆ. ಮನಸ್ಸಿಂದ ಫ್ರೆಂಡ್​ಶಿಪ್ ಮಾಡಿದ್ರೆ ಅವರು ಯಾವಾಗಲೂ ಬದಲಾಗಲ್ಲ. ಬಿಗ್ ಬಾಸ್​ ಫಿನಾಲೆ ಮುಗಿದ ನಂತರ ಇಬ್ಬರೂ ಭೇಟಿ ಆದೆವು. ಸದ್ಯ ನನ್ನ ಕೈಯಲ್ಲಿ ಮೊಬೈಲ್ ಇಲ್ಲ. ಹೀಗಾಗಿ, ಸಾನ್ಯಾ ಜತೆ ಸಂಪರ್ಕ ಸಾಧಿಸೋಕೆ ಸಾಧ್ಯವಾಗಿಲ್ಲ. ನಾನು ಗೆದ್ದಿರೋದು ಸಾನ್ಯಾಗೆ ಖುಷಿ ನೀಡಿದೆ’ ಎಂದಿದ್ದಾರೆ ರೂಪೇಶ್ ಶೆಟ್ಟಿ.

ರೂಪೇಶ್ ಶೆಟ್ಟಿ ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ವಿನ್ನರ್. ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದಾರೆ. ಇಬ್ಬರೂ ಒಟಿಟಿ ಸೀಸನ್​ನಿಂದ ಟಿವಿ ಸೀಸನ್​ಗೆ ಬಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ