Divya Uruduga: ‘ಮನೆಯೊಳಗೆ ಇದ್ದಾಗ ನನ್ನ ಮಗಳು ಅಂತಾರೆ, ಆದರೆ ಹೊರಗೆ..’: ಗುರೂಜಿ ಮೇಲೆ ದಿವ್ಯಾ ಗರಂ

Aryavardhan Guruji | BBK 9: ತಮ್ಮ ಮಾತನ್ನು ಸಮರ್ಥಿಸಿಕೊಳ್ಳಲು ಆರ್ಯವರ್ಧನ್​ ಗುರೂಜಿ ಮುಂದಾದರು. ‘ರೀ ಸುಮ್ಮನೆ ಕುಳಿತುಕೊಳ್ರಿ’ ಎಂದು ದಿವ್ಯಾ ಉರುಡುಗ ಏರುಧ್ವನಿಯಲ್ಲಿ ಮಾತನಾಡಿದರು.

Divya Uruduga: ‘ಮನೆಯೊಳಗೆ ಇದ್ದಾಗ ನನ್ನ ಮಗಳು ಅಂತಾರೆ, ಆದರೆ ಹೊರಗೆ..’: ಗುರೂಜಿ ಮೇಲೆ ದಿವ್ಯಾ ಗರಂ
ದಿವ್ಯಾ ಉರುಡುಗ, ಆರ್ಯವರ್ಧನ್ ಗುರೂಜಿ
Follow us
TV9 Web
| Updated By: ಮದನ್​ ಕುಮಾರ್​

Updated on: Dec 31, 2022 | 3:46 PM

ನಟಿ ದಿವ್ಯಾ ಉರುಡುಗ (Divya Uruduga) ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಟಾಪ್​ 5ರ ತನಕ ಬಂದ ಅವರು ಫಿನಾಲೆ (BBK 9 Finale) ಸಂಚಿಕೆಯಲ್ಲಿ ಎಲಿಮಿನೇಟ್​ ಆಗಬೇಕಾಯಿತು. 4ನೇ ರನ್ನರ್​ ಅಪ್​ ಆಗಿ ಹೊರಬಂದ ಅವರನ್ನು ಕಿಚ್ಚ ಸುದೀಪ್​ ಅವರು ವೇದಿಕೆ ಮೇಲೆ ಮಾತನಾಡಿಸಿದರು. ಈ ವೇಳೆ ದಿವ್ಯಾ ಉರುಡುಗ ಬಗ್ಗೆ ಪ್ರಶಾಂತ್​ ಸಂಬರ್ಗಿ ಮತ್ತು ಆರ್ಯವರ್ಧನ್​ ಗುರೂಜಿ (Aryavardhan Guruji) ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಗುರೂಜಿ ಹೇಳಿದ ಮಾತುಗಳು ದಿವ್ಯಾಗೆ ಹಿಡಿಸಲಿಲ್ಲ. ಅದಕ್ಕೆ ಅವರು ವೇದಿಕೆಯಲ್ಲೇ ಗರಂ ಆದರು. ಸುದೀಪ್​ ಎದುರಲ್ಲಿ ಆರ್ಯವರ್ಧನ್​ ಬಗ್ಗೆ ದಿವ್ಯಾ ಕೆಲವು ಆರೋಪಗಳನ್ನು ಮಾಡಿದರು.

ದಿವ್ಯಾ ಉರುಡುಗ ಅವರು ಅದೃಷ್ಟದ ಬಲದಿಂದ ಫಿನಾಲೆ ತನಕ ಬಂದಿದ್ದಾರೆ ಎಂಬುದು ಪ್ರಶಾಂತ್​ ಸಂಬರ್ಗಿ ಅವರ ಅಭಿಪ್ರಾಯ. ಅದೇ ಮಾತಿಗೆ ಆರ್ಯವರ್ಧನ್​ ಗುರೂಜಿ ಕೂಡ ಸಹಮತ ಸೂಚಿಸಿದರು. ಇದು ದಿವ್ಯಾ ಅವರ ಕೋಪಕ್ಕೆ ಕಾರಣ ಆಯಿತು. ತಾವು ಅದೃಷ್ಟದಿಂದ ಫಿನಾಲೆ ತಲುಪಿದ್ದಲ್ಲ ಎಂದು ಮೊದಲಿಗೆ ದಿವ್ಯಾ ಸ್ಪಷ್ಟಪಡಿಸಿದರು. ಅಲ್ಲದೇ, ಸಂಬರ್ಗಿಯ ಮಾತಿಗೆ ಹೌದು ಎಂಬಂತೆ ಧ್ವನಿ ಗೂಡಿಸಿದ ಆರ್ಯವರ್ಧನ್​ ಅವರನ್ನು ದಿವ್ಯಾ ನೇರವಾಗಿ ಟೀಕಿಸಿದರು.

ಇದನ್ನೂ ಓದಿ: Roopesh Shetty: ‘ಬಿಗ್​ ಬಾಸ್​ನಿಂದ ಹೊರಬಂದು ಸಾನ್ಯಾನ ತಬ್ಬಿಕೊಂಡು ಈ ವಿಚಾರ ಫಸ್ಟ್​ ಕೇಳ್ತೀನಿ’: ರೂಪೇಶ್​ ಶೆಟ್ಟಿ ಮನದ ಮಾತು

ಇದನ್ನೂ ಓದಿ
Image
Prashanth Sambargi: ನಿಜವಾದ ಹೆಸರು ಮುಚ್ಚಿಟ್ಟಿದ್ದಾರಾ ಗುರೂಜಿ? ‘ಸತ್ಯ ಬಯಲು ಮಾಡ್ತೀನಿ’ ಎಂದ ಪ್ರಶಾಂತ್​ ಸಂಬರಗಿ
Image
Aryavardhan Guruji: ಕನ್ನಡ ಓದಲು ಕಷ್ಟಪಟ್ಟ ಗುರೂಜಿ; ಸಹಾಯ ಮಾಡಿದ ರಾಕೇಶ್​: ಇಲ್ಲಿದೆ ವಿಡಿಯೋ
Image
ಮೀಸೆ, ತಲೆ ಬೋಳಿಸಿಕೊಂಡ ಆರ್ಯವರ್ಧನ್​; ಗುರೂಜಿ ಹೊಸ ಲುಕ್ ಹೇಗಿದೆ ನೋಡಿ
Image
ಆರ್ಯವರ್ಧನ್​ ಗುರೂಜಿ ಕುಟುಂಬದ ಆಸ್ತಿ 5 ಸಾವಿರ ಕೋಟಿ ರೂಪಾಯಿ; ಶಾಕ್​ ಆದ ಸ್ಪರ್ಧಿಗಳು

‘ಮನೆಯೊಳಗೆ ಇದ್ದಾಗ ಇವರು ನನಗೆ ಮಗಳೇ ಅಂತಾರೆ. ಆದರೆ ಇಲ್ಲಿ ಕುಳಿತುಕೊಂಡು ಹಂಗೆ, ಹಿಂಗೆ ಅಂತಾರೆ’ ಎಂದರು ದಿವ್ಯಾ ಉರುಡುಗ. ತಮ್ಮ ಮಾತನ್ನು ಸಮರ್ಥಿಸಿಕೊಳ್ಳಲು ಆರ್ಯವರ್ಧನ್​ ಗುರೂಜಿ ಮುಂದಾದರು. ‘ರೀ ಸುಮ್ಮನೆ ಕುಳಿತುಕೊಳ್ರಿ’ ಎಂದು ಏರುಧ್ವನಿಯಲ್ಲಿ ದಿವ್ಯಾ ಮಾತನಾಡಿದರು.  ಬಿಗ್​ ಬಾಸ್​ ಫಿನಾಲೆಯ ವೇದಿಕೆ ಮೇಲೆ ನಡೆದ ಈ ಮಾತಿನ ಚಕಮಕಿಯಿಂದ ಎಲ್ಲರಿಗೂ ನಗು ಮೂಡಿತು.

ಇದನ್ನೂ ಓದಿ: Bigg Boss Finale: ಬಿಗ್​ ಬಾಸ್​ ಫಿನಾಲೆಗಾಗಿ ವಿಶೇಷ ಗೆಟಪ್​ನೊಂದಿಗೆ ಕ್ಯಾಮೆರಾ ಮುಂದೆ ಬಂದ ರಾಕೇಶ್​ ಅಡಿಗ

‘ಬಿಗ್​ ಬಾಸ್​ ಕನ್ನಡ ಸೀಸನ್​ 8’ರಲ್ಲಿ ಸ್ಪರ್ಧಿಸಿದ್ದ ದಿವ್ಯಾ ಉರುಡುಗ ಅವರು ಆಗಲೂ ಫಿನಾಲೆ ತನಕ ಬಂದು ಔಟ್​ ಆಗಿದ್ದರು. 9ನೇ ಸೀಸನ್​ನಲ್ಲಾದರೂ ಟ್ರೋಫಿ ಗೆಲ್ಲಬೇಕು ಎಂದುಕೊಂಡಿದ್ದ ಅವರ ಕನಸು ಭಗ್ನವಾಯಿತು. ಒಟ್ಟಿನಲ್ಲಿ ಎರಡು ಬಾರಿ ಫಿನಾಲೆ ತಲುಪಿದ ಏಕೈಕ ಸ್ಪರ್ಧಿ ಎಂಬ ದಾಖಲೆ ಅವರ ಹೆಸರಿನಲ್ಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ