AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Finale: ಬಿಗ್​ ಬಾಸ್​ ಫಿನಾಲೆಗಾಗಿ ವಿಶೇಷ ಗೆಟಪ್​ನೊಂದಿಗೆ ಕ್ಯಾಮೆರಾ ಮುಂದೆ ಬಂದ ರಾಕೇಶ್​ ಅಡಿಗ

Rakesh Adiga | BBK 9 Finale: ಬಿಗ್​ ಬಾಸ್​ ಮನೆಯಲ್ಲಿ ರಾಕೇಶ್ ಅಡಿಗ ಅವರು ಸಿಂಪಲ್​ ಆಗಿ ಇದ್ದಿದ್ದೇ ಹೆಚ್ಚು. ಆದರೆ ಫಿನಾಲೆ ಸಂಚಿಕೆಯಲ್ಲಿ ತುಂಬ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದಾರೆ.

Bigg Boss Finale: ಬಿಗ್​ ಬಾಸ್​ ಫಿನಾಲೆಗಾಗಿ ವಿಶೇಷ ಗೆಟಪ್​ನೊಂದಿಗೆ ಕ್ಯಾಮೆರಾ ಮುಂದೆ ಬಂದ ರಾಕೇಶ್​ ಅಡಿಗ
ರಾಕೇಶ್ ಅಡಿಗ
TV9 Web
| Updated By: ಮದನ್​ ಕುಮಾರ್​|

Updated on:Dec 30, 2022 | 8:26 PM

Share

ನಟ, ಗಾಯಕ ರಾಕೇಶ್​ ಅಡಿಗ (Rakesh Adiga) ಅವರು ವಿಶೇಷ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಬಿಗ್​ ಬಾಸ್​ ಕನ್ನಡ ಒಟಿಟಿ ಮೊದಲ ಸೀಸನ್​ನಲ್ಲಿ ಸ್ಪರ್ಧಿಸಿದ ಬಳಿಕ ಅವರ ಖ್ಯಾತಿ ಹೆಚ್ಚಿತು. ಅಲ್ಲಿ ಉತ್ತಮ ಪ್ರದರ್ಶನ ನೀಡಿದ ಅವರು ಟಿವಿ ಸೀಸನ್​ಗೆ ಎಂಟ್ರಿ ಪಡೆಯುವಲ್ಲಿ ಸಫಲರಾದರು. ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ (Bigg Boss Kannada Season 9) ಅವರ ಪಾಲಿಗೆ ಮಹತ್ವದ ಘಟ್ಟವಾಗಿದೆ. ಈಗ ಅವರು ಫಿನಾಲೆಯ ತನಕ ಬಂದಿದ್ದು, ಟ್ರೋಫಿ ಗೆಲ್ಲುವ ತವಕದಲ್ಲಿದ್ದಾರೆ. ಡಿಸೆಂಬರ್​ 30 ಮತ್ತು 31ರಂದು ಫಿನಾಲೆ (Bigg Boss Kannada Finale) ಎಪಿಸೋಡ್​ ಪ್ರಸಾರ ಆಗುತ್ತಿದೆ. ಈ ವಿಶೇಷ ಸಂಚಿಕೆಗಳ ಸಲುವಾಗಿ ರಾಕೇಶ್​ ಅಡಿಗ ಗೆಟಪ್​ ಬದಲಾಯಿಸಿಕೊಂಡಿದ್ದಾರೆ. ಪಕ್ಕಾ ರ‍್ಯಾಪ್​ ಗಾಯಕನ ರೀತಿಯಲ್ಲಿ ಹೇರ್​ ಸ್ಟೈಲ್​ ಮಾಡಿಕೊಂಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ರಾಕೇಶ್ ಅಡಿಗ ಅವರು ಸಿಂಪಲ್​ ಆಗಿ ಇದ್ದಿದ್ದೇ ಹೆಚ್ಚು. ಯಾರ ಜೊತೆಗೂ ಅವರು ಅನಗತ್ಯವಾಗಿ ರಿಲೇಷನ್​ಶಿಪ್​ ಬೆಳೆಸಲಿಲ್ಲ. ಎಲ್ಲರೊಂದಿಗೂ ಸಮನಾಗಿ ಸ್ನೇಹ ಇಟ್ಟುಕೊಂಡರು. ಎಲ್ಲ ಸಂದರ್ಭವನ್ನೂ ಆದಷ್ಟು ಕೂಲ್​ ಆಗಿ ನಿಭಾಯಿಸುವ ಮೂಲಕ ಅವರು ವೀಕ್ಷಕರಿಗೆ ಇಷ್ಟವಾದರು. ಫಿನಾಲೆಯಲ್ಲಿ ರಾಕೇಶ್​ ಅಡಿಗ ಭರವಸೆಯ ಸ್ಪರ್ಧಿಯಾಗಿ ಪೈಪೋಟಿ ನೀಡುತ್ತಿದ್ದಾರೆ.

ಇದನ್ನೂ ಓದಿ: Rakesh Adiga: ಹುಡುಗಿಯ ಬೆತ್ತಲೆ ಫೋಟೋ ಅಂಟಿಸಿ, ಕಳ್ಳತನ ಮಾಡಿ, ತಾಯಿ ತಲೆ ತಗ್ಗಿಸುವಂತೆ ಮಾಡಿದ್ದ ರಾಕೇಶ್​ ಅಡಿಗ

ಇದನ್ನೂ ಓದಿ
Image
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ಬಿಗ್​ ಬಾಸ್​ ಫಿನಾಲೆ ಎಂದರೆ ಸಖತ್​ ರಂಗುರಂಗಾಗಿ ಇರುತ್ತದೆ. ಝಗಮಗಿಸುವ ವೇದಿಕೆಯಲ್ಲಿ ಮನರಂಜನಾ ಕಾರ್ಯಕ್ರಮಗಳು ನಡೆಯುತ್ತಿವೆ. ಎಲ್ಲ ಸ್ಪರ್ಧಿಗಳು ವಿಶೇಷವಾಗಿ ಡ್ರೆಸ್​ ಮಾಡಿಕೊಂಡು ಕ್ಯಾಮೆರಾ ಮುಂದೆ ಮಿಂಚುತ್ತಾರೆ. ಶೋ ನಡೆಸಿಕೊಡುವ ಕಿಚ್ಚ ಸುದೀಪ್​ ಕೂಡ ಸ್ಪೆಷಲ್​ ಕಾಸ್ಟ್ಯೂಮ್​ ಧರಿಸಿ ಬರುತ್ತಾರೆ. ವೀಕ್ಷಕರ ಗ್ಯಾಲರಿಯಲ್ಲಿ ಹಳೇ ಸ್ಪರ್ಧಿಗಳು ಇರುತ್ತಾರೆ. ಫಿನಾಲೆ ತಲುಪಿದವರ ಕುಟುಂಬಸ್ತರು ಕೂಡ ಹಾಜರಿರುತ್ತಾರೆ. ಇಂಥ ಸಂಚಿಕೆಯಲ್ಲಿ ರಾಕೇಶ್​ ಅಡಿಗ ಅವರ ಲುಕ್​ ಗಮನ ಸೆಳೆದಿದೆ.

ಇದನ್ನೂ ಓದಿ: ಬಿಗ್ ಬಾಸ್​ ಸಿನಿಮಾದಲ್ಲಿ ಸೋಮಣ್ಣ ಹೀರೋ, ಸೋನು ಹೀರೋಯಿನ್​, ರಾಕೇಶ್​ ವಿಲನ್​: ಕಾಮಿಡಿ ಯಾರು?

ಫಿನಾಲೆ ಸಲುವಾಗಿ ಕೇಶ ವಿನ್ಯಾಸಕರು ಮತ್ತು ಮೇಕಪ್​ ಕಲಾವಿದರನ್ನು ಬಿಗ್​ ಬಾಸ್​ ಮನೆ ಒಳಗೆ ಕಳಿಸಲಾಯಿತು. ರಾಕೇಶ್​ ಅಡಿಗ ಅವರು ಸಖತ್​ ಸ್ಟೈಲಿಶ್​ ಆಗಿ ಹೇರ್​ ಸ್ಟೈಲ್​ ಮಾಡಿಸಿಕೊಂಡಿದ್ದಾರೆ. ಅವರು ಮಾತ್ರವಲ್ಲದೇ ರೂಪೇಶ್​ ರಾಜಣ್ಣ, ದಿವ್ಯಾ ಉರುಡುಗ, ರೂಪೇಶ್​ ಶೆಟ್ಟಿ ಮತ್ತು ದೀಪಿಕಾ ದಾಸ್​ ಕೂಡ ಭರ್ಜರಿಯಾಗಿಯೇ ಡ್ರೆಸ್​ ಮಾಡಿಕೊಂಡು ತಯಾರಾಗಿದ್ದಾರೆ. ಎಲ್ಲರ ಹೊಸ ಲುಕ್​ ನೋಡಿ ಕಿಚ್ಚ ಸುದೀಪ್​ ಅವರು ಮೆಚ್ಚುಗೆ ಸೂಚಿಸಿದ್ದಾರೆ.

‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರ ಕೊನೇ ವಾರದಲ್ಲಿ ಸ್ಪರ್ಧಿಗಳಿಗೆ ಸಾಕಷ್ಟು ಸವಲತ್ತುಗಳನ್ನು ನೀಡಲಾಗಿದೆ. ಅದರ ಅನುಭವನ್ನು ಅವರೆಲ್ಲರೂ ಸುದೀಪ್​ ಎದುರಲ್ಲಿ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:26 pm, Fri, 30 December 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ