‘ಕ್ಯಾರೆಕ್ಟರ್ ಹಾಳಾಗುತ್ತೆ ಅಂತ ಹೆದರಿಸಿದ್ರು’; ಎಚ್ಚರಿಕೆ ಬಗ್ಗೆ ಸುದೀಪ್ ಎದುರು ಹೇಳಿಕೊಂಡ ರೂಪೇಶ್ ಶೆಟ್ಟಿ

Bigg Boss Kannada Finale: ರೂಪೇಶ್ ಶೆಟ್ಟಿಗೆ ಬಿಗ್ ಬಾಸ್​​ಗೆ ಬರುತ್ತೇನೆ ಎಂದಾಗ ಒಂದಷ್ಟು ಮಂದಿ ಒಳ್ಳೆಯ ಮಾತನ್ನು ಹೇಳಿದರೆ, ಇನ್ನೂ ಕೆಲವರು ನೆಗೆಟಿವ್ ಮಾತನ್ನು ಹೇಳಿದ್ದರು.

‘ಕ್ಯಾರೆಕ್ಟರ್ ಹಾಳಾಗುತ್ತೆ ಅಂತ ಹೆದರಿಸಿದ್ರು’; ಎಚ್ಚರಿಕೆ ಬಗ್ಗೆ ಸುದೀಪ್ ಎದುರು ಹೇಳಿಕೊಂಡ ರೂಪೇಶ್ ಶೆಟ್ಟಿ
ರೂಪೇಶ್-ಸುದೀಪ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 30, 2022 | 8:39 PM

‘ಬಿಗ್ ಬಾಸ್​ ಕನ್ನಡ ಸೀಸನ್ 9’ (BBK 9) ಫಿನಾಲೆ ಆರಂಭ ಆಗಿದೆ. ಕಿಚ್ಚ ಸುದೀಪ್ ಅವರು ಈ ವೇದಿಕೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅವರ ಲುಕ್ ನೋಡಿ ಎಲ್ಲರೂ ಫಿದಾ ಆಗಿದ್ದಾರೆ. ಫಿನಾಲೆಯಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಆಗುತ್ತಿದೆ. ಆ ಪೈಕಿ ರೂಪೇಶ್ ಶೆಟ್ಟಿ ಒಂದು ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ. ಅವರ ಉತ್ತರ ಕೇಳಿ ಅನೇಕರಿಗೆ ಅಚ್ಚರಿ ಆಗಿದೆ. ರೂಪೇಶ್ ಶೆಟ್ಟಿ (Roopesh Shetty) ಅವರು ಒಟಿಟಿಯಿಂದ ಟಿವಿ ಸೀಸನ್​ಗೆ ಬಂದವರು. 140ಕ್ಕೂ ಹೆಚ್ಚು ದಿನ ಅವರು ದೊಡ್ಮನೆಯಲ್ಲಿ ಕಳೆದಿದ್ದಾರೆ.

ಬಿಗ್ ಬಾಸ್ ಅವಕಾಶ ಎಲ್ಲರಿಗೂ ಸಿಗೋದಿಲ್ಲ. ಕೆಲವರು ಈ ಅವಕಾಶ ಸಿಕ್ಕರೂ ಅದನ್ನು ಒಪ್ಪಿಕೊಳ್ಳುವುದಿಲ್ಲ. ಇನ್ನು, ಈ ಅವಕಾಶದ ನಂತರ ಹಲವರು ಬಣ್ಣದ ಬದುಕಲ್ಲಿ ಸಾಕಷ್ಟು ಮೇಲಕ್ಕೆ ಏರಿದ್ದಾರೆ. ಈ ನಿರೀಕ್ಷೆಯಲ್ಲೇ ಅನೇಕರು ಬಿಗ್ ಬಾಸ್​​ಗೆ ಬರುತ್ತಾರೆ. ರೂಪೇಶ್ ಶೆಟ್ಟಿಗೆ ಬಿಗ್ ಬಾಸ್​​ಗೆ ಬರುತ್ತೇನೆ ಎಂದಾಗ ಒಂದಷ್ಟು ಮಂದಿ ಒಳ್ಳೆಯ ಮಾತನ್ನು ಹೇಳಿದರೆ, ಇನ್ನೂ ಕೆಲವರು ನೆಗೆಟಿವ್ ಮಾತನ್ನು ಹೇಳಿದ್ದರು.

‘ಬಿಗ್ ಬಾಸ್​​ನಿಂದ ಕಾಲ್ ಬಂದಾಗ ಏನ್ ಮಾಡ್ತಾ ಇದ್ರಿ’ ಎಂದು ರೂಪೇಶ್ ಶೆಟ್ಟಿಗೆ ಸುದೀಪ್ ಪ್ರಶ್ನೆ ಮಾಡಿದರು. ‘ಕರೆ ಬಂದಾಗ ನಾನು ಮಂಗಳೂರಿನಲ್ಲಿದ್ದೆ. ನನ್ನ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿದೆ. ಮೊದಲು ಇದು ಪ್ರ್ಯಾಂಕ್ ಅಂದ್ಕೊಂಡಿದ್ದೆ. ನಂತರ ಖಚಿತಪಡಿಸಿಕೊಂಡೆ. ಕೆಲವರಲ್ಲಿ ಈ ಬಗ್ಗೆ ಅಭಿಪ್ರಾಯ ಕೇಳಿದೆ. ನನಗಿಂತ ಅವರು ಖುಷಿಪಟ್ಟರು. ಪರಮೇಶ್ವರ್​ ಗುಂಡ್ಕಲ್​ ಜತೆ ಮೀಟಿಂಗ್ ಇತ್ತು. ನೀವು ಸೆಲೆಕ್ಟೆಡ್ ಅಂತ ಅಂದ್ರು’ ಎಂದಿದ್ದಾರೆ ರೂಪೇಶ್.

ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆಯಲ್ಲಿ ಯಾವ ಸ್ಪರ್ಧಿ ಹೆಚ್ಚು ಸ್ಟ್ರಾಂಗ್​​? ಯಾರಿಗಿದೆ ಕಪ್ ಗೆಲ್ಲುವ ಚಾನ್ಸ್​?

ಕೆಲವರು ಈ ಶೋ ಬಗ್ಗೆ ನೆಗೆಟಿವ್ ಪ್ರತಿಕ್ರಿಯೆ ನೀಡಿದ್ದರಂತೆ. ‘ಕೆಲವರು ಪಾಸಿಟಿವ್ ಆಗಿ ಮಾತನಾಡಿದರು. ಇನ್ನೂ ಕೆಲವರು ಭಯಬೀಳಿಸಿದರು. ಆ ಶೋಗೆ ಹೋದ್ರೆ ಕ್ಯಾರೆಕ್ಟರ್ ಹಾಳಾಗತ್ತೆ ಅಂತ ಹೆದರಿಸಿದ್ರು. ನಾನು ಇಲ್ಲಿಗೆ ಬರದೆ ಇದ್ರೆ ಅದ್ಭುತ ಲೈಫ್ ಮಿಸ್ ಮಾಡಿಕೊಳ್ಳುತ್ತಿದ್ದೆ. ಸಂಬಂಧಗಳು ಅಂದ್ರೇನು ಅಂತ ಅರ್ಥ ಮಾಡಿಸ್ತು ಈ ಶೋ. ನಿಮ್ಮ ಬಾಯಿಂದ ನನ್ನ ಹೆಸರು ಕರೆಸಿಕೊಂಡೆ. ಇನ್ನೇನು ಬೇಕು’ ಎಂದು ಸಂತಸಪಟ್ಟರು ರೂಪೇಶ್ ಶೆಟ್ಟಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:37 pm, Fri, 30 December 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್