AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Divya Uruduga: ‘ನಿಮ್ಮ ಮಧ್ಯೆ ಮುಟ್ಟಾಳ ಆಗಿದ್ದು ನಾನು’; ದಿವ್ಯಾ ಉರುಡುಗಗೆ ನೇರವಾಗಿ ಹೇಳಿದ ಸುದೀಪ್

ವೇದಿಕೆ ಮೇಲೆ ದಿವ್ಯಾ ಉರುಡುಗ ಹಾಗೂ ಪ್ರಶಾಂತ್​ ಸಂಬರ್ಗಿ ಮಧ್ಯೆ ಮಾತಿನ ವಾರ್ ನಡೆಯಿತು. ಕೊನೆಯಲ್ಲಿ ಅವರಿಬ್ಬರೂ ಒಂದಾಗಿಬಿಟ್ಟರು! ಇದನ್ನು ನೋಡಿ ಸುದೀಪ್​ ಅಚ್ಚರಿಗೊಂಡರು.

Divya Uruduga: ‘ನಿಮ್ಮ ಮಧ್ಯೆ ಮುಟ್ಟಾಳ ಆಗಿದ್ದು ನಾನು’; ದಿವ್ಯಾ ಉರುಡುಗಗೆ ನೇರವಾಗಿ ಹೇಳಿದ ಸುದೀಪ್
ಸುದೀಪ್-ದಿವ್ಯಾ
TV9 Web
| Edited By: |

Updated on: Dec 31, 2022 | 3:21 PM

Share

‘ಬಿಗ್ ಬಾಸ್​ ಕನ್ನಡ ಸೀಸನ್​ 9’ರ (BBK 9) ಫಿನಾಲೆಯ ಮೊದಲ ಹಂತ ಶನಿವಾರ (ಡಿಸೆಂಬರ್ 30) ನಡೆದಿದೆ. ದೀಪಿಕಾ ದಾಸ್, ದಿವ್ಯಾ ಉರುಡುಗ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ಫಿನಾಲೆ ರೇಸ್​ನಲ್ಲಿದ್ದರು. ಆ ಪೈಕಿ ದಿವ್ಯಾ ಉರುಡುಗ (Divya Uruduga) ಬಿಗ್ ಬಾಸ್​​​ನಿಂದ ಮೊದಲು ಔಟ್ ಆದರು. ವೇದಿಕೆ ಮೇಲೆ ದಿವ್ಯಾ ಉರುಡುಗ ಹಾಗೂ ಪ್ರಶಾಂತ್​ ಸಂಬರ್ಗಿ ಮಧ್ಯೆ ಮಾತಿನ ವಾರ್ ನಡೆಯಿತು. ಕೊನೆಯಲ್ಲಿ ಅವರಿಬ್ಬರೂ ಒಂದಾಗಿಬಿಟ್ಟರು! ಇದನ್ನು ನೋಡಿ ಸುದೀಪ್​ ಅಚ್ಚರಿಗೊಂಡರು.

‘ಬಿಗ್​ ಬಾಸ್ ಫಿನಾಲೆಯಿಂದ ಮೊದಲು ಔಟ್ ಆಗುವ ಸ್ಪರ್ಧಿ ಯಾರು’ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಪ್ರಶಾಂತ್ ಸಂಬರ್ಗಿ ‘ದಿವ್ಯಾ ಅವರು ಈ ಬಾರಿ ಉತ್ತಮ ಪರ್ಫಾರ್ಮೆನ್ಸ್ ನೀಡಿಲ್ಲ. ಅದೃಷ್ಟದ ಮೇಲೆ ಅವರು ಇಲ್ಲಿಗೆ ಬಂದಿದ್ದಾರೆ. ಅವರ ಈ ಜರ್ನಿಯಲ್ಲಿ ಖಾಲಿ ಹಾಳೆಯೇ ಹೆಚ್ಚಿದೆ. ಅವರೇ ಮೊದಲು ಔಟ್ ಆಗುತ್ತಾರೆ’ ಎಂದು ಹೇಳಿದರು. ಇದಕ್ಕೆ ದಿವ್ಯಾ ಸಿಟ್ಟಾಗಿದ್ದಾರೆ.

‘ನಾನು ನನ್ನ ಶ್ರಮದಲ್ಲೇ ಇಲ್ಲಿವರೆಗೆ ಬಂದಿದ್ದೇನೆ. ನೀವು ನನಗಿಂತ ಮೊದಲೇ ಔಟ್ ಆಗಿದ್ದೀರಿ. ಪ್ರಶಾಂತ್ ಸಂಬರ್ಗಿಗೆ ನನ್ನ ಮೇಲೆ ಯಾವುದೋ ದ್ವೇಷ ಇದೆ. ಈ ಕಾರಣಕ್ಕೆ ಅವರು ಈ ರೀತಿ ಹೇಳುತ್ತಿದ್ದಾರೆ’ ಎಂದರು ದಿವ್ಯಾ. ಪ್ರಶಾಂತ್ ಸಂಬರ್ಗಿ ಅವರು ‘ನನ್ನ ಹೃದಯದಿಂದ ಬಂದ ಮಾತನ್ನು ನಾನು ಹೇಳಿದ್ದೇನೆ’ ಎಂದು ಉತ್ತರ ಕೊಟ್ಟರು. ಇಬ್ಬರ ಮಧ್ಯೆ ಚರ್ಚೆ ನಡೆದೇ ಇತ್ತು. ಇಬ್ಬರ ಮಧ್ಯೆಯ ಮಾತುಕತೆಗೆ ಸುದೀಪ್​ ಅವರು ನೇತೃತ್ವ ವಹಿಸಿದ್ದರು.

ಇದನ್ನೂ ಓದಿ
Image
Divya Uruduga: ಬಿಗ್ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಮಾಡಿದ್ರು ಅಪರೂಪದ ದಾಖಲೆ  
Image
Divya Uruduga: ಬಿಗ್ ಬಾಸ್ ಫಿನಾಲೆ ರೇಸ್​​ನಿಂದ ದಿವ್ಯಾ ಉರುಡುಗ ಔಟ್; ಹಿನ್ನಡೆಗೆ ಕಾರಣವಾಯ್ತು ಈ ಅಂಶ
Image
BBK 9 Contestant List: ಈ ಸೀಸನ್​ಗೆ ಎಂಟ್ರಿ ಕೊಟ್ಟಿದ್ದ 18 ಸ್ಪರ್ಧಿಗಳು ಇವರೇ ನೋಡಿ; ಇಲ್ಲಿದೆ ಫೋಟೋ-ವಿವರ
Image
‘ಕ್ಯಾರೆಕ್ಟರ್ ಹಾಳಾಗುತ್ತೆ ಅಂತ ಹೆದರಿಸಿದ್ರು’; ಎಚ್ಚರಿಕೆ ಬಗ್ಗೆ ಸುದೀಪ್ ಎದುರು ಹೇಳಿಕೊಂಡ ರೂಪೇಶ್ ಶೆಟ್ಟಿ

ಇದನ್ನೂ ಓದಿ: ‘ಕ್ಯಾರೆಕ್ಟರ್ ಹಾಳಾಗುತ್ತೆ ಅಂತ ಹೆದರಿಸಿದ್ರು’; ಎಚ್ಚರಿಕೆ ಬಗ್ಗೆ ಸುದೀಪ್ ಎದುರು ಹೇಳಿಕೊಂಡ ರೂಪೇಶ್ ಶೆಟ್ಟಿ

ಕೊನೆಯಲ್ಲಿ ದಿವ್ಯಾ ಉರುಡುಗ ಅವರು ಪ್ರಶಾಂತ್ ಸಂಬರ್ಗಿ ಬಗ್ಗೆ ಒಳ್ಳೆಯ ಮಾತನ್ನು ಹೇಳಿದರು. ‘ಪ್ರಶಾಂತ್ ಸಂಬರ್ಗಿಗೆ ಮೈಕ್​ ಸಿಕ್ಕರಷ್ಟೇ ಅವರು ಈ ರೀತಿ ಆಡುತ್ತಾರೆ. ಬಿಗ್ ಬಾಸ್​ನಿಂದ ಹೊರಗೆ ಇದ್ದಾಗ ಅವರು ಒಳ್ಳೆಯ ರೀತಿಯಲ್ಲೇ ಇರುತ್ತಾರೆ. ಸಿನಿಮಾದ ಪ್ರೀಮಿಯರ್ ಶೋ ಇದೆ ಬನ್ನಿ ಎಂದು ಆಹ್ವಾನ ಕೊಟ್ಟಾಗ ಅವರು ಬರುತ್ತಾರೆ. ಬಂದು ಖುಷಿಯಿಂದ ಮಾತನಾಡುತ್ತಾರೆ’ ಎಂದರು. ದಿವ್ಯಾ ಏಕಾಏಕಿ ಪ್ಲೇಟ್ ಬದಲಿಸಿದ್ದನ್ನು ನೋಡಿ ಸುದೀಪ್​ಗೆ ಬೇಸರ ಆಯಿತು. ‘ಇವರ ಮಧ್ಯೆ ಮುಟ್ಟಾಳ ಆಗಿದ್ದು ನಾನು’ ಎಂದು ಹಾಸ್ಯರೂಪದಲ್ಲೇ ಹೇಳಿದರು. ಈ ಮಾತನ್ನು ಕೇಳಿ ಮನೆ ಮಂದಿ ನಕ್ಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್