- Kannada News Photo gallery Bigg Boss Kannada Season 9 contestant List BBK 9 Contestant Name And photo BBK 9 Winner
BBK 9 Contestant List: ಈ ಸೀಸನ್ಗೆ ಎಂಟ್ರಿ ಕೊಟ್ಟಿದ್ದ 18 ಸ್ಪರ್ಧಿಗಳು ಇವರೇ ನೋಡಿ; ಇಲ್ಲಿದೆ ಫೋಟೋ-ವಿವರ
ಕಿರುತೆರೆ ನಟಿ ದೀಪಿಕಾ ದಾಸ್ ಈ ಮೊದಲು ಬಿಗ್ ಬಾಸ್ಗೆ ಬಂದಿದ್ದರು. ಈಗ ಅವರು ಫಿನಾಲೆ ವೀಕ್ನಲ್ಲಿದ್ದಾರೆ.
Updated on: Dec 30, 2022 | 9:23 PM

ಐಶ್ವರ್ಯಾ ಪಿಸ್ಸೆ ವೃತ್ತಿಯಲ್ಲಿ ಬೈಕ್ ರೇಸರ್. ಆದರೆ, ಎರಡನೇ ವಾರಕ್ಕೆ ಔಟ್ ಆದರು.

ಅಮೂಲ್ಯ ಗೌಡ ಅವರು ಕಿರುತೆರೆ ಮೂಲಕ ಗುರುತಿಸಿಕೊಂಡವರು. ಫಿನಾಲೆಗೂ ಕೆಲವೇ ವಾರ ಇರುವಾಗ ಔಟ್ ಆದರು.

ಅನುಪಮಾ ಗೌಡ ಅವರು ಎರಡನೇ ಬಾರಿ ಬಿಗ್ ಬಾಸ್ಗೆ ಬಂದಿದ್ದರು. ಹಲವು ವಾರ ಅವರು ದೊಡ್ಮನೆಯಲ್ಲಿದ್ದರು.

ಅರುಣ್ ಸಾಗರ್ ಮೊದಲ ಸೀಸನ್ಗೆ ಎಂಟ್ರಿ ಕೊಟ್ಟಿದ್ದರು. ಇದು ಅವರಿಗೆ ಎರಡನೇ ಬಾರಿ. ಕಳೆದ ವಾರ ಇವರು ಔಟ್ ಆದರು.

ಆರ್ಯವರ್ಧನ್ ಗುರೂಜಿ ಒಟಿಟಿ ಟಾಪ್ ನಾಲ್ಕರಲ್ಲಿ ಇದ್ದರು. ಈ ವಾರದ ಮಿಡ್ ವೀಕ್ನಲ್ಲಿ ಅವರು ಔಟ್ ಆದರು.

ಕಿರುತೆರೆ ನಟ ದರ್ಶ್ ದೊಡ್ಮನೆಯಲ್ಲಿ ಹೆಚ್ಚು ಗಮನ ಸೆಳೆಯಲಿಲ್ಲ.

ಕಿರುತೆರೆ ನಟಿ ದೀಪಿಕಾ ದಾಸ್ ಈ ಮೊದಲು ಬಿಗ್ ಬಾಸ್ಗೆ ಬಂದಿದ್ದರು. ಈಗ ಅವರು ಫಿನಾಲೆ ವೀಕ್ನಲ್ಲಿದ್ದಾರೆ.

ದಿವ್ಯಾ ಉರುಡುಗ ಅವರು ಸೀಸನ್ 8ರಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿದ್ದರು. ಈಗ ಬಿಗ್ ಬಾಸ್ ಫಿನಾಲೆ ವೀಕ್ನಲ್ಲಿದ್ದಾರೆ.

ಕಾವ್ಯಶ್ರೀ ಗೌಡ ‘ಮಂಗಳ ಗೌರಿ’ ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇವರು ಹಲವು ವಾರ ದೊಡ್ಮನೆಯಲ್ಲಿದ್ದರು.

ನಟಿ ಮಯೂರಿ ಅವರು ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಒಂದೂವರೆ ವರ್ಷದ ಮಗುನ ಮನೆಯಲ್ಲಿ ಬಿಟ್ಟು ದೊಡ್ಮನೆಗೆ ಬಂದಿದ್ದರು.

ಭಿನ್ನ ರೀತಿಯಲ್ಲಿ ಸಿನಿಮಾ ವಿಮರ್ಶೆ ಮಾಡಿ ನವಾಜ್ ಗಮನ ಸೆಳೆದಿದ್ದಾರೆ. ದೊಡ್ಮನೆಯಲ್ಲಿ ಹೆಚ್ಚು ದಿನ ಇವರ ಆಟ ನಡೆಯಲಿಲ್ಲ.

ಗೊಂಬೆ ಎಂದೇ ಫೇಮಸ್ ಆದ ನೇಹಾ ಗೌಡ ಅವರು ಈ ಬಾರಿ ಸ್ಪರ್ಧಿ ಆಗಿದ್ದರು.

ಸೀಸನ್ 8ರಲ್ಲಿ ಗಮನ ಸೆಳೆದಿದ್ದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ರೀ ಎಂಟ್ರಿ ಆಗಿತ್ತು. ಅವರು ಹಲವು ವಾರ ದೊಡ್ಮನೆಯಲ್ಲಿದ್ದರು.

ಒಟಿಟಿ ಸೀಸನ್ ಸ್ಪರ್ಧಿ ಆಗಿದ್ದ ರಾಕೇಶ್ ಅಡಿಗ ಅವರು ಟಿವಿ ಸೀಸನ್ಗೆ ಬಂದಿದ್ದಾರೆ. ಫಿನಾಲೆ ರೇಸ್ನಲ್ಲಿ ಅವರು ಇದ್ದಾರೆ.

ಒಟಿಟಿ ಸೀಸನ್ ಸ್ಪರ್ಧಿ ಆಗಿದ್ದ ರೂಪೇಶ್ ಶೆಟ್ಟಿ ಅವರು ಟಿವಿ ಸೀಸನ್ಗೆ ಬಂದಿದ್ದಾರೆ. ಫಿನಾಲೆ ರೇಸ್ನಲ್ಲಿ ಅವರು ಇದ್ದಾರೆ.

ರೂಪೇಶ್ ರಾಜಣ್ಣ ಕನ್ನಡ ಹೋರಾಟಗಾರ ಆಗಿದ್ದಾರೆ. ಅವರು ಕೂಡ ಫಿನಾಲೆಯಲ್ಲಿದ್ದಾರೆ.

ಸಾನ್ಯಾ ಅಯ್ಯರ್ ಒಟಿಟಿ ಸೀಸನ್ ಸ್ಪರ್ಧಿ ಆಗಿದ್ದರು. ಟಿವಿ ಸೀಸನ್ಗೆ ಬಂದು ಹಲವು ವಾರ ದೊಡ್ಮನೆಯಲ್ಲಿದ್ದರು.

ವಿನೋದ್ ಗೊಬ್ಬರಗಾಲ ದೊಡ್ಮನೆಯಲ್ಲಿ ಹಲವು ವಾರ ಕಳೆದು ಹೋಗಿದ್ದಾರೆ.




