Roopesh Shetty: ‘ಬಿಗ್​ ಬಾಸ್​ನಿಂದ ಹೊರಬಂದು ಸಾನ್ಯಾನ ತಬ್ಬಿಕೊಂಡು ಈ ವಿಚಾರ ಫಸ್ಟ್​ ಕೇಳ್ತೀನಿ’: ರೂಪೇಶ್​ ಶೆಟ್ಟಿ ಮನದ ಮಾತು

BBK 9 Finale: ಬಹು ದಿನಗಳ ಬಳಿಕ ಸಾನ್ಯಾ ಐಯ್ಯರ್​ ಮತ್ತು ರೂಪೇಶ್​ ಶೆಟ್ಟಿ ಭೇಟಿ ಆಗುವ ಸಮಯ ಹತ್ತಿರ ಆಗಿದೆ. ಈ ಭೇಟಿಯಲ್ಲಿ ತಮ್ಮ ಮೊದಲು ಮಾತು ಏನಾಗಿರಲಿದೆ ಎಂಬುದನ್ನು ರೂಪೇಶ್​ ತಿಳಿಸಿದ್ದಾರೆ.

Roopesh Shetty: ‘ಬಿಗ್​ ಬಾಸ್​ನಿಂದ ಹೊರಬಂದು ಸಾನ್ಯಾನ ತಬ್ಬಿಕೊಂಡು ಈ ವಿಚಾರ ಫಸ್ಟ್​ ಕೇಳ್ತೀನಿ’: ರೂಪೇಶ್​ ಶೆಟ್ಟಿ ಮನದ ಮಾತು
ರೂಪೇಶ್ ಶೆಟ್ಟಿ ಸಾನ್ಯಾ ಐಯ್ಯರ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 31, 2022 | 7:30 AM

ಬಿಗ್​ ಬಾಸ್​ ಎಂದರೆ ಬರೀ ಕಾಂಟ್ರವರ್ಸಿ ಅಲ್ಲ. ಆ ಮನೆಯೊಳಗೆ ಸ್ನೇಹ ಮತ್ತು ಪ್ರೀತಿ ಚಿಗುರಿದ್ದಕ್ಕೆ ಅನೇಕ ಉದಾಹರಣೆಗಳು ಇವೆ. ‘ಬಿಗ್​ ಬಾಸ್ ಕನ್ನಡ ಸೀಸನ್​ 9’ ಕೂಡ ಹಲವರ ಪಾಲಿಗೆ ಒಳ್ಳೆಯ ಸ್ನೇಹಿತರನ್ನು ನೀಡಿದೆ. ಆ ಪೈಕಿ ಹೆಚ್ಚು ಹೈಲೈಟ್​ ಆಗಿದ್ದು ರೂಪೇಶ್​ ಶೆಟ್ಟಿ (Roopesh Shetty) ಮತ್ತು ಸಾನ್ಯಾ ಐಯ್ಯರ್​. ಇವರಿಬ್ಬರು ಬಿಗ್​ ಬಾಸ್​ ಒಟಿಟಿ ಶೋನಲ್ಲಿ ಮೊದಲ ಬಾರಿಗೆ ಪರಿಚಿತರಾದರು. ಬಳಿಕ ಟಿವಿ ಸೀಸನ್​ಗೂ ಜೊತೆಯಾಗಿ ಕಾಲಿಟ್ಟರು. ಅಲ್ಲಿಯೂ ಕೂಡ ತುಂಬ ಅನ್ಯೋನ್ಯವಾಗಿ ಇದ್ದರು. ಸಾನ್ಯಾ ಐಯ್ಯರ್​ (Sanya Iyer) ಜೊತೆ ರೂಪೇಶ್​ ಶೆಟ್ಟಿ ಹೆಚ್ಚು ಕಾಲ ಕಳೆದರು. ಆದರೆ ಸಾನ್ಯಾ ಫಿನಾಲೆಗೆ ಬರಲಿಲ್ಲ. ಈಗ ಬಿಗ್​ ಬಾಸ್​ ಕನ್ನಡ 9ನೇ ಸೀಸನ್​ (Bigg Boss Kannada Season 9) ಮುಗಿಯಲು ಕ್ಷಣಗಣನೆ ಶುರುವಾಗಿದ್ದು, ಈ ಸಂದರ್ಭದಲ್ಲಿ ಸಾನ್ಯಾ ಅಯ್ಯರ್​ ಅವರನ್ನು ರೂಪೇಶ್​ ಶೆಟ್ಟಿ ನೆನಪಿಸಿಕೊಂಡಿದ್ದಾರೆ.

‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ ಸಾನ್ಯಾ ಐಯ್ಯರ್​ ಅವರು ಎಲಿಮಿನೇಟ್​ ಆದಾಗ ರೂಪೇಶ್​ ಶೆಟ್ಟಿ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದರು. ‘ದಯವಿಟ್ಟು ಬದಲಾಗಬೇಡ. ನನಗಾಗಿ ಕಾದಿರು’ ಎಂದು ಸಾನ್ಯಾ ಬಳಿ ರೂಪೇಶ್​ ಮನವಿ ಮಾಡಿಕೊಂಡಿದ್ದರು. ಈಗ ದೊಡ್ಮನೆಯ ಹೊರಗೆ ಸಾನ್ಯಾರನ್ನು ಭೇಟಿ ಮಾಡುವ ಸಮಯ ಹತ್ತಿರ ಆಗಿದೆ. ಭೇಟಿ ಆದಾಗ ತಮ್ಮ ಮೊದಲು ಮಾತು ಏನಾಗಿರಲಿದೆ ಎಂಬುದನ್ನು ಅವರು ದೊಡ್ಮನೆ ಒಳಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss Finale: ಬಿಗ್​ ಬಾಸ್​ ಫಿನಾಲೆಗಾಗಿ ವಿಶೇಷ ಗೆಟಪ್​ನೊಂದಿಗೆ ಕ್ಯಾಮೆರಾ ಮುಂದೆ ಬಂದ ರಾಕೇಶ್​ ಅಡಿಗ

ಇದನ್ನೂ ಓದಿ
Image
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

‘ಮೊದಲಿಗೆ ಹೋಗಿ ತಬ್ಬಿಕೊಳ್ತೀನಿ. ಹೇಗಿದ್ದೀಯಾ ಅಂತ ಕೇಳುತ್ತೇನೆ. ಪ್ರೀತಿ ಮತ್ತು ಸ್ನೇಹಕ್ಕಿಂತಲೂ ಮುಖ್ಯವಾಗಿ ಮೊದಲಿದ್ದ ಕಾಳಜಿ ಈಗಲೂ ಇದೆಯಾ ಅಂತ ಕೇಳ್ತೀನಿ. ಯಾಕೆಂದರೆ ಈ ಮನೆಯಲ್ಲಿ ಅವರ ಜೊತೆ ಇದ್ದ ಅನುಭವ ನನಗಿದೆ. ಆದರೆ ಮನೆಯ ಹೊರಗಿನ ಅನುಭವ ಇಲ್ಲ. ಮನೆಯಲ್ಲಿ ಇದ್ದ ಭಾವನೆ ಈಗಲೂ ಹಾಗೆಯೇ ಇದೆಯಾ? ಲೈಫ್​ ಹೇಗೆಲ್ಲ ಬದಲಾಗಿದೆ? ನಾನು ನಿಮಗೆ ಈ ಮನೆಯಲ್ಲಿ ಇದ್ದಷ್ಟೇ ಮುಖ್ಯವಾ ಅಂತ ಕೇಳ್ತೀನಿ’ ಎಂದು ರೂಪೇಶ್​ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: BBK 9 Finale: ಬಿಗ್​ ಬಾಸ್​ ಫಿನಾಲೆ ನಡೆಸಿಕೊಡಲು ಝಗಮಗಿಸುವ ಡ್ರೆಸ್​ ಧರಿಸಿ ವೇದಿಕೆಗೆ ಬಂದ ಕಿಚ್ಚ ಸುದೀಪ್​

ಯಾರನ್ನಾದರೂ ಹಚ್ಚಿಕೊಂಡರೆ ಅವರ ಬಗ್ಗೆ ತೀವ್ರ ಕಾಳಜಿ ತೋರುವುದು ರೂಪೇಶ್ ಶೆಟ್ಟಿ ಗುಣ. ಸಾನ್ಯಾ ಐಯ್ಯರ್​ ಬಗ್ಗೆ ಅವರು ಆ ರೀತಿಯ ಭಾವನೆ ಇಟ್ಟುಕೊಂಡಿದ್ದಾರೆ ಎಂಬುದಕ್ಕೆ ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಘಟನೆಗಳು ಸಾಕ್ಷಿ ಆಗಿದ್ದವು. ಇಬ್ಬರ ಜೋಡಿ ಚೆನ್ನಾಗಿದೆ ಎಂದು ವೀಕ್ಷಕರು ಕೂಡ ಕಮೆಂಟ್​ಗಳ ಮೂಲಕ ಅಭಿಪ್ರಾಯ ತಿಳಿಸಿದ್ದುಂಟು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ