Divya Uruduga: ‘ಉತ್ತಮ, ಕಿಚ್ಚನ ಚಪ್ಪಾಳೆ, ಕ್ಯಾಪ್ಟನ್​ ಪಟ್ಟ ದಿವ್ಯಾಗೆ ಸಿಕ್ಕಿಲ್ಲ; ಆದ್ರೂ ಫಿನಾಲೆಗೆ ಹೇಗೆ ಬಂದ್ರು?’: ಗುರೂಜಿ ಪ್ರಶ್ನೆ

Aryavardhan Guruji | BBK 9: ಮಿಡ್​ ವೀಕ್​ ಎಲಿಮಿನೇಷನ್​ನಲ್ಲಿ ಆರ್ಯವರ್ಧನ್​ ಗುರೂಜಿ ಅವರು ದೊಡ್ಮನೆಯಿಂದ ಹೊರಗೆ ಬರಬೇಕಾಯಿತು. ಆದರೆ ದಿವ್ಯಾ ಉರುಡುಗ ಸೇಫ್​ ಆಗಿದ್ದರು. ಇದನ್ನು ಈಗ ಗುರೂಜಿ ಪ್ರಶ್ನಿಸಿದ್ದಾರೆ.

Divya Uruduga: ‘ಉತ್ತಮ, ಕಿಚ್ಚನ ಚಪ್ಪಾಳೆ, ಕ್ಯಾಪ್ಟನ್​ ಪಟ್ಟ ದಿವ್ಯಾಗೆ ಸಿಕ್ಕಿಲ್ಲ; ಆದ್ರೂ ಫಿನಾಲೆಗೆ ಹೇಗೆ ಬಂದ್ರು?’: ಗುರೂಜಿ ಪ್ರಶ್ನೆ
ದಿವ್ಯಾ ಉರುಡುಗ, ಆರ್ಯವರ್ಧನ್ ಗುರೂಜಿ
Follow us
TV9 Web
| Updated By: ಮದನ್​ ಕುಮಾರ್​

Updated on: Dec 31, 2022 | 4:34 PM

100 ದಿನಗಳ ಕಾಲ ನಡೆದ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಶೋಗೆ ಇಂದು (ಡಿ.31) ಅದ್ದೂರಿಯಾಗಿ ಫಿನಾಲೆ ನಡೆಯುತ್ತಿದೆ. ರಾಕೇಶ್​ ಅಡಿಗ, ರೂಪೇಶ್​ ಶೆಟ್ಟಿ, ದೀಪಿಕಾ ದಾಸ್​ ಮತ್ತು ರೂಪೇಶ್​ ರಾಜಣ್ಣ ಅವರು ಫಿನಾಲೆ (BBK 9 Finale) ವೇದಿಕೆ ಏರಿದ್ದಾರೆ. 4ನೇ ರನ್ನರ್​ ಅಪ್​ ಆಗಿ ದಿವ್ಯಾ ಉರುಡುಗ (Divya Uruduga) ಶುಕ್ರವಾರದ (ಡಿ.30) ಸಂಚಿಕೆಯಲ್ಲಿ ಔಟ್​ ಆಗಿದ್ದಾರೆ. ಅವರು ಫಿನಾಲೆ ತನಕ ಬಂದಿದ್ದು ಅದೃಷ್ಟದ ಬಲದಿಂದ ಎಂಬುದು ಕೆಲವರ ವಾದ. ಆದರೆ ತಮ್ಮ ಸ್ವಂತ ಪ್ರಯತ್ನದಿಂದಲೇ ಇದೆಲ್ಲ ಸಾಧ್ಯವಾಗಿದೆ ಎಂಬುದು ದಿವ್ಯಾ ಉರುಡುಗ ಅವರ ನಂಬಿಕೆ. ಇದೇ ವಿಚಾರವಾಗಿ ಶುಕ್ರವಾರದ ಎಪಿಸೋಡ್​ನಲ್ಲಿ ಆರ್ಯವರ್ಧನ್​ ಗುರೂಜಿ (Aryavardhan Guruji) ಮತ್ತು ದಿವ್ಯಾ ಉರುಡುಗ ನಡುವೆ ಮಾತಿನ ಚಕಮಕಿ ನಡೆಯಿತು. ಕಿಚ್ಚ ಸುದೀಪ್​ ಎದುರಿನಲ್ಲೇ ಇಬ್ಬರೂ ಮಾತಿಗೆ ಮಾತು ಬೆಳೆಸಿದರು.

ಆರ್ಯವರ್ಧನ್​ ಗುರೂಜಿ ಅವರು ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ವಿಚಾರಗಳಿಗೆ ಹೈಲೈಟ್​ ಆಗಿದ್ದರು. ಟಾಸ್ಕ್​, ಕಾಮಿಡಿ, ಅಡುಗೆ.. ಹೀಗೆ ಅನೇಕ ವಿಚಾರಗಳಲ್ಲಿ ಅವರು ಮನೆಮಂದಿಯ ಫೇವರಿಟ್​ ಆಗಿದ್ದರು. ಕೊನೇ ವಾರದಲ್ಲಿ ಕಿಚ್ಚನ ಚಪ್ಪಾಳೆ ಕೂಡ ಅವರಿಗೆ ಸಿಕ್ಕಿತ್ತು. ಆದರೂ ಕೂಡ ಮಿಡ್​ ವೀಕ್​ ಎಲಿಮಿನೇಷನ್​ನಲ್ಲಿ ಅವರು ದೊಡ್ಮನೆಯಿಂದ ಹೊರಗೆ ಬರಬೇಕಾಯಿತು. ಆದರೆ ದಿವ್ಯಾ ಸೇಫ್​ ಆಗಿ ಫಿನಾಲೆಗೆ ತಲುಪಿದರು. ಇದನ್ನು ಆರ್ಯವರ್ಧನ್​ ಗುರೂಜಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Aryavardhan Guruji: ಫಿನಾಲೆಗೆ 3 ದಿನ ಇರುವಾಗ ಆರ್ಯವರ್ಧನ್​ ಗುರೂಜಿ ಔಟ್​; ಅಪ್ಪಾಜಿ ಅಂತ ಕಣ್ಣೀರು ಹಾಕಿದ ರೂಪೇಶ್​ ಶೆಟ್ಟಿ

ಇದನ್ನೂ ಓದಿ
Image
Prashanth Sambargi: ನಿಜವಾದ ಹೆಸರು ಮುಚ್ಚಿಟ್ಟಿದ್ದಾರಾ ಗುರೂಜಿ? ‘ಸತ್ಯ ಬಯಲು ಮಾಡ್ತೀನಿ’ ಎಂದ ಪ್ರಶಾಂತ್​ ಸಂಬರಗಿ
Image
Aryavardhan Guruji: ಕನ್ನಡ ಓದಲು ಕಷ್ಟಪಟ್ಟ ಗುರೂಜಿ; ಸಹಾಯ ಮಾಡಿದ ರಾಕೇಶ್​: ಇಲ್ಲಿದೆ ವಿಡಿಯೋ
Image
ಮೀಸೆ, ತಲೆ ಬೋಳಿಸಿಕೊಂಡ ಆರ್ಯವರ್ಧನ್​; ಗುರೂಜಿ ಹೊಸ ಲುಕ್ ಹೇಗಿದೆ ನೋಡಿ
Image
ಆರ್ಯವರ್ಧನ್​ ಗುರೂಜಿ ಕುಟುಂಬದ ಆಸ್ತಿ 5 ಸಾವಿರ ಕೋಟಿ ರೂಪಾಯಿ; ಶಾಕ್​ ಆದ ಸ್ಪರ್ಧಿಗಳು

‘ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿಲ್ಲ, ಕ್ಯಾಪ್ಟನ್​ ಆಗಿಲ್ಲ, ಉತ್ತಮ ಕೂಡ ಆಗಿಲ್ಲ. ಕಳಪೆಗೂ ಹೋಗಿಲ್ಲ. ಆದರೂ ಅವರು ಫಿನಾಲೆ ವೇದಿಕೆಯಲ್ಲಿ ಇದ್ದಾರೆ. ಎಲ್ಲವೂ ತೆಗೆದುಕೊಂಡ ನಾವು ಇಲ್ಲಿ ಇದ್ದೀವೆ. ಇದು ಹೇಗೆ ಸಾಧ್ಯ’ ಎಂದು ಆರ್ಯವರ್ಧನ್​ ಗುರೂಜಿ ನೇರವಾಗಿ ಪ್ರಶ್ನಿಸಿದರು.

ಇದನ್ನೂ ಓದಿ: BBK9: ಎಚ್ಚರಿಕೆ ನೀಡಲು ಬಂದ ಬಿಗ್​ ಬಾಸ್​ಗೆ ಆವಾಜ್​ ಹಾಕಿದ ಆರ್ಯವರ್ಧನ್​ ಗುರೂಜಿ; ಕಾದಿದೆ ಗ್ರಹಚಾರ

ದಿವ್ಯಾ ಉರುಡುಗ ಅವರಿಗೆ ಮನೆಯ ಹೊರಗೆ ಸಪೋರ್ಟ್​ ಮಾಡುವವರು ಜಾಸ್ತಿ ಜನ ಇದ್ದರು ಎಂಬುದು ಗುರೂಜಿ ಅಭಿಪ್ರಾಯ. ಅರವಿಂದ್​ ಕೆ.ಪಿ. ಅವರು ದಿವ್ಯಾ ಪರವಾಗಿ ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಪ್ರಚಾರ ಮಾಡಿದ್ದಾರೆ. ಆದ್ದರಿಂದ ದಿವ್ಯಾ ಫಿನಾಲೆ ತನಕ ಬರಲು ಸಾಧ್ಯವಾಗಿರಬಹುದು ಎಂದು ಗುರೂಜಿ ಹೇಳಿದ್ದಾರೆ. ಈ ಮಾತನ್ನು ದಿವ್ಯಾ ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ.

ಇದನ್ನೂ ಓದಿ: BBK9: ‘ರಾಕೇಶ್​ ಎಲ್ಲ ಸುಖ ಅನುಭವಿಸ್ತಾನೆ, ಆದ್ರೆ ಅದನ್ನು ಅನುಭವಿಸುವ ಶಕ್ತಿ ನನಗಿಲ್ಲ’: ಆರ್ಯವರ್ಧನ್​

‘ಬಿಗ್​ ಬಾಸ್​ ಕನ್ನಡ ಸೀಸನ್​ 8’ರಲ್ಲಿ ಸ್ಪರ್ಧಿಸಿದ್ದ ದಿವ್ಯಾ ಉರುಡುಗ ಅವರು ಆಗಲೂ ಫಿನಾಲೆ ತನಕ ಬಂದು ಔಟ್​ ಆಗಿದ್ದರು. 9ನೇ ಸೀಸನ್​ನಲ್ಲಾದರೂ ಟ್ರೋಫಿ ಗೆಲ್ಲಬೇಕು ಎಂದುಕೊಂಡಿದ್ದ ಅವರ ಕನಸು ಭಗ್ನವಾಯಿತು. ಒಟ್ಟಿನಲ್ಲಿ ಎರಡು ಬಾರಿ ಫಿನಾಲೆ ತಲುಪಿದ ಏಕೈಕ ಸ್ಪರ್ಧಿ ಎಂಬ ದಾಖಲೆ ಅವರ ಹೆಸರಿನಲ್ಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ