Aryavardhan Guruji: ಫಿನಾಲೆಗೆ 3 ದಿನ ಇರುವಾಗ ಆರ್ಯವರ್ಧನ್​ ಗುರೂಜಿ ಔಟ್​; ಅಪ್ಪಾಜಿ ಅಂತ ಕಣ್ಣೀರು ಹಾಕಿದ ರೂಪೇಶ್​ ಶೆಟ್ಟಿ

BBK9 | Bigg Boss Kannada Finale: ಬಿಗ್​ ಬಾಸ್​ ಮನೆಯಲ್ಲಿ ಮಿಡ್​ ವೀಕ್​ ಎಲಿಮಿನೇಷನ್​ ನಡೆದಿದೆ. ಫಿನಾಲೆಯ ಹೊಸ್ತಿಲಿನಲ್ಲಿ ಆರ್ಯವರ್ಧನ್​ ಗುರೂಜಿ ಅವರು ದೊಡ್ಮನೆಯಿಂದ ಔಟ್​ ಆಗಿದ್ದಾರೆ.

Aryavardhan Guruji: ಫಿನಾಲೆಗೆ 3 ದಿನ ಇರುವಾಗ ಆರ್ಯವರ್ಧನ್​ ಗುರೂಜಿ ಔಟ್​; ಅಪ್ಪಾಜಿ ಅಂತ ಕಣ್ಣೀರು ಹಾಕಿದ ರೂಪೇಶ್​ ಶೆಟ್ಟಿ
ಆರ್ಯವರ್ಧನ್ ಗುರೂಜಿ
Follow us
TV9 Web
| Updated By: ಮದನ್​ ಕುಮಾರ್​

Updated on:Dec 27, 2022 | 10:33 PM

ಸಂಖ್ಯಾ ಶಾಸ್ತ್ರದ ಮೂಲಕ ಫೇಮಸ್​ ಆಗಿದ್ದ ಆರ್ಯವರ್ಧನ್​ ಗುರೂಜಿ (Aryavardhan Guruji) ಅವರು ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಸಾಕಷ್ಟು ಗಮನ ಸೆಳೆದಿದ್ದಾರೆ. ಆದರೆ ಟ್ರೋಫಿ ಗೆಲ್ಲಬೇಕು ಎಂಬ ಅವರ ಕನಸು ಭಗ್ನವಾಗಿದೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ (Bigg Boss Kannada Season 9) ಕೊನೇ ವಾರದಲ್ಲಿ ಅವರು ಎಲಿಮಿನೇಟ್​ ಆಗಿದ್ದಾರೆ. ಫಿನಾಲೆಗೆ ಇನ್ನು ಮೂರು ದಿನ ಇರುವಾಗ ಅವರು ಔಟ್​ ಆಗಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಪ್ರತಿ ಬಾರಿ ನಾಮಿನೇಟ್​ ಆದಾಗಲೂ ವೀಕ್ಷಕರ ವೋಟ್​ ಬಲದಿಂದಾಗಿ ಆರ್ಯವರ್ಧನ್​ ಗುರೂಜಿ ಸೇಫ್​ ಆಗುತ್ತಿದ್ದರು. ಆದರೆ ಅಂತಿಮ ಘಟ್ಟದಲ್ಲಿ ಅವರು ದೊಡ್ಮನೆ ತೊರೆಯಬೇಕಾಯಿತು. ಆರ್ಯವರ್ಧನ್​ ಜೊತೆ ಹೆಚ್ಚು ಆಪ್ತವಾಗಿದ್ದ ರೂಪೇಶ್​ ಶೆಟ್ಟಿ (Roopesh Shetty) ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಡಿಸೆಂಬರ್​ 30 ಮತ್ತು ಡಿಸೆಂಬರ್​ 31ರಂದು ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರ ಫಿನಾಲೆ ನಡೆಯಲಿದೆ. ಕಿಚ್ಚ ಸುದೀಪ್​ ಅವರ ನಿರೂಪಣೆಯಲ್ಲಿ ಈ ಸಂಚಿಕೆಗಳನ್ನು ನೋಡಲು ವೀಕ್ಷಕರು ಕಾದಿದ್ದಾರೆ. ಫಿನಾಲೆ ತನಕ ಆರ್ಯವರ್ಧನ್​ ಗುರೂಜಿ ಬರಬಹುದು ಎಂದು ಅನೇಕರು ಊಹಿಸಿದ್ದರು. ಆದರೆ ಅವರ ಜರ್ನಿ ಅಂತ್ಯವಾಗಿದೆ.

ಸದ್ಯ 5 ಜನರು ಫಿನಾಲೆ ತಲುಪಿದ್ದಾರೆ. ರೂಪೇಶ್​ ಶೆಟ್ಟಿ, ರೂಪೇಶ್​ ರಾಜಣ್ಣ, ರಾಕೇಶ್​ ಅಡಿಗ, ದಿವ್ಯಾ ಉರುಡುಗ, ದೀಪಿಕಾ ದಾಸ್​ ಅವರ ನಡುವೆ ಹಣಾಹಣಿ ಮುಂದುವರಿದಿದೆ. ಈ ಪೈಕಿ ರೂಪೇಶ್​ ರಾಜಣ್ಣ ಮಾತ್ರ ಹೊಸಬರು. ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್​ ಅವರು ಈ ಹಿಂದಿನ ಸೀಸನ್​ಗಳಲ್ಲಿ ಭಾಗವಹಿಸಿದ್ದರು. ರಾಕೇಶ್​ ಅಡಿಗ ಮತ್ತು ರೂಪೇಶ್​ ಶೆಟ್ಟಿ ಅವರು ಒಟಿಟಿ ಸೀಸನ್​ನಿಂದ ಬಂದವರು.

ಇದನ್ನೂ ಓದಿ
Image
Prashanth Sambargi: ನಿಜವಾದ ಹೆಸರು ಮುಚ್ಚಿಟ್ಟಿದ್ದಾರಾ ಗುರೂಜಿ? ‘ಸತ್ಯ ಬಯಲು ಮಾಡ್ತೀನಿ’ ಎಂದ ಪ್ರಶಾಂತ್​ ಸಂಬರಗಿ
Image
Aryavardhan Guruji: ಕನ್ನಡ ಓದಲು ಕಷ್ಟಪಟ್ಟ ಗುರೂಜಿ; ಸಹಾಯ ಮಾಡಿದ ರಾಕೇಶ್​: ಇಲ್ಲಿದೆ ವಿಡಿಯೋ
Image
ಮೀಸೆ, ತಲೆ ಬೋಳಿಸಿಕೊಂಡ ಆರ್ಯವರ್ಧನ್​; ಗುರೂಜಿ ಹೊಸ ಲುಕ್ ಹೇಗಿದೆ ನೋಡಿ
Image
ಆರ್ಯವರ್ಧನ್​ ಗುರೂಜಿ ಕುಟುಂಬದ ಆಸ್ತಿ 5 ಸಾವಿರ ಕೋಟಿ ರೂಪಾಯಿ; ಶಾಕ್​ ಆದ ಸ್ಪರ್ಧಿಗಳು

ಇದನ್ನೂ ಓದಿ: BBK9: ಎಚ್ಚರಿಕೆ ನೀಡಲು ಬಂದ ಬಿಗ್​ ಬಾಸ್​ಗೆ ಆವಾಜ್​ ಹಾಕಿದ ಆರ್ಯವರ್ಧನ್​ ಗುರೂಜಿ; ಕಾದಿದೆ ಗ್ರಹಚಾರ

ಕೊನೇ ವಾರದಲ್ಲಿ ಆರ್ಯವರ್ಧನ್​ ಗುರೂಜಿ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿತ್ತು. ‘ಆಟ ಚೆನ್ನಾಗಿ ಆಡಿದ್ದೀರಿ. ಎಲ್ಲರ ಜೊತೆ ಬೆರೆತಿದ್ದೀರಿ. ಈ ವಾರ ನೀವು ಇದ್ದ ರೀತಿ ಚೆನ್ನಾಗಿತ್ತು’ ಎಂದು ಕಿಚ್ಚ ಸುದೀಪ್​ ಹೇಳಿದ್ದರು. ಮೆಚ್ಚುಗೆ ಪಡೆದಿದ್ದಕ್ಕೆ ಆರ್ಯವರ್ಧನ್​ ಭಾವುಕರಾಗಿದ್ದರು. ಆದರೂ ಕೂಡ ಅವರು ಫಿನಾಲೆಗೆ ಬರಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: BBK9: ಬಿಗ್​ ಬಾಸ್​ ಮನೆಯಲ್ಲಿ ಆರ್ಯವರ್ಧನ್​ ಗುರೂಜಿ ಡಬಲ್​ ಗೇಮ್​; ಸ್ಪರ್ಧಿಗಳ ನೇರ ಆರೋಪ

ಆರ್ಯವರ್ಧನ್​ ಗುರೂಜಿ ಅವರ ಮಾತುಗಳಿಂದ ಬಿಗ್​ ಬಾಸ್​ ಮನೆಯಲ್ಲಿ ಕಾಮಿಡಿ ವಾತಾವರಣ ಸೃಷ್ಟಿ ಆಗುತ್ತಿತ್ತು. ಹೆಚ್ಚು ಕಾಲ ಅವರು ಅಡುಗೆ ಮನೆಯಲ್ಲಿ ಇರುತ್ತಿದ್ದರು. ವೀಕೆಂಡ್​ ಸಂಚಿಕೆಗಳಲ್ಲಿ ಏನೇನೋ ಮಾತನಾಡಿ ಮಸ್ತ್​ ಮನರಂಜನೆ ನೀಡುತ್ತಿದ್ದರು. ಇದರಿಂದ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದರು. ಆದರೆ ಕೊನೇ ಹಂತದಲ್ಲಿ ಅವರ ಬಿಗ್​ ಬಾಸ್​ ಜರ್ನಿ ಅಂತ್ಯವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:33 pm, Tue, 27 December 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ