AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aryavardhan Guruji: ದಿವ್ಯಾ ಉರುಡುಗಗಿಂತ ಆರ್ಯವರ್ಧನ್ ಕಡಿಮೆ ವೋಟ್ ಪಡೆದಿದ್ದು ಹೇಗೆ? ಇಲ್ಲಿದೆ ಉತ್ತರ

ಈ ಲಿಫ್ಟ್ ಮಾದರಿಯ ಮೇಲೆ ಮೊದಲು ನಿಂತ ದಿವ್ಯಾ ಎಲ್ಲರಿಗೂ ಗುಡ್​ಬೈ ಹೇಳಿದ್ದರು. ತಾವು ಬಿಗ್ ಬಾಸ್ ಫಿನಾಲೆ ತಲುಪಲು ಸಾಧ್ಯವೇ ಇಲ್ಲ ಎಂದು ಅವರಿಗೆ ಅನಿಸುತ್ತಲೇ ಇತ್ತು. ಅವರಿಗೇ ಈ ಬಗ್ಗೆ ಕಾನ್ಫಿಡೆನ್ಸ್ ಇರಲಿಲ್ಲ.

Aryavardhan Guruji: ದಿವ್ಯಾ ಉರುಡುಗಗಿಂತ ಆರ್ಯವರ್ಧನ್ ಕಡಿಮೆ ವೋಟ್ ಪಡೆದಿದ್ದು ಹೇಗೆ? ಇಲ್ಲಿದೆ ಉತ್ತರ
ದಿವ್ಯಾ-ಆರ್ಯವರ್ಧನ್
TV9 Web
| Edited By: |

Updated on:Dec 28, 2022 | 10:54 AM

Share

‘ಬಿಗ್ ಬಾಸ್ ಕನ್ನಡ ಸೀಸನ್​ 9’ (BBK 9) ಇನ್ನು ಮೂರ್ನಾಲ್ಕು ದಿನಗಳಲ್ಲಿ ಪೂರ್ಣಗೊಳ್ಳಲಿದೆ. 100 ದಿನಗಳ ಜರ್ನಿಯಲ್ಲಿ ಫಿನಾಲೆಗೆ ಉಳಿದುಕೊಂಡಿದ್ದು ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್ ಮಾತ್ರ. ಈ ಪೈಕಿ ಒಬ್ಬರು ರನ್ನರ್​ ಅಪ್ ಆದರೆ, ಇನ್ನೊಬ್ಬರು ವಿನ್ನರ್ ಆಗಲಿದ್ದಾರೆ. ಅದು ಯಾರು ಎನ್ನುವ ಪ್ರಶ್ನೆಗೆ ಡಿಸೆಂಬರ್ 31ರಂದು ಉತ್ತರ ಸಿಗಲಿದೆ. ಈ ಮಧ್ಯೆ ಆರ್ಯವರ್ಧನ್ ಗುರೂಜಿ (Aryavardhan Guruji) ಅವರು ಡಿಸೆಂಬರ್ 27ರ ಎಪಿಸೋಡ್​ನಲ್ಲಿ ಔಟ್ ಆಗಿದ್ದಾರೆ. ಟಫ್ ಕಾಂಪಿಟೇಟರ್ ಎನಿಸಿಕೊಂಡಿದ್ದ ಅವರು ದಿವ್ಯಾಗಿಂತ ಹೆಚ್ಚಿನ ವೋಟ್ ಪಡೆಯಲು ಸಾಧ್ಯವಾಗಿಲ್ಲ.

ಮಿಡ್​ವೀಕ್​ನಲ್ಲಿ ಒಂದು ಎಲಿಮಿನೇಷನ್ ಆಗುತ್ತದೆ ಎಂಬ ವಿಚಾರವನ್ನು ಬಿಗ್ ಬಾಸ್ ಹೇಳಿದ್ದರು. ಮಂಗಳವಾರ ಈ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ಬಿಗ್ ಬಾಸ್ ಮುಖ್ಯದ್ವಾರದ ಎದುರು ಭಾಗದಲ್ಲಿ ಒಂದು ಗೋಡೆ ಮಾದರಿಯನ್ನು ಹಾಕಲಾಗಿತ್ತು. ಬಾಗಿಲು ಹಾಗೂ ಗೋಡೆ ಮಾದರಿಯ ಮಧ್ಯೆ ಲಿಫ್ಟ್​​ ರೀತಿಯ ವಸ್ತುವನ್ನು ಇಡಲಾಗಿತ್ತು. ಅದರ ಮೇಲೆ ನಿಂತರೆ ಅದು ಮೇಲೆ ಕೆಳಗೆ ಓಡಾಡುತ್ತದೆ. ಆರ್ಯವರ್ಧನ್ ಅವರು ಕೆಳಗೆ ಹೋದವರು ಬರಲೇ ಇಲ್ಲ. ಈ ಮೂಲಕ ಅವರು ಎಲಿಮಿನೇಟ್ ಆದರು.

ಈ ಲಿಫ್ಟ್ ಮಾದರಿಯ ಮೇಲೆ ಮೊದಲು ನಿಂತ ದಿವ್ಯಾ ಎಲ್ಲರಿಗೂ ಗುಡ್​ಬೈ ಹೇಳಿದ್ದರು. ತಾವು ಬಿಗ್ ಬಾಸ್ ಫಿನಾಲೆ ತಲುಪಲು ಸಾಧ್ಯವೇ ಇಲ್ಲ ಎಂದು ಅವರಿಗೆ ಅನಿಸುತ್ತಲೇ ಇತ್ತು. ಅವರಿಗೇ ಈ ಬಗ್ಗೆ ಕಾನ್ಫಿಡೆನ್ಸ್ ಇರಲಿಲ್ಲ. ಈ ಕಾರಣಕ್ಕೆ ಅವರು ಎಲ್ಲರಿಗೂ ಬೈ ಹೇಳಿ ಹೊರಟಿದ್ದರು. ಆದರೆ, ಅವರು ಉಳಿದುಕೊಂಡರು. ಈ ಮೊದಲು ಎಲಿಮಿನೇಟ್ ಆಗಿ ಮತ್ತೆ ವೈಲ್ಡ್ ಕಾರ್ಡ್​ ಮೂಲಕ ಎಂಟ್ರಿ ಪಡೆದ ದೀಪಿಕಾ ದಾಸ್ ಕೂಡ ಫಿನಾಲೇ ಪ್ರವೇಶಿಸಿದರು. ಇದಕ್ಕೆ ಕಾರಣ ಅಭಿಮಾನಿಗಳ ವೋಟ್.

ಇದನ್ನೂ ಓದಿ
Image
Aryavardhan Guruji: ಫಿನಾಲೆಗೆ 3 ದಿನ ಇರುವಾಗ ಆರ್ಯವರ್ಧನ್​ ಗುರೂಜಿ ಔಟ್​; ಅಪ್ಪಾಜಿ ಅಂತ ಕಣ್ಣೀರು ಹಾಕಿದ ರೂಪೇಶ್​ ಶೆಟ್ಟಿ
Image
BBK9: ಬಿಗ್​ ಬಾಸ್​ ಮನೆಯಲ್ಲಿ ಆರ್ಯವರ್ಧನ್​ ಗುರೂಜಿ ಡಬಲ್​ ಗೇಮ್​; ಸ್ಪರ್ಧಿಗಳ ನೇರ ಆರೋಪ
Image
Prashanth Sambargi: ನಿಜವಾದ ಹೆಸರು ಮುಚ್ಚಿಟ್ಟಿದ್ದಾರಾ ಗುರೂಜಿ? ‘ಸತ್ಯ ಬಯಲು ಮಾಡ್ತೀನಿ’ ಎಂದ ಪ್ರಶಾಂತ್​ ಸಂಬರಗಿ
Image
Aryavardhan Guruji: ಕನ್ನಡ ಓದಲು ಕಷ್ಟಪಟ್ಟ ಗುರೂಜಿ; ಸಹಾಯ ಮಾಡಿದ ರಾಕೇಶ್​: ಇಲ್ಲಿದೆ ವಿಡಿಯೋ

ಇದನ್ನೂ ಓದಿ:  ಫಿನಾಲೆಗೆ 3 ದಿನ ಇರುವಾಗ ಆರ್ಯವರ್ಧನ್​ ಗುರೂಜಿ ಔಟ್​; ಅಪ್ಪಾಜಿ ಅಂತ ಕಣ್ಣೀರು ಹಾಕಿದ ರೂಪೇಶ್​ ಶೆಟ್ಟಿ

ಆರ್ಯವರ್ಧನ್ ಅವರು ಕೆಲವೊಮ್ಮೆ ನಡೆದುಕೊಳ್ಳುವ ರೀತಿ ಅನೇಕರಿಗೆ ಇಷ್ಟವಾಗುತ್ತಿರಲಿಲ್ಲ. ಅವರು ತುಂಬಾನೇ ಡಬಲ್ ಗೇಮ್ ಆಡುತ್ತಿದ್ದರು. ಕೊನೆಯ ಹಂತದಲ್ಲೂ ಹಾಗೆಯೇ ಮಾಡಿದ್ದಾರೆ. ಕಪ್​ನ ರೂಪೇಶ್ ಶೆಟ್ಟಿಗೆ ಬಿಟ್ಟು ಕೊಡ್ತೀನಿ ಎಂದು ಒಮ್ಮೊಮ್ಮೆ ಹೇಳುತ್ತಿದ್ದ ಅವರು ಬಳಿಕ ನಾನೇ ಕಪ್ ಗೆಲ್ಲಬೇಕು ಎಂದು ಹೇಳುತ್ತಿದ್ದರು. ಇದು ಕೆಲವರಿಗೆ ಇಷ್ಟವಾಗಿಲ್ಲ. ದಿವ್ಯಾ ಹಾಗೂ ದೀಪಿಕಾ ದಾಸ್​ ಈ ಮೊದಲ ಸೀನಸ್​ಗಳಿಗೆ ಬಂದಿದ್ದರು. ಹೀಗಾಗಿ, ಅವರ ಅಭಿಮಾನಿ ಬಳಗ ದೊಡ್ಡದಿದೆ. ಇದು ಕೂಡ ಆರ್ಯವರ್ಧನ್​ಗೆ ಹಿನ್ನಡೆ ಆಗಿರಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:05 am, Wed, 28 December 22

ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ
RCB ಅಭಿಮಾನಿಗಳಿಗೆ ಸರ್ಕಾರದಿಂದ ಇಂದೇ ಸಿಗುತ್ತಾ ಸಿಹಿ ಸುದ್ದಿ?
RCB ಅಭಿಮಾನಿಗಳಿಗೆ ಸರ್ಕಾರದಿಂದ ಇಂದೇ ಸಿಗುತ್ತಾ ಸಿಹಿ ಸುದ್ದಿ?
ರಸ್ತೆ ಮಧ್ಯೆ ಕೆಟ್ಟು ನಿಂತ ಕೆಎಸ್‌ಆರ್‌ಟಿಸಿ ಬಸ್
ರಸ್ತೆ ಮಧ್ಯೆ ಕೆಟ್ಟು ನಿಂತ ಕೆಎಸ್‌ಆರ್‌ಟಿಸಿ ಬಸ್