Roopesh Shetty: ಫಿನಾಲೆ ವೀಕ್​​ನ ಮೊದಲ ದಿನವೇ ರೂಪೇಶ್ ಶೆಟ್ಟಿಗೆ ಸರ್​ಪ್ರೈಸ್ ನೀಡಿದ ಬಿಗ್ ಬಾಸ್

Bigg Boss Kannada 9: ರೂಪೇಶ್ ಶೆಟ್ಟಿ ತುಳು ಸಿನಿಮಾದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ನಟನೆಯ 2019ರ ‘ಗಿರಿಗಿಟ್​’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ರೂಪೇಶ್ ಶೆಟ್ಟಿ ವೃತ್ತಿಜೀವನ ಬದಲಾಯಿತು.

Roopesh Shetty: ಫಿನಾಲೆ ವೀಕ್​​ನ ಮೊದಲ ದಿನವೇ ರೂಪೇಶ್ ಶೆಟ್ಟಿಗೆ ಸರ್​ಪ್ರೈಸ್ ನೀಡಿದ ಬಿಗ್ ಬಾಸ್
ರೂಪೇಶ್ ಶೆಟ್ಟಿ
Follow us
TV9 Web
| Updated By: Digi Tech Desk

Updated on:Dec 27, 2022 | 11:58 PM

ರೂಪೇಶ್ ಶೆಟ್ಟಿ (Roopesh Shetty) ಅವರು ‘ಬಿಗ್ ಬಾಸ್ ಕನ್ನಡ ಒಟಿಟಿ’ಯಲ್ಲಿ ಟಾಪ್​ ಒಂದರಲ್ಲಿ ಕಾಣಿಸಿಕೊಂಡರು. ನಂತರ ಟಿವಿ ಸೀಸನ್​​ಗೆ ಬಂದರು. ಈಗ ಅವರು ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ. ಅವರು ಅನೇಕರಿಗೆ ಇಷ್ಟವಾಗಿದ್ದಾರೆ. ಅವರು ಎಂಟರ್​ಟೇನ್​ಮೆಂಟ್ ಮಾಡುವ ರೀತಿ ಹಲವರಿಗೆ ಇಷ್ಟವಾಗುತ್ತಿದೆ. ಬಿಗ್ ಬಾಸ್ (Bigg Boss) ಟ್ರೋಫಿನ ಅವರೇ ಗೆಲ್ಲಬೇಕು ಎಂದು ಅನೇಕರು ಆಶಿಸುತ್ತಿದ್ದಾರೆ. ಶನಿವಾರ (ಡಿಸೆಂಬರ್ 31) ನಡೆಯುವ ಫಿನಾಲೆಯಲ್ಲಿ ಈ ಪ್ರಶ್ನೆಗೆ ಉತ್ತರ ಸಿಗಲಿದೆ. ಈ ಮಧ್ಯೆ ಬಿಗ್ ಬಾಸ್​ ರೂಪೇಶ್ ಶೆಟ್ಟಿಗೆ ಸರ್​ಪ್ರೈಸ್ ಒಂದು ನೀಡಿದೆ.

ರೂಪೇಶ್ ಶೆಟ್ಟಿ ತುಳು ಸಿನಿಮಾದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ನಟನೆಯ 2019ರ ‘ಗಿರಿಗಿಟ್​’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ರೂಪೇಶ್ ಶೆಟ್ಟಿ ವೃತ್ತಿಜೀವನ ಬದಲಾಯಿತು. ಈ ಚಿತ್ರದ ಹಾಡುಗಳು ಕೂಡ ತುಳುನಾಡಲ್ಲಿ ಹಿಟ್ ಆಗಿದೆ. ಈ ಸಿನಿಮಾ ಹಾಡನ್ನು ಸೋಮವಾರದ (ಡಿಸೆಂಬರ್ 26) ಎಪಿಸೋಡ್​ನಲ್ಲಿ ವೇಕಪ್ ಸಾಂಗ್​ ಆಗಿ ಪ್ಲೇ ಮಾಡಲಾಗಿದೆ.

ಮುಂಜಾನೆ ಈ ಹಾಡು ಕೇಳಿ ರೂಪೇಶ್ ಶೆಟ್ಟಿ ಸಖತ್ ಖುಷಿ ಆಗಿದ್ದಾರೆ. ಅವರು ಎದ್ದು ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ರೂಪೇಶ್ ಜತೆ ಮನೆ ಮಂದಿ ಕೂಡ ಹೆಜ್ಜೆ ಹಾಕಿದ್ದಾರೆ. ‘ಥ್ಯಾಂಕ್ಸ್ ಬಿಗ್ ಬಾಸ್​. ನನ್ನ ವೃತ್ತಿ ಜೀವನ ಬದಲಿಸಿದ ಸಿನಿಮಾ ‘ಗಿರಿಗಿಟ್​’. ಈ ಚಿತ್ರದ ಹಾಡನ್ನು ಹಾಕಿದ್ದಕ್ಕೆ ಧನ್ಯವಾದ​’ ಎಂದು ಹೇಳಿದ್ದಾರೆ ರೂಪೇಶ್ ಶೆಟ್ಟಿ.

ಇದನ್ನೂ ಓದಿ
Image
Arun Sagar: ಬಿಗ್​ ಬಾಸ್​ನಿಂದ ಅರುಣ್​ ಸಾಗರ್​ ಎಲಿಮಿನೇಟ್​; ಫಿನಾಲೆಯ ಸಮೀಪದಲ್ಲಿ ಮುಗ್ಗರಿಸಿದ ಕಲಾವಿದ
Image
ಬಿಗ್ ಬಾಸ್ ಗೆದ್ರೆ ಆರ್ಯವರ್ಧನ್​-ರೂಪೇಶ್​ ಸ್ಪೀಚ್ ಹೇಗಿರುತ್ತದೆ? ಸುದೀಪ್​ ಎದುರು ಮಿಮಿಕ್ರಿ ಮಾಡಿ ತೋರಿಸಿದ ಮನೆ ಮಂದಿ
Image
ಬಿಗ್ ಬಾಸ್​ಗೆ ವೈಲ್ಡ್ ಕಾರ್ಡ್ ಮೂಲಕ ಮರು ಎಂಟ್ರಿ ಪಡೆದ ದೀಪಿಕಾ ದಾಸ್​ಗೆ ಇದು ನಿರ್ಣಾಯಕ ವಾರ

ರಾಕೇಶ್ ಅಡಿಗ ಕೂಡ ಚಿತ್ರರಂಗದ ಹಿನ್ನೆಲೆಯಿಂದ ಬಂದವರು. ಅವರು ಹಲವು ವಿಡಿಯೋ ಸಾಂಗ್ ಮಾಡಿದ್ದಾರೆ. ‘ಮನಿ’ ಹೆಸರಿನ ಹೊಸ ಹಾಡನ್ನು ಅವರು ಮಾಡಿದ್ದಾರೆ. ಈ ಹಾಡನ್ನು ಪ್ಲೇ ಮಾಡುವಂತೆ ಬಿಗ್ ಬಾಸ್ ಬಳಿ ಅವರು ಕೋರಿದ್ದಾರೆ. ‘ಮನಿ ಹೆಸರಿನ ಹಾಡನ್ನು ಮಾಡಿದ್ದೇನೆ. ಅದು ರಿಲೀಸ್ ಆಗಿಲ್ಲ. ದಯವಿಟ್ಟು ಆ ಹಾಡನ್ನು ಪ್ಲೇ ಮಾಡಿ’ ಎಂದಿದ್ದಾರೆ ರಾಕೇಶ್. ರೂಪೇಶ್ ಶೆಟ್ಟಿ ಸಿನಿಮಾ ಹಾಡನ್ನು ಹಾಕಿರುವುದರಿಂದ ರಾಕೇಶ್ ಈ ರೀತಿಯ ಕೋರಿಕೆ ಮುಂದಿಟ್ಟಿದ್ದಾರೆ. ಈ ಆಸೆ ಈಡೇರುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: BBK 9 FInale: ಟ್ವಿಸ್ಟ್ ಕೊಟ್ಟ ಬಿಗ್ ಬಾಸ್​​; ಈ ಬಾರಿ ಭಾನುವಾರ ನಡೆಯಲ್ಲ ಫಿನಾಲೆ

‘ಬಿಗ್ ಬಾಸ್ ಸೀಸನ್ 9’ರ ಫಿನಾಲೆ ಡಿಸೆಂಬರ್ 30 ಹಾಗೂ 31ರ ರಾತ್ರಿ 7.30ಕ್ಕೆ ಆರಂಭ ಆಗಲಿದೆ. ಆರ್ಯವರ್ಧನ್ ಗುರೂಜಿ, ದೀಪಿಕಾ ದಾಸ್, ದಿವ್ಯಾ ಉರುಡುಗ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಒಬ್ಬರು ಔಟ್ ಆಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:10 am, Tue, 27 December 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ