Tunisha Sharma: ಶ್ರದ್ಧಾ ವಾಕರ್​ ಕೊಲೆ ಕೇಸ್​ ಪ್ರಭಾವದಿಂದ ತುನಿಶಾ ಶರ್ಮಾ, ಶೀಜಾನ್​ ಖಾನ್​ ನಡುವೆ ನಡೆದಿತ್ತು ಬ್ರೇಕಪ್​

Tunisha Sharma Case: ತುನಿಶಾ ಶರ್ಮಾ ಸಾವಿನ ಕೇಸ್​ನಲ್ಲಿ ಅವರ ಮಾಜಿ ಬಾಯ್​​ಫ್ರೆಂಡ್​ ಶೀಜಾನ್​ ಖಾನ್​ ಅರೆಸ್ಟ್​ ಆಗಿದ್ದಾರೆ. ವಿಚಾರಣೆ ವೇಳೆ ಪೊಲೀಸರ ಎದುರು ಅವರು ಕೆಲವು ಮುಖ್ಯ ವಿಷಯಗಳನ್ನು ಬಾಯ್ಬಿಟ್ಟಿದ್ದಾರೆ.

Tunisha Sharma: ಶ್ರದ್ಧಾ ವಾಕರ್​ ಕೊಲೆ ಕೇಸ್​ ಪ್ರಭಾವದಿಂದ ತುನಿಶಾ ಶರ್ಮಾ, ಶೀಜಾನ್​ ಖಾನ್​ ನಡುವೆ ನಡೆದಿತ್ತು ಬ್ರೇಕಪ್​
ಅಫ್ತಾಬ್​ ಪೂನಾವಾಲಾ-ಶ್ರದ್ಧಾ ವಾಕರ್, ತುನಿಶಾ ಶರ್ಮಾ-ಶೀಜಾನ್​ ಖಾನ್​
Follow us
TV9 Web
| Updated By: ಮದನ್​ ಕುಮಾರ್​

Updated on: Dec 26, 2022 | 3:45 PM

ಹಿಂದಿ ಕಿರುತೆರೆಯ ಖ್ಯಾತ ನಟಿ ತುನಿಶಾ ಶರ್ಮಾ (Tunisha Sharma) ಅವರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ಮಾಜಿ ಪ್ರಿಯಕರ ಶೀಜಾನ್​ ಖಾನ್​ (Sheezan Khan) ಅವರನ್ನು ಪೊಲೀಸರು ಬಂಧಿಸಿದ್ದಾರೆ. 4 ದಿನಗಳ ಕಾಲ ಪೊಲೀಸರ ಕಸ್ಟಡಿಗೆ ಅವರನ್ನು ಒಪ್ಪಿಸಲಾಗಿದೆ. ಹೈ ಪ್ರೊಫೈಲ್​ ಕೇಸ್​ ಆದ್ದರಿಂದ ಎಲ್ಲರ ಗಮನ ಈ ಪ್ರಕರಣದ ಮೇಲಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ತುನಿಶಾ ಶರ್ಮಾ ಅವರು ಡಿ.24ರಂದು ನೇಣಿಗೆ ಶರಣಾದರು. ಅದಕ್ಕೂ 15 ದಿನಗಳ ಮುನ್ನ ಶೀಜಾನ್​ ಖಾನ್​ ಜೊತೆ ಅವರ ಬ್ರೇಕಪ್​ ಆಗಿತ್ತು. ಅದಕ್ಕೆ ಕಾರಣ ಆಗಿದ್ದು ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್​ ಕೊಲೆ ಪ್ರಕರಣ (Shraddha Walker Murder Case) ಎಂಬ ವಿಚಾರ ಈಗ ಬಯಲಾಗಿದೆ. ತನಿಖೆ ವೇಳೆ ಶೀಜಾನ್​ ಖಾನ್​ ಈ ವಿಷಯ ಬಾಯಿಬಿಟ್ಟಿದ್ದಾರೆ.

ಬಣ್ಣದ ಲೋಕದಲ್ಲಿ ಸಾಧನೆ ಮಾಡಬೇಕು ಎಂದು ತುನಿಶಾ ಶರ್ಮಾ ಕನಸು ಕಂಡಿದ್ದರು. ಅದರಂತೆ ಅವರಿಗೆ ಧಾರಾವಾಹಿ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆ ಸಿಕ್ಕಿತ್ತು. 20ರ ವಯಸ್ಸಿನಲ್ಲೇ ಅವರು ತುಂಬ ಫೇಮಸ್​ ಆಗಿದ್ದರು. ಹಿಂದಿಯ ‘ಅಲಿಬಾಬಾ’ ಧಾರಾವಾಹಿಯಲ್ಲಿ ಶೀಜಾನ್​ ಖಾನ್​ ಮತ್ತು ತುನಿಶಾ ಶರ್ಮಾ ಅವರು ಜೊತೆಯಾಗಿ ನಟಿಸುತ್ತಿದ್ದರು. ಇಬ್ಬರ ನಡುವೆ ಸಾಕಷ್ಟು ಆಪ್ತತೆ ಬೆಳೆದಿತ್ತು. ಪರಸ್ಪರ ಪ್ರೀತಿಸುತ್ತಿದ್ದ ಅವರು ಕೆಲವು ವಿಡಿಯೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಇತ್ತೀಚೆನ ದಿನಗಳಲ್ಲಿ ಇಬ್ಬರು ದೂರಾಗುವ ನಿರ್ಧಾರಕ್ಕೆ ಬಂದರು.

ತನ್ನ ಜೊತೆ ಲಿವ್​-ಇನ್​-ರಿಲೇಷನ್​ಶಿಪ್​ನಲ್ಲಿ ಇದ್ದ ಶ್ರದ್ಧಾ ವಾಕರ್​ ಅವರನ್ನು ಅಫ್ತಾಬ್​ ಪೂನಾವಾಲ ಭೀಕರವಾಗಿ ಕೊಲೆ ಮಾಡಿದ ಸುದ್ದಿ ಮಾಧ್ಯಮಗಳಲ್ಲಿ ಹಗಲು-ರಾತ್ರಿ ಬಿತ್ತರವಾಗಿತ್ತು. ಇದರಿಂದ ಶೀಜಾನ್​ ಖಾನ್​ ವಿಚಲಿತರಾದರು. ಶ್ರದ್ಧಾ ವಾಕರ್​ ಮತ್ತು ಅಫ್ತಾಬ್​ ಪೂನಾವಾಲಾ ರೀತಿಯೇ ಶೀಜಾನ್​ ಖಾನ್​ ಮತ್ತು ತುನಿಶಾ ಶರ್ಮಾ ಅವರು ಕೂಡ ಬೇರೆ ಬೇರೆ ಧರ್ಮಕ್ಕೆ ಸೇರಿದವರಾದ್ದರಿಂದ ಬ್ರೇಕಪ್​ ಮಾಡಿಕೊಳ್ಳುವುದೇ ಒಳಿತು ಎಂಬ ನಿರ್ಧಾರವನ್ನು ಶೀಜಾನ್​ ತೆಗೆದುಕೊಂಡರು. ಇಬ್ಬರ ನಡುವೆ ವಯಸ್ಸಿನ ಅಂತರ ಇದ್ದಿದ್ದು ಕೂಡ ಬ್ರೇಕಪ್​ಗೆ ಕಾರಣ ಆಗಿತ್ತು. ಈ ವಿಚಾರವನ್ನು ಪೊಲೀಸರ ಎದುರು ಶೀಜಾನ್​ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ
Image
Tunisha Sharma: ಬ್ರೇಕಪ್​ ಆಗಿ 15 ದಿನಕ್ಕೆ ನಟಿ ತುನಿಶಾ ಶರ್ಮಾ ಆತ್ಮಹತ್ಯೆ; ಪ್ರಿಯಕರ ಶೀಜಾನ್​ ಖಾನ್​ ಬಂಧನ
Image
Tunisha Sharma’s Death: ನಟಿ ತುನಿಶಾ ಶರ್ಮಾ ಆತ್ಮಹತ್ಯೆಗೆ ಲವ್​​ ಜಿಹಾದ್​​ ಕಾರಣವೇ ಎಂಬುದು ತನಿಖೆಯಾಗಬೇಕು: ಬಿಜೆಪಿ ಶಾಸಕ
Image
Shraddha Murder Case: ಶ್ರದ್ಧಾಳನ್ನು ಕೊಲೆ ಮಾಡಿರುವುದಾಗಿ ಅಫ್ತಾಬ್ ಒಪ್ಪಿಕೊಂಡರೂ ನ್ಯಾಯಾಲಯವು ಸಾಕ್ಷ್ಯ ಎಂದು ಪರಿಗಣಿಸುತ್ತಿಲ್ಲ ಏಕೆ?
Image
New Delhi: CCTVಯಲ್ಲಿ ಸೆರೆಯಾಗಿದೆ ಆಫ್ತಾಬ್‌ ಶ್ರದ್ಧಾಳ ಬಾಡಿ ತುಣುಕು ಬಾಕ್ಸ್‌ನಲ್ಲಿಟ್ಟುಕೊಂಡು ಹೋಗೋ ದೃಶ್ಯ

ಇದನ್ನೂ ಓದಿ: 20ನೇ ವಯಸ್ಸಿಗೆ ನಟಿ ತುನಿಶಾ ಶರ್ಮಾ ಆತ್ಮಹತ್ಯೆ

ಶೀಜಾನ್​ ಖಾನ್​ ಜೊತೆಗಿನ ಬ್ರೇಕಪ್​ ಬಳಿಕ ತುನಿಶಾ ಶರ್ಮಾ ಅವರು ಖಿನ್ನತೆಗೆ ಒಳಗಾಗಿದ್ದರು. ‘ಕೆಲವೇ ದಿನಗಳ ಹಿಂದೆ ಆಕೆ ಒಮ್ಮೆ ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದಳು. ಆಗ ನಾನು ಕಾಪಾಡಿದ್ದೆ. ಮಗಳನ್ನು ಸರಿಯಾಗಿ ನೋಡಿಕೊಳ್ಳುವಂತೆ ಅವಳ ತಾಯಿಗೆ ತಿಳಿಸಿದ್ದೆ’ ಎಂದು ಕೂಡ ಶೀಜಾನ್​ ಖಾನ್​ ಹೇಳಿದ್ದಾರೆ.

ಇದನ್ನೂ ಓದಿ: Tunisha Sharma’s Death: ನಟಿ ತುನಿಶಾ ಶರ್ಮಾ ಆತ್ಮಹತ್ಯೆಗೆ ಲವ್​​ ಜಿಹಾದ್​​ ಕಾರಣವೇ ಎಂಬುದು ತನಿಖೆಯಾಗಬೇಕು: ಬಿಜೆಪಿ ಶಾಸಕ

ತುನಿಶಾ ಶರ್ಮಾ ಅವರ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಅವರ ದೇಹದ ಮೇಲೆ ಯಾವುದೇ ಗಾಯದ ಕಲೆಗಳು ಕಂಡುಬಂದಿಲ್ಲ. ನೇಣು ಬಿಗಿದುಕೊಂಡಿದ್ದರಿಂದಲೇ ಅವರ ಪ್ರಾಣ ಹೋಗಿದೆ ಎಂಬುದು ತಿಳಿದುಬಂದಿದೆ. ತುನಿಶಾ ಶರ್ಮಾ ಪ್ರೆಗ್ನೆಂಟ್​ ಆಗಿದ್ದಿರಬಹುದೇ ಎಂಬ ಅನುಮಾನ ಕೂಡ ವ್ಯಕ್ತವಾಗಿತ್ತು. ಈ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿದ್ದು, ನಟಿ ಪ್ರೆಗ್ನೆಂಟ್​ ಆಗಿರಲಿಲ್ಲ ಎಂದು ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ