Tunisha Sharma: ಬ್ರೇಕಪ್​ ಆಗಿ 15 ದಿನಕ್ಕೆ ನಟಿ ತುನಿಶಾ ಶರ್ಮಾ ಆತ್ಮಹತ್ಯೆ; ಪ್ರಿಯಕರ ಶೀಜಾನ್​ ಖಾನ್​ ಬಂಧನ

Tunisha Sharma Boyfriend | Sheezan Khan Arrest: ನಟಿ ತುನಿಶಾ ಶರ್ಮಾ ಪ್ರೆಗ್ನೆಂಟ್​ ಆಗಿದ್ದಿರಬಹುದೇ ಎಂಬ ಅನುಮಾನ ವ್ಯಕ್ತವಾಗಿತ್ತು. ಮರಣೋತ್ತರ ವರದಿ ಬಂದಿದ್ದು, ಈ ಬಗ್ಗೆ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ.

Tunisha Sharma: ಬ್ರೇಕಪ್​ ಆಗಿ 15 ದಿನಕ್ಕೆ ನಟಿ ತುನಿಶಾ ಶರ್ಮಾ ಆತ್ಮಹತ್ಯೆ; ಪ್ರಿಯಕರ ಶೀಜಾನ್​ ಖಾನ್​ ಬಂಧನ
ತುನಿಶಾ ಶರ್ಮಾ, ಶೀಜಾನ್ ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 25, 2022 | 7:54 PM

ನಟಿ ತುನಿಶಾ ಶರ್ಮಾ ಅವರ ನಿಧನದಿಂದ (Tunisha Sharma Death) ಹಿಂದಿ ಕಿರುತೆರೆ ಲೋಕಕ್ಕೆ ಆಘಾತ ಆಗಿದೆ. ಕೇವಲ 20ರ ಪ್ರಾಯದಲ್ಲಿ ತುನಿಶಾ ಶರ್ಮಾ ಅವರು ಸಾವಿಗೆ ಶರಣಾಗಿರುವುದು ವಿಷಾದದ ಸಂಗತಿ. ಬಣ್ಣದ ಲೋಕದಲ್ಲಿ ಸಾಧನೆ ಮಾಡಬೇಕು ಎಂದು ಕನಸು ಕಂಡಿದ್ದ ಅವರು ಧಾರಾವಾಹಿ ಚಿತ್ರೀಕರಣದ ಸ್ಟುಡಿಯೋದಲ್ಲೇ ಡಿ.24ರಂದು ಆತ್ಮಹತ್ಯೆ (Tunisha Sharma Suicide) ಮಾಡಿಕೊಂಡರು. ಶಾಕಿಂಗ್​ ವಿಚಾರ ಏನೆಂದರೆ, ಕೇವಲ 15 ದಿನಗಳ ಹಿಂದೆ ಪ್ರಿಯಕರ ಶೀಜಾನ್​ ಖಾನ್​ ಜೊತೆ ಅವರು ಬ್ರೇಕಪ್​ ಮಾಡಿಕೊಂಡಿದ್ದರು. ಈ ಪ್ರಕರಣದ ಕುರಿತಂತೆ ತುನಿಶಾ ಶರ್ಮಾ ಅವರ ತಾಯಿ ದೂರು ನೀಡಿದ್ದಾರೆ. ಅದರ ಅನ್ವಯ ಶೀಜಾನ್​ ಖಾನ್​ (Sheezan Khan) ಅವರನ್ನು ಅರೆಸ್ಟ್​ ಮಾಡಲಾಗಿದ್ದು, 4 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಒಪ್ಪಿಸಲಾಗಿದೆ.

ಹಿಂದಿಯ ‘ಅಲಿಬಾಬಾ’ ಧಾರಾವಾಹಿಯಲ್ಲಿ ಶೀಜಾನ್​ ಖಾನ್​ ಮತ್ತು ತುನಿಶಾ ಶರ್ಮಾ ಅವರು ಜೊತೆಯಾಗಿ ನಟಿಸುತ್ತಿದ್ದರು. ಇಬ್ಬರ ನಡುವೆ ಸಾಕಷ್ಟು ಆಪ್ತತೆ ಬೆಳೆದಿತ್ತು. ಪರಸ್ಪರ ಪ್ರೀತಿಸುತ್ತಿದ್ದ ಅವರು ಕೆಲವು ವಿಡಿಯೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಬ್ರೇಕಪ್​ ಆಗಿತ್ತು ಎಂಬ ವಿಚಾರ ಈಗ ಬಹಿರಂಗ ಆಗಿದೆ. ಶೀಜಾನ್​ ಖಾನ್​ ಜೊತೆಗಿನ ಬ್ರೇಕಪ್​ ಬಳಿಕ ತುನಿಶಾ ಶರ್ಮಾ ಅವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದ ಮೇಲೆ ಶೀಜಾನ್​ ಖಾನ್​ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Tunisha Sharma’s Death: ನಟಿ ತುನಿಶಾ ಶರ್ಮಾ ಆತ್ಮಹತ್ಯೆಗೆ ಲವ್​​ ಜಿಹಾದ್​​ ಕಾರಣವೇ ಎಂಬುದು ತನಿಖೆಯಾಗಬೇಕು: ಬಿಜೆಪಿ ಶಾಸಕ

ಇದನ್ನೂ ಓದಿ
Image
ಆತ್ಮಹತ್ಯೆ ಮಾಡಿಕೊಂಡ ಮಲಯಾಳಂ ನಟ; ನೇಣು ಬಿಗಿದ ಸ್ಥಿತಿಯಲ್ಲಿ ಪ್ರಸಾದ್ ಶವ ಪತ್ತೆ
Image
18ನೇ ವಯಸ್ಸಿಗೆ ಮದುವೆ, ನಿರಂತರ ಕಿರುಕುಳ; ಕಿಟಕಿ ಸರಳಿಗೆ ನೇಣು ಬಿಗಿದುಕೊಂಡು ಯುವನಟಿಯ ಆತ್ಮಹತ್ಯೆ
Image
ಆತ್ಮಹತ್ಯೆ ಮಾಡಿಕೊಂಡ ಆಸ್ಕರ್​ ಪುರಸ್ಕೃತ ನಟಿಯ ಮಗ; ರೆಜೀನಾ ಕಿಂಗ್​ ಬಾಳಿನಲ್ಲಿ ಆವರಿಸಿತು ಕತ್ತಲು
Image
ಸ್ಯಾಂಡಲ್​ವುಡ್​ ನಟಿ ಸವಿ ಮಾದಪ್ಪ ಆತ್ಮಹತ್ಯೆ; ಡೆತ್​ನೋಟ್​ ಬರೆದಿಟ್ಟು ನೇಣಿಗೆ ಶರಣು

ಭಾನುವಾರ (ಡಿ.25) ಬೆಳಗ್ಗೆ ತುನಿಶಾ ಶರ್ಮಾ ಅವರ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಅವರ ದೇಹದ ಮೇಲೆ ಯಾವುದೇ ಗಾಯದ ಕಲೆಗಳು ಕಂಡುಬಂದಿಲ್ಲ. ನೇಣು ಬಿಗಿದುಕೊಂಡಿದ್ದರಿಂದಲೇ ಅವರ ಪ್ರಾಣ ಹೋಗಿದೆ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ತುನಿಶಾ ಶರ್ಮಾ ಪ್ರೆಗ್ನೆಂಟ್​ ಆಗಿದ್ದಿರಬಹುದೇ ಎಂಬ ಅನುಮಾನ ಕೂಡ ವ್ಯಕ್ತವಾಗಿತ್ತು. ಈ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿದ್ದು, ನಟಿ ಪ್ರೆಗ್ನೆಂಟ್​ ಆಗಿರಲಿಲ್ಲ ಎಂದು ತಿಳಿಸಿದ್ದಾರೆ. ಇನ್ನುಳಿದ ವಿವರಗಳನ್ನು ತಿಳಿಯಲು ಸದ್ಯ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Tunisha Sharma: ಧಾರಾವಾಹಿಯ ಶೂಟಿಂಗ್​ ಸೆಟ್​ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಕಿರುತೆರೆ ನಟಿ

ಸೋಮವಾರ (ಡಿ.26) ತುನಿಶಾ ಶರ್ಮಾ ಅವರ ಪಾರ್ಥೀವ ಶರೀರವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುವುದು. ಈ ನಡುವೆ ಕೆಲವರು ಲವ್​ ಜಿಹಾದ್​ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ತನಿಖೆ ಬಳಿಕವೇ ಸತ್ಯ ಹೊರಬರಬೇಕಿದೆ. ಪ್ರಿಯಕರ ಶೀಜಾನ್​ ಖಾನ್​ ಅವರಿಗೆ ಪೊಲೀಸರು ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ತುನಿಶಾ ಶರ್ಮಾ ನಿಧನಕ್ಕೆ ಕಿರುತೆರೆ ಲೋಕದ ಅನೇಕರು ಸಂತಾಪ ಸೂಚಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಕಂಬಿನಿ ಮಿಡಿಯುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಶ್ರದ್ಧಾಂಜಲಿ ಸಂದೇಶಗಳು ಹರಿದುಬರುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ