AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆತ್ಮಹತ್ಯೆ ಮಾಡಿಕೊಂಡ ಮಲಯಾಳಂ ನಟ; ನೇಣು ಬಿಗಿದ ಸ್ಥಿತಿಯಲ್ಲಿ ಪ್ರಸಾದ್ ಶವ ಪತ್ತೆ

ಕೊಚ್ಚಿ ಸಮೀಪ ಪ್ರಸಾದ್ ವಾಸವಾಗಿದ್ದರು. ಜೂನ್ 25ರಂದು ಸಂಜೆ 6.30ರ ಸುಮಾರಿಗೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಮಲಯಾಳಂ ನಟ; ನೇಣು ಬಿಗಿದ ಸ್ಥಿತಿಯಲ್ಲಿ ಪ್ರಸಾದ್ ಶವ ಪತ್ತೆ
ಎನ್​ಡಿ ಪ್ರಸಾದ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jun 27, 2022 | 3:54 PM

ಚಿತ್ರರಂಗಕ್ಕೆ ಒಂದಾದಮೇಲೆ ಒಂದರಂತೆ ಶಾಕಿಂಗ್ ನ್ಯೂಸ್ ಕೇಳಿ ಬರುತ್ತಲೇ ಇದೆ. ಇತ್ತೀಚೆಗೆ ಅನೇಕ ಕಲಾವಿದರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈಗ ಮಲಯಾಳಂ ಸಿನಿಮಾಗಳಲ್ಲಿ (Malayalam Cinema) ವಿಲನ್ ಪಾತ್ರದ ಮೂಲಕ ಗಮನ ಸೆಳೆದಿದ್ದ ನಟ ಎನ್​.ಡಿ. ಪ್ರಸಾದ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. 43 ವರ್ಷದ ಪ್ರಸಾದ್ ಅವರು ನಿವೀನ್ ಪೌಳಿ ನಟನೆಯ ಮಲಯಾಳಂ ಸಿನಿಮಾ ‘ಆ್ಯಕ್ಷನ್ ಹೀರೋ ಬಿಜು’ದಲ್ಲಿ (Actoin Hero Biju) ವಿಲನ್ ಪಾತ್ರ ಮಾಡಿ ಗಮನ ಸೆಳೆದಿದ್ದರು. ಈಗ ಅವರು ಆತ್ಮಹತ್ಯೆಗೆ ಶರಣಾಗಿದ್ದು, ಮಲಯಾಳಂ ಚಿತ್ರರಂಗದ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ.

ಕೊಚ್ಚಿ ಸಮೀಪ ಪ್ರಸಾದ್ ವಾಸವಾಗಿದ್ದರು. ಜೂನ್ 25ರಂದು ಸಂಜೆ 6.30ರ ಸುಮಾರಿಗೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮಕ್ಕಳು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಪ್ರಸಾದ್ ನೇಣಿಗೆ ಶರಣಾಗಿದ್ದಾರೆ. ಮನೆಗೆ ಬಂದಾಗ ತಂದೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಮಕ್ಕಳು ಶಾಕ್​ಗೆ ಒಳಗಾಗಿದ್ದಾರೆ. ನೆರೆಯವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಪ್ರಸಾದ್ ಅವರು ಕುಟುಂಬ ಕಲಹದಿಂದ ಬೇಸತ್ತಿದ್ದರು. ಈ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದರು ಎಂದು ಪೊಲೀಸರ ಪ್ರಾಥಮಿಕ ತನಿಖೆ ವರದಿ ಹೇಳಿದೆ. ಸಂಪೂರ್ಣ ತನಿಖೆ ಬಳಿಕ ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.

ಇದನ್ನೂ ಓದಿ
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
Image
Kichcha Sudeep: ‘ವಿಕ್ರಾಂತ್​ ರೋಣ’ ಚಿತ್ರಕ್ಕೆ ಅಮಿತಾಭ್​ ಬಚ್ಚನ್​ ಸಾಥ್​; ಕಿಚ್ಚ ಸುದೀಪ್​ ಸಿನಿಮಾಗೆ ‘ಬಿಗ್​ ಬಿ’ ಬೆಂಬಲ
Image
Sudeep: ‘ನಾನು-ಶಿವಣ್ಣ ಕೆಲವು ಸಮಯ ಮಾತಾಡ್ತಾ ಇರಲಿಲ್ಲ, ಕಾರಣ ಹುಡುಕ್ತಾ ಹೋದ್ರೆ..’; ಸುದೀಪ್​ ನೇರ ಮಾತು
Image
ಡರ್ಟಿ ಪಿಕ್ಚರ್​ ನಟಿ ಸಾವು.. ಬೆಡ್​ ರೂಂನಲ್ಲಿ ಶವ ಪತ್ತೆ.. ನೆಲದ ಮೇಲೆ ರಕ್ತದ ಹನಿಗಳು!

‘ಪ್ರಸಾದ್ ಅವರಿಂದ ಹೆಂಡತಿ ದೂರ ಉಳಿದಿದ್ದರು. ಕೆಲ ದಿನಗಳಿಂದ ಅವರು ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸಾದ್ ಗೆಳೆಯರು ಹಾಗೂ ಸಂಬಂಧಿಕರಿಂದ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ‘ಇಬಾ’ ಮೊದಲಾದ ಚಿತ್ರಗಳಲ್ಲಿ ಅವರು ಬಣ್ಣ ಹಚ್ಚಿದ್ದರು. 2016ರಲ್ಲಿ ತೆರೆಗೆ ಬಂದ ‘ಆ್ಯಕ್ಷನ್ ಹೀರೋ ಬಿಜು’ ಚಿತ್ರದಿಂದ ಪ್ರಸಾದ್ ಅವರನ್ನು ಜನರು ಹೆಚ್ಚು ಗುರುತಿಸಿದರು.

ನಿಜ ಜೀವನದಲ್ಲಿ ಪ್ರಸಾದ್ ಹಲವು ವಿವಾದ ಮಾಡಿಕೊಂಡಿದ್ದರು . ಪ್ರಸಾದ್ ಅವರ ವಿರುದ್ಧ ಹಲವು ಪೊಲೀಸ್ ಕೇಸ್ ಇತ್ತು. ಡ್ರಗ್ ಪ್ರಕರಣದಲ್ಲಿ ಪ್ರಸಾದ್​ ಅವರ ಹೆಸರು ಕೂಡ ಸೇರಿಕೊಂಡಿತ್ತು. ಕಳೆದ ವರ್ಷ ಪ್ರಸಾದ್ ಬಳಿ ಡ್ರಗ್ಸ್ ಹಾಗೂ ಗಾಂಜಾ ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ಡರ್ಟಿ ಪಿಕ್ಚರ್​ ನಟಿ ಸಾವು.. ಬೆಡ್​ ರೂಂನಲ್ಲಿ ಶವ ಪತ್ತೆ.. ನೆಲದ ಮೇಲೆ ರಕ್ತದ ಹನಿಗಳು!

ಪ್ರೀತಿಸಿದ ಹುಡುಗಿ ಮೋಸ ಮಾಡಿದ್ದಕ್ಕೆ ಮನನೊಂದ ಯುವಕ; ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣು

Published On - 3:53 pm, Mon, 27 June 22

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?