Sign In

By signing in or creating an account, you agree with Associated Broadcasting Company's Terms & Conditions and Privacy Policy.

Amulya Gowda: ಬಿಗ್ ಬಾಸ್ ಎಲಿಮಿನೇಷನ್‌ಗೆ ಟ್ವಿಸ್ಟ್‌; ಅಮೂಲ್ಯ ಔಟ್, ಇಂದು ಮತ್ತೋರ್ವ ಸ್ಪರ್ಧಿ‌ ಎಲಿಮಿನೇಟ್

Bigg Boss Kannada: ಫಿನಾಲೆಗೆ ಅಂತಿಮ ಘಟ್ಟದಲ್ಲಿರುವ ಈ ವೀಕೆಂಡ್​ನಲ್ಲಿ ಇಬ್ಬರು ‌ಸ್ಪರ್ಧಿಗಳು ಬಿಗ್​ ಬಾಸ್​ ಮನೆಯಿಂದ ಹೊರ ಬರುತ್ತಿದ್ದಾರೆ. ಈಗಾಗಲೇ ಶನಿವಾರದ ಎಪಿಸೋಡ್​ನಲ್ಲಿ ಕಮಲಿ ಸೀರಿಯಲ್ ಮೂಲಕ ಮನೆ ಮಾತಾಗಿರುವ ಜನಪ್ರಿಯ ನಟಿ ಅಮೂಲ್ಯ ಗೌಡ ಬಿಗ್ ​​ಬಾಸ್​ ಮನೆಯಿಂದ ಔಟ್ ಆಗಿದ್ದಾರೆ.

Amulya Gowda: ಬಿಗ್ ಬಾಸ್ ಎಲಿಮಿನೇಷನ್‌ಗೆ ಟ್ವಿಸ್ಟ್‌; ಅಮೂಲ್ಯ ಔಟ್, ಇಂದು ಮತ್ತೋರ್ವ ಸ್ಪರ್ಧಿ‌ ಎಲಿಮಿನೇಟ್
Amulya Gowda BBK 9
Follow us
TV9 Web
| Updated By: Vinay Bhat

Updated on:Dec 25, 2022 | 8:51 AM

ಮುಂದಿನ ವಾರ ‘ಕನ್ನಡ ಬಿಗ್ ಬಾಸ್ ಸೀಸನ್​ 9’ರ (Bigg Boss) ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ಮೂಲಕ ಈ ಬಾರಿಯ ಸೀಸನ್ ಪಯಣ ಅಂತ್ಯವಾಗಲಿದೆ. ಸದ್ಯ ಅಂತಿಮ ಹಂತದಲ್ಲಿರುವ ಬಿಗ್ ಬಾಸ್ ಸ್ಪರ್ದಿಗಳಿಗೆ ಹಾಗೂ ವೀಕ್ಷಕರಿಗೆ ಬಿಗ್ಗೆಸ್ಟ್ ಟ್ವಿಸ್ಟ್ ನೀಡಿದ್ದಾರೆ. ಅದೇನೆಂದರೆ ಈ ವಾರ ಡಬಲ್ ಎಲಿಮಿನೇಷನ್ (Double Elimination) ಶಾಕ್. ಫಿನಾಲೆಗೆ ಅಂತಿಮ ಘಟ್ಟದಲ್ಲಿರುವ ಈ ವೀಕೆಂಡ್​ನಲ್ಲಿ ಇಬ್ಬರು ‌ಸ್ಪರ್ಧಿಗಳು ಬಿಗ್​ ಬಾಸ್​ ಮನೆಯಿಂದ ಹೊರ ಬರುತ್ತಿದ್ದಾರೆ. ಈಗಾಗಲೇ ಶನಿವಾರದ ಎಪಿಸೋಡ್​ನಲ್ಲಿ ಕಮಲಿ ಸೀರಿಯಲ್ ಮೂಲಕ ಮನೆ ಮಾತಾಗಿರುವ ಜನಪ್ರಿಯ ನಟಿ ಅಮೂಲ್ಯ ಗೌಡ (Amulya Gowda) ಬಿಗ್ ​​ಬಾಸ್​ ಮನೆಯಿಂದ ಔಟ್ ಆಗಿದ್ದಾರೆ.

ಟಿವಿ ಪರದೆಯಲ್ಲಿ ರಿಷಿ‌‌ ಮನದರಸಿ ಕಮಲಿಯಾಗಿ‌ ಮನಗೆದ್ದ ನಟಿ ಅಮೂಲ್ಯ ಅಭಿನಯಕ್ಕೆ ಕನ್ನಡಿಗರು ಫಿದಾ ಆಗಿದ್ದರು. ದೊಡ್ಮನೆಗೆ ಕಾಲಿಟ್ಟ ಅಮೂಲ್ಯ, ಅಡುಗೆ, ಟಾಸ್ಕ್, ಮನರಂಜನೆ, ನೇರ ನುಡಿ ಮೂಲಕ ಅಭಿಮಾನಿಗಳ ಮನಗೆದ್ದಿದ್ದರು. ರಾಕೇಶ್ ಅಡಿಗ ಜೊತೆಗಿನ ಒಡನಾಟದ ವಿಷ್ಯವಾಗಿಯೂ ಸದ್ದು ಮಾಡಿದ್ದರು. ಈಗ 14ನೇ ವಾರದ ಮೊದಲ ಸ್ಪರ್ಧಿಯಾಗಿ ಅಮೂಲ್ಯ ಹೊರಬಂದಿದ್ದಾರೆ. ಬಿಗ್ ಬಾಸ್ ಮನೆಯ ಮಹಿಳಾ ವಿಭಾಗದಲ್ಲಿ ಸ್ಟ್ರಾಂಗ್ ಅಭ್ಯರ್ಥಿಯಾಗಿದ್ದ ಅಮೂಲ್ಯ ಔಟ್ ಆಗಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ.

13 ವಾರಗಳ ಕಾಲ ಇದ್ದು ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಕಿಚ್ಚ ಸುದೀಪ್ ಜೊತೆ ಸ್ಟೇಜ್ ಮೇಲೆ ಮಾತನಾಡಿದ ಅಮೂಲ್ಯ ಗೌಡ, ”ನಾನು ಟಾಸ್ಕ್ ಅಂತ ಬಂದರೆ ಮುಂದೆ ಇರುತ್ತಿದ್ದೆ, ಆದರೆ ಜನರಿಗೆ ಮನರಂಜನೆ ನೀಡುವಲ್ಲಿ ಹಿಂದೆ ಉಳಿದಿರಬಹುದು. ನಾನು ತುಂಬಾ ಸೈಲೆಂಟ್. ಹೀಗಾಗಿ ಹೆಚ್ಚು ಎಕ್ಸ್​ಪ್ರೆಸ್ ಈ ಮನೆಯಲ್ಲಿ ಕಷ್ಟ ಆಗುತ್ತಿತ್ತು,” ಎಂದು ಸುದೀಪ್ ಅವರು ವೇದಿಕೆಯಲ್ಲಿ ಅಮೂಲ್ಯ ಹೇಳಿದ್ದಾರೆ.

ಇದನ್ನೂ ಓದಿ
Image
Pathaan: ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡು ವಿವಾದ: ಬಾಲಿವುಡ್​ ಬಗ್ಗೆ ಕಳವಳ ವ್ಯಕ್ತಪಡಿಸಿದ ಹಿರಿಯ ನಟಿ ಆಶಾ ಪರೇಖ್   
Image
Tunisha Sharma: ಧಾರಾವಾಹಿಯ ಶೂಟಿಂಗ್​ ಸೆಟ್​ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಕಿರುತೆರೆ ನಟಿ
Image
ಬಿಗ್ ಬಾಸ್ ಗೆದ್ರೆ ಆರ್ಯವರ್ಧನ್​-ರೂಪೇಶ್​ ಸ್ಪೀಚ್ ಹೇಗಿರುತ್ತದೆ? ಸುದೀಪ್​ ಎದುರು ಮಿಮಿಕ್ರಿ ಮಾಡಿ ತೋರಿಸಿದ ಮನೆ ಮಂದಿ
Image
‘ಧಾರ್ಮಿಕ ಭಯೋತ್ಪಾದನೆ ತಡೆಗೆ ತೆರಿಗೆ ಹಣ ಬಳಕೆ ಆಗುತ್ತಿದೆ’; ಬೊಬ್ಬೆ ಹೊಡೆದವರಿಗೆ ವಿವೇಕ್ ಅಗ್ನಿಹೋತ್ರಿ ತಿರುಗೇಟು

BBK 9 Finale: ‘ಬಿಗ್ ಬಾಸ್ ಸೀಸನ್ 9’ರ ಫಿನಾಲೆ ಡೇಟ್ ಘೋಷಣೆ; ಈ ವಾರ ಡಬಲ್ ಎಲಿಮಿನೇಷನ್ ಸಾಧ್ಯತೆ

ಈ ವಾರ ಮತ್ತೊಂದು ಎಲಿಮಿನೇಷನ್:

ಈ ವಾರಾಂತ್ಯ ಇಬ್ಬರು ‌ಸ್ಪರ್ಧಿಗಳು ಮನೆಯಿಂದ ಹೊರಬರಲಿದ್ದಾರೆ. ಅದರಲ್ಲಿ ಮೊದಲ ಸ್ಪರ್ಧಿಯಾಗಿ ಅಮೂಲ್ಯ ಗೌಡ ಎಲಿಮಿನೆಟ್ ಆದರೆ ಮತ್ತೊಬ್ಬ ಸ್ಪರ್ಧಿ ಅರುಣ್ ಸಾಗರ್ ಎಂದು ಹೇಳಲಾಗುತ್ತಿದೆ. ಅರುಣ್ ಸಾಗರ್ ನಟನಾಗಿ, ಖಳ ನಟ, ಹೀಗೆ ಸಾಕಷ್ಟು ಪಾತ್ರಗಳ ಮೂಲಕ ಬೆಳ್ಳಿ ಪರದೆಯಲ್ಲಿ ರಂಜಿಸಿದ್ದರು. ಬಿಗ್ ಬಾಸ್ ಸೀಸನ್ 1ರ ರನ್ನರ್ ಅಪ್ ಆಗಿದ್ದರು. ಬಳಿಕ ಸೀಸನ್ 9ರಲ್ಲೂ ರಂಜಿಸಿ ಸೈ ಎನಿಸಿಕೊಂಡಿದ್ದರು. ಇದೀಗ 14 ವಾರಕ್ಕೆ ಅರುಣ್ ಸಾಗರ್ ಆಟ ಅಂತ್ಯವಾಗಿದೆ ಎನ್ನಲಾಗಿದೆ. ಅಮೂಲ್ಯ ಜೊತೆ ಎರಡನೇ ಸ್ಪರ್ಧಿಯಾಗಿ ಎಲಿಮಿನೇಟ್ ಆಗಿದ್ದಾರಂತೆ. ಅರುಣ್ ಅವರು ಅನಾರೋಗ್ಯದ ಹಿನ್ನೆಲೆ ಈ ವಾರ ಮಾತ್ರವಲ್ಲದೆ ಈ ಸೀಸನ್​ನಲ್ಲಿ ಹೆಚ್ಚಿನ ಟಾಸ್ಕ್‌ಗಳಲ್ಲಿ ಕೊಂಚ ಮಂಕಾಗಿದ್ದರು.

ಡಿಸೆಂಬರ್ 31ಕ್ಕೆ ಬಿಗ್ ಬಾಸ್ ಫಿನಾಲೆ:

ನವೀನರು ಹಾಗೂ ಪ್ರವೀಣರು ಎಂಬ ಟ್ಯಾಗ್ ಲೈನ್ ನೊಂದಿಗೆ ಶುರುವಾದ ಬಿಗ್ ಬಾಸ್ ಸೀಸನ್ 9 ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಫಿನಾಲೆ ದಿನಾಂಕವನ್ನು ಘೋಷಣೆ ಮಾಡಿದ್ದು ಡಿಸೆಂಬರ್ 31 ಹಾಗೂ ಜನವರಿ 1ರಂದು ನಡೆಯಲಿದೆ. ಫಿನಾಲೆಯಲ್ಲಿ ಇರುವುದು ಐವರು ಮಾತ್ರ. ಭಾನುವಾರ ಮತ್ತೋರ್ವ ಸ್ಪರ್ಧಿ ಎಲಿಮಿನೇಟ್ ಆದರೆ ಮತ್ತೋರ್ವ ಸ್ಪರ್ಧಿ ಮುಂದಿನವಾರದ ಮಧ್ಯದಲ್ಲಿ ಎಲಿಮಿನೇಟ್ ಆಗಲಿದ್ದಾರೆ. ಈ ಮೂಲಕ ಫಿನಾಲೆಗೆ ಐವರು ಸ್ಪರ್ಧಿಗಳು ತಲುಪಲಿದ್ದಾರೆ. ಶನಿವಾರದ ಎಪಿಸೋಡ್ ಅಂತ್ಯಕ್ಕೆ ಅರುಣ್ ಸಾಗರ್, ಆರ್ಯವರ್ಧನ್ ಗುರೂಜಿ, ದೀಪಿಕಾ ದಾಸ್, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ ಮತ್ತು ದಿವ್ಯಾ ಉರುಡುಗ ಮನೆಯಲ್ಲಿ ಉಳಿದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:51 am, Sun, 25 December 22

ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ