Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK 9 Finale: ‘ಬಿಗ್ ಬಾಸ್ ಸೀಸನ್ 9’ರ ಫಿನಾಲೆ ಡೇಟ್ ಘೋಷಣೆ; ಈ ವಾರ ಡಬಲ್ ಎಲಿಮಿನೇಷನ್ ಸಾಧ್ಯತೆ

ಫಿನಾಲೆಯಲ್ಲಿ ಇರೋದು ಐವರು ಮಾತ್ರ. ಆದರೆ, ಈಗ ಇರೋದು 10 ಮಂದಿ. ಹೀಗಾಗಿ, ಎಂಟು ಮಂದಿಯಲ್ಲಿ ಇಬ್ಬರು ಈ ವಾರ ಹೊರಹೋಗಬಹುದು. ಮತ್ತೋರ್ವ ಸ್ಪರ್ಧಿ ಮುಂದಿನವಾರದ ಮಧ್ಯದಲ್ಲಿ ಎಲಿಮಿನೇಟ್ ಆಗಲಿದ್ದಾರೆ.

BBK 9 Finale: ‘ಬಿಗ್ ಬಾಸ್ ಸೀಸನ್ 9’ರ ಫಿನಾಲೆ ಡೇಟ್ ಘೋಷಣೆ; ಈ ವಾರ ಡಬಲ್ ಎಲಿಮಿನೇಷನ್ ಸಾಧ್ಯತೆ
Follow us
TV9 Web
| Updated By: Digi Tech Desk

Updated on:Dec 23, 2022 | 5:52 PM

‘ಬಿಗ್ ಬಾಸ್ ಕನ್ನಡ ಸೀಸನ್ 9’ರ (BBK 9) ಫಿನಾಲೆ ಯಾವಾಗ ಎಂಬ ಪ್ರಶ್ನೆ ಅನೇಕರಲ್ಲಿತ್ತು. ಈ ಪ್ರಶ್ನೆಗೆ ಈಗ ಬಿಗ್ ಬಾಸ್ ಕಡೆಯಿಂದಲೇ ಉತ್ತರ ಸಿಕ್ಕಿದೆ. ಡಿಸೆಂಬರ್ 31 ಹಾಗೂ ಜನವರಿ 1ರಂದು ಈ ಸೀಸನ್​ನ ಫಿನಾಲೆ ನಡೆಯಲಿದೆ. ಈ ಕುರಿತು ಬಿಗ್ ಬಾಸ್ (Bigg Boss) ಮನೆಯಲ್ಲಿ ಸ್ಪರ್ಧಿಗಳಿಗೆ ಮಾಹಿತಿ ನೀಡಲಾಗಿದೆ. ನವೆಂಬರ್ 22ರ ಎಪಿಸೋಡ್​ನಲ್ಲಿ ಫಿನಾಲೆಗೆ 10 ದಿನ ಬಾಕಿ ಎಂಬ ಸೂಚನೆ ನೀಡಲಾಗಿದೆ. ಇದನ್ನು ನೋಡಿ ಸ್ಪರ್ಧಿಗಳಿಗೆ ಖುಷಿ ಹಾಗೂ ಬೇಸರ ಎರಡೂ ಆಗಿದೆ.

ಈ ಬಾರಿ ‘ಬಿಗ್ ಬಾಸ್​ ಒಟಿಟಿ’ ಮೊದಲ ಬಾರಿಗೆ ಆರಂಭ ಆಯಿತು. 45 ದಿನಗಳ ಕಾಲ ಸ್ಪರ್ಧಿಗಳು ದೊಡ್ಮನೆಯಲ್ಲಿ ಕಳೆದರು. ಇಲ್ಲಿಂದ ನಾಲ್ಕು ಸ್ಪರ್ಧಿಗಳು ಬಿಗ್ ಬಾಸ್ ಟಿವಿ ಸೀಸನ್​ಗೆ ಕಾಲಿಟ್ಟರು. ಈ ಬಾರಿ ನವೀನರು ಹಾಗೂ ಪ್ರವೀಣರು ಎಂಬ ತಂತ್ರದ ಮೊರೆ ಹೋಗಲಾಯಿತು. 9 ನವೀನರು ಹಾಗೂ 9 ಹಳೆಯ ಸ್ಪರ್ಧಿಗಳು ಬಂದರು. ಸದ್ಯ ಬಿಗ್ ಬಾಸ್ ಮನೆಯಲ್ಲಿ 8 ಸ್ಪರ್ಧಿಗಳಿದ್ದಾರೆ. ಈ ವಾರ ಡಬಲ್ ಎಲಿಮಿನೇಷನ್ ನಡೆಯಬಹುದು ಎನ್ನಲಾಗುತ್ತಿದೆ.

ಫಿನಾಲೆಯಲ್ಲಿ ಇರೋದು ಐವರು ಮಾತ್ರ. ಆದರೆ, ಈಗ ಇರೋದು 10 ಮಂದಿ. ಹೀಗಾಗಿ, ಎಂಟು ಮಂದಿಯಲ್ಲಿ ಇಬ್ಬರು ಈ ವಾರ ಹೊರಹೋಗಬಹುದು. ಮತ್ತೋರ್ವ ಸ್ಪರ್ಧಿ ಮುಂದಿನವಾರದ ಮಧ್ಯದಲ್ಲಿ ಎಲಿಮಿನೇಟ್ ಆಗಲಿದ್ದಾರೆ. ಈ ಮೂಲಕ ಫಿನಾಲೆಗೆ ಐವರು ಸ್ಪರ್ಧಿಗಳು ತಲುಪಲಿದ್ದಾರೆ.

ಇದನ್ನೂ ಓದಿ
Image
ಬಿಗ್ ಬಾಸ್ ಮನೆಯಲ್ಲಿ ಮತ್ತೆ ಓಪನ್ ಆಯ್ತು ಆರ್ಯವರ್ಧನ್ ಗುರೂಜಿ ಹೋಟೆಲ್
Image
ಸುದೀಪ್​ಗಾಗಿ ಸಿನಿಮಾ ಕಥೆ ಮಾಡಿದ ಆರ್ಯವರ್ಧನ್​ ಗುರೂಜಿ; ಸ್ಟೋರಿ ಕೇಳಿ ತಲೆಕೆಡಿಸಿಕೊಂಡ ಕಿಚ್ಚ
Image
ಬಿಗ್ ಬಾಸ್ ಮನೆಯಿಂದ ಅನುಪಮಾ ಗೌಡ ಎಲಿಮಿನೇಟ್ ಆಗಲು ಕಾರಣವಾದ ಅಂಶಗಳಿವು
Image
Anupama Gowda: ಬಿಗ್​ ಬಾಸ್​ನಿಂದ ಎಲಿಮಿನೇಟ್​ ಆದ ಅನುಪಮಾ ಗೌಡ; ನಟಿ-ನಿರೂಪಕಿಯ ದೊಡ್ಮನೆ ಆಟ ಅಂತ್ಯ

ಇದನ್ನೂ ಓದಿ: ಫಿನಾಲೆಗೂ ಮೊದಲು ಬಿಗ್ ಬಾಸ್ ಮನೆಗೆ ಮಂಜು ಪಾವಗಡ ಎಂಟ್ರಿ; ರಾಕೇಶ್​ಗೆ ಟೆನ್ಷನ್

ಅರುಣ್ ಸಾಗರ್, ಅಮೂಲ್ಯ ಗೌಡ, ಆರ್ಯವರ್ಧನ್​ ಗುರೂಜಿ, ದೀಪಿಕಾ ದಾಸ್, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ ಹಾಗೂ ರೂಪೇಶ್ ಶೆಟ್ಟಿ ಮತ್ತು ದಿವ್ಯಾ ಉರುಡುಗ ಮನೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಈ ವಾರ ವೈಯಕ್ತಿಕ ಟಾಸ್ಕ್​ಗಳನ್ನು ನೀಡಿ ಅದರಲ್ಲಿ ಗೆದ್ದವರಿಗೆ ಅಂಕ ನೀಡಲಾಗುತ್ತಿದೆ. ಸದ್ಯ ಈ ರೇಸ್​ನಲ್ಲಿ ಆರ್ಯವರ್ಧನ್ ಗುರೂಜಿ ಅವರು ಮುಂದಿದ್ದಾರೆ. ಈ ಪೈಕಿ ಯಾರು ಕಪ್ ಗೆಲ್ಲಲಿದ್ದಾರೆ ಎಂಬ ಕುತೂಹಲ ಮೂಡಿದೆ. ಬಿಗ್ ಬಾಸ್ ಗೆದ್ದವರಿಗೆ 50 ಲಕ್ಷ ರೂಪಾಯಿ ಹಾಗೂ ಒಂದು ಕಪ್ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:19 pm, Fri, 23 December 22

ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ