‘ವಾಹಿನಿ ಹಾಗೂ ನಿರ್ದೇಶಕರ ಖ್ಯಾತಿ ಹೆಚ್ಚಿದ್ದು ಜೊತೆ ಜೊತೆಯಲಿ ಧಾರಾವಾಹಿಯಿಂದ’; ಅನಿರುದ್ಧ ಜತ್ಕರ್ ನೇರ ಮಾತು

ಅನಿರುದ್ಧ ನಿತ್ಯ ಕ್ಯಾರವಾನ್ ಕೇಳುತ್ತಾರೆ, ಇದರಿಂದ ಧಾರಾವಾಹಿ ತಂಡಕ್ಕೆ ಹೊರೆ ಆಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಈ ಕುರಿತು ಅನಿರುದ್ಧ ಅವರು ಮಾತನಾಡಿದ್ದಾರೆ.

‘ವಾಹಿನಿ ಹಾಗೂ ನಿರ್ದೇಶಕರ ಖ್ಯಾತಿ ಹೆಚ್ಚಿದ್ದು ಜೊತೆ ಜೊತೆಯಲಿ ಧಾರಾವಾಹಿಯಿಂದ’; ಅನಿರುದ್ಧ ಜತ್ಕರ್ ನೇರ ಮಾತು
ಅನಿರುದ್ಧ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 23, 2022 | 7:46 AM

‘ಜೊತೆ ಜೊತೆಯಲಿ’ (Jothe Jotheyali Serial) ಧಾರಾವಾಹಿಯಿಂದ ಅನಿರುದ್ಧ ಜತ್ಕರ್ (Aniruddha Jatkar) ಅವರು ಹೊರಬಂದು ಕೆಲವು ತಿಂಗಳು ಕಳೆದಿದೆ. ಈ ಘಟನೆ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆದರೆ, ಸಾರ್ವಜನಿಕ ವೇದಿಕೆಗಳಲ್ಲಿ ಈ ಬಗ್ಗೆ ಮಾತನಾಡಿದ್ದು ಕಡಿಮೆಯೇ. ಟಿವಿ9 ಕನ್ನಡಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ಕಹಿ ಘಟನೆಯನ್ನು ಮತ್ತೊಮ್ಮೆ ಮೆಲುಕು ಹಾಕಿದ್ದಾರೆ. ‘ಜೊತೆ ಜೊತೆಯಲಿ’ ವಿವಾದದ ಬಗ್ಗೆ ಅನಿರುದ್ಧ್​ ಮಾತನಾಡಿದ್ದಾರೆ.

ಅನಿರುದ್ಧ ನಿತ್ಯ ಕ್ಯಾರವಾನ್ ಕೇಳುತ್ತಾರೆ, ಇದರಿಂದ ಧಾರಾವಾಹಿ ತಂಡಕ್ಕೆ ಹೊರೆ ಆಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಈ ಕುರಿತು ಅನಿರುದ್ಧ ಅವರು ಮಾತನಾಡಿದ್ದಾರೆ. ‘ನಾನು ಕ್ಯಾರವಾನ್ ಕೇಳಿದ್ದು ಒಂದೇ ದಿನ. ಅದಕ್ಕೂ ಕಾರಣ ಇತ್ತು. ಔಟ್​ಡೋರ್​ ಶೂಟಿಂಗ್ ನಡೆಯುತ್ತಿತ್ತು. ಅಲ್ಲಿ ಇರೋಕೆ ಏನೂ ಇರಲಿಲ್ಲ. ಹೀಗಾಗಿ ನಾನು ಕ್ಯಾರವಾನ್​ ಕೇಳಿದ್ದೆ. ಕ್ಯಾರವಾನ್ ಬರುತ್ತಿದೆ ಎಂದು ನಮ್ಮನ್ನು ಎರಡು ಗಂಟೆ ಕಾಯಿಸಿದರು. ಆದರೆ, ಕ್ಯಾರವಾನ್ ಬರಲಿಲ್ಲ. ನಾನು ಅನೇಕ ಬಾರಿ ಕಾಡಿಗೆ ಹೋಗಿ ಮೂತ್ರ ಮಾಡಿ ಬಂದಿದ್ದೇನೆ. ಮಹಿಳಾ ಕಲಾವಿದರಿಗೆ ತೊಂದರೆ ಆಗುತ್ತಿತ್ತು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Aniruddh Jatkar: ಅನಿರುದ್ಧ್​ ಪರ ನಿಂತ ಮಹಿಳಾ ಅಭಿಮಾನಿಗಳು; ‘ಜೊತೆ ಜೊತೆಯಲಿ’ ನಿರ್ಮಾಪಕರ ವಿರುದ್ಧ ಫ್ಯಾನ್ಸ್​ ಗರಂ

ಇದನ್ನೂ ಓದಿ
Image
‘ಹೀಗೆ ಎಂದೆಂದಿಗೂ ಜೊತೆ ಜೊತೆಯಲಿ ಇರೋಣ’; ಫ್ಯಾನ್ಸ್​ಗೋಸ್ಕರ ಅನಿರುದ್ಧ್​ ಭಾವನಾತ್ಮಕ ಪೋಸ್ಟ್
Image
Aniruddh Jatkar: ಅನಿರುದ್ಧ್​ ಪರ ನಿಂತ ಮಹಿಳಾ ಅಭಿಮಾನಿಗಳು; ‘ಜೊತೆ ಜೊತೆಯಲಿ’ ನಿರ್ಮಾಪಕರ ವಿರುದ್ಧ ಫ್ಯಾನ್ಸ್​ ಗರಂ
Image
‘ಜೊತೆ ಜೊತೆಯಲಿ’ ತಂಡ ಮಾಡಿದ ಆರೋಪಗಳಿಗೆ ಸುದ್ದಿಗೋಷ್ಠಿಯಲ್ಲಿ ಅನಿರುದ್ಧ್​ ತಿರುಗೇಟು
Image
ಮನೆಯಲ್ಲಿದ್ದರೂ ಸುಮ್ಮನೆ ಕೂತಿಲ್ಲ ‘ಜೊತೆ ಜೊತೆಯಲಿ’ ಅನಿರುದ್ಧ್​​; ಸಂಕಷ್ಟದ ಸಮಯದಲ್ಲಿ ಅಳಿಲು ಸೇವೆ

‘ಬೆಂಜ್ ತರಿಸಿ, ಹೆಲಿಕಾಪ್ಟರ್ ತರಿಸಿ ಎಂದು ನಾನು ಹೇಳಿಯೇ ಇಲ್ಲ. ವಾಹಿನಿ ನಂಬರ್ ಒನ್ ಇತ್ತು. ಆದರೆ ಇಷ್ಟು ಹೆಸರು ಮಾಡಿತ್ತಾ? ಇದೆಲ್ಲಾ ಆಗಿದ್ದು ಜೊತೆ ಜೊತೆಯಲಿ ಧಾರಾವಾಹಿಯಿಂದ. ನಿರ್ದೇಶಕರು ಈ ಮೊದಲು ಅನೇಕ ಹಿಟ್ ನೀಡಿದ್ದರು ನಿಜ. ಆದರೆ, ಅವರ ಹೆಸರು ಅನೇಕರಿಗೆ ಗೊತ್ತೇ ಇರಲಿಲ್ಲ. ಜೊತೆ ಜೊತೆಯಲಿ ನಂತರ ಅವರ ಹೆಸರು ಅನೇಕರಿಗೆ ಗೊತ್ತಾಯಿತು. ಇದೆಲ್ಲ ನನ್ನಿಂದ ಆಯ್ತು ಎಂದು ನಾನು ಹೇಳಿಲ್ಲ. ಒಂದು ಧಾರಾವಾಹಿ ಹಿಟ್ ಆಗಬೇಕು ಎಂದರೆ ಶ್ರಮ ಹಾಗೂ ಲಕ್ ಎರಡೂ ಬೇಕು. ಶ್ರಮವನ್ನು ಎಲ್ಲರೂ ಹಾಕುತ್ತಾರೆ. ಆದರೆ, ಅದೃಷ್ಟ ಎಲ್ಲರ ಕೈ ಹಿಡಿಯುವುದಿಲ್ಲ’ ಎಂದಿದ್ದಾರೆ ಅನಿರುದ್ಧ.

‘ಆ ಧಾರಾವಾಹಿ ಎರಡೇ ತಿಂಗಳಲ್ಲಿ ಮುಗಿದು ಹೋಗುತ್ತಿತ್ತು. ಆದರೆ, ಹಾಗಾಗಲಿಲ್ಲ. ಆ ಕಹಿ ಘಟನೆ ಸದಾ ನೆನಪಿನಲ್ಲಿ ಇರುತ್ತದೆ. ತಂಡದವರನ್ನು ನಾನು ಈಗಲೂ ಪ್ರೀತಿಸುತ್ತೇನೆ. ಅವರು ಕಾಫಿಗೆ ಬರುತ್ತಾರೆ ಎಂದರೆ ನಾನು ಈಗಲೂ ಸ್ವಾಗತಿಸುತ್ತೇನೆ’ ಎಂದಿದ್ದಾರೆ ಅನಿರುದ್ಧ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:46 am, Fri, 23 December 22