Honganasu: ಲೈಬ್ರರಿ ಲಾಕ್ ಮಾಡಿ ಬೆದರಿಕೆ ಹಾಕಿದ ಸಾಕ್ಷಿ ನೋಡಿ ರಿಷಿಗೆ ಶಾಕ್

Honganasu Serial Update: ರಿಷಿ ಒಬ್ಬನೇ ಲೈಬ್ರರಿಯಲ್ಲಿ ಇದ್ದಿದ್ದು ನೋಡಿ ಸಾಕ್ಷಿ ಕೂಡ ಎಂಟ್ರಿ ಕೊಟ್ಟಳು. ಲೈಬ್ರರಿಗೆ ಬಂದವಳೇ ಬಾಗಿಲು ಕ್ಲೋಸ್ ಮಾಡಿ ಬೀಗ ಹಾಕಿದಳು.

Honganasu: ಲೈಬ್ರರಿ ಲಾಕ್ ಮಾಡಿ ಬೆದರಿಕೆ ಹಾಕಿದ ಸಾಕ್ಷಿ ನೋಡಿ ರಿಷಿಗೆ ಶಾಕ್
ಹೊಂಗನಸು ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 22, 2022 | 4:13 PM

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ರಿಷಿಯ ಪ್ರೀತಿ ರಿಜೆಕ್ಟ್ ಮಾಡಿ ತುಂಬಾ ನೋವು ಕೊಟ್ಟಿದ್ದೀನಿ ಎಂದು ಕೊರಗುತ್ತಿದ್ದಾಳೆ ವಸುಧರಾ. ರಿಷಿ ಮೇಲೆ ಪ್ರೀತಿ ಶುರುವಾಗಿದ್ದು ಹೇಗೆ ಹೇಳೋದು ಅಂತ ಒದ್ದಾಡುತ್ತಿದ್ದಾಳೆ. ಕನಸಲ್ಲಿ ರಿಷಿಗೆ ಪ್ರಪೋಸ್ ಮಾಡಿ ಕಪಾಳಕ್ಕೆ ಹೊಡೆದ ತಿಂದು ಬೆಚ್ಚಿಬಿದ್ದಳು. ಆದರೆ ರಿಷಿಗೆ ವಸುಧರಾ ಮೇಲಿನ ಕೋಪ ಇನ್ನೂ ಕಡಿಮೆಯಾಗಿಲ್ಲ. ವಸುಧರಾಳನ್ನು ಆದಷ್ಟ ದೂರ ಇಡುವ ಪ್ರಯತ್ನ ಮಾಡುತ್ತಿದ್ದಾನೆ ಆತ.

ಮೆಸೇಜ್, ಫೋನ್ ಮಾಡಿದರೂ ರಿಷಿ ಕಡೆಯಿಂದ ಯಾವುದೇ ರಿಪ್ಲೇ ಬರುತ್ತಿಲ್ಲ ಎಂದು ವಸುಧರಾ ಬೇಸರ ಮಾಡಿಕೊಂಡಿದ್ದಾಳೆ. ಎಷ್ಟೇ ಫೋನ್ ಮಾಡಿದರೂ ಕಟ್ ಮಾಡಿದ ರಿಷಿ. ಆತನ ಜೊತೆ ಮಾತನಾಡಬೇಕು ಎಂದು ಬೆಳಗ್ಗೆ ಖುಷಿಯಿಂದ ಕಾಲೇಜಿಗೆ ಬಂದಳು. ಆದರೆ ತನ್ನ ಕ್ಲಾಸ್‌ ಅನ್ನು ಜಗತಿಗೆ ತೆಗೆದುಕೊಳ್ಳಲು ಹೇಳಿ ಹೊರಟ ಹೋದ ರಿಷಿ. ಆಗ ಕಾಲೇಜಿಗೆ ಸಾಕ್ಷಿ ಎಂಟ್ರಿ ಕೊಟ್ಟಳು. ‘ಕಾಲೇಜಿನಲ್ಲಿ ಯಾವುದೋ ಪೋಸ್ಟ್ ಖಾಲಿ ಇತ್ತು ಅಂತ ಅಪ್ಲೇ ಮಾಡಿದ್ದೆ. ಸಂದರ್ಶನಕ್ಕೆ ಕರೆದಿದ್ದಾರೆ ಹಾಗಾಗಿ ಬಂದೆ’ ಎಂದು ರಿಷಿಗೆ ಹೇಳಿದಳು ಸಾಕ್ಷಿ. ‘ಇಲ್ಲಿ ಯಾವುದೇ ಪೋಸ್ಟ್ ಖಾಲಿ ಇಲ್ಲ, ಇದ್ದರೂ ನಿನಗೆ ಸಿಗಲ್ಲ’ ಎಂದು ಹೇಳಿ ರಿಷಿ ಹೊರಟು ಹೋದ.

ಇತ್ತ ವಸುಧರಾ ರಿಷಿ ನೆನಪಲ್ಲೇ ತರಗತಿಯಲ್ಲಿ ಕುಳಿತಿದ್ದಾಳೆ. ಇನ್ನೇನು ರಿಷಿ ಬರ್ತಾನೆ ಅಂತ ಕುಳಿತಿದ್ದ ವಸುಗೆ ಜಗತಿ ಬಂದಿದ್ದು ನೋಡಿ ಶಾಕ್ ಆದಳು. ರಿಷಿ ಯಾಕೆ ಬಂದಿಲ್ಲ ಎಂದು ಯೋಚಿಸಿದಳು. ಕ್ಲಾಸ್ ಮುಗಿದ ತಕ್ಷಣವೇ ಓಡಿ ಹೋಗಿ ‘ರಿಷಿ ಸರ್ ಯಾಕೆ  ಬಂದಿಲ್ಲ’ ಎಂದು ಜಗತಿ ಬಳಿ ವಿಚಾರಿಸಿದಳು. ಬೇಸರ ಹೊರ ಹಾಕಿದಳು. ಇನ್ಮುಂದೆ ತಾನೇ ಕ್ಲಾಸ್ ತೆಗೆದುಕೊಳ್ಳುವುದಾಗಿ ಹೇಳಿ ಹೋದಳು ಜಗತಿ.

ಇದನ್ನೂ ಓದಿ: Honganasu: ರಿಷಿ ನೋಡಲು ಬಿಡದೇ ವಸುಧರಾಳನ್ನು ಮನೆಯಿಂದ ಹೊರ ನೂಕಿದ ದೇವಯಾನಿ

ರಿಷಿ ಮತ್ತು ವಸುಧರಾ ಬಗ್ಗೆ ಗೌತಮ್ ಬಳಿ ವಿಚಾರಿಸಿದಳು ದೇವಯಾನಿ. ಆದರೆ ಏನನ್ನೂ ಹೇಳದೆ ಸೈಲೆಂಟ್ ಆಗಿ ನುಣುಚಿಕೊಂಡ ಗೌತಮ್. ದೊಡ್ಡಮ್ಮ ಬೇಕು ಅಂತಾನೇ ಕೇಳಿದ್ದು ಎಂದು ಗೌತಮ್‌ಗೆ ಅರ್ಥವಾಗಿ ಅಲ್ಲಿಂದ ನಿಧಾನಕ್ಕೆ ಎದ್ದು ಹೊರಟ. ಕಾಲೇಜಿನ ಲೈಬ್ರರಿಗೆ ಬಂದ ರಿಷಿ ಮನೆಗೆ ಹೋಗುವುದು ತಡವಾಗುತ್ತೆ ಎಂದು ಅಲ್ಲಿ ಕೆಲಸ ಮಾಡುತ್ತಿರುವವರನ್ನಲ್ಲ ಮನೆಗೆ ಕಳುಹಿಸಿದ. ರಿಷಿ ಒಬ್ಬನೇ ಲೈಬ್ರರಿಯಲ್ಲಿ ಇದ್ದಿದ್ದು ನೋಡಿ ಸಾಕ್ಷಿ ಕೂಡ ಎಂಟ್ರಿ ಕೊಟ್ಟಳು. ಲೈಬ್ರರಿಗೆ ಬಂದವಳೇ ಬಾಗಿಲು ಕ್ಲೋಸ್ ಮಾಡಿ ಬೀಗ ಹಾಕಿದಳು. ಸಾಕ್ಷಿ ವರ್ತನೆ ನೋಡಿ ಶಾಕ್ ಆದ ರಿಷಿ.

ಇದನ್ನೂ ಓದಿ: Honganasu: ಹೊಂಗನಸು; ಬೆಂಕಿಯಲ್ಲಿ ಸಿಲುಕಿದ್ದ ರಿಷಿಯನ್ನು ಕಾಪಾಡಿದ ವಸುಧರಾ

ಯಾಕೆ ಹೀಗೆ ಮಾಡ್ತಿದ್ದಿಯಾ ಎಂದು ಸಾಕ್ಷಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ರಿಷಿ. ಆದರೆ ಬ್ಲಾಕ್ ಮೇಲ್ ಮಾಡಿದಳು ಸಾಕ್ಷಿ. ‘ನಾವಿಬ್ಬರೇ ಇರೋದು ಇಲ್ಲಿ, ನಿನ್ನ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡ್ತೀನಿ, ಜೋರಾಗಿ ಕೂಗಿಕೊಳ್ತೀನಿ’ ಎಂದು ರಿಷಿಗೆ ಬೆದರಿಕೆ ಹಾಕಿದಳು ಸಾಕ್ಷಿ. ಆಕೆಯ ವರ್ತನೆ ನೋಡಿ ‘ಅಸಹ್ಯ ಆಗ್ತಿದೆ, ಇಷ್ಟು ಚೀಪ್ ಆಗಿ ನಡೆದುಕೊಳ್ತೀಯಾ ಅಂತ ಗೊತ್ತಿರ್ಲಿಲ್ಲ’ ಎಂದು ರಿಷಿ ಕೂಗಾಡಿದ. ಇಬ್ಬರೂ ಲೈಬ್ರರಿಯಲ್ಲಿ ಲಾಕ್ ಆದರು. ಸಾಕ್ಷಿ ತನ್ನ ಮಾತಿನ ಹಾಗೆ ರಿಷಿ ಘನತೆಗೆ ಮಸಿ ಬಳಿಯುವ ಕೆಲಸ ಮಾಡ್ತಾಳಾ? ಅಥವಾ ಸಾಕ್ಷಿಯನ್ನು ಮಾದುವೆಯಾಗುವುದಾಗಿ ಒಪ್ಪಿಕೊಳ್ಳುತ್ತಾನಾ? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ