Jothe Jotheyali Serial: ವರ್ಧನ್ ಸಂಸ್ಥೆಯ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡ ಝೇಂಡೆ
ಝೇಂಡೆ ವರ್ಧನ್ ಸಂಸ್ಥೆಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳಬೇಕು ಎಂದು ಈ ಮೊದಲಿನಿಂದಲೂ ಪ್ಲ್ಯಾನ್ ಮಾಡುತ್ತಿದ್ದಾನೆ. ಆದರೆ, ಅದು ಸಾಧ್ಯವಾಗಿರಲಿಲ್ಲ.
ಧಾರಾವಾಹಿ: ಜೊತೆ ಜೊತೆಯಲಿ
ವಾಹಿನಿ: ಜೀ ಕನ್ನಡ
ನಿರ್ದೇಶನ: ಆರೂರು ಜಗದೀಶ
ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು
ಸಮಯ: ರಾತ್ರಿ: 9.30
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ನಾನೇ ಆರ್ಯವರ್ಧನ್ ಎಂದು ಸಂಜು ಹೇಳಿಕೊಂಡು ತಿರುಗಾಡುತ್ತಿದ್ದ. ಹೀಗಿರುವಾಗಲೇ ಆರ್ಯವರ್ಧನ್ ಅವರ ಮರಣ ಪತ್ರ ರಾಜ ನಂದಿನಿ ವಿಲಾಸದವರ ಕೈ ಸೇರಿದೆ. ಆರ್ಯವರ್ಧನ್ ಬದುಕಿದ್ದಾನೆ ಎನ್ನುವ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಬಿದ್ದಿದೆ. ಇದೆಲ್ಲ ಝೇಂಡೆಯ ಕೈವಾಡ ಎಂಬುದು ಯಾರಿಗೂ ತಿಳಿದಿಲ್ಲ. ಮತ್ತೊಂದು ಕಡೆ ಸಂಜುನ ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಝೇಂಡೆ ಪ್ಲ್ಯಾನ್ ಮಾಡುತ್ತಿದ್ದಾನೆ. ಆತ ಇದರಲ್ಲಿ ಯಶಸ್ಸು ಕಾಣುತ್ತಾನಾ ಅನ್ನೋದು ಸದ್ಯದ ಕುತೂಹಲ.
ಝೇಂಡೆಗೆ ಯಶಸ್ಸು
ಝೇಂಡೆ ವರ್ಧನ್ ಸಂಸ್ಥೆಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳಬೇಕು ಎಂದು ಈ ಮೊದಲಿನಿಂದಲೂ ಪ್ಲ್ಯಾನ್ ಮಾಡುತ್ತಿದ್ದಾನೆ. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಅದಕ್ಕೆ ಯಶಸ್ಸು ಸಿಕ್ಕಿದೆ. ಮೋಸದಿಂದ ಆತ ವರ್ಧನ್ ಕಂಪನಿಯ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾನೆ.
ಮೀರಾ ಬಳಿ ವರ್ಧನ್ ಸಂಸ್ಥೆಯ ಸೀಲ್ಗಳನ್ನು ತರಿಸಿಕೊಂಡಿದ್ದ. ಖಾಲಿ ಬಾಂಡ್ ಪೇಪರ್ ಮೇಲೆ ಸೀಲ್ ಹಾಕಿಸಿಕೊಂಡಿದ್ದಾನೆ ಝೇಂಡೆ. ನಂತರ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳಲು ಪೇಪರ್ ರೆಡಿ ಮಾಡಿದ್ದ. ಶಾರದಾ ದೇವಿ ಬಳಿ ತೆರಳಿ ಆಸ್ತಿ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾನೆ. ಇದರಿಂದ ಆತ ಗೆಲುವಿನ ನಗೆ ಬೀರಿದ್ದಾನೆ.
‘ನಾನು ಆರ್ಯನಿಗೆ ತುತ್ತು ಅನ್ನ ಹಾಕಿದ್ದೆ. ಆ ಋಣ ಈಗ ತೀರುತ್ತಿದೆ. ಹೇಗಾದರೂ ಮಾಡಿ ಈ ಆಸ್ತಿಯನ್ನು ನಾನು ಪಡೆದುಕೊಳ್ಳಬೇಕು ಎಂದುಕೊಳ್ಳುತ್ತಲೇ ಇದ್ದೆ. ಅದು ಈಗ ಯಶ್ಸು ಕಂಡಿದೆ. ಜಗತ್ತಿನಲ್ಲಿ ನನ್ನಷ್ಟು ಶ್ರೀಮಂತ ಮತ್ತೊಬ್ಬರು ಇರಲಿಕ್ಕಿಲ್ಲ’ ಎಂದು ಖುಷಿಯಿಂದ ಕುಣಿದಿದ್ದಾನೆ.
ಸಂಜುನ ಬಲೆಗೆ ಬೀಳಿಸಿಕೊಂಡ ಝೇಂಡೆ
ಆರ್ಯವರ್ಧನ್ ತಾನೇ ಎಂಬುದು ಸಂಜು ಗೊತ್ತಾಗಿದೆ. ಆದರೆ, ಇದನ್ನು ನಂಬಲು ಯಾರೂ ಸಿದ್ಧರಿಲ್ಲ. ಹೀಗಿರುವಾಗಲೇ ಆಸ್ಪತ್ರೆಯಿಂದ ಆರ್ಯವರ್ಧನ್ನ ಮರಣ ಪ್ರಮಾಣಪತ್ರ ಅನು ಕೈ ಸೇರಿದೆ. ಆದರೆ, ಇದು ನಕಲಿ. ಇದರ ಹಿಂದೆಯೂ ಇದ್ದಿದ್ದು ಝೇಂಡೆಯೇ. ಈ ಎಲ್ಲಾ ಕಾರಣದಿಂದ ಸಂಜುನೇ ಆರ್ಯವರ್ಧನ್ ಎಂಬ ಸತ್ಯ ಹಾಗೆಯೇ ಉಳಿದುಕೊಂಡಿದೆ. ಇದರ ಲಾಭವನ್ನು ಝೇಂಡೆ ಪಡೆಯುತ್ತಿದ್ದಾನೆ.
ಮನೆಗೆ ಬಂದ ಝೇಂಡೆ ಸಂಜು ಬಳಿ ತೆರಳಿದ್ದಾನೆ. ‘ಆರ್ಯ ತಗೋ ತಿಂಡಿ ತಿನ್ನು’ ಎಂದು ಕೋರಿದ್ದಾನೆ. ಇದನ್ನು ಕೇಳಿ ಸಂಜುಗೆ ಶಾಕ್ ಆಗಿದೆ. ‘ನೀವು ನನ್ನನ್ನು ಆರ್ಯ ಎಂದು ಒಪ್ಪಿಕೊಳ್ತೀರಾ’ ಎಂದು ಸಂಜು ಪ್ರಶ್ನೆ ಮಾಡಿದ್ದಾನೆ. ‘ನೀನು ನನ್ನ ಆರ್ಯ ಎಂದು ಯಾವಾಗಲೇ ಒಪ್ಪಿಕೊಂಡಾಗಿದೆ. ಈ ಮನೆಯವರು ನಿನ್ನನ್ನು ನಂಬದೆ ಇರಬಹುದು. ಆದರೆ, ನಾನು ನಂಬ್ತೀನಿ. ನೀನು ನನ್ನ ಆರ್ಯ ಎಂಬುದನ್ನು ನಾನು ನಂಬುತ್ತೇನೆ. ನಿನ್ನ ಜತೆ ಸದಾ ನಾನು ಇರ್ತೀನಿ’ ಎಂದಿದ್ದಾನೆ ಝೇಂಡೆ.
‘ಮೊನ್ನೆ ಟೀ ಕುಡಿದ ಸ್ಥಳಕ್ಕೆ ಬಾ. ಅಲ್ಲಿ ನಾವಿಬ್ಬರೂ ಕುಳಿತು ಮಾತನಾಡೋಣ. ಹಳೆಯ ನೆನಪನ್ನು ನಾನು ಮರಳಿಸುತ್ತೇನೆ. ಚಿಕ್ಕ ವಯಸ್ಸಿನಿಂದ ಇಲ್ಲಿಯವರೆಗೆ ಏನಾಯಿತು ಎಂಬುದನ್ನು ನಾನು ಹೇಳ್ತೀನಿ. ನಿನಗೆ ನೆನಪು ಬಂದರೆ ಎಲ್ಲರೂ ನಿನ್ನನ್ನು ನಂಬಲೇ ಬೇಕು. ಈ ಬಗ್ಗೆ ಮನೆಯವರ ಜತೆ ಮಾತನಾಡಬೇಡ. ನಿನಗೆ ಹುಚ್ಚು ಎಂದುಕೊಳ್ಳುತ್ತಾರೆ. ನಾನು ನಿನ್ನನ್ನು ವಹಿಸಿಕೊಂಡು ಮಾತನಾಡಿದರೆ ನನಗೆ ಕೂಡ ಹುಚ್ಚು ಎಂದುಕೊಳ್ಳುತ್ತಾರೆ’ ಎಂದಿದ್ದಾನೆ ಝೇಂಡೆ. ಈ ಮಾತನ್ನು ಸಂಜು ನಂಬಿದ್ದಾನೆ. ಈ ಮೂಲಕ ಸಂಜುನ ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದಾನೆ ಜೇಂಡೆ.
ಶ್ರೀಲಕ್ಷ್ಮಿ ಎಚ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:25 am, Thu, 22 December 22