Kannadathi Serial: ಭುವಿಗೆ ಸಿಕ್ತು ಕೊಲೆಗಾರನ ಮೊಬೈಲ್; ಶೀಘ್ರವೇ ಬಯಲಾಗಲಿದೆ ಸಂಚು
ಭುವಿಯ ಕಿರುಚಾಟ ನೋಡಿ ಹರ್ಷ ಓಡೋಡಿ ಬಂದಿದ್ದಾನೆ. ಏನಾಯಿತು ಎಂಬುದು ಆತನಿಗೆ ಮೊದಲು ತಿಳಿಯಲೇ ಇಲ್ಲ. ಆ ಬಳಿಕ ಭುವಿ ಮೇಲೆ ಹಲ್ಲೆ ಮಾಡಲು ಬಂದಿರುವ ವಿಚಾರ ಗೊತ್ತಾಗಿದೆ.
ಧಾರಾವಾಹಿ: ಕನ್ನಡತಿ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 7.30
ನಿರ್ದೇಶನ: ಯಶ್ವಂತ್ ಪಾಂಡು
ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಹರ್ಷನಿಗಾಗಿ ಭುವಿ ಕಾದು ನಿಂತಿದ್ದಳು. ಆ ಸಮಯಕ್ಕೆ ಸರಿಯಾಗಿ ಆಗಂತುಕನೋರ್ವ ಭುವಿಯನ್ನು ಹಿಂಬಾಲಿಸಿಕೊಂಡು ಬಂದಿದ್ದ. ಆಕೆಯನ್ನು ಕೊಲ್ಲಬೇಕು ಎಂಬುದು ಆತನ ಉದ್ದೇಶ ಆಗಿತ್ತು. ಈ ವಿಚಾರದ ಬಗ್ಗೆ ಯಾರಿಗೂ ಅನುಮಾನ ಬಂದಿಲ್ಲ. ಕೊಲ್ಲಲು ಸುಪಾರಿ ಕೊಟ್ಟಿದ್ದು ಯಾರು ಎಂಬುದನ್ನು ಈ ಮೊದಲೆಲ್ಲ ತೋರಿಸಲಾಗಿತ್ತು. ಆದರೆ, ಈ ಬಾರಿ ಆ ರೀತಿ ಆಗಿಲ್ಲ. ಈ ಸಂಚಿನ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ಗುಟ್ಟಾಗಿಯೇ ಇದೆ. ಮತ್ತೊಂದು ಕಡೆ ವರುಧಿನಿಗೆ ಟೆನ್ಷನ್ ಶುರುವಾಗಿದೆ. ಹರ್ಷ ಹಾಗೂ ಭುವಿಗೆ ಡಿವೋರ್ಸ್ ಕೊಡಿಸಬೇಕು ಎನ್ನುವ ಪ್ಲ್ಯಾನ್ ವರ್ಕೌಟ್ ಆಗುತ್ತಿಲ್ಲ.
ಭುವಿಯ ಮೇಲೆ ಅಟ್ಯಾಕ್
ಭುವಿ ಮೇಲೆ ಆಗಂತುಕ ಅಟ್ಯಾಕ್ ಮಾಡಿದ್ದಾನೆ. ಹರ್ಷ ಹಾಗೂ ಭುವಿ ಇಬ್ಬರೂ ಸೇರಿ ಮಾಲಾ ಸಂಸ್ಥೆಯಲ್ಲಿ ಕೆಲಸ ಮಾಡುವ ಮಹಿಳೆಯ ಮನೆಗೆ ತೆರಳಿದ್ದರು. ಅಲ್ಲಿ ಸ್ವಲ್ಪ ಹೊತ್ತು ಸಮಯ ಕಳೆದು ಬಂದಿದ್ದಾರೆ. ಮರಳಿ ಬರುವಾಗ ಹರ್ಷ ಕಾರು ತರುತ್ತೇನೆ ಎಂದು ತೆರಳಿದ್ದಾನೆ. ಆ ಸಮಯದಲ್ಲಿ ಭುವಿ ಒಬ್ಬಳೇ ನಿಂತಿದ್ದಳು. ಭುವಿ ಮೇಲೆ ಆ ವ್ಯಕ್ತಿ ಅಟ್ಯಾಕ್ ಮಾಡೋಕೆ ಬಂದಿದ್ದಾನೆ. ಭುವಿ ಕತ್ತಿಗೆ ಚಾಕು ಹಿಡಿದು ನಿಂತಿದ್ದಾನೆ. ಈ ಘಟನೆಯಿಂದ ಭುವಿಗೆ ಆತಂಕ ಆಗಿದೆ.
ಭುವಿಯ ಕಿರುಚಾಟ ನೋಡಿ ಹರ್ಷ ಓಡೋಡಿ ಬಂದಿದ್ದಾನೆ. ಏನಾಯಿತು ಎಂಬುದು ಆತನಿಗೆ ಮೊದಲು ತಿಳಿಯಲೇ ಇಲ್ಲ. ಆ ಬಳಿಕ ಭುವಿ ಮೇಲೆ ಹಲ್ಲೆ ಮಾಡಲು ಬಂದಿರುವ ವಿಚಾರ ಗೊತ್ತಾಗಿದೆ. ಇದರ ಹಿಂದೆ ಯಾರದ್ದೋ ಮಾಸ್ಟರ್ ಮೈಂಡ್ ಇದೆ ಎಂದು ಹರ್ಷನಿಗೆ ಅನಿಸಿದೆ. ಆದರೆ, ಭುವಿ ಇದನ್ನು ಒಪ್ಪಿಲ್ಲ. ಆತ ಕದಿಯಲು ಬಂದವನು ಎಂದು ವಾದ ಮುಂದಿಟ್ಟಿದ್ದಾಳೆ.
ಭುವಿಗೆ ಸಿಕ್ತು ಮೊಬೈಲ್
ಕೊಲೆ ಮಾಡಲು ಪ್ರಯತ್ನಿಸಿದ ವ್ಯಕ್ತಿಯ ಮೊಬೈಲ್ ಬಿದ್ದು ಹೋಗಿದೆ. ಇದು ಭುವಿಗೆ ಕಂಡಿದೆ. ಆ ಮೊಬೈಲ್ನ ಭುವಿ ಎತ್ತಿಟ್ಟುಕೊಂಡಿದ್ದಾಳೆ. ಯಾರಿಗೂ ಕಾಣದಂತೆ ಅದನ್ನು ಬ್ಯಾಗ್ಗೆ ಹಾಕಿಕೊಂಡಿದ್ದಾಳೆ. ಇದರಿಂದ ಕೊಲೆ ಮಾಡಲು ಸುಪಾರಿ ಕೊಟ್ಟಿದ್ದು ಯಾರು ಎನ್ನುವ ವಿಚಾರ ಗೊತ್ತಾಗಬಹುದು.
ಇದನ್ನೂ ಓದಿ: ಭುವಿಯ ಕೊಲ್ಲಲು ಬಂದ ಆಗಂತುಕ; ಈ ಬಾರಿ ಸುಪಾರಿ ಕೊಟ್ಟಿದ್ಯಾರು ಅನ್ನೋದೇ ಪ್ರಶ್ನೆ
ಕೊಲೆ ಮಾಡಲು ಸುಪಾರಿ ಕೊಟ್ಟ ವ್ಯಕ್ತಿ ಮತ್ತೆ ಅದೇ ಮೊಬೈಲ್ಗೆ ಕರೆ ಮಾಡಬಹುದು. ಆಗ ಅವರು ಯಾರು ಎನ್ನುವ ಅಸಲಿ ವಿಚಾರ ಗೊತ್ತಾಗಲಿದೆ. ಇದು ಸಾನಿಯಾ ಅಥವಾ ವರುಧಿನಿ ಕೆಲಸ ಇರಬಹುದು ಎಂಬುದು ಅನೇಕರ ಊಹೆ.
ಟ್ರ್ಯಾಪ್ನಲ್ಲಿ ವರುಧಿನಿ
ವರುಧಿನಿಯನ್ನು ಹರ್ಷ ಟ್ರ್ಯಾಪ್ ಮಾಡುತ್ತಿದ್ದಾನೆ. ಹರ್ಷ ಹಾಗೂ ಭುವಿಗೆ ಡಿವೋರ್ಸ್ ನೀಡಬೇಕು ಎಂದು ವರುಧಿನಿ ಪ್ಲ್ಯಾನ್ ಮಾಡಿದ್ದಾಳೆ. ಈ ಸಂಚಿನ ಬಗ್ಗೆ ಹರ್ಷನಿಗೆ ಮೊದಲು ತಿಳಿದಿರಲಿಲ್ಲ. ವರು ಆಡಿದ ಮಾತುಗಳನ್ನು ಹರ್ಷ ನಂಬುತ್ತಲೇ ಇದ್ದ. ಆದರೆ, ವರುಧಿನಿಯ ಅಸಲಿಮುಖ ಹರ್ಷನಿಗೆ ತಿಳಿದಿದೆ. ಈ ಕಾರಣಕ್ಕೆ ಆಕೆಯನ್ನು ಹಳ್ಳಕ್ಕೆ ಕೆಡಗಲು ಆತ ಸಂಚು ರೂಪಿಸಿದ್ದ. ಈ ಸಂಚಿನಲ್ಲಿ ವರುಧಿನಿ ನಿಧಾನವಾಗಿ ಸಿಲುಕಿಕೊಳ್ಳುತ್ತಿದ್ದಾಳೆ.
ಪ್ರತಿ ಹಂತದಲ್ಲೂ ವರುಧಿನಿಯ ಸಹಾಯ ಕೇಳುತ್ತಿದ್ದಾನೆ ಹರ್ಷ. ಭುವಿಯ ಜತೆಗೆ ಇರುವಾಗಲೂ ಹಾಗೆಯೇ ಮಾಡಿದ್ದಾನೆ. ‘ನಾನು ಭುವಿ ಜತೆ ಡಿವೋರ್ಸ್ ವಿಚಾರ ಮಾತನಾಡಿಲ್ಲ. ಧೈರ್ಯ ಸಾಕಾಗುತ್ತಿಲ್ಲ. ಆಕೆ ಬೇಸರದಲ್ಲಿದ್ದಾಳೆ. ಈ ವಿಚಾರ ಮಾತನಾಡಲು ನಿಮ್ಮ ಸಹಾಯ ಬೇಕು’ ಎಂದು ಹರ್ಷ ವರುಗೆ ವಾಯ್ಸ್ ನೋಟ್ ಕಳುಹಿಸಿದ್ದಾನೆ. ಇದೇ ನಿಜ ಎಂದು ವರು ಭಾವಿಸಿದ್ದಾಳೆ. ಅತ್ತ ಹರ್ಷ ಹಾಗೂ ಭುವಿ ಬಾಂಡಿಂಗ್ ಬೆಳೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ