Kannadathi Serial: ಭುವಿಯ ಕೊಲ್ಲಲು ಬಂದ ಆಗಂತುಕ; ಈ ಬಾರಿ ಸುಪಾರಿ ಕೊಟ್ಟಿದ್ಯಾರು ಅನ್ನೋದೇ ಪ್ರಶ್ನೆ
ಭುವಿ ಕಡೆಯಿಂದ ಡಿವೋರ್ಸ್ ಪತ್ರ ಹರ್ಷನಿಗೆ ತಲುಪಿದೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಈ ವಿಚಾರದಲ್ಲಿ ವರುಧಿನಿಗೆ ಟೆನ್ಷನ್ ಶುರುವಾಗಿದೆ.
ಧಾರಾವಾಹಿ: ಕನ್ನಡತಿ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 7.30
ನಿರ್ದೇಶನ: ಯಶ್ವಂತ್ ಪಾಂಡು
ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಕಚೇರಿ ವಿಚಾರಕ್ಕೆ ಸಂಬಂಧಿಸಿದಂತೆ ಹರ್ಷ ಹಾಗೂ ಭುವಿ ಮಧ್ಯೆ ವೈಮನಸ್ಸು ಮೂಡುತ್ತಿದೆ. ಆದರೆ, ಹರ್ಷ ಎಂದಿಗೂ ಭುವಿಯನ್ನು ಬಿಟ್ಟುಕೊಟ್ಟಿಲ್ಲ. ಇದನ್ನು ನೋಡಿ ವರುಧಿನಿಗೆ ಶಾಕ್ ಆಗಿದೆ. ಭುವಿ ಕಡೆಯಿಂದ ಹರ್ಷನಿಗೆ ವಿಚ್ಛೇದನದ ನೋಟಿಸ್ ಬಂದಿದೆ. ಇದನ್ನು ಕಳುಹಿಸಿರುವುದು ವರುಧಿನಿ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಹರ್ಷ ಹಾಗೂ ಹಾಗೂ ಭುವಿ ಜೊತೆಯಾಗಿದ್ದಾರೆ. ಈ ವಿಚಾರದಲ್ಲಿ ವರುಧಿನಿಗೆ ಅನುಮಾನ ಶುರುವಾಗಿದೆ.
ಭುವಿಯನ್ನು ಕೊಲ್ಲಲು ಬಂದ ಆಘಂತುಕ
ಭುವಿಯನ್ನು ಕೊಲ್ಲಲು ಈ ಮೊದಲು ಅನೇಕ ಪ್ರಯತ್ನಗಳು ನಡೆದವು. ಆರಂಭದಲ್ಲಿ ಆಕೆಯನ್ನು ಕೊಲ್ಲಲು ಸಾನಿಯಾ ಪ್ಲ್ಯಾನ್ ಮಾಡಿದ್ದಳು. ಇದಕ್ಕೆ ವರುಧಿನಿ ಕೂಡ ಸಾತ್ ನೀಡಿದ್ದಳು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಮತ್ತೆ ಭುವಿಯನ್ನು ಕೊಲ್ಲಲು ಯಾರೋ ಪ್ರಯತ್ನಿಸಿದಂತಿದೆ. ಭುವಿ ಕಚೇರಿ ಮುಗಿಸಿ ಹರ್ಷನಿಗಾಗಿ ಕಾಯುತ್ತಿದ್ದಳು. ಆಗ ಬೈಕ್ನಲ್ಲಿ ವ್ಯಕ್ತಿಯೋರ್ವ ಆಗಮಿಸಿದ್ದಾನೆ. ಆತ ಮುಖವನ್ನು ಮುಚ್ಚಿಕೊಂಡಿದ್ದ. ಇನ್ನೇನು ಚಾಕು ತೆಗೆದು ಭುವಿಯ ಮೇಲೆ ಅಟ್ಯಾಕ್ ಮಾಡಬೇಕು ಎನ್ನುವಾಗಲೇ ಹರ್ಷ ಬಂದಿದ್ದಾನೆ. ಈ ಕಾರಣಕ್ಕೆ ಆತ ಹಿಂದೆ ಸರಿದಿದ್ದಾನೆ. ಅಲ್ಲಿಗೆ ಸಮಸ್ಯೆ ಮುಗಿದಿಲ್ಲ.
ಹರ್ಷನನ್ನು ಭುವಿ ಒಂದು ಕಡೆ ಕರೆದುಕೊಂಡು ಹೋಗಿದ್ದಾಳೆ. ಅದು ಮಾಲಾ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಮನೆಗೆ. ಅಲ್ಲಿಗೂ ಈ ಆಘಂತುಕ ಹಿಂಬಾಲಿಸಿಕೊಂಡು ಬಂದಿದ್ದಾನೆ. ಭುವಿ ಮೇಲೆ ಅಟ್ಯಾಕ್ ಮಾಡಲು ಆತ ಕಾಯುತ್ತಿದ್ದಾನೆ.
ಪ್ರತಿ ಬಾರಿ ಸುಫಾರಿ ಕೊಟ್ಟಿದ್ದು ಯಾರು ಎಂಬುದನ್ನು ತೋರಿಸಲಾಗುತ್ತಿತ್ತು. ಆದರೆ, ಈ ಬಾರಿ ಆ ರೀತಿ ಆಗಿಲ್ಲ. ಭುವಿಯನ್ನು ಕೊಲ್ಲಲು ಪ್ರಯತ್ನಿಸುತ್ತಿರುವುದು ಯಾರು ಎಂಬುದು ಗುಟ್ಟಾಗಿಯೇ ಇದೆ. ಈ ಮೊದಲು ಭುವಿಯನ್ನು ಕೊಲ್ಲಲು ಹಲವು ಪ್ಲ್ಯಾನ್ಗಳು ನಡೆದಿದ್ದವು. ಇದೆಲ್ಲ ಮಾಡಿಸಿದ್ದು ಸಾನಿಯಾ. ಈ ಬಾರಿಯೂ ಅವಳದ್ದೇ ಕೈವಾಡ ಇರಬಹುದು ಎಂದು ವೀಕ್ಷಕರು ಊಹಿಸುತ್ತಿದ್ದಾರೆ.
ಇದನ್ನೂ ಓದಿ: ‘ಸ್ವೈಪ್ ರೈಟ್’ ಎಂದ ನಟಿ ರಂಜನಿ ರಾಘವನ್; ಹೊಸ ಕಾದಂಬರಿ ಹೆಸರು ರಿವೀಲ್ ಮಾಡಿದ ‘ಕನ್ನಡತಿ’ ನಟಿ
‘ನಾನು ಏನೂ ಮಾಡುವುದಿಲ್ಲ. ಸೈಲೆಂಟ್ ಆಗಿರ್ತೀನಿ’ ಎಂದು ಸಾನಿಯಾ ಇತ್ತೀಚೆಗೆ ಹೇಳಿದ್ದಳು. ಆದರೆ, ಇದನ್ನು ಯಾರೂ ನಂಬಲಿಲ್ಲ. ಹೀಗಾಗಿ, ಭುವಿಯನ್ನು ಮರ್ಡರ್ ಮಾಡಲು ಆಕೆಯೇ ಪ್ಲ್ಯಾನ್ ಮಾಡಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಹರ್ಷನ ಪಡೆಯಲು ವರುಧಿನಿ ಏನು ಮಾಡೋಕೂ ಸಿದ್ಧಳಿದ್ದಾಳೆ. ಅವಳ ಕೈವಾಡ ಕೂಡ ಇರಬಹುದು ಎಂಬುದು ಕೆಲವರ ಊಹೆ.
ವರುಧಿನಿಗೆ ಟೆನ್ಷನ್
ಭುವಿ ಕಡೆಯಿಂದ ಡಿವೋರ್ಸ್ ಪತ್ರ ಹರ್ಷನಿಗೆ ತಲುಪಿದೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಈ ವಿಚಾರದಲ್ಲಿ ವರುಧಿನಿಗೆ ಟೆನ್ಷನ್ ಶುರುವಾಗಿದೆ. ಆಕೆಗೆ ಏನು ಮಾಡಬೇಕು ಎನ್ನುವುದೇ ತಿಳಿಯುತ್ತಿಲ್ಲ. ತನ್ನ ಆತಂಕವನ್ನು ಆಕೆ ಸಾನಿಯಾ ಎದುರು ತೋಡಿಕೊಂಡಿದ್ದಾಳೆ.
‘ಹರ್ಷನಿಗೆ ಡಿವೋರ್ಸ್ ನೋಟಿಸ್ ಹೋಗಿದೆ ನಿಜ. ಆದರೆ, ಈವರೆಗೆ ಯಾವುದೇ ಪ್ರಯೋಜನ ಆಗಿಲ್ಲ. ಈ ಪ್ಲ್ಯಾನ್ ವರ್ಕೌಟ್ ಆಗುತ್ತದೆಯೋ ಅಥವಾ ಇಲ್ಲವೋ ಅನ್ನುವುದೇ ಅನುಮಾನ’ ಎಂದು ವರುಧಿನಿ ಹೇಳಿದ್ದಾಳೆ. ಮತ್ತೊಂದು ಕಡೆ ಕೆಟ್ಟ ಕೆಲಸ ಮಾಡಲು ವರುಧಿನಿಗೆ ಯಾವುದೇ ಅವಕಾಶ ನೀಡಬಾರದು ಎನ್ನುವ ನಿರ್ಧಾರಕ್ಕೆ ಹರ್ಷ ಬಂದಿದ್ದಾನೆ. ಇದನ್ನು ಭುವಿ ತಂಗಿ ಬಿಂದು ಬಳಿ ಹೇಳಿದ್ದಾನೆ. ‘ಭುವಿ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ’ ಎಂದು ಹರ್ಷ ಹೇಳುತ್ತಿದ್ದಂತೆ ಬಿಂದುಗೆ ಶಾಕ್ ಆಗಿದೆ. ಆ ಬಳಿಕ ಇದು ವರುಧಿನಿಯ ಪ್ಲ್ಯಾನ್ ಎಂಬುದನ್ನು ಬಿಡಿಸಿ ಹೇಳಿದ್ದಾನೆ ಹರ್ಷ. ಇದಕ್ಕೆ ಬಿಂದು ಹಾಗೂ ಸುಚಿ ಇಬ್ಬರೂ ಸಿಟ್ಟಾಗಿದ್ದಾರೆ. ವರುಧಿನಿಗೆ ಹರ್ಷ ಯಾವ ರೀತಿಯ ಪಾಠ ಕಲಿಸುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ