Updated on: Dec 02, 2022 | 12:03 PM
ನಟಿ ರಂಜನಿ ರಾಘವನ್ ಅವರು ‘ಕನ್ನಡತಿ’ ಧಾರಾವಾಹಿ ಮೂಲಕ ಫೇಮಸ್ ಆಗಿದ್ದಾರೆ. ಅವರಿಗೆ ಹಿರಿತೆರೆಯಲ್ಲೂ ಆಫರ್ ಬರುತ್ತಿದೆ. ಕೆಲ ಸಿನಿಮಾಗಳಲ್ಲಿ ರಂಜನಿ ನಟಿಸಿದ್ದಾರೆ.
ರಂಜನಿ ಉತ್ತಮ ನಟಿ ಮಾತ್ರವಲ್ಲ, ಒಳ್ಳೆಯ ಬರಹಗಾರ್ತಿ ಕೂಡ ಹೌದು. ಈ ಮೊದಲು ಅವರು ‘ಕಥೆ ಡಬ್ಬಿ’ ಹೆಸರಿನ ಪುಸ್ತಕ ಬರೆದಿದ್ದರು.
ಈಗ ರಂಜನಿ ಅವರು ‘ಸ್ವೈಪ್ ರೈಟ್’ ಹೆಸರಿನ ಕಾದಂಬರಿ ಬರೆದಿದ್ದಾರೆ. ಇದು ಅವರ ಮೊದಲ ಕಾದಂಬರಿ ಅನ್ನೋದು ವಿಶೇಷ.
ಡಿಸೆಂಬರ್ 7ರಂದು ಈ ಪುಸ್ತಕ ಬೆಂಗಳೂರಿನಲ್ಲಿ ಬಿಡುಗಡೆ ಆಗುತ್ತಿದೆ. ಈ ವಿಚಾರವನ್ನು ರಂಜನಿ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
‘ಕನ್ನಡತಿ’ ಧಾರಾವಾಹಿ ಪ್ರಮುಖ ಘಟ್ಟಕ್ಕೆ ಸಾಗಿದೆ. ಭುವನೇಶ್ವರಿ (ರಂಜನಿ) ಹೆಸರಿಗೆ ರತ್ನಮಾಲಾ ಎಲ್ಲಾ ಆಸ್ತಿ ಬರೆದಿರುವ ವಿಚಾರ ರಿವೀಲ್ ಆಗಿದೆ.