Honganasu: ಹೊಂಗನಸು; ಬೆಂಕಿಯಲ್ಲಿ ಸಿಲುಕಿದ್ದ ರಿಷಿಯನ್ನು ಕಾಪಾಡಿದ ವಸುಧರಾ

Honganasu Serial Update: ವಸುಧರಾ ಕಾಲೇಜಿಗೆ ಎಂಟ್ರಿ ಕೊಡುತ್ತಿದ್ದಂತೆಯೇ ದೊಡ್ಡ ಶಾಕ್ ಎದುರಾಗಿತ್ತು. ಕಾಲೇಜು ಲ್ಯಾಬ್‌ಗೆ ಬೆಂಕಿ ಬಿದ್ದು ರಿಷಿ ಸಿಲುಕಿಕೊಂಡಿದ್ದ. ಲ್ಯಾಬ್‌ ಒಳಗೆ ನುಗ್ಗಿ ರಿಷಿಯನ್ನು ಕಾಪಾಡಿದಳು ವಸು.

Honganasu: ಹೊಂಗನಸು; ಬೆಂಕಿಯಲ್ಲಿ ಸಿಲುಕಿದ್ದ ರಿಷಿಯನ್ನು ಕಾಪಾಡಿದ ವಸುಧರಾ
ಹೊಂಗನಸು ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 18, 2022 | 3:05 PM

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ಆಕ್ಸಿಡೆಂಟ್ ಬಳಿಕ ಕಾಲೇಜಿಗೆ ಬಂದ ರಿಷಿಯನ್ನು ಹೂ ನೀಡಿ ಗ್ರ್ಯಾಂಡ್ ಆಗಿ ವೆಲ್ ಕಮ್ ಮಾಡಿದರು ವಿದ್ಯಾರ್ಥಿಗಳು. ವಸುಧರಾ ಮಾಡಿದ ಪ್ಲಾನ್ ಎಂದು ಗೊತ್ತಾಗಿ ರಿಷಿ ಮತ್ತಷ್ಟು ಕೋಪ ಮಾಡಿಕೊಂಡ. ಹೂವಿನಿಂದ ಸ್ವಾಗತ ಕೋರಲು ವಸುಧರಾ ಎಲ್ಲಾ ಸಿದ್ಧತೆ ಮಾಡಿದ್ದಳು. ಕ್ಲಾಸ್‌ಗೆ ಬಂದ ರಿಷಿ ಸಿಟ್ಟಾಗಿ ವಸುಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ. ಹೀಗಿಲ್ಲ ಮಾಡಬಾರದು ಎಂದು ಗೊತ್ತಾಗಲ್ವಾ ಎಂದು ವಸುಧರಾ ಮೇಲೆ ರೇಗಿದ. ಪ್ರೀತಿ ರಿಜೆಕ್ಟ್ ಮಾಡಿದರೂ ವಸುಧರಾಗೆ ಮಾತ್ರ ರಿಷಿ ಮೇಲೆ ಹೆಚ್ಚು ಕಾಳಜಿ.

ರಿಷಿ ನೆನಪಲ್ಲೇ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಳು ವಸುಧರಾ. ರಿಷಿಯ ಭ್ರಮೆಯಲ್ಲೇ ಇದ್ದ ವಸುಧರಾಳನ್ನು ನೋಡಿದ ರೆಸ್ಟೋರೆಂಟ್ ಓನರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಹುಷಾರಿಲ್ವಾ ಎಂದು ಮನೆಗೆ ಕಳುಹಿಸಿದ. ರೆಸ್ಟೋರೆಂಟ್‌ನಿಂದ ವಸುಧರಾ ಹೊರಡುತ್ತಿದ್ದಂತೆ ಎಂಟ್ರಿ ಕೊಟ್ಟ ರಿಷಿ. ಮನೆ ಕಡೆ ಹೊರಟಿದ್ದ ವಸುಧರಾ, ರಿಷಿಯನ್ನು ನೋಡಿ ಖುಷಿಯಾದಳು. ಮಾತನಾಡಿಸಲೆಂದು ರಿಷಿ ಕಡೆ ಓಡಿ ಹೋದಳು. ಆದರೆ ರಿಷಿ ಸರಿಯಾಗಿ ಮಾತನಾಡದೇ ಅಲ್ಲಿಂದ ಹೊರಟು ಹೋದ. ವಸುಧರಾ ಮೆಸೇಜ್ ಮಾಡಿದ್ರೂ ರಿಷಿ ಸರಿಯಾಗಿ ರಿಪ್ಲೇ ಮಾಡದೆ ಸೈಲೆಂಟ್ ಆದ.

ಇದನ್ನೂ ಓದಿ: Honganasu: ಕೊನೆಗೂ ವಸುಗೆ ‘ಐ ಲವ್ ಯೂ’ ಹೇಳಿದ ಗೌತಮ್; ರಿಷಿಯ ಮುಂದಿನ ನಡೆ ಏನು?

ಎಜುಕೇಷನ್ ಪ್ರಾಜೆಕ್ಟ್ ಸಿದ್ಧ ಮಾಡಿ ರಿಷಿಗೆ ತೋರಿಸಲೆಂದು ರೂಮಿಗೆ ಬಂದರು ಮಹೇಂದ್ರ ಮತ್ತು ಜಗತಿ. ಪ್ರಾಜೆಕ್ಟ್‌ ಕೆಲಸವನ್ನು ವಸುಗೆ ವಹಿಸಿದ್ರೆ ಸರಿಯಾಗಿ ಮಾಡುತ್ತಾಳೆ ಎಂದು ಹೇಳಿದಳು ಜಗತಿ. ಬಳಿಕ ರಿಷಿ ಮುಂದೆಯೇ ವಸುಗೆ ವಿಡಿಯೋ ಕಾಲ್ ಮಾಡಿ ಪ್ರಾಜೆಕ್ಟ್ ವಿಚಾರವನ್ನು ವಿವರಿಸಿದಳು ಜಗತಿ. ಊಟ ಮಾಡುತ್ತಾ ಕುಳಿತ್ತಿದ್ದ ವಸುಧರಾಳನ್ನು ವಿಡಿಯೋದಲ್ಲೇ ನೋಡಿದ ರಿಷಿ. ತಾನು ಊಟ ಮಾಡಿ ಉಳಿಸಿದ್ದ ಊಟವನ್ನು ವಸುಧರಾ ತಿನ್ನುತ್ತಿರುವುದನ್ನು ನೋಡಿ ಅಚ್ಚರಿ ಪಟ್ಟುಕೊಂಡ. ತನ್ನ ಪ್ರೀತಿ ರಿಜೆಕ್ಟ್ ಮಾಡಿದ್ಳು, ಆದರೆ ನಾನು ಬಿಟ್ಟ ಊಟ ಮಾಡುತ್ತಿದ್ದಾಳೆ, ವಸುಧರಾ ಸರಿಯಾಗಿ ಅರ್ಥನೇ ಆಗಲ್ಲ ಎಂದುಕೊಂಡ ರಿಷಿ.

ಇದನ್ನೂ ಓದಿ: Honganasu: ಸಾಕ್ಷಿ ಮಾತಿನಿಂದ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿದ್ದ ವಸುಧರಾಳನ್ನು ದೂರ ಮಾಡಿದ ರಿಷಿ

ಜಗತಿ ಹೇಳಿದ ಹಾಗೆ ಎಜುಕೇಷನ್ ಪ್ರಾಜೆಕ್ಟ್ ಮಾಡಿ ರಿಷಿಗೆ ಕಳುಹಿಸಿದಳು ವಸುಧರಾ. ಆದರೆ ರಿಷಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬೈದುಕೊಂಡೆ ತರಕಾರಿ ತೆಗೆದುಕೊಂಡು ಮನೆಗೆ ಕಡೆ ಹೊರಟ್ಟಿದ್ದಳು. ದಾರಿಯಲ್ಲಿ ಸಾಕ್ಷಿ ಮತ್ತೆ ಅಡ್ಡ ಬಂದಳು. ತರಕಾರಿ ಹಿಡಿದು ಹೊರಟಿದ್ದ ವಸುನಾ ನೋಡಿ ವ್ಯಂಗ್ಯವಾಡಿದಳು ಸಾಕ್ಷಿ. ನಿನ್ನ ರೇಂಜ್‌ಗೆ ರಿಷಿ ಅಲ್ಲ ಎಂದು ಚುಚ್ಚು ಮಾತುಗಳನ್ನು ಆಡಿದಳು. ರಿಷಿಯಿಂದ ದೂರ ಆಗಿದ್ದಕ್ಕೆ ನಿನಗೆ ಸರಿಯಾದ ಬಹುಮಾನ ನೀಡಬೇಕೆಂದು ವಸುಗೆ ಖಾಲಿ ಚೆಕ್ ನೀಡಿದಳು ಸಾಕ್ಷಿ. ಎಷ್ಟು ಬೇಕೋ ಅಷ್ಟು ಹಣ ಬರೆದು ತೆಗೆದುಕೊ ಎಂದು ಅಹಂಕಾರದಿಂದ ವಸು ಕೈಗೆ ಚೆಕ್ ಕೊಟ್ಟಳು ಸಾಕ್ಷಿ. ಆದರೆ ಸಾಕ್ಷಿಗೆ ವಸುಧರಾ ಸರಿಯಾಗಿ ತಿರುಗೇಟು ನೀಡಿದಳು. ಮರುಮಾತನಾಡದೆ ಹೊರಟು ಹೋದಳು ಸಾಕ್ಷಿ.

ವಸುಧರಾ ಕಾಲೇಜಿಗೆ ಎಂಟ್ರಿ ಕೊಡುತ್ತಿದ್ದಂತೆಯೇ ದೊಡ್ಡ ಶಾಕ್ ಎದುರಾಗಿತ್ತು. ಕಾಲೇಜು ಲ್ಯಾಬ್‌ಗೆ ಬೆಂಕಿ ಬಿದ್ದು ರಿಷಿ ಸಿಲುಕಿಕೊಂಡಿದ್ದ. ಲ್ಯಾಬ್‌ ಒಳಗೆ ನುಗ್ಗಿ ರಿಷಿಯನ್ನು ಕಾಪಾಡಿದಳು ವಸು. ಲ್ಯಾಬ್ ಒಳಗಿಂದ ಹೊರ ಹೋಗು, ನಿನಗೆ ಆಗಲ್ಲ ಎಂದು ರಿಷಿ ಎಷ್ಟೇ ಹೇಳಿದರೂ ಬಿಡದೆ ಸುರಕ್ಷಿತವಾಗಿ ರಿಷಿಯನ್ನು ಲ್ಯಾಬ್ ಹೊರಕ್ಕೆ ಕರೆದುಕೊಂಡು ಬಂದಳು ವಸುಧರಾ. ಬಳಿಕ ರಿಷಿಗೆ ನೀರು ಕುಡಿಸಿ ಸಮಾಧಾನ ಮಾಡಿದರು ಜಗತಿ ಮತ್ತು ಮಹೇಂದ್ರ. ವಸುಧರಾಗೆ ರಿಷಿ ಮೇಲೆ ಪ್ರೀತಿ ಹುಟ್ಟಿದೆಯಾ? ರಿಷಿ ಬಳಿ ಹೋಗಿ ಪ್ರೀತಿ ಒಪ್ಪಿಕೊಳ್ಳುತ್ತಾಳಾ ವಸು? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.