Honganasu: ಕೊನೆಗೂ ವಸುಗೆ ‘ಐ ಲವ್ ಯೂ’ ಹೇಳಿದ ಗೌತಮ್; ರಿಷಿಯ ಮುಂದಿನ ನಡೆ ಏನು?

Honganasu Serial Update: ರಿಷಿ ಸೀರಿಯಸ್ ಆಗಿಯೇ ಗೌತಮ್​ಗೆ ಸಹಾಯ ಮಾಡಿದ. ವಸುಧರಾ ಮನಸ್ಸಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಇದು ಉತ್ತಮ ದಾರಿ ಎಂದು ಆಕೆಗೆ ಪ್ರಪೋಸ್ ಮಾಡುವಂತೆ ಗೌತಮ್‌ನನ್ನು ರಿಷಿ ಹುರಿದುಂಬಿಸಿದ.

Honganasu: ಕೊನೆಗೂ ವಸುಗೆ ‘ಐ ಲವ್ ಯೂ’ ಹೇಳಿದ ಗೌತಮ್; ರಿಷಿಯ ಮುಂದಿನ ನಡೆ ಏನು?
ಹೊಂಗನಸು ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on: Nov 27, 2022 | 11:44 AM

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ವಸುಧರಾ ಮನೆಗೆ ರಿಷಿ ಎಂಟ್ರಿ ಕೊಡದಂತೆ ತಡೆಯಲು ದೇವಯಾನಿ ಮಾಸ್ಟರ್ ಪ್ಲಾನ್ ಮಾಡಿದ್ದಾಳೆ. ಊರಿಗೆಲ್ಲ ವಸುಧರಾ ಮತ್ತು ರಿಷಿ ನಡುವೆ ಆಕೆ ಗಾಸಿಪ್ ಹಬ್ಬಿಸಿದ್ದಾಳೆ. ಅಕ್ಕ-ಪಕ್ಕದ ಮನೆಯವರಿಗೆ ವಸುಧರಾ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವಂತೆ ಒಂದು ಹೆಂಗಸನ್ನು ಬಿಟ್ಟಿದ್ದಾಳೆ. ಊರಿನವರ ಚುಚ್ಚು ಮಾತುಗಳನ್ನು ಕೇಳಿ ವಸುಧರಾ ನೊಂದುಕೊಂಡಿದ್ದಾಳೆ.

ಅಕ್ಕ-ಪಕ್ಕದ ಮನೆಯವರಿಗ ವಸುಧರಾ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿದಳು ದೇವಯಾನಿ. ಪಕ್ಕದ ಮನೆ ಆಂಟಿ ಊರಿನವರನ್ನೆಲ್ಲಾ ಕರೆದುಕೊಂಡು ಬಂದು ವಸುಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಳು. ‘ಇನ್ಮುಂದೆ ರಿಷಿ ಮನೆಗೆ ಬರದೆ ಇರುವ ಹಾಗೆ ನೋಡಿಕೋ, ಇಲ್ಲ ಅಂದರೆ ಮನೆ ಬಿಟ್ಟು ಹೋಗು’ ಎಂದು ವಸುಗೆ ಖಡಕ್ ಎಚ್ಚರಿಕೆ ನೀಡಿದಳು. ಊರಿನವರ ಮಾತು ವಸುಗೆ ಬೇಸರ ಮೂಡಿಸಿತು. ಮತ್ತೆಲ್ಲಿಗೆ ಹೋಗಲಿ ಎಂದು ಅಳುತ್ತಾ ಕುಳಿತಳು.

ಇತ್ತ ಸಾಕ್ಷಿ ಮತ್ತು ರಿಷಿಗೆ ಮದುವೆ ಮಾಡಿಸಬೇಕು ಎಂದು ದೇವಯಾನಿ ಹೇಳಿದಳು. ‘ಸಾಕ್ಷಿ ಈ ಮನೆಗೆ ಹೊಂದಿಕೊಳ್ಳುತ್ತಾಳೆ, ಉತ್ತಮ ಸೊಸೆಯಾಗುತ್ತಾಳೆ, ರಿಷಿಗೆ ಸರಿಯಾದ ಜೋಡಿ’ ಎಂದು ದೇವಯಾನಿ ಸಾಕ್ಷಿಯನ್ನು ಹೊಗಳುತ್ತಾ ಮದುವೆ ವಿಚಾರ ಪ್ರಸ್ತಾಪಿಸಿದಳು. ಸಾಕ್ಷಿ ಹೆಸರು ಕೇಳಿದರೆ ಸಾಕು ಉರಿದು ಬೀಳುವ ರಿಷಿಗೆ ದೇವಯಾನಿ ಮಾತುಗಳು ಕೋಪ ತರಿಸಿತು. ಇನ್ಮುಂದೆ ಮದುವೆ ವಿಚಾರ ಮಾತನಾಡಬೇಡಿ ಎಂದು ದೇವಯಾನಿ ಮುಖಕ್ಕೆ ಹೊಡೆದ ಹಾಗೆ ಹೇಳಿ ಹೊರಟು ಹೋದ ರಿಷಿ.

ವಸುಗೆ ಕಾಲ್ ಮಾಡಿದ ರಿಷಿ, ‘ನಿನ್ನ ಮನೆಗೆ ಬರ್ತಿದ್ದೀನಿ’ ಅಂತ ಹೇಳಿದ. ವಸು ‘ಬೇಡ’ ಎನ್ನುವಷ್ಟೊತ್ತಿಗೆ ರಿಷಿ ಮನೆ ಮುಂದೆಯೇ ಬಂದು ನಿಂತಿದ್ದ. ಅಕ್ಕ-ಪಕ್ಕದವರ ಮಾತುಗಳನ್ನು ಕೇಳಿ ನೊಂದಿದ್ದ ವಸುಗೆ ರಿಷಿ ಬಂದಿದ್ದು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿತು. ‘ ಇನ್ಮುಂದೆ ನಮ್ಮ ಮನೆಗೆ ಬರಬೇಡಿ’ ಎಂದು ಬಾಗಿಲು ಹಾಕಿದಳು ವಸು. ರಿಷಿ ಶಾಕ್ ಆದ. ಅಷ್ಟೊತ್ತಿಗೆ ಮಹೇಂದ್ರ ಕೂಡ ಎಂಟ್ರಿ ಕೊಟ್ಟ. ಬಳಿಕ ರಿಷಿಗೆ ಮಹೇಂದ್ರ ಒಂದು ಕಿವಿಮಾತು ಹೇಳಿದ. ‘ವಸುಧರಾ ನಿನಗೆ ಏನಾಗಬೇಕು ಎಂದು ಮೊದಲು ನೀನು ತಿಳಿದುಕೋ. ಎಲ್ಲಾ ಸಮಸ್ಯೆಗೂ ಪರಿಹಾರ ಸಿಗುತ್ತೆ’ ಅಂತ ಹೇಳಿ ಮಹೇಂದ್ರ ಹೊರಟು ಹೋದ.

ವಸುಧರಾಗೆ ಹೇಗೆ ಪ್ರಪೋಸ್ ಮಾಡಬೇಕೆಂದು ಗೌತಮ್ ಯೋಚಿಸುತ್ತಿದ್ದ. ಗೌತಮ್ ರೂಮಿಗೆ ರಿಷಿ ಎಂಟ್ರಿ ಕೊಟ್ಟ. ಏನ್ಮಾಡ್ತಿದ್ದೀಯಾ ಎಂದು ಗೌತಮ್‌ಗೆ ಕೇಳಿದ. ವಸುಧರಾಗೆ ‘ಇವತ್ತು ಪ್ರಪೋಸ್ ಮಾಡೇ ಮಾಡುತ್ತೀನಿ’ ಎಂದು ಗೌತಮ್ ಹೇಳಿದ. ಗೌತಮ್‌ಗೆ ಫುಲ್ ಸಪೋರ್ಟ್ ಮಾಡಿದ ರಿಷಿ. ಇದರಿಂದ ಗೌತಮ್‌ಗೆ ಅನುಮಾನ ಮೂಡಿತು. ರಿಷಿ ತಮಾಷೆ ಮಾಡುತ್ತಿದ್ದಾನೆ ಅಂತ ಅಂದುಕೊಂಡ ಗೌತಮ್. ಆದರೆ ರಿಷಿ ಸೀರಿಯಸ್ ಆಗಿಯೇ ಗೌತಮ‌ಗೆ ಸಹಾಯ ಮಾಡಿದ. ವಸುಧರಾ ಮನಸ್ಸಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಇದು ಉತ್ತಮ ದಾರಿ ಎಂದು ಆಕೆಗೆ ಪ್ರಪೋಸ್ ಮಾಡುವಂತೆ ಗೌತಮ್‌ನನ್ನು ರಿಷಿ ಹುರಿದುಂಬಿಸಿದ.

ಗೌತಮ್ ಪ್ರಪೋಸ್‌ಅನ್ನು ವಸುಧರಾ ಒಪ್ಪಿಕೊಳ್ಳುತ್ತಾಳಾ, ಗೌತಮ್ ಎಲ್ಲಿ ಪ್ರಪೋಸ್ ಮಾಡುತ್ತಾನೆ ಎಂದು ಯೋಚಿಸುತ್ತಾ ಕುಳಿತಿದ್ದ ರಿಷಿ. ಅಷ್ಟೊತ್ತಿಗೆ ಗೌತಮ್ ಮತ್ತು ವಸು ಮಾತನಾಡುತ್ತಿರುವುದನ್ನು ನೋಡಿದ ರಿಷಿ. ಕೊನೆಗೂ ವಸುಧರಾಗೆ ಪ್ರಪೋಸ್ ಮಾಡಿಯೇ ಬಿಟ್ಟ ಗೌತಮ್. ವಸುಧರಾಗೆ ಪೇಂಟಿಂಗ್ ಮತ್ತು ಹೂವನ್ನು ನೀಡಿ ‘ಐ ಲವ್ ಯೂ’ ಎಂದು ಹೇಳಿದ. ಗೌತಮ್ ಮಾತು ಕೇಳಿ ವಸು ಶಾಕ್ ಆದಳು. ವಸುಧರಾ ರಿಯಾಕ್ಷನ್ ಹೇಗಿರುತ್ತೆ ಎಂದು ರಿಷಿ ಕೂಡ ಕಾತರದಿಂದ ನೋಡುತ್ತಿದ್ದ. ಗೌತಮ್ ಪ್ರೀತಿಯನ್ನು ಒಪ್ಪಿತೊಳ್ಳುತ್ತಾಳಾ ವಸು? ರಿಷಿಯ ಮುಂದಿನ ನಡೆ ಏನು? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್