AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vinod Gobbaragala: ಒಂಬತ್ತನೇ ವಾರಕ್ಕೆ ಆಟ ಮುಗಿಸಿ ಬಿಗ್​ ಬಾಸ್ ಮನೆಯಿಂದ​ ಹೊರ ನಡೆದ ವಿನೋದ್​ ಗೊಬ್ಬರಗಾಲ 

ಒಂಬತ್ತನೇ ವಾರಕ್ಕೆ ಆಟ ಮುಗಿಸಿ ಬಿಗ್​ ಬಾಸ್ ಮನೆಯಿಂದ​ ಈ ವಾರ ವಿನೋದ್​ ಗೊಬ್ಬರಗಾಲ ಅವರು ಹೊರ ನಡೆದಿದ್ದಾರೆ.

Vinod Gobbaragala: ಒಂಬತ್ತನೇ ವಾರಕ್ಕೆ ಆಟ ಮುಗಿಸಿ ಬಿಗ್​ ಬಾಸ್ ಮನೆಯಿಂದ​ ಹೊರ ನಡೆದ ವಿನೋದ್​ ಗೊಬ್ಬರಗಾಲ 
vinod gobbaragala
TV9 Web
| Edited By: |

Updated on:Nov 27, 2022 | 10:32 PM

Share

‘ಬಿಗ್​ ಬಾಸ್​ ಕನ್ನಡ ಸೀಸನ್​ 9’ (BBK 9) ಒಂಬತ್ತನೇ ವಾರ ಮುಗಿಸಿ ಮುನ್ನುಗ್ಗುತ್ತಿದೆ. ದೊಡ್ಮನೆಲಿ ದಿನದಿಂದ ದಿನಕ್ಕೆ ಟ್ವಿಸ್ಟ್​​ಗಳು ಎದುರಾಗುತ್ತಿವೆ. ಇದು ನೋಡುಗರಲ್ಲಿ ಮತ್ತಷ್ಟು ಕುತೂಹಲ ಉಂಟುಮಾಡುತ್ತಿದೆ. ಬಿಗ್​ ಬಾಸ್​ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳಲ್ಲಿ ಕಾಂಪಿಟೇಷನ್ ಕಿಚ್ಚು ಹೆಚ್ಚಾಗುತ್ತಿದೆ. ಈ ವಾರವಂತೂ ಬಿಗ್​ ಬಾಸ್​ ಮನೆಯ ಎಲ್ಲಾ ಸ್ಪರ್ಧಿಗಳು ನಾಮಿನೇಟ್​ ಆಗಿದ್ದರು. ಜೊತೆಗೆ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ದೊಡ್ಮನೆ ಮಂದಿ ಯಾರು ಕೂಡ ಉತ್ತಮ ಆಟ ಪ್ರದರ್ಶಿಸದ ಕಾರಣ ಈ ವಾರ ಮನೆಗೆ ಕ್ಯಾಪ್ಟನ್ ಕೂಡ ಇರಲಿಲ್ಲ. ಹಾಗಾಗಿ ಬಿಗ್​ ಬಾಸ್​ ಮಂದಿ ತಮ್ಮನ್ನು ತಾವು ಸೇಫ್​ ಮಾಡಿಕೊಳ್ಳಲು ಎಲ್ಲ ರೀತಿಯಿಂದಲೂ ಕಸರತ್ತು ಮಾಡಿದ್ದರು.

ಈ ವಾರ ಬಿಗ್​ ಬಾಸ್​ ‘ಅರಣ್ಯಕಾಂಡ’ ಎಂಬ ವಿಶೇಷ ಟಾಸ್ಕ್ ನೀಡಿದ್ದರು. ಇದರ ಅನುಸಾರ ಮನೆಮಂದಿಯಲ್ಲ ವನವಾಸ ಅನುಭವಿಸಬೇಕಿತ್ತು. ಆಟವಾಡಿ ತಮಗೆ ಬೇಕಾದ ಸೌಕರ್ಯಗಳನ್ನು ಪಡೆದುಕೊಂಡು ಬದುಕಬೇಕಿತ್ತು. ಆದರೆ ಕೆಲವು ಸ್ಪರ್ಧಿಗಳು ಆಟದ ನಿಯಮ ಸರಿಯಾಗಿ ತಿಳಿದುಕೊಳ್ಳದೆ ತಪ್ಪಾಗಿ ಆಡಿದ್ದರು. ಇದರಿಂದ ತಮಗೆ ಸಿಗಬೇಕಾದ ಸೌಕರ್ಯವನ್ನು ಕಳೆದುಕೊಂಡಿದ್ದರು. ಈ ಟಾಸ್ಕ್​ನ ವಿಚಾರವಾಗಿ ನಟ ಕಿಚ್ಚ ಸುದೀಪ್​ ಅವರು ಶನಿವಾರ ನಡೆದ ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್​ನಲ್ಲಿ ಬೇಸರ ವ್ಯಕ್ತಪಡಿಸಿದ್ದರು.

ಬಿಗ್​ ಬಾಸ್​ ಮನೆಯಲ್ಲಿ ಈ ವಾರ ಪ್ರತಿಯೊಬ್ಬರು ನಾಮಿನೇಟ್ ಆಗಿದ್ದರು. ಸ್ಪರ್ಧಿಗಳಲ್ಲಿ ಕೆಲವರು ಟಾಸ್ಕ್​ನಲ್ಲಿ ಉತ್ತಮ  ಪ್ರದರ್ಶನ ತೋರಿದರೆ, ಮತ್ತೆ ಕೆಲವರು ಸಾಧಾರಣವಾಗಿ ತಮ್ಮ ಆಟವನ್ನು ಪ್ರದರ್ಶಿಸಿದ್ದಾರೆ. ಹಾಗಾಗಿ ಈ ವಾರ ಮನೆಯಿಂದ ಯಾರು ಹೊರ ನಡೆಯುತ್ತಾರೆ ಎಂಬ ಕುತೂಹಲವು ಸಹಜವಾಗಿ ನೋಡುಗರಲ್ಲಿ ಮೂಡಿತ್ತು.

ದೊಡ್ಮನೆಯಿಂದ ಈ ವಾರ ವಿನೋದ್​ ಗೊಬ್ಬರಗಾಲ ಅವರು ಹೊರ ನಡೆದಿದ್ದಾರೆ. ‘ಅರಣ್ಯಕಾಂಡ’ ಟಾಸ್ಕ್​ನಲ್ಲಿ ಆರ್ಯವರ್ಧನ ಗುರೂಜೀ ಮಾಡಿರುವ ತಪ್ಪನ್ನೇ ಇವರು ಮಾಡಿದ್ದರು. ‘ಸಮಯಕ್ಕೆ ಸವಾಲು’ ಟಾಸ್ಕ್​ನಲ್ಲಿಯೂ ಕೂಡ ಅವರು ಸಾಕಷ್ಟು ಬಾರಿ ಫೌಲ್​ ಮಾಡಿದ್ದರು. ಜೊತೆಗೆ ಇಷ್ಟು ವಾರದಲ್ಲಿ ಈ ವಾರವೇ ತುಂಬಾ ಕನ್ಫ್ಯೂಶನ್ ಆಗಿದೆ ಎಂದು ಅವರೆ ಹೇಳಿದ್ದಾರೆ. ಈ ಎಲ್ಲ ವಿಚಾರಗಳು ವಿನೋದ್​ ಗೊಬ್ಬರಗಾಲ ಅವರು ಬಿಗ್​ ಬಾಸ್​ ಕನ್ನಡ ಸೀಸನ್​ 9 ಮನೆಯಿಂದ ಹೊರ ನಡೆಯಲು ಕಾರಣವಾಗಿರಬಹುದಾಗಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:13 pm, Sun, 27 November 22

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ