Honganasu: ಸಾಕ್ಷಿ ಮಾತಿನಿಂದ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿದ್ದ ವಸುಧರಾಳನ್ನು ದೂರ ಮಾಡಿದ ರಿಷಿ

Honganasu Serial Update: ಒಬ್ಬನೇ ನಿಂತಿದ್ದ ರಿಷಿಯ ಬಳಿ ಬಂದಳು ವಸು. ‘ಇಲ್ಲಿಗೆ ಯಾಕೆ ಬಂದೆ, ಕಾಲ್ ಮಾಡಿ ಬರಬೇಕು ಎನ್ನುವ ಪರಿಜ್ಞಾನ ಇಲ್ವಾ’ ಎಂದು ವಸು ಮೇಲೆ ರಿಷಿ ಕೂಗಾಡಿದ.

Honganasu: ಸಾಕ್ಷಿ ಮಾತಿನಿಂದ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿದ್ದ ವಸುಧರಾಳನ್ನು ದೂರ ಮಾಡಿದ ರಿಷಿ
ಹೊಂಗನಸು ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 02, 2022 | 5:42 PM

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ರಿಷಿಯನ್ನು ಹೇಗಾದರೂ ಮಾಡಿ ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂದು ಹಠ ಹಿಡಿದಿದ್ದಾಳೆ ಸಾಕ್ಷಿ. ಸಾಕ್ಷಿಯನ್ನು ಮುಂದಿಟ್ಟುಕೊಂಡು ದೇವಯಾನಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದಾಳೆ. ರಿಷಿ ಮನೆಗೆ ಬಂದಿರುವ ಸಾಕ್ಷಿ ಮದುವೆ ವಿಚಾರ ಎತ್ತಿದ್ದಾಳೆ. ವಸುಧರಾ ಜೊತೆ ಪ್ರೀತಿಯಲ್ಲಿ ಇರುವುದರಿಂದ ತನ್ನನ್ನು ದೂರ ಇಡುತ್ತಿದ್ದೀಯಾ ಎಂದು ಸಾಕ್ಷಿ ಕೂಗಾಡಿದಳು.

ವಸುಧರಾಳಿಂದ ರಿಷಿಯನ್ನು ದೂರ ಮಾಡುವ ದೇವಯಾನಿ ಪ್ಲಾನ್ ವರ್ಕೌಟ್ ಆಗುತ್ತಿದೆ. ಸಾಕ್ಷಿಯನ್ನು ಮುಂದಿಟ್ಟುಕೊಂಡು ವಸುಧರಾಳನ್ನು ದೂರ ಮಾಡುತ್ತಿದ್ದಾಳೆ ದೇವಯಾನಿ. ಮನೆಯವರ ಮುಂದೆ ರಿಷಿಯನ್ನು ಮದುವೆಯಾಗುವ ವಿಚಾರ ಪ್ರಸ್ತಾಪ ಮಾಡಿದಳು ಸಾಕ್ಷಿ. ರಿಷಿ ತನ್ನ ಕೈಗೆ ಸಿಗುತ್ತಿಲ್ಲ, ತನಗೆ ಸಮಯ ಕೊಡುತ್ತಿಲ್ಲ ಎಂದು ಕೂಗಾಡಿದಳು. ರಿಷಿಯ ಮೊದಲ ಆದ್ಯತೆ ವಸುಧರಾ ಆಗಿದ್ದಾಳೆ, ವಸುಧರಾಳನ್ನು ಪ್ರೀತಿ ಮಾಡುತ್ತಿದ್ದಾನೆ ಎಂದು ಸಾಕ್ಷಿ ಎಲ್ಲರ ಮುಂದೆ ಬಹಿರಂಗ ಪಡಿಸಿದಳು. ಸಾಕ್ಷಿಯ ಮಾತಿನಿಂದ ಸಿಟ್ಟಿಗೆದ್ದ ರಿಷಿ ಕೂಡ ಜೋರಾಗಿ ಕೂಗಾಡಿ ಸಾಕ್ಷಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ. ವಸುಧರಾ ಜೊತೆಗಿದ್ದ ರಿಷಿ ಫೋಟೋಗಳನ್ನು ಎಲ್ಲರಿಗೂ ತೋರಿಸಿ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಪ್ರಶ್ನೆ ಮಾಡಿದಳು ಸಾಕ್ಷಿ. ರಿಷಿ ಮತ್ತು ಸಾಕ್ಷಿ ಜಗಳದ ಮುಂದೆ ಸೈಲೆಂಟ್ ಆಗಿ ನಿಂತಿದ್ದ ಜಗತಿ ಎಂಟ್ರಿ ಕೊಟ್ಟಳು.

ರಿಷಿಯ ವ್ಯಕ್ತಿತ್ವದ ಬಗ್ಗೆ ಮಾತನಾಡಬೇಡ ಎಂದು ಸಾಕ್ಷಿಗೆ ಖಡಕ್ ಎಚ್ಚರಿಕೆ ನೀಡಿದಳು ಜಗತಿ. ರಿಷಿ ಮನಸ್ಸಲ್ಲಿ ನೀನಿಲ್ಲ ಅಂತ ಗೊತ್ತಾದ ಮೇಲೆ ಹೀಗೆಲ್ಲ ಅನುಮಾನ ಪಡೋದು ಸರಿಯಲ್ಲ ಎಂದು ಸಾಕ್ಷಿಗೆ ಕಿವಿ ಮಾತು ಹೇಳಿದಳು. ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತು ಅಂತ ದೇವಯಾನಿಗೆ ಪರೋಕ್ಷವಾಗಿ ತಿವಿದಳು ಜಗತಿ. ಮನೆ ರಣರಂಗ ಆಗಿರುವಾಗಲೇ ವಸುಧರಾ ಎಂಟ್ರಿ ಕೊಟ್ಟಳು. ‘ರಿಷಿ ಸರ್ ಜೊತೆ ಕೆಲಸವಿದೆ ಅದಕ್ಕೆ ಬಂದೆ’ ಎಂದಳು ವಸು. ಇದು ಸಾಕ್ಷಿಯನ್ನು ಮತ್ತಷ್ಟು ಕೆರಳಿಸಿತು. ಇನ್ನೇನಿದೆ ಹೇಳೋಕೆ ಈಗಲಾದರೂ ಎಲ್ಲರಿಗೂ ಗೊತ್ತಾಯಿತಾ ಎಂದು ತಂದೆಯನ್ನು ಕರ್ಕೊಂಡು ಹೊರಟಳು ಸಾಕ್ಷಿ.

ಒಬ್ಬನೇ ನಿಂತಿದ್ದ ರಿಷಿಯ ಬಳಿ ಬಂದಳು ವಸು. ಇಲ್ಲಿಗೆ ಯಾಕೆ ಬಂದೆ, ಕಾಲ್ ಮಾಡಿ ಬರಬೇಕು ಎನ್ನುವ ಪರಿಜ್ಞಾನ ಇಲ್ವಾ ಎಂದು ವಸು ಮೇಲೆ ಕೂಗಾಡಿದ ರಿಷಿ. ಸರ್‌ಗೆ ಏನಾಯಿತು ಎಂದು ವಸು ಗಾಬರಿಯಾದಳು. ಅಷ್ಟೊತ್ತಿಗೆ ಜಗತಿ ಫೋನ್ ಮಾಡಿ ‘ರಿಷಿ ಬಳಿ ಏನೂ ಮಾತನಾಡ ಬೇಡ ಅಲ್ಲಿಂದ ಬಾ’ ಎಂದು ಹೇಳಿದಳು. ರಿಷಿ ಬೀಳಿಸಿಕೊಂಡಿದ್ದ ಪರ್ಸ್ ಅನ್ನು ಕೊಟ್ಟು ವಸುಧರಾ ಹೊರಟಳು. ವಸುಧರಾಳನ್ನು ಪ್ರೀತಿಸುತ್ತಿದ್ದೀನಾ ಎಂದು ರಿಷಿ ಯೋಚನೆ ಶುರುವಾಯಿತು.

ಎಕ್ಸಾಮ್‌ ಹಾಲ್ ಟಿಕೆಟ್‌ ಅನ್ನು ತಾನೆ ವಸುಗೆ ಕೊಡುವ ಬದಲು ಜಗತಿ ಕೈಯಲ್ಲಿ ಕೊಡಿಸಿದ ರಿಷಿ. ಹಾಲ್ ಟಿಕೆಟ್ ಪಡೆದು ಖುಷಿಯಿಂದ ರಿಷಿ ಚೇಂಬರ್‌ಗೆ ಬಂದ ವಸು ಸಂತಸವನ್ನು ಹೇಳಿದಳು. ಆದರೆ ವಸು ಜೊತೆ ಸರಿಯಾಗಿ ಮಾತನಾಡದೆ ದೂರ ಇಡಲು ಪ್ರಯತ್ನಿಸಿದ ರಿಷಿ. ಎಕ್ಸಾಮ್ ಹಾಲ್​ವರೆಗೂ ಬನ್ನಿ ಸರ್ ಎಂದು ಕರೆದಳು ವಸು. ‘ಎಲ್ಲಾ ಸಮಯದಲ್ಲೂ ಜೊತೆಯಲ್ಲೇ ಇರಲು ಆಗಲ್ಲ, ನೀನೇನು ಚಿಕ್ಕ ಮಗುನಾ’ ಎಂದು ವಸು ಮೇಲೆ ರೇಗಿದ. ರಿಷಿಯ ಮಾತುಗಳು ವಸುಗೆ ಅಚ್ಚರಿ ಜೊತೆಗೆ ಬೇಸರ ಮೂಡಿಸಿತು. ಅಳುತ್ತಲೇ ಬಂದ ವಸು ನೋಡಿ ಶಾಕ್ ಆದ ಜಗತಿ ಮತ್ತು ಮಹೇಂದ್ರ ಏನಾಯಿತು ಎಂದು ಕೇಳಿದಳು. ‘ರಿಷಿ ಬಂದಿಲ್ಲ ಅಂದರೆ ನೀನು ಹೋಗಿ ಎಕ್ಸಾಮ್ ಬರಿ’ ಎಂದು ವಸುಗೆ ಧೈರ್ಯ ತುಂಬಿದಳು ಜಗತಿ. ಸಾಕ್ಷಿ ಮಾತಿನಿಂದ ವಸುಧರಾಳಿಂದ ದೂರ ಇರಲು ಪ್ರಯತ್ನಿಸುತ್ತಿರುವ ರಿಷಿ ವಸುಧರಾಳನ್ನು ಎಕ್ಸಾಮ್‌ಗೆ ಕರೆದುಕೊಂಡು ಹೋಗುತ್ತಾನಾ? ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್