Lakshana Serial: ತಂದೆ ಮಾಡಿದ ತಪ್ಪಿಗೆ ಭೂಪತಿಯ ಮನೆಯವರ ಮುಂದೆ ಕೆಟ್ಟವಳಾಗಿ ನಿಂತಿದ್ದಾಳೆ ನಕ್ಷತ್ರ
ತನ್ನ ಮಗನ ಸಾವಿಗೆ, ತನ್ನ ಕುಟುಂಬದ ನೆಮ್ಮದಿ ಹಾಳಾಗಲು ಕಾರಣವಾದ ಆ ತಂದೆ ಮಗಳನ್ನು ನೋಡಲು ಇಷ್ಟವಿಲ್ಲದ ಶಕುಂತಳಾದೇವಿ ನಕ್ಷತ್ರಳ ಸಮಾಧಾನದ ಮಾತನ್ನು ಕೇಳಲು ಸಾಧ್ಯನಾ. ಖಂಡಿತವಾಗಿಯೂ ಇಲ್ಲ. ನಕ್ಷತ್ರಳ ಮಾತಿಗೆ ಕೋಪದಲ್ಲೇ ಆಗುವುದಿದ್ದರೆ ನನ್ನ ಮಗನನ್ನು ವಾಪಸ್ ಕರೆದುಕೊಂಡು ಬಾ, ನಿನ್ನ ನ್ಯಾಯ ಯಾರಿಗೆ ಬೇಕು. ನನಗೆ ನನ್ನ ಮಗ ಬೇಕು ಎಂದು ಶಕುಂತಳಾದೇವಿ ಹೇಳುತ್ತಾರೆ.
ಧಾರಾವಾಹಿ: ಲಕ್ಷಣ (Lakshana)
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 8.30
ನಿರ್ದೇಶನ: ಶಿವರಾಮ್ ಮಾಗಡಿ
ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಆರತಿ ಏನೇ ಹೇಳಿದರೂ ನಕ್ಷತ್ರ ತಂದೆಯ ವಿರುದ್ಧ ಸಾಕ್ಷಿ ಹೇಳೇ ಹೇಳುತ್ತೇನೆ ಎಂದು ಧೃಡ ನಿರ್ಧಾರ ಮಾಡುತ್ತಾಳೆ. ಭೂಪತಿಯ ಮನೆಯವರು ಅದೇ ಸ್ಥಳಕ್ಕೆ ಬಂದು ಸಿ.ಎಸ್‌ಗೆ ಹಿಡಿ ಶಾಪ ಹಾಕುತ್ತಾರೆ ಶಕುಂತಳಾದೇವಿ.
ತಂದೆ ಮಾಡಿದ ತಪ್ಪಿಗೆ ನಕ್ಷತ್ರಳಿಗೆ ಸಂಕಷ್ಟ
ಪೋಲಿಸರು ಚಂದ್ರಶೇಖರ್ ಕೈಗೆ ಕೋಳ ಹಾಕಿ ಜೀಪ್ ಹತ್ತಿಸುತ್ತಾರೆ. ನಾನು ಮತ್ತು ಭಾರ್ಗವಿ ಹೇಗಾದರೂ ನಿಮ್ಮನ್ನು ಬಿಡಿಸುತ್ತೇವೆ ಅಂತ ಆರತಿ ಸಿ.ಎಸ್‌ಗೆ ಧೈರ್ಯ ತುಂಬುತ್ತಾಳೆ. ಅದೇ ಹೊತ್ತಿಗೆ ಭೂಪತಿ ಬಂದು ತಮ್ಮನಿಗೆ ಈ ಪರಿಸ್ಥಿತಿ ತಂದಿದ್ದಕ್ಕಾಗಿ ಅದು ಹೇಗೆ ಜೈಲಿನಿಂದ ಹೊರ ಬರುತ್ತೀರಿ ಅಂತ ನಾನು ನೋಡುತ್ತೇನೆ ಎಂದು ಖಡಕ್ ಆಗಿ ಸಿ.ಎಸ್‌ಗೆ ವಾರ್ನಿಂಗ್ ಹೊಡುತ್ತಾನೆ. ಈ ಕಡೆ ಶಕುಂತಳಾದೇವಿಗೆ ಮಗನನ್ನು ಕಳೆದುಕೊಂಡ ದುಃಖದಲ್ಲಿ ಅಳುತ್ತಾ ಕೂತಿರುವಾಗ ತಪ್ಪು ಮಾಡಿದವರಿಗೆ ಖಂಡಿತವಾಗಿಯೂ ಶಿಕ್ಷೆ ಆಗುತ್ತೆ, ನಿಮಗೆ ನ್ಯಾಯ ಸಿಗುತ್ತದೆ. ನನ್ನ ಅಪ್ಪನ ವಿರುದ್ಧ ನಾನೇ ಸಾಕ್ಷಿ ಹೇಳುತ್ತೇನೆ ಅತ್ತೆ ಅಂತ ನಕ್ಷತ್ರ ಆಕೆಯ ಅತ್ತೆ ಶಕುಂತಳಾದೇವಿಗೆ ಸಮಾಧಾನ ಮಾಡಲು ಬರುತ್ತಾಳೆ.
ತನ್ನ ಮಗನ ಸಾವಿಗೆ, ತನ್ನ ಕುಟುಂಬದ ನೆಮ್ಮದಿ ಹಾಳಾಗಲು ಕಾರಣವಾದ ಆ ತಂದೆ ಮಗಳನ್ನು ನೋಡಲು ಇಷ್ಟವಿಲ್ಲದ ಶಕುಂತಳಾದೇವಿ ನಕ್ಷತ್ರಳ ಸಮಾಧಾನದ ಮಾತನ್ನು ಕೇಳಲು ಸಾಧ್ಯನಾ. ಖಂಡಿತವಾಗಿಯೂ ಇಲ್ಲ. ನಕ್ಷತ್ರಳ ಮಾತಿಗೆ ಕೋಪದಲ್ಲೇ ಆಗುವುದಿದ್ದರೆ ನನ್ನ ಮಗನನ್ನು ವಾಪಸ್ ಕರೆದುಕೊಂಡು ಬಾ, ನಿನ್ನ ನ್ಯಾಯ ಯಾರಿಗೆ ಬೇಕು. ನನಗೆ ನನ್ನ ಮಗ ಬೇಕು ಎಂದು ಶಕುಂತಳಾದೇವಿ ಹೇಳುತ್ತಾರೆ. ತಾಯಿಯನ್ನು ಈ ಪರಿಸ್ಥಿತಿಯಲ್ಲಿ ನೋಡಲಾಗದೆ ಭೂಪತಿ ಶಕುಂತಳಾದೇವಿಯನ್ನು ಮನೆಗೆ ಕರೆದುಕೊಂಡು ಹೋಗುತ್ತಾನೆ.
ಇದನ್ನು ಓದಿ:Lakshana Serial: ತಂದೆಯ ತಪ್ಪಿಗೆ ನಕ್ಷತ್ರಳ ಬಳಿ ಕ್ಷಮೆಯಿಲ್ಲ, ನಕ್ಷತ್ರಳ ಮುಂದಿನ ನಿರ್ಧಾರ ಏನು?
ಇಲ್ಲಿ ಒಬ್ಬಳೇ ಇದ್ದ ನಕ್ಷತ್ರಳ ಬಳಿ ಬಂದ ಆರತಿ ಕೋಪದಿಂದ ಈಗ ನಿನಗೆ ಸಮಧಾನವಾಗಿರಬೇಕಲ್ವ. ಅಷ್ಟೊಂದು ಪ್ರೀತಿ ತೋರಿದ ತಂದೆಗೆ ಒಳ್ಳೆಯ ಬಹುಮಾನ ಕೊಟ್ಟಿದ್ದೀಯಾ. ನೀನೋಬ್ಬಳು ಮಗಳಾ, ನೀನಿರದಿದ್ದರೆ ಏನಂತೆ ನನ್ನ ಗಂಡನನ್ನು ಹೇಗೆ ಕಾಪಾಡಬೇಕೆಂದು ನನಗೆ ಗೊತ್ತು ಎಂದು ರೇಗಾಡಿ ಮಾತನಾಡುತ್ತಾರೆ. ತಂದೆ ಮಾಡಿದ ತಪ್ಪಿಗೆ ಮನೆಯವರಿಗೆ ಮುಖ ತೋರಿಸಲು ಆಗದಿದ್ದರೂ ಮನೆಗೆ ಹೋದ ನಕ್ಷತ್ರಳಿಗೆ ಮಯೂರಿ ಮತ್ತು ಶೆರ್ಲಿ ಸಮಾಧಾನ ಮಾಡಿ, ನಿನ್ನ ತಂದೆ ಮಾಡಿದ ತಪ್ಪಿಗೆ ಅವರ ವಿರುದ್ಧ ಸಾಕ್ಷಿ ಹೇಳಿ ಈ ಮನೆಯವರಿಗೆ ನ್ಯಾಯ ಸಿಗುವಂತೆ ಮಾಡುತ್ತೀಯಾ ಅಲ್ವ. ಅದೇ ನಮಗೆ ಸಮಧಾನ.
ನಿನ್ನ ನಿರ್ಧಾರ ಸರಿಯಾಗಿದೆ ಎಂದು ಹೆಳುತ್ತಾರೆ. ಮಯೂರಿಯ ಈ ಮಾತನ್ನು ಕೇಳಿದ ಶೌರ್ಯ ಮತ್ತು ಪೃಥ್ವಿ ಬಂದು ನಕ್ಷತ್ರಳ ಮೇಲೆನೇ ರೇಗಾಡುತ್ತಾರೆ. ಈಕೆಯ ಕಾರಣದಿಂದಲೇ ನಮ್ಮ ಮನೆಯ ನೆಮ್ಮದಿ ಹಾಳಾಗಿದ್ದು. ಇವಳನ್ನು ಉಳಿಸಲು ಹೋಗಿ ಆ ಸಿ.ಎಸ್ ನಮ್ಮ ತಮ್ಮನನ್ನೇ ಸಾಯಿಸಿ ಬಿಟ್ಟ ಪಾಪಿ. ಇದೆಲ್ಲದಕ್ಕೂ ಇವಳೇ ಕಾರಣ. ಮೌರ್ಯನನ್ನು ಎಷ್ಟು ಪ್ರೀತಿ ಮಾಡುತ್ತಿದ್ದೆವು ಎಂಬುದು ನಮಗೆ ಮಾತ್ರ ಗೊತ್ತು. ಅಣ್ಣಂದಿರಿಗೇನೆ ಇಷ್ಟು ನೋವಾಗಿರಬೇಕಾದರೆ ಇನ್ನು ಅಮ್ಮನಿಗೆ ಹೇಗಾಗಿರಬೇಡ. ಏನೆಲ್ಲಾ ನಡೆತಿದೆ ಅದಕ್ಕೆಲ್ಲಾ ನೇರ ಹೊಣೆ ಇವಳೇ ಎಂದು ನಕ್ಷತ್ರಳ ವಿರುದ್ಧ ಶೌರ್ಯ ರೇಗಾಡಿದ್ದು ಮಾತ್ರವಲ್ಲದೆ, ಮಯೂರಿ ಮತ್ತು ಶೆರ್ಲಿಗೆ ಇನ್ನೊಂದು ಬಾರಿ ನಕ್ಷತ್ರಳ ಜೊತೆ ಸೇರಬಾರದು ಎಂದು ವಾರ್ನಿಂಗ್ ಕೊಡುತ್ತಾನೆ.
ಅಣ್ಣಂದಿರು ತಮ್ಮನನ್ನು ಕಳೆದುಕೊಂಡ ದುಃಖದಲ್ಲಿ ನಕ್ಷತ್ರಳ ಮೇಲೆ ರೇಗಾಡಿದರೆ, ಅತ್ತ ಕಡೆ ಶಕುಂತಳಾದೇವಿ ಹೆತ್ತ ಮಗನನ್ನು ಕಳೆದುಕೊಂಡ ದುಃಖದಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಾ ನನ್ನ ಮಗನಿಗೆ ಈ ಪರಿಸ್ಥಿತಿ ಬರುತ್ತದೆ ಎಂಬುವುದನ್ನು ನಾನು ಕಲ್ಪನೆಯೇ ಮಾಡಿರಲಿಲ್ಲ. ನೀನು ಸರಿ ಹೋಗಲಿ ಅಂತ ನಿನ್ನನ್ನು ದೂರ ಮಾಡಿದೆ. ಈಗ ನೋಡಿದರೆ ಯಾರ ಕೈಗು ಸಿಗದಿರುವಂತೆ ದೂರ ಹೋಗಿ ಬಿಟ್ಟೆಯಲ್ಲ. ಕೊನೆ ಪಕ್ಷ ಮೌರ್ಯನ ಮುಖ ನೋಡುವ ಭಾಗ್ಯವೂ ಈ ಅಮ್ಮನಿಗೆ ಸಿಗಲಿಲ್ಲ ಅಲ್ವ ಎಂದು ಹೇಳಿ ಜೋರಾಗಿ ಅಳುತ್ತಾರೆ. ಅಳುವ ಅಮ್ಮನನ್ನು ಸಮಾಧಾನ ಪಡಿಸಲು ಭೂಪತಿ ತನ್ನಿಂದ ಆಗುವಷ್ಟು ಪ್ರಯತ್ನ ಪಡುತ್ತಾನೆ. ಅವನು ಕೂಡಾ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುವ ತಮ್ಮನನ್ನು ಕಳೆದುಕೊಂಡ ದುಃಖದಲ್ಲೇ ಇದ್ದಾನಲ್ಲ. ಇಂತಹ ಸಂದರ್ಭದಲ್ಲಿ ಅತ್ತೆಯ ಜೊತೆ ಮಾತನಾಡಬೇಕು ಎಂದು ಹೇಳಿ ನಕ್ಷತ್ರ ಶಕುಂತಳಾದೇವಿ ಬಳಿ ಬರುತ್ತಾಳೆ. ಆದರೆ ನಕ್ಷತ್ರಳ ಮುಖ ನೋಡಲು ಅವರಿಗೆ ಇಷ್ಟವಿಲ್ಲದೆ ಆಕೆಯನ್ನು ಹೊರ ಕಳುಹಿಸುತ್ತಾರೆ. ಈ ಎಲ್ಲ ಕಷ್ಟಗಳಿಂದ ನಕ್ಷತ್ರ ಹೇಗೆ ಹೊರ ಬರುತ್ತಾಳೆ ಎಂಬುವುದನ್ನು ಮುಂದೆ ನೋಡಬೇಕಾಗಿದೆ.
ಮಧುಶ್ರೀ ಅಂಚನ್
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ