Anupama Gowda: ಬಿಗ್​ ಬಾಸ್​ನಿಂದ ಎಲಿಮಿನೇಟ್​ ಆದ ಅನುಪಮಾ ಗೌಡ; ನಟಿ-ನಿರೂಪಕಿಯ ದೊಡ್ಮನೆ ಆಟ ಅಂತ್ಯ

BBK9 | Bigg Boss Elimination: ನಟಿ ಅನುಪಮಾ ಗೌಡ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ ಎಲಿಮಿನೇಟ್​ ಆಗಿದ್ದಾರೆ. 85ನೇ ದಿನಕ್ಕೆ ಅವರ ಜರ್ನಿ ಅಂತ್ಯವಾಗಿದೆ.

Anupama Gowda: ಬಿಗ್​ ಬಾಸ್​ನಿಂದ ಎಲಿಮಿನೇಟ್​ ಆದ ಅನುಪಮಾ ಗೌಡ; ನಟಿ-ನಿರೂಪಕಿಯ ದೊಡ್ಮನೆ ಆಟ ಅಂತ್ಯ
ಅನುಪಮಾ ಗೌಡ
Follow us
TV9 Web
| Updated By: ಮದನ್​ ಕುಮಾರ್​

Updated on: Dec 18, 2022 | 9:49 PM

‘ಬಿಗ್​ ಬಾಸ್​ ಕನ್ನಡ ಸೀಸನ್​ 9’ (Bigg Boss Kannada Season 9) ಕೊನೇ ಹಂತವನ್ನು ಸಮೀಪಿಸುತ್ತಿದೆ. ಇನ್ನು ಎರಡೇ ವಾರಗಳಲ್ಲಿ ಫಿನಾಲೆ ನಡೆಯಲಿದೆ. ಕೆಲವೇ ಸ್ಪರ್ಧಿಗಳ ನಡುವೆ ಪೈಪೋಟಿ ಮುಂದುವರಿದಿದೆ. 12ನೇ ವಾರದ ಎಲಿಮಿನೇಷನ್​ ಪ್ರಕ್ರಿಯೆಯಲ್ಲಿ ನಟಿ, ನಿರೂಪಕಿ ಅನುಪಮಾ ಗೌಡ (Anupama Gowda) ಅವರು ಔಟ್​ ಆಗಿದ್ದಾರೆ. ಇಷ್ಟು ದಿನಗಳ ಕಾಲ ಫೈಟ್​ ನೀಡಿದ್ದ ಅವರ ದೊಡ್ಮನೆ ಜರ್ನಿ ಈಗ ಅಂತ್ಯವಾಗಿದೆ. ಅನುಪಮಾ ಗೌಡ ಅವರು ಈ ಹಿಂದೆ ‘ಬಿಗ್​ ಬಾಸ್​ ಕನ್ನಡ ಸೀಸನ್​ 5’ರಲ್ಲಿ ಸ್ಪರ್ಧಿಸಿದ್ದರು. ಆ ಅನುಭವದ ಆಧಾರದಲ್ಲಿ 9ನೇ ಸೀಸನ್​ನಲ್ಲೂ (BBK9) ಭಾಗವಹಿಸುವ ಚಾನ್ಸ್​ ಅವರಿಗೆ ಸಿಕ್ಕಿತು. ಆದರೆ ಈ ಬಾರಿಯೂ ಟ್ರೋಫಿ ಗೆಲ್ಲಬೇಕು ಎಂಬ ಅವರ ಕನಸು ಭಗ್ನವಾಗಿದೆ.

ಈ ವಾರ ಮನೆಯಲ್ಲಿ ಇದ್ದದ್ದು 9 ಮಂದಿ ಮಾತ್ರ. ಆರ್ಯವರ್ಧನ್​ ಗುರೂಜಿ, ಅಮೂಲ್ಯಾ ಗೌಡ, ರೂಪೇಶ್​ ರಾಜಣ್ಣ, ದಿವ್ಯಾ ಉರುಡುಗ, ಅರುಣ್​ ಸಾಗರ್​, ರಾಕೇಶ್​ ಅಡಿಗ, ರೂಪೇಶ್​ ಅಡಿಗ, ಅನುಪಮಾ ಗೌಡ, ದೀಪಿಕಾ ದಾಸ್​ ನಡುವೆ ಹಣಾಹಣಿ ನಡೆದಿತ್ತು. ಆರ್ಯವರ್ಧನ್​ ಗುರೂಜಿ ಕಳಪೆ ಪಟ್ಟ ಪಡೆದುಕೊಂಡರೆ, ರಾಕೇಶ್​ ಅಡಿಗ ಅವರು ‘ಉತ್ತಮ’ ಪಟ್ಟ ಗಿಟ್ಟಿಸಿಕೊಂಡರು. ಅಂತಿಮವಾಗಿ ಅನುಪಮಾ ಗೌಡ ಅವರು ಎಲಿಮಿನೇಟ್​ ಆದರು.

ಇದನ್ನೂ ಓದಿ: ಪ್ರಶಾಂತ್ ಸಂಬರ್ಗಿ, ಅನುಪಮಾ ಗೌಡಗೆ ಸಖತ್ ಆಗಿ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್

ಇದನ್ನೂ ಓದಿ
Image
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ಕಿಚ್ಚನ ಚಪ್ಪಾಳೆ ಪಡೆದ ದೀಪಿಕಾ ದಾಸ್​:

ನಟಿ ದೀಪಿಕಾ ದಾಸ್​ ಅವರಿಗೆ ಈ ವಾರದ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಇದರಿಂದ ಅವರಿಗೆ ಹೆಚ್ಚಿನ ಬಲ ಸಿಕ್ಕಂತೆ ಆಗಿದೆ. ‘ನನಗೆ ಇದು ವಿಶೇಷ ಕ್ಷಣ. ಸತತ ಎರಡನೇ ಬಾರಿಗೆ ನನಗೆ ಈ ಚಪ್ಪಾಳೆ ಸಿಕ್ಕಿದೆ’ ಎಂದು ದೀಪಿಕಾ ದಾಸ್​ ಖುಷಿಪಟ್ಟಿದ್ದಾರೆ. ಅದೇ ರೀತಿ, ಅರುಣ್​ ಸಾಗರ್​ ಅವರ ಆಟಕ್ಕೂ ಕಿಚ್ಚ ಭೇಷ್​ ಎಂದಿದ್ದಾರೆ.

ಇದನ್ನೂ ಓದಿ: Anupama Gowda: ಅಭಿಮಾನಿಗಳಿಗೆ ಇಷ್ಟವಾಗ್ತಿದೆ ಅನುಪಮಾ ಗೌಡ ಸಮತೋಲನದ ಆಟ

ಈ ಸೀಸನ್​ನಲ್ಲಿ ಪ್ರವೀಣರು ಮತ್ತು ನವೀನರು ಎಂಬ ಕಾನ್ಸೆಪ್ಟ್​ ಪರಿಚಯಿಸಲಾಯಿತು. ಈ ಹಿಂದಿನ ಸೀಸನ್​ನಲ್ಲಿ ಭಾಗವಹಿಸಿದ್ದ ಅನುಭವಿ ಸ್ಪರ್ಧಿಗಳು ಪ್ರವೀಣರು. ಹೊಸ ಸ್ಪರ್ಧಿಗಳು ನವೀನರು. ನಟಿ ಅನುಪಮಾ ಗೌಡ ಅವರು ಪ್ರವೀಣರ ತಂಡದಲ್ಲಿ ದೊಡ್ಮನೆ ಸೇರಿಕೊಂಡಿದ್ದರು. ಆದರೆ ಅವರು ಅಂತಿಮ ಹಂತ ಸಮೀಪಿಸುವುದಕ್ಕೂ ಮುನ್ನವೇ ಔಟ್​ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್