‘ಧಾರ್ಮಿಕ ಭಯೋತ್ಪಾದನೆ ತಡೆಗೆ ತೆರಿಗೆ ಹಣ ಬಳಕೆ ಆಗುತ್ತಿದೆ’; ಬೊಬ್ಬೆ ಹೊಡೆದವರಿಗೆ ವಿವೇಕ್ ಅಗ್ನಿಹೋತ್ರಿ ತಿರುಗೇಟು

ಈ ವಿಡಿಯೋಗೆ ಅನೇಕರು ಟೀಕೆ ಮಾಡಿದ್ದರು. ‘ನಮ್ಮ ತೆರಿಗೆ ಹಣ ಹೀಗೆಲ್ಲ ವ್ಯಯವಾಗುತ್ತಿದೆ’ ಎಂದು ಒಂದಷ್ಟು ಮಂದಿ ಟೀಕೆ ಮಾಡಿದ್ದರು. ಇದಕ್ಕೆ ವಿವೇಕ್ ಅಗ್ನಿಹೋತ್ರಿ ಅವರು ತಿರುಗೇಟು ನೀಡಿದ್ದಾರೆ.

‘ಧಾರ್ಮಿಕ ಭಯೋತ್ಪಾದನೆ ತಡೆಗೆ ತೆರಿಗೆ ಹಣ ಬಳಕೆ ಆಗುತ್ತಿದೆ’; ಬೊಬ್ಬೆ ಹೊಡೆದವರಿಗೆ ವಿವೇಕ್ ಅಗ್ನಿಹೋತ್ರಿ ತಿರುಗೇಟು
ವಿವೇಕ್ ಅಗ್ನಿಹೋತ್ರಿ
Follow us
| Updated By: ರಾಜೇಶ್ ದುಗ್ಗುಮನೆ

Updated on: Dec 24, 2022 | 5:01 PM

ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಖ್ಯಾತಿ ಜತೆಗೆ ಒಂದಷ್ಟು ಬೆದರಿಕೆಗಳೂ ಬಂದವು. ಇದಕ್ಕೆಲ್ಲ ಅವರು ತಲೆಕೆಡಿಸಿಕೊಂಡಿಲ್ಲ. ಸದ್ಯ ವಿವೇಕ್ ಅಗ್ನಿಹೋತ್ರಿಗೆ ವೈ ಶ್ರೇಣಿಯ ಭದ್ರತೆ (Y Catogery Security) ನೀಡಲಾಗಿದೆ. ಇತ್ತೀಚೆಗೆ ಅವರು ವೈ ಕೆಟಗರಿ ಭದ್ರತೆಯಲ್ಲಿ ವಾಕಿಂಗ್ ಹೋಗಿದ್ದರು. ‘ನಮ್ಮ ತೆರಿಗೆ ಹಣ ಹೀಗೆ ವ್ಯಯವಾಗುತ್ತಿದೆ’ ಎಂದು ಒಂದಷ್ಟು ಜನ ಕೊಂಕು ನುಡಿದಿದ್ದರು. ಇದಕ್ಕೆ ವಿವೇಕ್ ಅಗ್ನಿಹೋತ್ರಿ ತಿರುಗೇಟು ಕೊಟ್ಟಿದ್ದಾರೆ.

ವಿವೇಕ್​ ಅಗ್ನಿಹೋತ್ರಿ ಅವರು ಇತ್ತೀಚೆಗೆ ವಿಡಿಯೋ ಶೇರ್​ ಮಾಡಿಕೊಂಡಿದ್ದರು. ಬೆಳಿಗ್ಗೆ​ ವಾಕಿಂಗ್​ ಹೊರಟ ಅವರನ್ನು ಭದ್ರತಾ ಸಿಬ್ಬಂದಿ ಸುತ್ತುವರಿದಿರುವ ವಿಡಿಯೋ ಇದಾಗಿತ್ತು. ‘ಕಾಶ್ಮೀರದಲ್ಲಿ ನಡೆದ ಹಿಂದೂಗಳ ಹತ್ಯಾಕಾಂಡ ತೋರಿಸಿದ್ದಕ್ಕಾಗಿ ತೆರೆಬೇಕಾದ ಬೆಲೆ ಇದು. ಹಿಂದೂಗಳು ಬಹುಸಂಖ್ಯೆಯಲ್ಲಿ ಇರುವ ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ! ನನ್ನದೇ ದೇಶದಲ್ಲಿ ಬಂಧಿ’ ಎಂದು ವಿವೇಕ್​ ಅಗ್ನಿಹೋತ್ರಿ ಅವರು ಈ ವಿಡಿಯೋಗೆ ಕ್ಯಾಪ್ಷನ್​ ನೀಡಿದ್ದರು.

ಇದನ್ನೂ ಓದಿ
Image
ಸೀಕ್ರೇಟ್​ ಆಗಿ ಮತ್ತೊಂದು ಸಿನಿಮಾ ಶೂಟಿಂಗ್ ಮುಗಿಸಿದ ‘ದಿ ಕಾಶ್ಮೀರ್​ ಫೈಲ್ಸ್​’ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ
Image
‘ದಿ ಕಾಶ್ಮೀರ್​ ಫೈಲ್ಸ್​​’ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಪತ್ನಿ ಪಲ್ಲವಿ ಜೋಶಿ ಹಿನ್ನೆಲೆ ಏನು? ಇಲ್ಲಿದೆ ಅವರ ಲವ್​ಸ್ಟೋರಿ
Image
‘ದಿ ಕಾಶ್ಮೀರ್​ ಫೈಲ್ಸ್​’ ಮಾತ್ರವಲ್ಲ, ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರ ಇತರೆ ಚಿತ್ರಗಳ ಬಗ್ಗೆ ನಿಮಗೆ ಗೊತ್ತಾ?
Image
ವಿವೇಕ್​ ಅಗ್ನಿಹೋತ್ರಿ ಹಿನ್ನೆಲೆ ಏನು? ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ನಿರ್ದೇಶಕರ ಬಗ್ಗೆ ಇಲ್ಲಿದೆ ಮಾಹಿತಿ..

ಈ ವಿಡಿಯೋಗೆ ಅನೇಕರು ಟೀಕೆ ಮಾಡಿದ್ದರು. ‘ನಮ್ಮ ತೆರಿಗೆ ಹಣ ಹೀಗೆಲ್ಲ ವ್ಯಯವಾಗುತ್ತಿದೆ’ ಎಂದು ಒಂದಷ್ಟು ಮಂದಿ ಟೀಕೆ ಮಾಡಿದ್ದರು. ಇದಕ್ಕೆ ವಿವೇಕ್ ಅಗ್ನಿಹೋತ್ರಿ ಅವರು ತಿರುಗೇಟು ನೀಡಿದ್ದಾರೆ. ಭದ್ರತಾ ಸಿಬ್ಬಂದಿಯ ಫೋಟೋ ಹಂಚಿಕೊಂಡಿರುವ ಅವರು, ‘ಧಾರ್ಮಿಕ ಭಯೋತ್ಪಾದನೆಯನ್ನು ತಡೆಯಲು ತೆರಿಗೆ ಹಣವನ್ನು ಬಳಸಲಾಗುತ್ತಿದೆ. ಇದು ನಿಂತರೆ ನಾನೂ ಕೂಡ ಸ್ವತಂತ್ರವಾಗಿ ಬದುಕಬಹುದು’ ಎಂದು ಉತ್ತರ ನೀಡಿದ್ದಾರೆ. ಈ ಮೂಲಕ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ:  ಹೆಡ್​ಲೈನ್​ ಓದಿ ಯಾಮಾರಿದ ವಿವೇಕ್​ ಅಗ್ನಿಹೋತ್ರಿ; ‘ಕಾಂತಾರ’ ಬಗ್ಗೆ ಅನುರಾಗ್​ ಕಶ್ಯಪ್ ಹೇಳಿದ್ದೇ ಬೇರೆ

‘ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ತೆರೆಗೆ ಬಂದ ನಂತರದಲ್ಲಿ ವಿವೇಕ್ ಅಗ್ನಿಹೋತ್ರಿ ಅವರು ಮುನ್ನೆಲೆಗೆ ಬಂದರು. ಈಗ ‘ದಿ ವ್ಯಾಕ್ಸಿನ್ ವಾರ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಕೊವಿಡ್ ಸಮಯದಲ್ಲಿ ಭಾರತ ವ್ಯಾಕ್ಸಿನ್ ತಯಾರಿಸಿದ ಕಥೆ ಈ ಚಿತ್ರದಲ್ಲಿದೆ. ಈ ಸಿನಿಮಾ 2024ರಲ್ಲಿ ತೆರೆಗೆ ಬರುತ್ತಿದೆ. ರಾಜಕೀಯ ಉದ್ದೇಶದಿಂದ ಮಾಡಲಾದ ಸಿನಿಮಾ ಇದು ಎಂದು ಕೆಲವರು ಟೀಕೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ