Main Atal Hoon: ಅಟಲ್​ ಬಿಹಾರಿ ವಾಜಪೇಯಿ ಪಾತ್ರದಲ್ಲಿ ಪಂಕಜ್​​ ತ್ರಿಪಾಠಿ; ‘ಮೈ ಅಟಲ್​ ಹು’ ಫಸ್ಟ್​ ಲುಕ್​ ರಿಲೀಸ್​

Atal Bihari Vajpayee | Pankaj Tripathi: ‘ಮೈ ಅಟಲ್​ ಹು’ ಚಿತ್ರಕ್ಕೆ ರವಿ ಜಾದವ್​ ನಿರ್ದೇಶನ ಮಾಡುತ್ತಿದ್ದಾರೆ. ಅಟಲ್​ ಬಿಹಾರಿ ವಾಜಪೇಯಿ ಪಾತ್ರದಲ್ಲಿ ಪಂಕಜ್​​ ತ್ರಿಪಾಠಿ ನಟಿಸುತ್ತಿದ್ದಾರೆ.

Main Atal Hoon: ಅಟಲ್​ ಬಿಹಾರಿ ವಾಜಪೇಯಿ ಪಾತ್ರದಲ್ಲಿ ಪಂಕಜ್​​ ತ್ರಿಪಾಠಿ; ‘ಮೈ ಅಟಲ್​ ಹು’ ಫಸ್ಟ್​ ಲುಕ್​ ರಿಲೀಸ್​
ಪಂಕಜ್ ತ್ರಿಪಾಠಿ
Follow us
| Updated By: ಮದನ್​ ಕುಮಾರ್​

Updated on: Dec 25, 2022 | 3:33 PM

ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ (Atal Bihari Vajpayee) ಅವರ ವ್ಯಕ್ತಿತ್ವ ಕೋಟ್ಯಂತರ ಜನರಿಗೆ ಮಾದರಿ. ಇಂದು (ಡಿ.25) ಅವರ ಜನ್ಮದಿನದ ಅಂಗವಾಗಿ ಹಲವು ರೀತಿಯಲ್ಲಿ ಸ್ಮರಿಸಿಕೊಳ್ಳಲಾಗುತ್ತಿದೆ. ಭಾರತಕ್ಕೆ ಅವರು ನೀಡಿದ ಕೊಡುಗೆಯನ್ನು ನೆನಪಿಸಿಕೊಳ್ಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ಅವರ ಕುರಿತು ನಿರ್ಮಾಣ ಆಗುತ್ತಿರುವ ‘ಮೈ ಅಟಲ್​ ಹು’ (Main Atal Hoon) ಚಿತ್ರದ ಫಸ್ಟ್​ಲುಕ್​ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಖ್ಯಾತ ನಟ ಪಂಕಜ್​ ತ್ರಿಪಾಠಿ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಅಟಲ್​​ ಬಿಹಾರಿ ವಾಜಪೇಯಿ ಗೆಟಪ್​ನಲ್ಲಿ ಪಂಕಜ್​ ತ್ರಿಪಾಠಿ (Pankaj Tripathi) ಅವರನ್ನು ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ. ಸದ್ಯ ಈ ಪೋಸ್ಟರ್​ ವೈರಲ್​ ಆಗುತ್ತಿದೆ.

ಅಟಲ್​ ಬಿಹಾರಿ ವಾಜಪೇಯಿ ಅವರು ಕೇವಲ ರಾಜಕಾರಣಿ ಆಗಿರಲಿಲ್ಲ. ಅವರು ಕವಿಯೂ ಹೌದು. ಅದೇ ರೀತಿ ಅವರ ವ್ಯಕ್ತಿತ್ವಕ್ಕೆ ಹಲವು ಆಯಾಮಗಳಿವೆ. ಅದೆಲ್ಲವನ್ನೂ ‘ಮೈ ಅಟಲ್​ ಹು’ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದನ್ನು ತಿಳಿಸುವ ಸಲುವಾಗಿ ಚಿಕ್ಕ ಟೀಸರ್​ ರಿಲೀಸ್​ ಮಾಡಲಾಗಿದೆ. ಈ ಪಾತ್ರ ಮಾಡುತ್ತಿರುವುದಕ್ಕೆ ಪಂಕಜ್​ ತ್ರಿಪಾಠಿ ಸಖತ್​ ಖುಷಿ ಆಗಿದ್ದಾರೆ.

ಇದನ್ನೂ ಓದಿ
Image
PM Narendra Modi: ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ
Image
Mann Ki Baat: ಮೋದಿ ಮನ್ ಕಿ ಬಾತ್​​ನಲ್ಲಿ ಅಟಲ್ ಸ್ಮರಣೆ; ಭಾರತದ ಸಾಧನೆಗಳ ಮೆಲುಕು ಹಾಕಿ 2022ಕ್ಕೆ ವಿದಾಯ ಹೇಳಿದ ಪ್ರಧಾನಿ
Image
‘ಎಮರ್ಜೆನ್ಸಿ’ ಚಿತ್ರದಲ್ಲಿ ಅಟಲ್​ ಬಿಹಾರಿ ವಾಜಪೇಯಿ ಪಾತ್ರಕ್ಕೆ ಶ್ರೇಯಸ್​ ತಲ್ಪಡೆ ಆಯ್ಕೆ; ಫಸ್ಟ್​ಲುಕ್​ ರಿಲೀಸ್​
Image
Vajpayee Biopic: ಅಟಲ್​ ಬಿಹಾರಿ ವಾಜಪೇಯಿ​ ಬಯೋಪಿಕ್​ ಘೋಷಣೆ; ಸಿನಿಮಾ ಆಗಲಿದೆ ‘ಅಜಾತಶತ್ರು’ ಬದುಕಿನ ವಿವರ

ಇದನ್ನೂ ಓದಿ: ‘ಎಮರ್ಜೆನ್ಸಿ’ ಚಿತ್ರದಲ್ಲಿ ಅಟಲ್​ ಬಿಹಾರಿ ವಾಜಪೇಯಿ ಪಾತ್ರಕ್ಕೆ ಶ್ರೇಯಸ್​ ತಲ್ಪಡೆ ಆಯ್ಕೆ; ಫಸ್ಟ್​ಲುಕ್​ ರಿಲೀಸ್​

‘ಮೈ ಅಟಲ್​ ಹು’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ರವಿ ಜಾದವ್​ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಸಲೀಮ್-ಸುಲೈಮಾನ್​ ಸಂಗೀತ ನಿರ್ದೇಶನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. 2023ರ ಡಿಸೆಂಬರ್​ 25ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಈವರೆಗೂ ಅನೇಕ ಚಾಲೆಂಜಿಂಗ್​ ಪಾತ್ರಗಳನ್ನು ಮಾಡಿ ಫೇಮಸ್​ ಆಗಿರುವ ಪಂಕಜ್​ ತ್ರಿಪಾಠಿ ಅವರನ್ನು ಅಟಲ್​ ಬಿಹಾರಿ ವಾಜಪೇಯಿ ಪಾತ್ರದಲ್ಲಿ ತೆರೆ ಮೇಲೆ ನೋಡಲು ಫ್ಯಾನ್ಸ್​ ಕಾದಿದ್ದಾರೆ.

ಅಟಲ್​ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ನಮನ ಸಲ್ಲಿಸಿದ್ದಾರೆ. ‘ಅಟಲ್​ಜಿ ಅವರಿಗೆ ಜಯಂತಿಯಂದು ನಮನಗಳು. ಭಾರತಕ್ಕೆ ಅವರು ನೀಡಿದ ಕೊಡುಗೆ ಅಳಿಸಲಾಗದು. ಅವರ ನಾಯಕತ್ವ ಮತ್ತು ದೂರದೃಷ್ಟಿ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ’ ಎಂದು ಮೋದಿ ಟ್ವೀಟ್​ ಮಾಡಿದ್ದಾರೆ. ‘ಮನ್​ ಕಿ ಬಾತ್​’ ಸಂಚಿಕೆಯಲ್ಲೂ ವಾಜಪೇಯಿ ಬಗ್ಗೆ ಅವರು ಮಾತನಾಡಿದ್ದಾರೆ.

ಇದನ್ನೂ ಓದಿ: Vajpayee Biopic: ಅಟಲ್​ ಬಿಹಾರಿ ವಾಜಪೇಯಿ​ ಬಯೋಪಿಕ್​ ಘೋಷಣೆ; ಸಿನಿಮಾ ಆಗಲಿದೆ ‘ಅಜಾತಶತ್ರು’ ಬದುಕಿನ ವಿವರ

‘ಅಟಲ್ ಬಿಹಾರಿ ವಾಜಪೇಯಿ ಅವರು ಶಿಕ್ಷಣ, ವಿದೇಶಾಂಗ ನೀತಿ ಮತ್ತು ಮೂಲಸೌಕರ್ಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಅವರ 98ನೇ ಜನ್ಮದಿನದಂದು ನಾನು ಅವರಿಗೆ ನಮ್ರತೆಯಿಂದ ನಮಿಸುತ್ತೇನೆ. ಅವರು ದೇಶಕ್ಕೆ ಅಸಾಧಾರಣ ನಾಯಕತ್ವವನ್ನು ನೀಡಿದ ಮಹಾನ್ ರಾಜನೀತಿಜ್ಞರಾಗಿದ್ದರು. ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಅವರಿಗೊಂದು ವಿಶೇಷ ಸ್ಥಾನವಿದೆ’ ಎಂದು ಮೋದಿ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ