AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಮರ್ಜೆನ್ಸಿ’ ಚಿತ್ರದಲ್ಲಿ ಅಟಲ್​ ಬಿಹಾರಿ ವಾಜಪೇಯಿ ಪಾತ್ರಕ್ಕೆ ಶ್ರೇಯಸ್​ ತಲ್ಪಡೆ ಆಯ್ಕೆ; ಫಸ್ಟ್​ಲುಕ್​ ರಿಲೀಸ್​

Shreyas Talpade | Atal Bihari Vajpayee: ಅಟಲ್​ ಬಿಹಾರಿ ವಾಜಪೇಯಿ ಅವರ ಪಾತ್ರವನ್ನು ಮಾಡುತ್ತಿರುವುದಕ್ಕೆ ಶ್ರೇಯಸ್​ ತಲ್ಪಡೆ ಅವರಿಗೆ ತುಂಬ ಖುಷಿ ಇದೆ. ತಮ್ಮನ್ನು ಆಯ್ಕೆ ಮಾಡಿದ ಕಂಗನಾ ರಣಾವತ್​ಗೆ ಅವರು ಧನ್ಯವಾದ ತಿಳಿಸಿದ್ದಾರೆ.

‘ಎಮರ್ಜೆನ್ಸಿ’ ಚಿತ್ರದಲ್ಲಿ ಅಟಲ್​ ಬಿಹಾರಿ ವಾಜಪೇಯಿ ಪಾತ್ರಕ್ಕೆ ಶ್ರೇಯಸ್​ ತಲ್ಪಡೆ ಆಯ್ಕೆ; ಫಸ್ಟ್​ಲುಕ್​ ರಿಲೀಸ್​
ಶ್ರೇಯಸ್ ತಲ್ಪಡೆ, ಅಟಲ್ ಬಿಹಾರಿ ವಾಜಪೇಯಿ
TV9 Web
| Updated By: ಮದನ್​ ಕುಮಾರ್​|

Updated on: Jul 27, 2022 | 12:19 PM

Share

ದಿನದಿಂದ ದಿನಕ್ಕೆ ‘ಎಮರ್ಜೆನ್ಸಿ’ ಸಿನಿಮಾದ (Emergency Movie) ಕ್ರೇಜ್​ ಹೆಚ್ಚಾಗುತ್ತಿದೆ. ನೈಜ ಘಟನೆಗಳನ್ನು ಆಧರಿಸಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಅನೇಕ ಪ್ರತಿಭಾವಂತ ಕಲಾವಿದರು ನಟಿಸುತ್ತಿದ್ದಾರೆ. ಈಗಾಗಲೇ ತಿಳಿದಿರುವಂತೆ ಇಂದಿರಾ ಗಾಂಧಿ ಅವರ ಪಾತ್ರ ಈ ಚಿತ್ರದಲ್ಲಿ ಪ್ರಮುಖವಾಗಿ ಇರಲಿದೆ. ಆ ಪಾತ್ರವನ್ನು ನಟಿ ಕಂಗನಾ ರಣಾವತ್​ ಅವರು ನಿಭಾಯಿಸುತ್ತಿದ್ದಾರೆ. ಉಳಿದಂತೆ, ಜಯಪ್ರಕಾಶ್​ ನಾರಾಯಣ್​ ಪಾತ್ರವನ್ನು ಅನುಪಮ್​ ಖೇರ್​ ಮಾಡುತ್ತಿದ್ದಾರೆ. ಅಟಲ್​ ಬಿಹಾರಿ ವಾಜಪೇಯಿ (Atal Bihari Vajpayee) ಪಾತ್ರದಲ್ಲಿ ಶ್ರೇಯಸ್​ ತಲ್ಪಡೆ ನಟಿಸುತ್ತಿದ್ದಾರೆ. ಎಲ್ಲ ಕಲಾವಿದರ ಫಸ್ಟ್​ ಲುಕ್ ಪೋಸ್ಟರ್​​ಗಳು ಗಮನ ಸೆಳೆಯುತ್ತಿವೆ. ಈಗ ಶ್ರೇಯಸ್​ ತಲ್ಪಡೆ (Shreyas Talpade) ಅವರ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಆ ಮೂಲಕ ‘ಎಮರ್ಜೆನ್ಸಿ’ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿದ್ದಾರೆ ನಾಯಕಿ ಕಮ್​ ನಿರ್ದೇಶಕಿ ಕಂಗನಾ ರಣಾವತ್​.

ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ಆಧರಿಸಿ ‘ಎಮರ್ಜೆನ್ಸಿ’ ಸಿನಿಮಾ ಸಿದ್ಧವಾಗುತ್ತಿದೆ. ಆ ಕಾಲಘಟ್ಟದಲ್ಲಿ ಭಾರತದ ರಾಜಕೀಯದಲ್ಲಿ ಬದಲಾವಣೆ ತರಲು ಕಾರಣರಾದ ಅನೇಕ ನಾಯಕರ ಪಾತ್ರಗಳು ಈ ಸಿನಿಮಾದಲ್ಲಿ ಹೈಲೈಟ್​ ಆಗಲಿವೆ. ನಟಿ ಕಂಗನಾ ಅವರು ಮುಖ್ಯ ಭೂಮಿಕೆಯನ್ನು ನಿಭಾಯಿಸುವುದರ ಜೊತೆಗೆ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಪಾತ್ರಧಾರಿಗಳ ಆಯ್ಕೆಯಲ್ಲಿ ಅವರ ಕೆಲಸವನ್ನು ಸಿನಿಪ್ರಿಯರು ಮೆಚ್ಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ
Image
Emergency: ‘ಇಂದಿರಾ ಗಾಂಧಿ ಈ ವಿಡಿಯೋದಲ್ಲಿ ಕಂಗನಾ ರೀತಿ ಮಾಡ್ತಿದ್ದಾರೆ’: ರಾಮ್​ ಗೋಪಾಲ್​ ವರ್ಮಾ
Image
Emergency: ನಟ ಅನುಪಮ್​ ಖೇರ್​ಗೆ ‘ಎಮರ್ಜೆನ್ಸಿ’ ಚಿತ್ರದಲ್ಲೊಂದು ಮುಖ್ಯ ಪಾತ್ರ; ಇಲ್ಲಿದೆ ಫಸ್ಟ್​ ಲುಕ್​
Image
Emergency: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್! ಗಮನ ಸೆಳೆದ ‘ಎಮರ್ಜೆನ್ಸಿ’ ಫಸ್ಟ್​ ಲುಕ್​
Image
Kangana Ranaut: ಇಂದಿರಾ ಗಾಂಧಿ ಬಗ್ಗೆ ಕಂಗನಾ ಮಾಡುವ ‘ಎಮರ್ಜೆನ್ಸಿ’ ಚಿತ್ರ ಫ್ಲಾಪ್​ ಆಗಲಿದೆ; ಭವಿಷ್ಯ ನುಡಿದ ನಟ

ಶ್ರೇಯಸ್​ ತಲ್ಪಡೆ ಅವರ ಪೋಸ್ಟರ್​ ಅನ್ನು ಕಂಗನಾ ರಣಾವತ್​ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ‘ಭಾರತ ರತ್ನ ಅಟಲ್​ ಬಿಹಾರಿ ವಾಜಪೇಯಿ ಅವರ ಪಾತ್ರದಲ್ಲಿ ನಟಿಸುತ್ತಿರುವ ಶ್ರೇಯಸ್​ ತಲ್ಪಡೆ ಪೋಸ್ಟರ್​ ಅನ್ನು ಬಿಡುಗಡೆ ಮಾಡುತ್ತಿದ್ದೇವೆ. ವಾಜಪೇಯಿ ಅವರು ನಿಜವಾದ ರಾಷ್ಟ್ರವಾದಿ ಆಗಿದ್ದರು. ದೇಶದ ಬಗ್ಗೆ ಅವರಿಗೆ ಇದ್ದ ಗೌರವ ಮತ್ತು ಪ್ರೀತಿಗೆ ಬೇರೆ ಯಾವುದೂ ಸಾಟಿ ಇಲ್ಲ. ಎಮರ್ಜೆನ್ಸಿ ಸಮಯದಲ್ಲಿ ಅವರು ಉದಯೋನ್ಮುಖ ನಾಯಕನಾಗಿದ್ದರು’ ಎಂದು ಕಂಗನಾ ಬರೆದುಕೊಂಡಿದ್ದಾರೆ.

ಈ ಪಾತ್ರ ಮಾಡುತ್ತಿರುವುದಕ್ಕೆ ಶ್ರೇಯಸ್​ ತಲ್ಪಡೆ ಅವರಿಗೆ ತುಂಬ ಖುಷಿ ಇದೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ತಮ್ಮನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿದ ಕಂಗನಾಗೆ ಅವರು ಧನ್ಯವಾದ ತಿಳಿಸಿದ್ದಾರೆ. ‘ನೀವು ಅತ್ಯುತ್ತಮ ನಟಿ ಮಾತ್ರವಲ್ಲ. ಶ್ರೇಷ್ಠ ನಿರ್ದೇಶಕಿ ಕೂಡ ಹೌದು’ ಎಂದು ಕಂಗನಾರನ್ನು ಶ್ರೇಯಸ್​ ಹೊಗಳಿದ್ದಾರೆ. ಈ ಸಿನಿಮಾದ ಶೂಟಿಂಗ್​ ಪ್ರಗತಿಯಲ್ಲಿದೆ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ