AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Arun Sagar: ಬಿಗ್​ ಬಾಸ್​ನಿಂದ ಅರುಣ್​ ಸಾಗರ್​ ಎಲಿಮಿನೇಟ್​; ಫಿನಾಲೆಯ ಸಮೀಪದಲ್ಲಿ ಮುಗ್ಗರಿಸಿದ ಕಲಾವಿದ

BBK9 Elimination: 13ನೇ ವಾರದಲ್ಲಿ ಅರುಣ್​ ಸಾಗರ್​ ಅವರಿಗೆ ಕೆಲವೊಂದು ಅಡೆತಡೆ ಉಂಟಾಗಿತ್ತು. ದೊಡ್ಮನೆಯಲ್ಲಿ ಒಟ್ಟು 93 ದಿನಗಳನ್ನು ಪೂರೈಸಿ ಅವರು ಎಲಿಮಿನೇಟ್​ ಆಗಿದ್ದಾರೆ.

Arun Sagar: ಬಿಗ್​ ಬಾಸ್​ನಿಂದ ಅರುಣ್​ ಸಾಗರ್​ ಎಲಿಮಿನೇಟ್​; ಫಿನಾಲೆಯ ಸಮೀಪದಲ್ಲಿ ಮುಗ್ಗರಿಸಿದ ಕಲಾವಿದ
ಅರುಣ್ ಸಾಗರ್
TV9 Web
| Edited By: |

Updated on: Dec 25, 2022 | 9:59 PM

Share

‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಶೋನ 13ನೇ ವಾರದ ಎಲಿಮಿನೇಷನ್​ ಪ್ರಕ್ರಿಯೆಯಲ್ಲಿ ಅರುಣ್​ ಸಾಗರ್ (Arun Sagar)​ ಅವರು ಔಟ್​ ಆಗಿದ್ದಾರೆ. ಮುಂದಿನ ವಾರವೇ ಬಿಗ್​ ಬಾಸ್​ ಫಿನಾಲೆ (Bigg Boss Finale) ನಡೆಯಲಿದೆ. ಆದರೆ ಫಿನಾಲೆ ವಾರಕ್ಕೆ ಕಾಲಿಡುವಲ್ಲಿ ಅರುಣ್​ ಸಾಗರ್​ ಮುಗ್ಗರಿಸಿದ್ದಾರೆ. ಅವರು ದೊಡ್ಮನೆಯಲ್ಲಿ ವಿಶೇಷವಾಗಿ ಮನರಂಜನೆ ನೀಡಲು ಪ್ರಯತ್ನಿಸಿದ್ದರು. ಬಿಗ್​ ಬಾಸ್​ನಲ್ಲಿ ಅರುಣ್​ ಸಾಗರ್​ ಅವರಿಗೆ ಸಿಕ್ಕಿದ್ದು ಇದು ಎರಡನೇ ಅವಕಾಶವಾಗಿತ್ತು. ಬಿಗ್​ ಬಾಸ್​ ಮೊದಲ ಸೀಸನ್​ನಲ್ಲಿ ಅರುಣ್​ ಸಾಗರ್​ ಸ್ಪರ್ಧಿಸಿದ್ದರು. 9ನೇ ಸೀಸನ್​ನಲ್ಲಿ (BBK9) ‘ಪ್ರವೀಣರು’ ಗುಂಪಿನಲ್ಲಿ ಅರುಣ್​ ಸಾಗರ್​ ಅವಕಾಶ ಪಡೆದರು. ಆದರೆ ಟ್ರೋಫಿ ಗೆಲ್ಲುವ ಅವರ ಕನಸು ಭಗ್ನವಾಗಿದೆ.

ಅರುಣ್​ ಸಾಗರ್​ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. 93ನೇ ದಿನದವರೆಗೂ ಅವರು ವೀಕ್ಷಕರಿಂದ ಹೆಚ್ಚಿನ ವೋಟ್​ ಪಡೆದು ಸೇಫ್​ ಆಗಿದ್ದರು. ಆದರೆ ಈ ನಡುವೆ ಅವರಿಗೆ ಕೆಲವೊಂದು ಅಡೆತಡೆ ಉಂಟಾಗಿತ್ತು. ಅವರ ಕೈಗೆ ಪೆಟ್ಟಾಗಿತ್ತು. ಅವರ ಮಗಳು ಅದಿತಿ ಸಾಗರ್​ಗೆ ಪೆಟ್ಟಾಗಿದ್ದರಿಂದ ಅವರು ಮಾನಸಿಕವಾಗಿ ಕೊಂಚ ಕುಗ್ಗಿದರು. ಈ ಎಲ್ಲ ಕಾರಣದಿಂದ ಅರುಣ್​ ಸಾಗರ್​ ಎಲಿಮಿನೇಟ್​ ಆಗಬೇಕಾಯಿತು.

ಕಿಚ್ಚನ ಚಪ್ಪಾಳೆ ಪಡೆದ ಆರ್ಯವರ್ಧನ್​ ಗುರೂಜಿ:

ಈ ಸೀಸನ್​ನ ಕೊನೇ ವಾರದಲ್ಲಿ ಆರ್ಯವರ್ಧನ್​ ಗುರೂಜಿ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ‘ಆಟ ಚೆನ್ನಾಗಿ ಆಡಿದ್ದೀರಿ. ಎಲ್ಲರ ಜೊತೆ ಬೆರೆತಿದ್ದೀರಿ. ಈ ವಾರ ನೀವು ಇದ್ದ ರೀತಿ ಚೆನ್ನಾಗಿತ್ತು’ ಎಂದು ಕಿಚ್ಚ ಸುದೀಪ್​ ಹೇಳಿದರು. ಈ ಮೆಚ್ಚುಗೆ ಪಡೆದಿದ್ದಕ್ಕೆ ಆರ್ಯವರ್ಧನ್​ ಭಾವುಕರಾದರು.

ಇದನ್ನೂ ಓದಿ
Image
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ಇದನ್ನೂ ಓದಿ: Amulya Gowda: ಬಿಗ್ ಬಾಸ್ ಎಲಿಮಿನೇಷನ್‌ಗೆ ಟ್ವಿಸ್ಟ್‌; ಅಮೂಲ್ಯ ಔಟ್, ಇಂದು ಮತ್ತೋರ್ವ ಸ್ಪರ್ಧಿ‌ ಎಲಿಮಿನೇಟ್

ಫಿನಾಲೆ ವಾರಕ್ಕೆ 6 ಮಂದಿ ಎಂಟ್ರಿ:

ರೂಪೇಶ್ ರಾಜಣ್ಣ, ಆರ್ಯವರ್ಧನ್​ ಗುರೂಜಿ, ರೂಪೇಶ್​ ಶೆಟ್ಟಿ, ದಿವ್ಯಾ ಉರುಡುಗ, ದೀಪಿಕಾ ದಾಸ್​, ರಾಕೇಶ್​ ಅಡಿಗ ಅವರು 14ನೇ ವಾರಕ್ಕೆ ಕಾಲಿಟ್ಟಿದ್ದಾರೆ. ಅಂದರೆ, ಫಿನಾಲೆ ವಾರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ ಮಿಡ್​ ಮೀಕ್​ ಎಲಿಮಿನೇಷನ್​ನಲ್ಲಿ ಒಬ್ಬರು ಔಟ್​ ಆಗುವ ಸಾಧ್ಯತೆ ಇದೆ. ನಂತರ ಫಿನಾಲೆಗೆ 5 ಮಂದಿ ಪ್ರವೇಶ ಪಡೆಯಲಿದ್ದಾರೆ.

ಇದನ್ನೂ ಓದಿ: Anupama Gowda: ಬಿಗ್​ ಬಾಸ್​ನಿಂದ ಎಲಿಮಿನೇಟ್​ ಆದ ಅನುಪಮಾ ಗೌಡ; ನಟಿ-ನಿರೂಪಕಿಯ ದೊಡ್ಮನೆ ಆಟ ಅಂತ್ಯ

ರಾಕೇಶ್​ ಅಡಿಗ, ರೂಪೇಶ್​ ಶೆಟ್ಟಿ ಮತ್ತು ಆರ್ಯವರ್ಧನ್​ ಗುರೂಜಿ ಅವರು ಬಿಗ್​ ಬಾಸ್​ ಒಟಿಟಿಯಿಂದ ಟಿವಿ ಸೀಸನ್​ನ ಫಿನಾಲೆ ವಾರದ ತನಕವೂ ಸಾಗಿ ಬಂದಿದ್ದಾರೆ. ಹಳೇ ಸೀಸನ್​ನ ಸ್ಪರ್ಧಿಗಳಾದ ದೀಪಿಕಾ ದಾಸ್​, ದಿವ್ಯಾ ಉರುಡುಗ ಜೊತೆ ಹೊಸ ಸ್ಪರ್ಧಿ ರೂಪೇಶ್​ ರಾಜಣ್ಣ ಕೂಡ ಸಖತ್​ ಪೈಪೋಟಿ ನೀಡುತ್ತಿದ್ದಾರೆ. ಅಂತಿಮವಾಗಿ ಯಾರಿಗೆ ಟ್ರೋಫಿ ಸಿಗಲಿದೆ ಎಂಬ ಕೌತುಕ ನಿರ್ಮಾಣ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Web contact
Web contact

TV9 Kannada

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ