Tunisha Sharma Funeral: ತುನಿಶಾ ಶರ್ಮಾ ಅಂತ್ಯಕ್ರಿಯೆ: ಅಗಲಿದ ನಟಿಗೆ ಅಂತಿಮ ನಮನ ಸಲ್ಲಿಸಿದ ಕಿರುತೆರೆ ಸೆಲೆಬ್ರಿಟಿಗಳು

Tunisha Sharma Death: ತುನಿಶಾ ಶರ್ಮಾ ಅವರ ತಾಯಿ ಮತ್ತು ಸಹೋದರಿ ಅಂತಿಮ ವಿಧಿವಿಧಾನದಲ್ಲಿ ಭಾಗಿಯಾದರು. ಕಿರುತೆರೆಯ ಅನೇಕ ಸೆಲೆಬ್ರಿಟಿಗಳು ಅಂತಿಮ ದರ್ಶನ ಪಡೆದರು.

Tunisha Sharma Funeral: ತುನಿಶಾ ಶರ್ಮಾ ಅಂತ್ಯಕ್ರಿಯೆ: ಅಗಲಿದ ನಟಿಗೆ ಅಂತಿಮ ನಮನ ಸಲ್ಲಿಸಿದ ಕಿರುತೆರೆ ಸೆಲೆಬ್ರಿಟಿಗಳು
ತುನಿಶಾ ಶರ್ಮಾ ಅಂತ್ಯಕ್ರಿಯೆ
Follow us
TV9 Web
| Updated By: ಮದನ್​ ಕುಮಾರ್​

Updated on: Dec 27, 2022 | 7:24 PM

20ನೇ ವಯಸ್ಸಿಗೆ ಆತ್ಮಹತ್ಯೆ ಮಾಡಿಕೊಂಡ ಹಿಂದಿ ಕಿರುತೆರೆಯ ಜನಪ್ರಿಯ ನಟಿ ತುನಿಶಾ ಶರ್ಮಾ (Tunisha Sharma) ಅವರ ಅಂತ್ಯಕ್ರಿಯೆ ಇಂದು (ಡಿ.27) ನೆರವೇರಿದೆ. ತುನಿಶಾ ಶರ್ಮಾ ಅವರು ಡಿ.24ರಂದು ನೇಣಿಗೆ ಶರಣಾದರು. ಮರುದಿನ ಅವರ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅವರ ಸಾವಿಗೆ (Tunisha Sharma Death) ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕುಟುಂಬದವರು, ಸ್ನೇಹಿತರು, ಅಭಿಮಾನಿಗಳು ಹಾಗೂ ಕಿರುತೆರೆ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ತುನಿಶಾ ಶರ್ಮಾ ಅವರ ಅಂತ್ಯಕ್ರಿಯೆ (Tunisha Sharma Funeral) ನಡೆದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದಾರೆ. ತುನಿಶಾ ಅವರ ಮಾಜಿ ಬಾಯ್​ಫ್ರೆಂಡ್​ ಶೀಜಾನ್​ ಖಾನ್​ ಈಗ ಪೊಲೀಸರ ವಶದಲ್ಲಿದ್ದಾರೆ. ಶೀಜಾನ್​ ಕುಟುಂಬದ ಸದಸ್ಯರು ಕೂಡ ಅಂತ್ಯಕ್ರಿಯೆಯಲ್ಲಿ ಭಾಗಿ ಆಗಿದ್ದಾರೆ.

ತುನಿಶಾ ಶರ್ಮಾ ಅವರ ಪಾರ್ಥೀವ ಶರೀರವನ್ನು ಭಾಯಂದರ್​ನಲ್ಲಿ ಇರುವ ನಿವಾಸಕ್ಕೆ ತರಲಾಯಿತು. ಬಳಿಕ ಮೀರಾ ರೋಡ್​ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ತುನಿಶಾ ಶರ್ಮಾ ಅವರ ತಾಯಿ ಮತ್ತು ಸಹೋದರಿ ಅಂತಿಮ ವಿಧಿವಿಧಾನದಲ್ಲಿ ಭಾಗಿಯಾದರು. ಕಿರುತೆರೆ ಸೆಲೆಬ್ರಿಟಿಗಳಾದ ಶಿವಿನ್​ ನರಂಗ್​, ವಿಶಾಲ್​ ಜೇತ್ವಾ, ಕನ್ವರ್​ ದಿಲೋನ್​, ಅಶ್ನೂರ್​ ಕೌರ್​ ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದರು.

ಇದನ್ನೂ ಓದಿ: Tunisha Sharma: ಶ್ರದ್ಧಾ ವಾಕರ್​ ಕೊಲೆ ಕೇಸ್​ ಪ್ರಭಾವದಿಂದ ತುನಿಶಾ ಶರ್ಮಾ, ಶೀಜಾನ್​ ಖಾನ್​ ನಡುವೆ ನಡೆದಿತ್ತು ಬ್ರೇಕಪ್​

ಇದನ್ನೂ ಓದಿ
Image
Tunisha Sharma: ಶ್ರದ್ಧಾ ವಾಕರ್​ ಕೊಲೆ ಕೇಸ್​ ಪ್ರಭಾವದಿಂದ ತುನಿಶಾ ಶರ್ಮಾ, ಶೀಜಾನ್​ ಖಾನ್​ ನಡುವೆ ನಡೆದಿತ್ತು ಬ್ರೇಕಪ್​
Image
Tunisha Sharma: ಬ್ರೇಕಪ್​ ಆಗಿ 15 ದಿನಕ್ಕೆ ನಟಿ ತುನಿಶಾ ಶರ್ಮಾ ಆತ್ಮಹತ್ಯೆ; ಪ್ರಿಯಕರ ಶೀಜಾನ್​ ಖಾನ್​ ಬಂಧನ
Image
Tunisha Sharma’s Death: ನಟಿ ತುನಿಶಾ ಶರ್ಮಾ ಆತ್ಮಹತ್ಯೆಗೆ ಲವ್​​ ಜಿಹಾದ್​​ ಕಾರಣವೇ ಎಂಬುದು ತನಿಖೆಯಾಗಬೇಕು: ಬಿಜೆಪಿ ಶಾಸಕ

ಹಿಂದಿಯ ‘ಅಲಿಬಾಬಾ’ ಸೀರಿಯಲ್​ನಲ್ಲಿ ತುನಿಶಾ ಶರ್ಮಾ ಅವರು ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದರು. ಅದೇ ಧಾರಾವಾಹಿಯ ಶೂಟಿಂಗ್​ ನಡೆಯುತ್ತಿದ್ದ ಸ್ಟೂಡಿಯೋದಲ್ಲಿ ತುನಿಶಾ ನೇಣಿಗೆ ಶರಣಾಗಿರುವುದು ತೀವ್ರ ನೋವಿನ ಸಂಗತಿ. ಅವರ ನಿಧನದಿಂದ ಇಡೀ ಕಿರುತೆರೆ ಲೋಕಕ್ಕೆ ಆಘಾತ ಆಗಿದೆ.

ಇದನ್ನೂ ಓದಿ: Tunisha Sharma: ಬ್ರೇಕಪ್​ ಆಗಿ 15 ದಿನಕ್ಕೆ ನಟಿ ತುನಿಶಾ ಶರ್ಮಾ ಆತ್ಮಹತ್ಯೆ; ಪ್ರಿಯಕರ ಶೀಜಾನ್​ ಖಾನ್​ ಬಂಧನ

‘ಅಲಿಬಾಬಾ’ ಧಾರಾವಾಹಿಯಲ್ಲಿ ಶೀಜಾನ್​ ಖಾನ್​ ಮತ್ತು ತುನಿಶಾ ಶರ್ಮಾ ಅವರು ಜೊತೆಯಾಗಿ ನಟಿಸುತ್ತಿದ್ದರು. ಇಬ್ಬರ ನಡುವೆ ಸಾಕಷ್ಟು ಆಪ್ತತೆ ಬೆಳೆದಿತ್ತು. ಪರಸ್ಪರ ಪ್ರೀತಿಸುತ್ತಿದ್ದ ಅವರು ಕೆಲವು ವಿಡಿಯೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇಬ್ಬರು ದೂರಾಗುವ ನಿರ್ಧಾರಕ್ಕೆ ಬಂದರು. ತುನಿಶಾ ಶರ್ಮಾ ನಿಧನರಾಗುವುದಕ್ಕೂ 15 ದಿನಗಳ ಹಿಂದೆ ಶೀಜಾನ್​ ಖಾನ್​ ಬ್ರೇಕಪ್​ ಮಾಡಿಕೊಂಡಿದ್ದರು.

ಬ್ರೇಕಪ್​ ಬಳಿಕ ತುನಿಶಾ ಶರ್ಮಾ ಅವರು ಖಿನ್ನತೆಗೆ ಒಳಗಾಗಿದ್ದರು. ಪ್ರೇಮ ವೈಫಲ್ಯದ ಕಾರಣದಿಂದಲೇ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದಾರೆ ಎಂದು ಮಾಜಿ ಬಾಯ್​ಫ್ರೆಂಡ್​ ಶೀಜಾನ್​ ಖಾನ್​ ವಿರುದ್ಧ ತುನಿಶಾ ಶರ್ಮಾ ಕುಟುಂಬದವರು ದೂರು ನೀಡಿದ್ದಾರೆ. ಅದರ ಅನ್ವಯ ಶೀಜಾನ್​ ಅವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ