Tunisha Sharma: ಪಂಚಭೂತಗಳಲ್ಲಿ ಲೀನವಾದ ತುನಿಶಾ ಶರ್ಮಾ; ಇಲ್ಲಿದೆ ಅಂತ್ಯಕ್ರಿಯೆಯ ಫೋಟೋ ಗ್ಯಾಲರಿ..
Tunisha Sharma Funeral Photos: ತುನಿಶಾ ಶರ್ಮಾ ಅವರ ನಿಧನದಿಂದ ಇಡೀ ಕಿರುತೆರೆ ಲೋಕಕ್ಕೆ ಆಘಾತ ಆಗಿದೆ. ಮಂಗಳವಾರ (ಡಿ.27) ಮುಂಬೈನಲ್ಲಿ ಅವರ ಅಂತ್ಯಕ್ರಿಯೆ ನಡೆದಿದೆ.
Updated on:Dec 28, 2022 | 11:16 AM

ನಟಿ ತುನಿಶಾ ಶರ್ಮಾ ಅವರು ಡಿ.24ರಂದು ನೇಣಿಗೆ ಶರಣಾದರು. ಮರುದಿನ ಅವರ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಡಿ.27ರಂದು ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಕುಟುಂಬದವರು, ಸ್ನೇಹಿತರು, ಅಭಿಮಾನಿಗಳು ಹಾಗೂ ಕಿರುತೆರೆ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ತುನಿಶಾ ಶರ್ಮಾ ಅವರ ಅಂತ್ಯಕ್ರಿಯೆ ನಡೆದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದಾರೆ.

ತುನಿಶಾ ಶರ್ಮಾ ಅವರ ಪಾರ್ಥೀವ ಶರೀರವನ್ನು ಭಾಯಂದರ್ನಲ್ಲಿ ಇರುವ ನಿವಾಸಕ್ಕೆ ತರಲಾಯಿತು. ಬಳಿಕ ಮೀರಾ ರೋಡ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ತುನಿಶಾ ಶರ್ಮಾ ಅವರ ತಾಯಿ ಮತ್ತು ಸಹೋದರಿ ಅಂತಿಮ ವಿಧಿವಿಧಾನದಲ್ಲಿ ಭಾಗಿಯಾದರು.

ತುನಿಶಾ ಅವರ ಮಾಜಿ ಬಾಯ್ಫ್ರೆಂಡ್ ಶೀಜಾನ್ ಖಾನ್ ಈಗ ಪೊಲೀಸರ ವಶದಲ್ಲಿದ್ದಾರೆ. ಶೀಜಾನ್ ಖಾನ್ ಕುಟುಂಬದ ಸದಸ್ಯರು ಕೂಡ ಅಂತ್ಯಕ್ರಿಯೆಯಲ್ಲಿ ಭಾಗಿ ಆಗಿದ್ದಾರೆ. ಕಿರುತೆರೆಯ ಅನೇಕ ಸೆಲೆಬ್ರಿಟಿಗಳು ಅಂತಿಮ ದರ್ಶನ ಪಡೆದರು.

ಹಿಂದಿಯ ‘ಅಲಿಬಾಬಾ’ ಸೀರಿಯಲ್ನಲ್ಲಿ ತುನಿಶಾ ಶರ್ಮಾ ಅವರು ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದರು. ಅದೇ ಧಾರಾವಾಹಿಯ ಶೂಟಿಂಗ್ ನಡೆಯುತ್ತಿದ್ದ ಸ್ಟೂಡಿಯೋದಲ್ಲಿ ತುನಿಶಾ ನೇಣಿಗೆ ಶರಣಾಗಿರುವುದು ತೀವ್ರ ನೋವಿನ ಸಂಗತಿ.
Published On - 7:00 am, Wed, 28 December 22




