BBK9: ಬಿಗ್​ ಬಾಸ್​ ಮನೆಯಲ್ಲಿ ಆರ್ಯವರ್ಧನ್​ ಗುರೂಜಿ ಡಬಲ್​ ಗೇಮ್​; ಸ್ಪರ್ಧಿಗಳ ನೇರ ಆರೋಪ

Bigg Boss Kannada | Aryavardhan Guruji: ದೊಡ್ಮನೆಯ ಬಹುತೇಕ ಸದಸ್ಯರು ಆರ್ಯವರ್ಧನ್​ ಗುರೂಜಿ ಕಡೆಗೆ ಕೈ ತೋರಿಸಿ ಡಬಲ್​ ಗೇಮ್​ ಎಂದಿದ್ದಾರೆ. ಇಂಥ ಆರೋಪ ಎದುರಾಗಿರುವುದಕ್ಕೆ ಗುರೂಜಿಗೆ ಅಚ್ಚರಿ ಆಗಿದೆ.

BBK9: ಬಿಗ್​ ಬಾಸ್​ ಮನೆಯಲ್ಲಿ ಆರ್ಯವರ್ಧನ್​ ಗುರೂಜಿ ಡಬಲ್​ ಗೇಮ್​; ಸ್ಪರ್ಧಿಗಳ ನೇರ ಆರೋಪ
ಆರ್ಯವರ್ಧನ್ ಗುರೂಜಿ
Follow us
TV9 Web
| Updated By: ಮದನ್​ ಕುಮಾರ್​

Updated on:Nov 27, 2022 | 6:05 PM

ಬಿಗ್ ಬಾಸ್​ ಶೋನಲ್ಲಿ ಸ್ಪರ್ಧಿಗಳು ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಾರೆ. ಕೆಲವೊಮ್ಮೆ ಇಲ್ಲಿ ಅಭಿಪ್ರಾಯಗಳನ್ನು ನೇರವಾಗಿ ಹೇಳಬೇಕಾಗುತ್ತದೆ. ಈ ಹಿಂದಿನ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್​ (Kichcha Sudeep) ಅವರು ‘ಯೆಸ್​ ಅಥವಾ ನೋ’ ಸುತ್ತಿನಲ್ಲಿ ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಅದಕ್ಕೆ ಸ್ಪರ್ಧಿಗಳು ನೇರವಾಗಿ ಉತ್ತರ ನೀಡಿದ್ದರು. ಈಗ ಅದಕ್ಕಿಂತಲೂ ನಿಷ್ಠುರವಾಗಿ ಒಂದು ಪ್ರಶ್ನೆ ಕೇಳಲಾಗಿದೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ (Bigg Boss Kannada Season 9) ಶೋನಲ್ಲಿ ಗೇಮ್​ ಆಡೋರು ಯಾರು? ಡಬಲ್​ ಗೇಮ್​ ಆಡೋರು ಯಾರು ಎಂದು ಸುದೀಪ್​ ಕೇಳಿದ್ದಾರೆ. ಅದಕ್ಕೆ ದೊಡ್ಮನೆ ಸದಸ್ಯರು ವಿವಿಧ ಉತ್ತರ ನೀಡಿದ್ದಾರೆ. ಡಬಲ್​ ಗೇಮ್​ ವಿಚಾರದಲ್ಲಿ ಆರ್ಯವರ್ಧನ್​ ಗುರೂಜಿ (Aryavardhan Guruji) ಅವರಿಗೆ ಹೆಚ್ಚು ವೋಟ್​ ಬಂದಿದೆ. ಆ ಮೂಲಕ ಅವರೇ ಅತಿ ಹೆಚ್ಚು ಡಬಲ್​ ಗೇಮ್​ ಆಡ್ತಾರೆ ಎಂದು ಸ್ಪರ್ಧಿಗಳು ಅಭಿಪ್ರಾಯಪಟ್ಟಿದ್ದಾರೆ.

ಬಿಗ್​ ಬಾಸ್​ ಶೋಗೆ ಬರುವುದಕ್ಕೂ ಮುನ್ನ ಆರ್ಯವರ್ಧನ್​ ಗುರೂಜಿ ಅವರು ಸಂಖ್ಯಾಶಾಸ್ತ್ರ ಹೇಳುವ ಮೂಲಕ ಖ್ಯಾತಿ ಗಳಿಸಿದ್ದರು. ‘ಬಿಗ್​ ಬಾಸ್​ ಒಟಿಟಿ’ಯಲ್ಲಿ ಅವರು ಯಶಸ್ವಿಯಾಗಿ ಪಯಣ ಪೂರ್ಣಗೊಳಿಸಿ ಟಿವಿ ಸೀಸನ್​ಗೆ ಕಾಲಿಟ್ಟರು. ಅವರ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಲು ಪ್ರೇಕ್ಷಕರಿಗೆ ಮಾತ್ರವಲ್ಲದೇ ಸ್ಪರ್ಧಿಗಳಿಗೂ ಕಷ್ಟ ಆಗಿದೆ. ಕೆಲವೊಮ್ಮೆ ಮುಗ್ಧರಂತೆ ಕಾಣುವ ಗುರೂಜಿ, ಇನ್ನೂ ಕೆಲವೊಮ್ಮೆ ವೈಲೆಂಟ್​ ಆಗಿ ಬಿಡುತ್ತಾರೆ.

‘ಡಬಲ್​ ಗೇಮ್​ ಯಾರದ್ದು’ ಎಂಬ ಪ್ರಶ್ನೆಗೆ ಮನೆಯಲ್ಲಿನ 12 ಸ್ಪರ್ಧಿಗಳ ಪೈಕಿ ಒಟ್ಟು 7 ಜನರು ಆರ್ಯವರ್ಧನ್​ ಗುರೂಜಿ ಹೆಸರನ್ನು ಉತ್ತರವಾಗಿ ಹೇಳಿದ್ದಾರೆ. 3 ಮಂದಿ ಪ್ರಶಾಂತ್​ ಸಂಬರ್ಗಿ ಹೆಸರನ್ನು ಹೇಳಿದ್ದಾರೆ. ರೂಪೇಶ್​ ಶೆಟ್ಟಿ ಮತ್ತು ವಿನೋದ್​ ಗೊಬ್ಬರಗಾಲ ಅವರಿಗೆ ತಲಾ ಒಂದು ವೋಟ್​ ಬಿದ್ದಿದೆ.

ಇದನ್ನೂ ಓದಿ
Image
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ದೊಡ್ಮನೆಯ ಸದಸ್ಯರೆಲ್ಲೂ ತಮ್ಮ ಕಡೆಗೆ ಕೈ ತೋರಿಸಿ ಡಬಲ್​ ಗೇಮ್​ ಆರೋಪ ಮಾಡಿರುವುದು ಆರ್ಯವರ್ಧನ್​ ಗುರೂಜಿ ಅವರಿಗೆ ಅಚ್ಚರಿ ಮೂಡಿಸಿದೆ. ‘ನಾನು ಯಾರನ್ನೂ ಮೆಚ್ಚಿಸುವ ಕೆಲಸ ಮಾಡಿಲ್ಲ. ಡಬಲ್​ ಗೇಮ್​ ರೀತಿ ನಡೆದುಕೊಂಡಿಲ್ಲ. ಇವರೆಲ್ಲರ ಕಣ್ಣಿಗೆ ಏನು ಕಂಡಿದೆಯೋ ನನಗೆ ಗೊತ್ತಿಲ್ಲ’ ಎಂದು ಅವರು ಕಿಚ್ಚ ಸುದೀಪ್​ ಎದುರಲ್ಲಿ ವಾದ ಮುಂದಿಟ್ಟಿದ್ದಾರೆ.

‘ಸೂಪರ್​ ಸಂಡೇ ವಿತ್​ ಸುದೀಪ್​’ ಎಪಿಸೋಡ್​ನಲ್ಲಿ ಈ ವಿಚಾರ ಚರ್ಚೆ ಆಗಿದೆ. ಇದರ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ತನ್ನ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ನ.27ರ ಸಂಜೆ ಈ ಸಂಚಿಕೆ ಪ್ರಸಾರ ಆಗಲಿದೆ. ಇನ್ನು, ‘ಗೇಮ್​ ಯಾರದ್ದು’ ಎಂಬ ಪ್ರಶ್ನೆಗೆ ವಿಶ್ರ ಪ್ರತಿಕ್ರಿಯೆ ಬಂದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:05 pm, Sun, 27 November 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ