Bigg Boss Kannada Finale: ಬಿಗ್ ಬಾಸ್ ವಿನ್ನರ್ ಹೆಸರು ಲೀಕ್ ಆಗದಿರಲು ಕಲರ್ಸ್ ಕನ್ನಡದಿಂದ ಹೊಸ ಪ್ಲ್ಯಾನ್

ಇತ್ತೀಚೆಗೆ ಸೋಶಿಯಲ್ ಮೀಡಿಯಾದ ವ್ಯಾಪ್ತಿ ಹೆಚ್ಚಿದೆ. ವಿಶ್ವದ ಯಾವುದೇ ಮೂಲೆಯಲ್ಲಿ ನಡೆದ ವಿಚಾರಗಳು ಎಲ್ಲ ಕಡೆಗಳಲ್ಲಿ ಕ್ಷಣಮಾತ್ರದಲ್ಲಿ ಹಬ್ಬುತ್ತದೆ. ಬಿಗ್ ಬಾಸ್ ವಿಚಾರದಲ್ಲೂ ಹೀಗೆ ಆಗುತ್ತಿತ್ತು.

Bigg Boss Kannada Finale: ಬಿಗ್ ಬಾಸ್ ವಿನ್ನರ್ ಹೆಸರು ಲೀಕ್ ಆಗದಿರಲು ಕಲರ್ಸ್ ಕನ್ನಡದಿಂದ ಹೊಸ ಪ್ಲ್ಯಾನ್
ಸುದೀಪ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 31, 2022 | 4:40 PM

‘ಬಿಗ್ ಬಾಸ್​ ಕನ್ನಡ ಸೀಸನ್ 9’ರ (BBk 9) ಫಿನಾಲೆ ನಡೆಯುತ್ತಿದೆ. ಯಾರು ಕಪ್ ಎತ್ತಲಿದ್ದಾರೆ ಎನ್ನುವ ವಿಚಾರ ಇಂದು (ಡಿಸೆಂಬರ್ 31) ರಾತ್ರಿ ತಿಳಿಯಲಿದೆ. ‘ಬಿಗ್ ಬಾಸ್’ ಫಿನಾಲೆಯಲ್ಲಿ ದೀಪಿಕಾ ದಾಸ್, ರೂಪೇಶ್ ರಾಜಣ್ಣ, ರಾಕೇಶ್ ಅಡಿಗ ಹಾಗೂ ರೂಪೇಶ್ ಶೆಟ್ಟಿ (Roopesh Shetty) ಇದ್ದಾರೆ. ಫಿನಾಲೆಯಲ್ಲಿದ್ದ ದಿವ್ಯಾ ಈಗಾಲೇ ಔಟ್ ಆಗಿದ್ದಾರೆ. ಈಗ ನಾಲ್ವರಲ್ಲಿ ಒಬ್ಬರು ಕಪ್ ಎತ್ತಲಿದ್ದಾರೆ. ಈ ಮಧ್ಯೆ ಬಿಗ್ ಬಾಸ್ ವಿನ್ನರ್ ಹೆಸರು ಲೀಕ್ ಆಗದೆ ಇರಲು ಕಲರ್ಸ್ ಕನ್ನಡ ವಾಹಿನಿ ಹೊಸ ಪ್ಲ್ಯಾನ್ ರೂಪಿಸಿದೆ.

ಇತ್ತೀಚೆಗೆ ಸೋಶಿಯಲ್ ಮೀಡಿಯಾದ ವ್ಯಾಪ್ತಿ ಹೆಚ್ಚಿದೆ. ವಿಶ್ವದ ಯಾವುದೇ ಮೂಲೆಯಲ್ಲಿ ನಡೆದ ವಿಚಾರಗಳು ಎಲ್ಲ ಕಡೆಗಳಲ್ಲಿ ಕ್ಷಣಮಾತ್ರದಲ್ಲಿ ಹಬ್ಬುತ್ತದೆ. ಬಿಗ್ ಬಾಸ್ ವಿಚಾರದಲ್ಲೂ ಹೀಗೆ ಆಗುತ್ತಿತ್ತು. ಯಾರು ಬಿಗ್ ಬಾಸ್ ಗೆದ್ದರು ಎಂಬ ವಿಚಾರ ಲೀಕ್ ಆಗಿ ಕ್ಷಣಮಾತ್ರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು. ಇದನ್ನು ತಪ್ಪಿಸಲು ಕಲರ್ಸ್​ ಕನ್ನಡ ವಾಹಿನಿ ಪ್ಲ್ಯಾನ್ ಮಾಡಿದೆ.

ಸಾಮಾನ್ಯವಾಗಿ ಬಿಗ್ ಬಾಸ್ ವೀಕೆಂಡ್ ಶೂಟ್ ಒಂದೇ ದಿನ ನಡೆಯುತ್ತದೆ. ಅದನ್ನು ಟಿವಿಯಲ್ಲಿ ಎರಡು ದಿನ ಪ್ರಸಾರ ಮಾಡಲಾಗುತ್ತದೆ. ಹೀಗಾಗಿ, ಎಲಿಮಿನೇಟ್ ಆದವರು ಯಾರು ಎಂಬ ಮಾಹಿತಿ ಒಂದು ದಿನ ಮೊದಲೇ ಲೀಕ್ ಆಗುತ್ತದೆ. ಜತೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಆದರೆ, ಈ ಬಾರಿ ಹಾಗೆ ಆಗುತ್ತಿಲ್ಲ.

ಇದನ್ನೂ ಓದಿ
Image
Divya Uruduga: ಬಿಗ್ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಮಾಡಿದ್ರು ಅಪರೂಪದ ದಾಖಲೆ  
Image
Divya Uruduga: ಬಿಗ್ ಬಾಸ್ ಫಿನಾಲೆ ರೇಸ್​​ನಿಂದ ದಿವ್ಯಾ ಉರುಡುಗ ಔಟ್; ಹಿನ್ನಡೆಗೆ ಕಾರಣವಾಯ್ತು ಈ ಅಂಶ
Image
BBK 9 Contestant List: ಈ ಸೀಸನ್​ಗೆ ಎಂಟ್ರಿ ಕೊಟ್ಟಿದ್ದ 18 ಸ್ಪರ್ಧಿಗಳು ಇವರೇ ನೋಡಿ; ಇಲ್ಲಿದೆ ಫೋಟೋ-ವಿವರ
Image
‘ಕ್ಯಾರೆಕ್ಟರ್ ಹಾಳಾಗುತ್ತೆ ಅಂತ ಹೆದರಿಸಿದ್ರು’; ಎಚ್ಚರಿಕೆ ಬಗ್ಗೆ ಸುದೀಪ್ ಎದುರು ಹೇಳಿಕೊಂಡ ರೂಪೇಶ್ ಶೆಟ್ಟಿ

ಬಿಗ್ ಬಾಸ್ ಫಿನಾಲೆ ಡಿಸೆಂಬರ್ 30 ಹಾಗೂ 31ರಂದು ಫಿನಾಲೆ ನಡೆಯುತ್ತಿದೆ. ಈ ಬಾರಿ ಫಿನಾಲೆ ಶೂಟ್​ನ ಒಂದೇ ದಿನ ಮಾಡುತ್ತಿಲ್ಲ. ಅದರ ಬದಲು ಎರಡು ದಿನ ಶೂಟ್ ಮಾಡಲಾಗುತ್ತಿದೆ. ಶುಕ್ರವಾರ, ಶನಿವಾರ ಎರಡೂ ದಿನ ಫಿನಾಲೆ ಶೂಟ್ ಮಾಡಲಾಗುತ್ತಿರುವುದರಿಂದ ಫಿನಾಲೆ ವಿನ್ನರ್ ಹೆಸರು ಲೀಕ್ ಆಗಿ ವೈರಲ್ ಆಗಲು ಕೊಂಚ ಸಮಯ ಹಿಡಿಯಲಿದೆ.

ಇದನ್ನೂ ಓದಿ: Divya Uruduga: ಬಿಗ್ ಬಾಸ್​ ಫಿನಾಲೆಯಿಂದ ಹೊರಬಿದ್ದ ದಿವ್ಯಾ ಉರುಡುಗಗೆ ಸಿಕ್ಕ ಹಣವೆಷ್ಟು?

ಇಂದು ರಾತ್ರಿ ವೇಳೆಗೆ ಬಿಗ್ ಬಾಸ್ ವಿನ್ನರ್ ಯಾರು ಎಂಬ ವಿಚಾರ ತಿಳಿಯಲಿದೆ. ರೂಪೇಶ್​ ಶೆಟ್ಟಿ ಹಾಗೂ ರಾಕೇಶ್ ಅಡಿಗ ಇಬ್ಬರಲ್ಲಿ ಒಬ್ಬರು ಕಪ್ ಗೆಲ್ಲಬಹುದು ಎಂದು ವೀಕ್ಷಕರು ಊಹಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ