AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Roopesh Rajanna: ಬಿಗ್ ಬಾಸ್ ಮನೆಯಿಂದ ರೂಪೇಶ್ ರಾಜಣ್ಣ ಔಟ್​; ಕೊನೆಗೂ ಈಡೇರಲಿಲ್ಲ ಆಸೆ

ರೂಪೇಶ್ ರಾಜಣ್ಣ ಅವರು ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಅವರು ಈ ಮೊದಲು ಬಿಗ್ ಬಾಸ್​ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿರಲಿಲ್ಲ. ಆದರೂ ಬಿಗ್ ಬಾಸ್​ಗೆ ಬಂದರು. ಬಂದ ನಂತರ ದೊಡ್ಮನೆ ಬಗೆಗಿನ ಅವರ ಅಭಿಪ್ರಾಯ ಬದಲಾಯಿತು.

Roopesh Rajanna: ಬಿಗ್ ಬಾಸ್ ಮನೆಯಿಂದ ರೂಪೇಶ್ ರಾಜಣ್ಣ ಔಟ್​; ಕೊನೆಗೂ ಈಡೇರಲಿಲ್ಲ ಆಸೆ
ರೂಪೇಶ್ ರಾಜಣ್ಣ-ಸುದೀಪ್
TV9 Web
| Edited By: |

Updated on: Dec 31, 2022 | 9:50 PM

Share

‘ಕನ್ನಡ ಬಿಗ್ ಬಾಸ್​ ಸೀಸನ್ 9’ರ (BBK 9) ಜರ್ನಿ ಪೂರ್ಣಗೊಳ್ಳುತ್ತಿದೆ. ಯಾರು ಕಪ್ ಎತ್ತಲಿದ್ದಾರೆ ಎಂಬ ಪ್ರಶ್ನೆಗೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ಶನಿವಾರದ (ಡಿಸೆಂಬರ್ 30) ಎಪಿಸೋಡ್​ನಲ್ಲಿ ಒಂದು ಎಲಿಮಿನೇಷನ್ ನಡೆದಿತ್ತು. ದಿವ್ಯಾ ಉರುಡುಗ (Divya Uruduga) ಔಟ್ ಆದರು. ಈ ಮೂಲಕ ದೊಡ್ಮನೆಯ ಸ್ಪರ್ಧಿಗಳ ಸಂಖ್ಯೆ 4ಕ್ಕೆ ಇಳಿಕೆ ಆಯಿತು. ಇಂದಿನ (ಡಿಸೆಂಬರ್ 31) ಎಪಿಸೋಡ್​ನ ಮೊದಲ ಎಲಿಮಿನೇಷನ್ ನಡೆದಿದೆ. ರೂಪೇಶ್ ರಾಜಣ್ಣ ಅವರು ಮೊದಲು ಔಟ್ ಆಗಿದ್ದಾರೆ. ಈ ಮೂಲಕ ಮೂರನೇ ರನ್ನರ್ ಅಪ್ ಆಗಿದ್ದಾರೆ.

ರೂಪೇಶ್ ರಾಜಣ್ಣ ಅವರು ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಅವರು ಈ ಮೊದಲು ಬಿಗ್ ಬಾಸ್​ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿರಲಿಲ್ಲ. ಆದರೂ ಬಿಗ್ ಬಾಸ್​ಗೆ ಬಂದರು. ಬಂದ ನಂತರ ದೊಡ್ಮನೆ ಬಗೆಗಿನ ಅವರ ಅಭಿಪ್ರಾಯ ಬದಲಾಯಿತು. ಆರಂಭದಲ್ಲಿ ಡಲ್ ಆಗಿದ್ದ ಅವರು ನಂತರ ಹೈಪರ್ ಆ್ಯಕ್ಟೀವ್ ಆದರು. ಪ್ರಶಾಂತ್ ಸಂಬರ್ಗಿ ಜತೆಗೆ ಅನೇಕ ಬಾರಿ ಅವರು ಜಗಳಕ್ಕೆ ಇಳಿದಿದ್ದೂ ಇದೆ.

ಟಾಪ್​ ಐದರಲ್ಲಿ ಇದ್ದ ಸ್ಪರ್ಧಿಗಳ ಪೈಕಿ ಎರಡನೇ ವ್ಯಕ್ತಿಯಾಗಿ ರೂಪೇಶ್ ರಾಜಣ್ಣ ಔಟ್ ಆಗಿದ್ದಾರೆ. ಕಿಚ್ಚ ಸುದೀಪ್ ಅವರ ಹೆಸರನ್ನು ಘೋಷಣೆ ಮಾಡಿದಾಗ ತುಂಬಾನೇ ಬೇಸರ ಮಾಡಿಕೊಂಡಿದ್ದರು. ‘ನಾನು ಎರಡು ವಾರ ಇದ್ದು ಔಟ್ ಆಗುತ್ತೇನೆ ಎಂದುಕೊಂಡಿದ್ದೆ. ಆದರೆ, ಒಳ್ಳೆಯ ಪರ್ಫಾರ್ಮೆನ್ಸ್ ನೀಡಿ ಇಲ್ಲಿವರೆಗೆ ಬಂದಿದ್ದೇನೆ. ಈಗ ಟಾಪ್​ ಎರಡರಲ್ಲಿ ಬರಲೇಬೇಕು ಎಂದು ನನಗೆ ಅನಿಸುತ್ತಿದೆ’ ಎಂದು ರೂಪೇಶ್ ರಾಜಣ್ಣ ಈ ಮೊದಲು ಹೇಳಿದ್ದರು. ಈಗ ಅದು ಕನಸಾಗಿಯೇ ಉಳಿದಿದೆ.

ಇದನ್ನೂ ಓದಿ
Image
Bigg Boss Kannada Finale: ಬಿಗ್ ಬಾಸ್ ವಿನ್ನರ್ ಹೆಸರು ಲೀಕ್ ಆಗದಿರಲು ಕಲರ್ಸ್ ಕನ್ನಡದಿಂದ ಹೊಸ ಪ್ಲ್ಯಾನ್
Image
Divya Uruduga: ‘ಉತ್ತಮ, ಕಿಚ್ಚನ ಚಪ್ಪಾಳೆ, ಕ್ಯಾಪ್ಟನ್​ ಪಟ್ಟ ದಿವ್ಯಾಗೆ ಸಿಕ್ಕಿಲ್ಲ; ಆದ್ರೂ ಫಿನಾಲೆಗೆ ಹೇಗೆ ಬಂದ್ರು?’: ಗುರೂಜಿ ಪ್ರಶ್ನೆ
Image
Divya Uruduga: ಬಿಗ್ ಬಾಸ್​ ಫಿನಾಲೆಯಿಂದ ಹೊರಬಿದ್ದ ದಿವ್ಯಾ ಉರುಡುಗಗೆ ಸಿಕ್ಕ ಹಣವೆಷ್ಟು?
Image
Divya Uruduga: ‘ಮನೆಯೊಳಗೆ ಇದ್ದಾಗ ನನ್ನ ಮಗಳು ಅಂತಾರೆ, ಆದರೆ ಹೊರಗೆ..’: ಗುರೂಜಿ ಮೇಲೆ ದಿವ್ಯಾ ಗರಂ

ಇದನ್ನೂ ಓದಿ: ದಿವ್ಯಾ ಉರುಡುಗಗೆ ಕಣ್ಣೀರು ಹಾಕಿಸಿದ್ದ ರೂಪೇಶ್ ರಾಜಣ್ಣ; ದೊಡ್ಮನೆಯಲ್ಲಿ ಟಾಂಗ್ ಕೊಟ್ಟ ಅರವಿಂದ್ ಕೆಪಿ

ರೂಪೇಶ್ ರಾಜಣ್ಣ ಅವರು ಆರಂಭದಲ್ಲಿ ಏರು ಧ್ವನಿಯಲ್ಲಿ ಮಾತನಾಡಿ, ಹೋರಾಟದ ಮೂಲಕ ಬಿಗ್ ಬಾಸ್​​ನಲ್ಲಿ ಗುರುತಿಸಿಕೊಂಡರು. ಆ ಬಳಿಕ ಅವರು ಮುಗ್ಧತನದ ಮೂಲಕ ಗಮನ ಸೆಳೆದರು. ಈಗ ಅವರು ಔಟ್ ಆಗಿದ್ದಾರೆ. ಈ ಮೂಲಕ ಬಿಗ್ ಬಾಸ್ ‘ಬಿಗ್ ಬಾಸ್ 9’ರ ಜರ್ನಿ ಪೂರ್ಣಗೊಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?