AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿವ್ಯಾ ಉರುಡುಗಗೆ ಕಣ್ಣೀರು ಹಾಕಿಸಿದ್ದ ರೂಪೇಶ್ ರಾಜಣ್ಣ; ದೊಡ್ಮನೆಯಲ್ಲಿ ಟಾಂಗ್ ಕೊಟ್ಟ ಅರವಿಂದ್ ಕೆಪಿ

Aravind Kp: ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ಮನೆಯಲ್ಲಿ ಸಾಂಗ್ ಒಂದನ್ನು ಮಾಡಿದ್ದರು. ಈ ಹಾಡನ್ನು ಎಲ್ಲ ಕಡೆಗಳಲ್ಲಿ ದಿವ್ಯಾ ಹಾಡಿದ್ದರು. ಆದರೆ, ಅವರು ಕ್ರೆಡಿಟ್ ಕೊಟ್ಟಿಲ್ಲ ಎಂದು ರೂಪೇಶ್ ರಾಜಣ್ಣ ಕೊಂಕು ತೆಗೆದಿದ್ದರು.

ದಿವ್ಯಾ ಉರುಡುಗಗೆ ಕಣ್ಣೀರು ಹಾಕಿಸಿದ್ದ ರೂಪೇಶ್ ರಾಜಣ್ಣ; ದೊಡ್ಮನೆಯಲ್ಲಿ ಟಾಂಗ್ ಕೊಟ್ಟ ಅರವಿಂದ್ ಕೆಪಿ
ದಿವ್ಯಾ-ಅರವಿಂದ್​-ರೂಪೇಶ್
TV9 Web
| Edited By: |

Updated on:Dec 29, 2022 | 9:08 AM

Share

ಬಿಗ್ ಬಾಸ್ (Bigg Boss)ಈ ಸೀಸನ್​ ಆರಂಭವಾದ ಸಮಯದಲ್ಲಿ ರೂಪೇಶ್ ರಾಜಣ್ಣ ಅವರು ಅಷ್ಟಾಗಿ ಗಮನ ಸೆಳೆದಿರಲಿಲ್ಲ. ಕೆಲವೇ ವಾರಗಳಲ್ಲಿ ಅವರು ಔಟ್ ಆಗಲಿದ್ದಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಈಗ ಫಿನಾಲೆ ತಲುಪಿದ್ದಾರೆ. ಟಾಪ್​ ಐದರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ. ಇದು ರೂಪೇಶ್ ರಾಜಣ್ಣ (Roopesh Rajanna) ಫ್ಯಾನ್ಸ್​​ಗೆ ಖಷಿ ನೀಡಿದೆ. ರೂಪೇಶ್ ರಾಜಣ್ಣ ಹಾಗೂ ದಿವ್ಯಾ ಉರುಡುಗ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿತ್ತು. ಆದರೆ, ಒಂದು ಘಟನೆಯಿಂದ ಎಲ್ಲವೂ ಬದಲಾಗಿತ್ತು. ಈ ವಿಚಾರವನ್ನು ಅರವಿಂದ್ ಕೆಪಿ ಪರೋಕ್ಷವಾಗಿ ಮಾತನಾಡಿದ್ದಾರೆ.

ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ಮನೆಯಲ್ಲಿ ಸಾಂಗ್ ಒಂದನ್ನು ಮಾಡಿದ್ದರು. ಈ ಸಾಂಗ್​ಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದು ಕೂಡ ಅವರೇ ಆಗಿತ್ತು. ಈ ಹಾಡನ್ನು ಎಲ್ಲ ಕಡೆಗಳಲ್ಲಿ ದಿವ್ಯಾ ಹಾಡಿದ್ದರು. ಆದರೆ, ಅವರು ಕ್ರೆಡಿಟ್ ಕೊಟ್ಟಿಲ್ಲ ಎಂದು ರೂಪೇಶ್ ರಾಜಣ್ಣ ಕೊಂಕು ತೆಗೆದಿದ್ದರು. ಈ ವಿಚಾರವನ್ನು ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಿದ್ದರು ಅವರು. ಇದೇ ವಿಷಯಕ್ಕೆ ಕಣ್ಣೀರು ಹಾಕಿದ್ದರು ದಿವ್ಯಾ. ಈ ಘಟನೆ ನೆನಪಿಸಿಕೊಂಡು ಅರವಿಂದ್ ಕೆಪಿ ಟಾಂಗ್ ನೀಡಿದ್ದಾರೆ.

ಅರವಿಂದ್ ಅವರು ಡಿಸೆಂಬರ್ 28ರ ಎಪಿಸೋಡ್​ನಲ್ಲಿ ಬಿಗ್ ಬಾಸ್ ಮನೆ ಒಳಗೆ ಬಂದಿದ್ದರು. ಈ ವೇಳೆ ಅರವಿಂದ್ ಕೆಪಿಗೋಸ್ಕರ ಮಾಡಿದ ಹಾಡನ್ನು ದಿವ್ಯಾ ಹೇಳಲು ಮುಂದಾದರು. ‘ದಿವ್ಯಾ ಯಾರಿಗಾದರೂ ಕ್ರೆಡಿಟ್ ಕೊಡೋದಾದರೆ ಕೊಡಿ. ಆಮೇಲೆ ಸಮಸ್ಯೆ ಆಗೋದು ಬೇಡ’ ಎಂದರು. ಅರವಿಂದ್ ಕೆಪಿ ಮಾತನ್ನು ಎಲ್ಲರೂ ಹಾಸ್ಯವಾಗಿ ತೆಗೆದುಕೊಂಡರು. ರೂಪೇಶ್ ರಾಜಣ್ಣ ಕೂಡ ಈ ಮಾತಿಗೆ ನಕ್ಕರು.

ಇದನ್ನೂ ಓದಿ
Image
Aryavardhan Guruji: ಫಿನಾಲೆಗೆ 3 ದಿನ ಇರುವಾಗ ಆರ್ಯವರ್ಧನ್​ ಗುರೂಜಿ ಔಟ್​; ಅಪ್ಪಾಜಿ ಅಂತ ಕಣ್ಣೀರು ಹಾಕಿದ ರೂಪೇಶ್​ ಶೆಟ್ಟಿ
Image
BBK9: ಬಿಗ್​ ಬಾಸ್​ ಮನೆಯಲ್ಲಿ ಆರ್ಯವರ್ಧನ್​ ಗುರೂಜಿ ಡಬಲ್​ ಗೇಮ್​; ಸ್ಪರ್ಧಿಗಳ ನೇರ ಆರೋಪ
Image
Prashanth Sambargi: ನಿಜವಾದ ಹೆಸರು ಮುಚ್ಚಿಟ್ಟಿದ್ದಾರಾ ಗುರೂಜಿ? ‘ಸತ್ಯ ಬಯಲು ಮಾಡ್ತೀನಿ’ ಎಂದ ಪ್ರಶಾಂತ್​ ಸಂಬರಗಿ
Image
Aryavardhan Guruji: ಕನ್ನಡ ಓದಲು ಕಷ್ಟಪಟ್ಟ ಗುರೂಜಿ; ಸಹಾಯ ಮಾಡಿದ ರಾಕೇಶ್​: ಇಲ್ಲಿದೆ ವಿಡಿಯೋ

ಇದನ್ನೂ ಓದಿ: ಅಂದು ಹಾಗೆ, ಇಂದು ಹೀಗೆ; ‘ಬಿಗ್ ಬಾಸ್​’ ಮೇಲಿದ್ದ ಅಭಿಪ್ರಾಯ ಬದಲಿಸಿಕೊಂಡ ರೂಪೇಶ್ ರಾಜಣ್ಣ

ಅರವಿಂದ್ ಕೆಪಿ ಸೀಸನ್​ 8ರಲ್ಲಿ ಸ್ಪರ್ಧಿ ಆಗಿ ಭಾಗಿ ಆಗಿದ್ದರು. ಈ ವೇಳೆ ದಿವ್ಯಾ ಉರುಡುಗ ಜತೆ ಒಳ್ಳೆಯ ಕನೆಕ್ಷನ್ ಬೆಳೆಯಿತು. ಇಬ್ಬರ ಮಧ್ಯೆ ಲವ್ ಕೂಡ ಆಯಿತು. ಇವರು ಆದಷ್ಟು ಬೇಗ ಮದುವೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:31 am, Thu, 29 December 22

ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ