- Kannada News Photo gallery Bigg Boss Kannada season 9 finale contestants list pics and their strengths
BBK9 Finale: ಬಿಗ್ ಬಾಸ್ ಕನ್ನಡ ಫಿನಾಲೆ: ಐದು ಸ್ಪರ್ಧಿಗಳಿಗೂ ಇದೆ ಒಂದೊಂದು ಪ್ಲಸ್ ಪಾಯಿಂಟ್
Bigg Boss Kannada Season 9 Finale: ಡಿಸೆಂಬರ್ 30 ಮತ್ತು 31ರಂದು ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಫಿನಾಲೆ ನಡೆಯಲಿದೆ. ಟ್ರೋಫಿಗಾಗಿ ಐದು ಸ್ಪರ್ಧಿಗಳು ನಡುವೆ ಹಣಾಹಣಿ ನಡೆಯುತ್ತಿದೆ.
Updated on:Dec 29, 2022 | 1:02 PM

ರಾಕೇಶ್ ಅಡಿಗ ಅವರದ್ದು ಕೂಲ್ ಆದ ವ್ಯಕ್ತಿತ್ವ. ಎಂಥ ಬಿಗುವಿನ ವಾತಾವರಣವನ್ನೂ ತುಂಬ ಸುಲಭವಾಗಿ ನಿಭಾಯಿಸುವ ಕಲೆ ಅವರಿಗೆ ಇದೆ. ಒಟಿಟಿ ಸೀಸನ್ನಿಂದ ಇಲ್ಲಿಯತನಕ ಬಂದಿರುವ ಅವರಿಗೆ ಹೆಚ್ಚು ಫ್ಯಾನ್ ಫಾಲೋಯಿಂಗ್ ಇದೆ.

ರೂಪೇಶ್ ಶೆಟ್ಟಿ ಅವರು ಕೂಡ ಒಟಿಟಿ ಸೀಸನ್ನಿಂದ ಟಿವಿ ಸೀಸನ್ಗೆ ಕಾಲಿಟ್ಟವರು. ಮೂಲತಃ ತುಳುನಾಡಿನವರಾದ ಅವರು ಆ ಭಾಗದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ. ಸಾನ್ಯಾ ಅಯ್ಯರ್ ಅಭಿಮಾನಿಗಳು ಕೂಡ ರೂಪೇಶ್ ಶೆಟ್ಟಿಗೆ ವೋಟ್ ಮಾಡಲಿದ್ದಾರೆ.

ರೂಪೇಶ್ ರಾಜಣ್ಣ ಅವರು ಕನ್ನಡದ ಪರ ಹೋರಾಟದ ಮೂಲಕ ಗುರುತಿಸಿಕೊಂಡವರು. ಹಲವು ಬಾರಿ ಅವರು ನೇರ-ನಿಷ್ಠುರವಾದ ನಡೆ-ನುಡಿಯಿಂದಾಗಿ ಗಮನ ಸೆಳೆದಿದ್ದಾರೆ. ಈ ಕಾರಣಕ್ಕಾಗಿ ಅವರಿಗೆ ವೀಕ್ಷಕರಿಂದ ಜಾಸ್ತಿ ಬೆಂಬಲ ಸಿಗುತ್ತಿದೆ.

ದಿವ್ಯಾ ಉರುಡುಗ ಅವರಿಗೆ ಬಿಗ್ ಬಾಸ್ ಆಟದ ನಿಯಮಗಳು ಚೆನ್ನಾಗಿ ತಿಳಿದಿವೆ. ಯಾಕೆಂದರೆ ಅವರು ಕಳೆದ ಸೀಸನ್ನಲ್ಲೂ ಫಿನಾಲೆ ತನಕ ಬಂದಿದ್ದರು. ಅರವಿಂದ್ ಕೆಪಿ ಅವರ ಅಭಿಮಾನಿಗಳು ಕೂಡ ದಿವ್ಯಾ ಪರವಾಗಿ ಇದ್ದಾರೆ. ಇದರಿಂದ ಅವರಿಗೆ ಹೆಚ್ಚು ವೋಟ್ ಸಿಗುವ ನಿರೀಕ್ಷೆ ಇದೆ.

ದೀಪಿಕಾ ದಾಸ್ ಅವರು ಕಿರುತೆರೆಯಲ್ಲಿ ತುಂಬ ಜನಪ್ರಿಯತೆ ಹೊಂದಿದ್ದಾರೆ. ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ಅವರಿಗೆ ಅಭಿಮಾನಿಗಳಿಂದ ಹೆಚ್ಚಿನ ವೋಟ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಅವರು ಕೂಡ ಹಳೇ ಸ್ಪರ್ಧಿ ಆಗಿದ್ದು, ಈ ಹಿಂದೆ 7ನೇ ಸೀಸನ್ನಲ್ಲಿ ಸ್ಪರ್ಧಿಸಿದ್ದರು.
Published On - 1:02 pm, Thu, 29 December 22




